Edible Oil Price: ಜನಸಾಮಾನ್ಯರಿಗೆ ಸಿಹಿ ಸುದ್ದಿ! ಇಂದು ಮತ್ತಷ್ಟು ಅಗ್ಗವಾಗಲಿದೆ ಖಾದ್ಯ ತೈಲ

ಖಾದ್ಯ ತೈಲ ಬೆಲೆ: ಖಾದ್ಯ ತೈಲದ ಬೆಲೆ ಮತ್ತೊಮ್ಮೆ ಇಳಿಕೆಯಾಗಲಿದೆ. ಇಂದು ತೈಲ ಉತ್ಪಾದಕರು ಮತ್ತು ರಫ್ತುದಾರರೊಂದಿಗೆ ಬೆಲೆ ಕಡಿತಗೊಳಿಸಲು ಸರ್ಕಾರ ಸಭೆ ನಡೆಸಲಿದ್ದು, ಇದರಲ್ಲಿ ತೈಲ ಬೆಲೆ ಇಳಿಸುವ ಬಗ್ಗೆ ಚರ್ಚೆ ನಡೆಯಲಿದೆ.

Written by - Puttaraj K Alur | Last Updated : Jul 6, 2022, 08:12 AM IST
  • ಇಂದಿನಿಂದ ಖಾದ್ಯ ತೈಲ ಮತ್ತಷ್ಟು ಅಗ್ಗವಾಗುವ ನಿರೀಕ್ಷೆ ಇದೆ
  • ಚಿಲ್ಲರೆ ಮಾರುಕಟ್ಟೆಯಲ್ಲಿ ಖಾದ್ಯ ತೈಲ ಬೆಲೆ ತಗ್ಗಿಸಲು ಸರ್ಕಾರದ ಮಹತ್ವದ ಸಭೆ
  • ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿತ ಹಿನ್ನೆಲೆ ದೇಶೀ ಮಾರುಕಟ್ಟೆಯಲ್ಲೂ ಇಳಿಕೆ?
Edible Oil Price: ಜನಸಾಮಾನ್ಯರಿಗೆ ಸಿಹಿ ಸುದ್ದಿ! ಇಂದು ಮತ್ತಷ್ಟು ಅಗ್ಗವಾಗಲಿದೆ ಖಾದ್ಯ ತೈಲ  title=
ಖಾದ್ಯ ತೈಲ ಮತ್ತಷ್ಟು ಅಗ್ಗವಾಗುವ ನಿರೀಕ್ಷೆ

ನವದೆಹಲಿ: ಮತ್ತೊಮ್ಮೆ ದೇಶದ ಜನತೆಗೆ ಸರ್ಕಾರದಿಂದ ದೊಡ್ಡ ನೆಮ್ಮದಿಯ ಸುದ್ದಿ ಸಿಕ್ಕಿದೆ. ಮತ್ತೊಮ್ಮೆ ಖಾದ್ಯ ತೈಲವು ಅಗ್ಗವಾಗುವ ನಿರೀಕ್ಷೆಯಿದೆ. ಮಾಧ್ಯಮ ವರದಿಗಳ ಪ್ರಕಾರ, ಚಿಲ್ಲರೆ ಮಾರುಕಟ್ಟೆಯಲ್ಲಿ ಖಾದ್ಯ ತೈಲದ ಬೆಲೆಯನ್ನು ತಗ್ಗಿಸಲು ಬುಧವಾರ ಸರ್ಕಾರದ ಮಹತ್ವದ ಸಭೆಯನ್ನು ನಿರೀಕ್ಷಿಸಲಾಗಿದೆ. ಈ ಸಭೆಯಲ್ಲಿ ತೈಲ ಉತ್ಪಾದಕರ ಜೊತೆಗೆ ರಫ್ತುದಾರರನ್ನೂ ಕರೆಯಲಾಗಿದೆ. ಈ ಸಭೆಯಲ್ಲಿ ತೈಲ ಮಾರಾಟಗಾರರಿಗೆ ಎಂಆರ್‌ಪಿ ಬದಲಾವಣೆ ಮಾಡುವಂತೆ ಸರ್ಕಾರ ಆದೇಶಿಸುವ ನಿರೀಕ್ಷೆಯಿದೆ.

ಸಾರ್ವಜನಿಕರಿಗೆ ಬಿಗ್ ರಿಲೀಫ್!  

ಕಳೆದ ಕೆಲವು ದಿನಗಳಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯಾಗಿದೆ. ಇಂತಹ ಸಂದರ್ಭದಲ್ಲಿ ಈ ಕೊರತೆಯ ಲಾಭ ಸಾರ್ವಜನಿಕರಿಗೆ ತಲುಪಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ಮುಂಬರುವ ದಿನಗಳಲ್ಲಿ ಖಾದ್ಯ ತೈಲದ ಬೆಲೆ ಶೇ.10ರಿಂದ 15ರಷ್ಟು ಕಡಿಮೆಯಾಗಬಹುದು ಎಂದು ತಜ್ಞರು ನಿರೀಕ್ಷಿಸಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ನೆಮ್ಮದಿ ದೊರೆಯಲಿದೆ. ಈ ಹಿಂದೆಯೂ ಸಹ ಖಾದ್ಯ ತೈಲದ ಬೆಲೆ ಲೀಟರ್‌ಗೆ 10 ರಿಂದ 15 ರೂ. ಕಡಿಮೆಯಾಗಿತ್ತು.

ಇದನ್ನೂ ಓದಿ: Business Idea: ಕೇವಲ 25 ಸಾವಿರ ಹೂಡಿಕೆ ಮಾಡಿ 72 ಲಕ್ಷ ಸಂಪಾದಿಸುವ ಪರ್ಫೆಕ್ಟ್ ಪರಿಕಲ್ಪನೆ ಇದು!

ಬೆಲೆ ಇಳಿಕೆ ನಿರೀಕ್ಷೆ

ಮಾಹಿತಿ ಪ್ರಕಾರ ಕೆಲವು ದೇಶಗಳು ಖಾದ್ಯ ತೈಲ ರಫ್ತು ನಿಷೇಧಿಸಿದ್ದವು. ಇದರಿಂದಾಗಿ ಆ ದೇಶಗಳ ಬಳಿ ಸಾಕಷ್ಟು ದಾಸ್ತಾನು ಇದೆ. ಇದೀಗ ನಿಷೇಧ ತೆರವಿನ ಬಳಿಕ ಈ ತೈಲ ಮಾರುಕಟ್ಟೆಗೆ ಬಂದಾಗ ಬೆಲೆ ಕುಸಿತವಾಗಿದೆ. ಇನ್ನೊಂದೆಡೆ ಸೋಯಾಬೀನ್ ಬೆಳೆ ಕೂಡ ಮಾರುಕಟ್ಟೆಗೆ ಬರಲಿದೆ. ಇದೂ ಕೂಡ ಬೆಲೆ ಇಳಿಕೆಯ ನಿರೀಕ್ಷೆ ಮೂಡಿಸಿದೆ.

ಲೀಟರ್‌ಗೆ 15 ರೂ. ಇಳಿಕೆ

ಇತ್ತೀಚೆಗಷ್ಟೇ ಶೇಂಗಾ ಎಣ್ಣೆ ಹೊರತುಪಡಿಸಿ ಪ್ಯಾಕ್ ಮಾಡಿದ ಖಾದ್ಯ ತೈಲದ ಚಿಲ್ಲರೆ ಬೆಲೆ ದೇಶಾದ್ಯಂತ 15-20 ರೂ.ವರೆಗೆ ಇಳಿಕೆಯಾಗಿತ್ತು. ಆಗ ಅದರ ಬೆಲೆ ಕೆಜಿಗೆ 150 ರಿಂದ 190 ರೂ.ಗೆ ಇಳಿದಿತ್ತು. ಈಗ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಈ ಹಿಂದೆ ಬೆಲೆ 200 ರೂ. ದಾಟಿತ್ತು.

ಇದನ್ನೂ ಓದಿ: ಈ ನಾಣ್ಯದ ಬೆಲೆ ಬರೋಬ್ಬರಿ 126 ಕೋಟಿ : ಸಿಬಿಐ ತನಿಖೆ ನಡೆಸ್ತಿರೋ ಈ ಕಾಯಿನ್‌ ಸ್ಪೆಷಾಲಿಟಿ ಏನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News