ನವದೆಹಲಿ: 7th Pay Commission Latest News - ಕೇಂದ್ರ ನೌಕರರು ಈಗಾಗಲೇ ದೀಪಾವಳಿಯ ಮೊದಲು 3% DA  (Dearness Allowance) ಮತ್ತು ಬಾಕಿ (DA Arrear) ಹೆಚ್ಚಳದ ಉಡುಗೊರೆಯನ್ನು ಸ್ವೀಕರಿಸಿದ್ದಾರೆ. ಇದರೊಂದಿಗೆ ಇದೀಗ ಕೇಂದ್ರ ಸರ್ಕಾರ ದೀಪಾವಳಿಗೂ ಮುನ್ನ ಇತರೆ ನೌಕರರಿಗೆ (Minimum Wage Employees) ಭರ್ಜರಿ ಗಿಫ್ಟ್ ನೀಡಿದೆ. ಈಗ ನೌಕರರಿಗೆ ನೀಡುತ್ತಿರುವ ವ್ಯತ್ಯಯ ತುಟ್ಟಿ ಭತ್ಯೆಯೂ (Variable Dearness Allowance) ಹೆಚ್ಚಾಗಿದೆ. ಕಾರ್ಮಿಕ ಸಚಿವ ಭೂಪೇಂದ್ರ ಯಾದವ್  (Bhupender Yadav)  ಈ ವಿಷಯವನ್ನು ಪ್ರಕಟಿಸಿದ್ದಾರೆ. ಇದರ ಪ್ರಯೋಜನವು 1 ಅಕ್ಟೋಬರ್ 2021 ರಿಂದ ಲಭ್ಯವಾಗಲಿದೆ.


COMMERCIAL BREAK
SCROLL TO CONTINUE READING

ವೇರಿಯೇಬಲ್ ತುಟ್ಟಿಭತ್ಯೆಯಲ್ಲಿ ಭಾರಿ ಏರಿಕೆ
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಪ್ರಕಾರ, ಕೇಂದ್ರ ಉದ್ಯೋಗಿಗಳ ವೇರಿಯಬಲ್ ತುಟ್ಟಿ ಭತ್ಯೆಯಲ್ಲಿನ ಹೆಚ್ಚಳವು ಅಕ್ಟೋಬರ್ 1, 2021 ರಿಂದ ಅನ್ವಯಿಸಲಿದೆ. ಇದರ ಅಡಿಯಲ್ಲಿ, ಇದೀಗ ಎಲ್ಲಾ ಕೇಂದ್ರ ನೌಕರರು ಪ್ರತಿ ತಿಂಗಳು ವೇರಿಯಬಲ್ ಡಿಯರ್ನೆಸ್ ಭತ್ಯೆಯನ್ನು (Variable DA) ಪಡೆಯಲಿದ್ದಾರೆ.


7th Pay Commission : ಕೇಂದ್ರ ನೌಕರರ ಸಂಬಳದಲ್ಲಿ ಸಿಗಲಿದೆ Double Bonanza! DA ಶೇ.3 ರಷ್ಟು ಮತ್ತು ಬಾಕಿ ಲೆಕ್ಕಾಚಾರ ನೋಡಿ


ಕನಿಷ್ಠ ವೆತನದಲ್ಲಿಯೂ ಕೂಡ ಹೆಚ್ಚಳ
ಈ ಹೆಚ್ಚಳವು ಕೇಂದ್ರ ನೌಕರರ ಕನಿಷ್ಠ ವೇತನವನ್ನು ಹೆಚ್ಚಿಸಲಿದೆ. ಕೋರೋನಾ ಸಾಂಕ್ರಾಮಿಕದ ಈ ಸಮಯದಲ್ಲಿ ತನ್ನ ನೌಕರರಿಗೆ ಕೇಂದ್ರ ಸರ್ಕಾರ ನೀಡಿದ ಭಾರಿ ಪರಿಹಾರ ಎಂದೇ ಹೇಳಬಹುದು.  ಈ ಹಿಂದೆ ಕೇಂದ್ರ ನೌಕರರು ಒಂದೂವರೆ ವರ್ಷಗಳ ಕಾಲ ಫ್ರೀಜ್ ಡಿಎ ಲಾಭ ಕೂಡ ಸಿಕ್ಕಿಗೆ, ಹಿಂದಿನ ಶೇಕಡಾ 17 ರಿಂದ 28 ರಷ್ಟು ಹೆಚ್ಚಿಸಿದ ನಂತರ, 3% DA ಹೆಚ್ಚಳವು ಒಟ್ಟು DA ಯನ್ನು 31 ಶೇಕಡಾಕ್ಕೆ ಹೆಚ್ಚಿಸಿದೆ.


ಇದನ್ನೂ ಓದಿ-DA Increase: ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್ , 3 ಪ್ರತಿಶತ ತುಟ್ಟಿ ಭತ್ಯೆ ಹೆಚ್ಚಿಸಿ ಆದೇಶ


ಯಾವ ನೌಕರರಿಗೆ ಲಾಭ ಸಿಗಲಿದೆ?
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ  (Ministry of Labour & Employment) ಈ ನಿರ್ಧಾರದಿಂದ ಕೇಂದ್ರ ಸರ್ಕಾರ, ರೈಲ್ವೆ, ಗಣಿಗಾರಿಕೆ, ತೈಲ ಕ್ಷೇತ್ರಗಳು, ಬಂದರುಗಳು ಮತ್ತು ಇತರ ಕೇಂದ್ರ ಸರ್ಕಾರಿ (Central Government) ಕಚೇರಿಗಳಲ್ಲಿ ಕೆಲಸ ಮಾಡುವ ಸುಮಾರು 1.5 ಕೋಟಿ ಉದ್ಯೋಗಿಗಳಿಗೆ ಪ್ರಯೋಜನವಾಗಲಿದೆ. ಇದರೊಂದಿಗೆ ಗುತ್ತಿಗೆಯಲ್ಲಿ ಕೆಲಸ ಮಾಡುವ ನೌಕರರು ವೇರಿಯಬಲ್ ತುಟ್ಟಿ ಭತ್ಯೆಯ ಹೆಚ್ಚಳದ ಪ್ರಯೋಜನವನ್ನು ಪಡೆಯಲಿದ್ದಾರೆ ಎಂದು ಸರ್ಕಾರ ತಿಳಿಸಿದೆ. ಅಂದರೆ, ಎಲ್ಲಾ ರೀತಿಯ ಉದ್ಯೋಗಿಗಳು ಇದರ ಪ್ರಯೋಜನವನ್ನು ಪಡೆಯಲಿದ್ದಾರೆ. 


ಇದನ್ನೂ ಓದಿ-7th Pay Commission : ಕೇಂದ್ರ ನೌಕರರಿಗೆ ದೀಪಾವಳಿಗೂ ಮುನ್ನವೆ ಬಂಪರ್ ಗಿಫ್ಟ್ : ಈ 3 ಕಡೆಯಿಂದ ಸಿಗಲಿದೆ ನಿಮಗೆ ಹಣ!