ನವದೆಹಲಿ: 7th Pay Commission Latest News - ಕೇಂದ್ರ ಸರ್ಕಾರಿ ನೌಕರರ ಶೇ.31ರಷ್ಟು  ತುಟ್ಟಿ ಭತ್ಯೆಗೆ ಈಗಾಗಲೇ ಅನುಮೋದನೆ ಸಿಕ್ಕಿದೆ. ಆದರೆ ಇನ್ನೂ ಒಂದು ಕಡೆ ಅವರಿಗೆ ನಿರಾಶೆ ಇದೆ. ನೌಕರರ 18 ತಿಂಗಳ DA (Dearness Allowance) ಬಾಕಿಯ ಬಗ್ಗೆ ಅವರ ನಿರೀಕ್ಷೆಗಳು ಇನ್ನೂ ಈಡೇರಿಲ್ಲ. ತುಟ್ಟಿಭತ್ಯೆ ಕುರಿತು ಸರಕಾರ (PM Modi Government) ಘೋಷಿಸಿದಾಗ ಹೆಚ್ಚಿದ ತುಟ್ಟಿಭತ್ಯೆ ಮಾತ್ರ ಸಿಗಲಿದೆ ಎಂದು ಹೇಳಲಾಗಿತ್ತಾದರೂ ಸರಕಾರ ಸದ್ಯಕ್ಕೆ ಅರಿಯರ್ ನೀಡಲು ನಿರಾಕರಿಸಿತ್ತು.


COMMERCIAL BREAK
SCROLL TO CONTINUE READING

ಕೇಂದ್ರ ನೌಕರರಿಗೆ ಸಂತಸದ ಸುದ್ದಿ
7 ನೇ ವೇತನ ಆಯೋಗದ ಅಡಿಯಲ್ಲಿ, ಕೇಂದ್ರ ಸರ್ಕಾರವು ಕೇಂದ್ರ ನೌಕರರಿಗೆ ಶೇ. 31ರಷ್ಟು  DA ಜೊತೆಗೆ ಅನೇಕ ದೊಡ್ಡ ಪ್ರಯೋಜನಗಳನ್ನು ನೀಡಿದೆ ಎಂಬುದು ಗಮನಿಸಬೇಕಾದ ಸಂಗತಿ. ಆದರೆ ಇನ್ನೂ ಅವರಿಗೆ 18 ತಿಂಗಳ DA ಬಾಕಿ ಬರಬೇಕಿದೆ. ನ್ಯಾಷನಲ್ ಕೌನ್ಸಿಲ್ ಆಫ್ ಜಾಯಿಂಟ್ ಕನ್ಸಲ್ಟೇಟಿವ್ ಮೆಷಿನರಿ (JCM) ಕಾರ್ಯದರ್ಶಿ (Staff Side) ಶಿವ ಗೋಪಾಲ್ ಮಿಶ್ರಾ ಅವರ ಪ್ರಕಾರ, DA ಮರು ಆರಂಭದ ವೇಳೆ, 18 ತಿಂಗಳ ಬಾಕಿ ಇರುವ ಡಿಎ ಅನ್ನು ಕೂಡ ಒಂದು ಬಾರಿ ಇತ್ಯರ್ಥಪಡಿಸಬೇಕು ಎಂದು ಕೌನ್ಸಿಲ್ ಸರ್ಕಾರದ ಮುಂದೆ ಬೇಡಿಕೆಯನ್ನು ಮುಂದಿಟ್ಟಿದೆ.  ಆದರೆ, ಇದೀಗ ಈ ಕುರಿತು ಡಿಸೆಂಬರ್‌ನಲ್ಲಿ ನಡೆಯುವ ಸಂಪುಟ ಕಾರ್ಯದರ್ಶಿ ಜತೆ ನಡೆಯುವ ಸಭೆಯಲ್ಲಿ ಚರ್ಚೆ ನಡೆಯುವ ನಿರೀಕ್ಷೆ ಇದೆ.


ಪ್ರಧಾನಿ ಮೋದಿ ಇದೀಗ ಬಾಕಿDA ಬಗ್ಗೆ ನಿರ್ಧರಿಸಲಿದ್ದಾರೆ
18 ತಿಂಗಳ ಬಾಕಿಯ ವಿಷಯವು ಪ್ರಧಾನಿ ನರೇಂದ್ರ ಮೋದಿಯವರ ಬಳಿ ತಲುಪಿದೆ, ಈಗ ಪ್ರಧಾನಿ ಮೋದಿಯವರು ಬಾಕಿ ಇರುವ DA ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ. . ಈ ಮೂಲಕ ಕೇಂದ್ರ ನೌಕರರ ಬಾಕಿ ವೇತನದ ಭರವಸೆ ಮತ್ತೊಮ್ಮೆ ಚಿಗುರಿದೆ. 18 ತಿಂಗಳ ಬಾಕಿಗೆ ಪ್ರಧಾನಿ ಮೋದಿ ಗ್ರೀನ್ ಸಿಗ್ನಲ್ ನೀಡಿದರೆ, ಸುಮಾರು 1 ಕೋಟಿ ಕೇಂದ್ರ ನೌಕರರು ಮತ್ತು ಪಿಂಚಣಿದಾರರ ಖಾತೆಗೆ ಭಾರಿ ಮೊತ್ತ ಬರಲಿದೆ.
ಪ್ರಸ್ತುತ ಕೇಂದ್ರ ನೌಕರರ (Central Government Employee) ತುಟ್ಟಿ ಭತ್ಯೆ ಶೇ.31ಕ್ಕೆ ಏರಿಕೆಯಾಗಿದೆ. 48 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 65 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರು ಇದರ ಪ್ರಯೋಜನ ಪಡೆದಿದ್ದಾರೆ. 


ಪ್ರಧಾನಿ ಮೋದಿಗೆ ಪತ್ರ ಬರೆದ ಪಿಂಚಣಿದಾರರು
ಭಾರತೀಯ ಪಿಂಚಣಿದಾರರ ವೇದಿಕೆ (BMS) ಪ್ರಧಾನಿ ಮೋದಿ (PM Narendra Modi) ಅವರಿಗೆ ಡಿಎ, ಡಿಆರ್ ಬಾಕಿ ಪಾವತಿಗೆ ಸಂಬಂಧಿಸಿದಂತೆ ಪತ್ರ ಬರೆದಿದೆ. ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಬಿಎಂಎಸ್ ಪ್ರಧಾನಿ ಮೋದಿಗೆ ಮನವಿ ಮಾಡಿದೆ. ಜನವರಿ 1, 2020 ಮತ್ತು ಜೂನ್ 30, 2021 ರ ನಡುವೆ ತಡೆಹಿಡಿಯಲಾದ DA / DR (Dearness Relief) ನ ಬಾಕಿಯನ್ನು ಶೀಘ್ರವಾಗಿ ಬಿಡುಗಡೆ ಮಾಡಲು ನೀವು ಹಣಕಾಸು ಸಚಿವಾಲಯಕ್ಕೆ ಸೂಚನೆ ನೀಡಬೇಕು ಎಂದು BMS ಮನವಿ ಮಾಡಿದೆ. ಈ ನಿಟ್ಟಿನಲ್ಲಿ ತಕ್ಷಣದ ಕ್ರಮಕ್ಕಾಗಿ ನಾವು ಅತ್ಯಂತ ಕೃತಜ್ಞರಾಗಿರುತ್ತೇವೆ. ಡಿಎ/ಡಿಆರ್ ಅನ್ನು ನಿಲ್ಲಿಸಿದ ಅವಧಿಯಲ್ಲಿ ಚಿಲ್ಲರೆ ಹಣದುಬ್ಬರ ಹೆಚ್ಚಾಗಿದೆ ಮತ್ತು ಪೆಟ್ರೋಲ್-ಡೀಸೆಲ್, ಖಾದ್ಯ ತೈಲ ಮತ್ತು ಬೇಳೆ ಕಾಳುಗಳ ಬೆಲೆಗಳು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿವೆ ಎಂದು ಪಿಂಚಣಿದಾರರು ತಮ್ಮ ತರ್ಕ ಮಂಡಿಸಿದ್ದಾರೆ.


ಇದನ್ನೂ ಓದಿ-7th Pay Commission : ಹೊಸ ವರ್ಷದಲ್ಲಿ ಸರ್ಕಾರಿ ನೌಕರರಿಗೆ ಸಿಗಲಿದೆ ಭರ್ಜರಿ ಗಿಫ್ಟ್, ಹೆಚ್ಚಾಗಲಿದೆ ವೇತನ


ಪಿಂಚಣಿದಾರರಿಗೆ ಸರಿಯಾದ ನಿರ್ಧಾರವಲ್ಲ
ಜೀವನೋಪಾಯ ಹೆಚ್ಚಳವನ್ನು ಸರಿದೂಗಿಸಲು ನೌಕರರು ಮತ್ತು ಪಿಂಚಣಿದಾರರಿಗೆ DA/DR ಪಾವತಿಸಲಾಗುತ್ತದೆ. 18 ತಿಂಗಳ ಅವಧಿಯಲ್ಲಿ ಈ ವೆಚ್ಚವು ಬಹಳ ವೇಗವಾಗಿ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಈ ಅವಧಿಗೆ ಹಣವನ್ನು ತಡೆಹಿಡಿಯುವುದು ನೌಕರರು ಮತ್ತು ಪಿಂಚಣಿದಾರರ ಹಿತಾಸಕ್ತಿಗೆ ಸರಿಯಾದ ನಿರ್ಧಾರವಲ್ಲ. ಪಿಂಚಣಿದಾರರಲ್ಲಿ ಹೆಚ್ಚಿನವರು ವೃದ್ಧಾಪ್ಯ ತಲುಪಿದವರಾಗಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಔಷಧಿಗೆ ಹಣ ಬೇಕು. ಅಲ್ಲದೆ, ಕೋವಿಡ್-19 ಬಿಕ್ಕಟ್ಟಿನಿಂದಾಗಿ, ಹೆಚ್ಚಿನ ಪಿಂಚಣಿದಾರರ ಆದಾಯ ಕೇವಲ ಹೊಟ್ಟೆಯನ್ನು ಮಾತ್ರ ತುಂಬಿಸುತ್ತದೆ ಎಂದು ಪತ್ರದಲ್ಲಿ ಹೇಳಲಾಗಿದೆ. 


ಇದನ್ನೂ ಓದಿ-7th Pay Commission: ಸರ್ಕಾರಿ ನೌಕರರಿಗೆ ಮತ್ತೊಂದು ಸಂತಸದ ಸುದ್ದಿ, ಇಲ್ಲಿದೆ ಹೊಸ ಅಪ್ಡೇಟ್


ದೇಶವು ಆರ್ಥಿಕ ಬಿಕ್ಕಟ್ಟಿನಲ್ಲಿದೆ ಎಂಬುದರಲ್ಲಿ ಸಂದೇಹವಿಲ್ಲ ಎಂದು ಬಿಎಂಎಸ್ ಹೇಳಿದೆ. ಹೆಚ್ಚಿನ ಪಿಂಚಣಿದಾರರು ಒಂದು ದಿನದ ಪಿಂಚಣಿಯನ್ನು ಪ್ರಧಾನ ಮಂತ್ರಿಗಳ ನಾಗರಿಕ ನೆರವು ಮತ್ತು ತುರ್ತು ಪರಿಹಾರ ನಿಧಿಗೆ (PM CARES) ಕೊಡುಗೆ ನೀಡಿದ್ದಾರೆ. ಈಗ ಅವರಿಗೆ ನೆರವು ಬೇಕಾದ ಸಂದರ್ಭದಲ್ಲಿ ಸರ್ಕಾರವೇ ‘ಡಿಎ/ಡಿಆರ್’ ಕೊಡಬೇಕು ಎಂದು ಅದು ಹೇಳಿದೆ.


ಇದನ್ನೂ ಓದಿ-7th Pay Commission: ಸರ್ಕಾರಿ ನೌಕರರ ವೇತನದಲ್ಲಿ ಬಂಪರ್ ಏರಿಕೆ! ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ