7th Pay Commission: Good News - ಶೀಘ್ರದಲ್ಲಿಯೇ ಈ ಸರ್ಕಾರಿ ನೌಕರರ ಖಾತೆ ಸೇರಲಿದೆ 4 ತಿಂಗಳ DA ಬಾಕಿ

7th Pay Commission: ಕೇಂದ್ರ ಸರ್ಕಾರದ ನಿವೃತ್ತ ನೌಕರರಿಗೆ (Retired Employees) ಸಂತಸದ ಸುದ್ದಿ ಪ್ರಕಟವಾಗಿದೆ. ನವೆಂಬರ್ ತಿಂಗಳ ಪಿಂಚಣಿಯ ಜೊತೆಗೆ ಕೇಂದ್ರ ಸರ್ಕಾರ (Central Government) ಈ ನೌಕರರಿಗೆ ದೊಡ್ಡ ಉಡುಗೊರೆಯನ್ನೇ ನೀಡುವ ಸಾಧ್ಯತೆ ಇದೆ.

Written by - Nitin Tabib | Last Updated : Nov 21, 2021, 01:04 PM IST
  • ಕೇಂದ್ರ ಸರ್ಕಾರಿ ನಿವೃತ್ತ ನೌಕರರಿಗೊಂದು ಸಂತಸದ ಸುದ್ದಿ.
  • ನವೆಂಬರ್ ತಿಂಗಳ ಪಿಂಚಣಿಯ ಜೊತೆಗೆ 4 ತಿಂಗಳ ಬಾಕಿ DR ಕೂಡ ಸಿಗುವ ಸಾಧ್ಯತೆ ಇದೆ.
  • ಈ ಕುರಿತು ಶೀಘ್ರದಲ್ಲಿಯೇ ಅಧಿಕೃತ ಹೇಳಿಕೆ ಹೊರಬೀಳಲಿದೆ ಎಂದು ಮೂಲಗಳು ಹೇಳಿವೆ.
7th Pay Commission: Good News - ಶೀಘ್ರದಲ್ಲಿಯೇ ಈ ಸರ್ಕಾರಿ ನೌಕರರ ಖಾತೆ ಸೇರಲಿದೆ 4 ತಿಂಗಳ DA ಬಾಕಿ title=
7th Pay Commission Latest News (File Photo)

7th Pay Commission Latest News: ಕೇಂದ್ರ ಸರ್ಕಾರದ ನಿವೃತ್ತ ನೌಕರರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ನವೆಂಬರ್ ತಿಂಗಳ ಪಿಂಚಣಿಯ ಜೊತೆಗೆ ಸರ್ಕಾರ ಈ ಉದ್ಯೋಗಿಗಳಿಗೆ ದೊಡ್ಡ ಉಡುಗೊರೆ ನೀಡುವ  ಸಾಧ್ಯತೆ ಇದೆ. ನವೆಂಬರ್ ತಿಂಗಳ ಪಿಂಚಣಿ ಜೊತೆಗೆ, ನಿವೃತ್ತ ನೌಕರರು ಹೆಚ್ಚಿದ ತುಟ್ಟಿಭತ್ಯೆಯ (DA Hike) ಪ್ರಯೋಜನದೊಂದಿಗೆ 4 ತಿಂಗಳ ಬಾಕಿ ಇರುವ ಪಿಂಚಣಿಯನ್ನು ಪಡೆಯುವ ಸಾಧ್ಯತೆ ಇದೆ. 

ತುಟ್ಟಿಭತ್ಯೆ ಶೇ 31ಕ್ಕೆ ಏರಿಕೆಯಾಗಿದೆ
ಕೇಂದ್ರ ಸರ್ಕಾರ ಜುಲೈ 1 ರಿಂದ DA (Dearness Allowance) ಮತ್ತು DR (Dearness Relief) ಅನ್ನು ಹೆಚ್ಚಿಸಿದೆ. ಸರ್ಕಾರ ಇದನ್ನು ಶೇ 31ಕ್ಕೆ ಹೆಚ್ಚಿಸಿದೆ. ಇದಲ್ಲದೆ ಜುಲೈ, ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ಪಿಂಚಣಿ ಜೊತೆಗೆ ನವೆಂಬರ್ ತಿಂಗಳ ಪಿಂಚಣಿ ಹಣವನ್ನು ನೌಕರರು ಪಡೆಯಬಹುದು. ಸದ್ಯಕ್ಕೆ ಇದರ ಅಧಿಕೃತ ಘೋಷಣೆ ಇನ್ನೂ ಹೊರಬಿದ್ದಿಲ್ಲ, ಆದರೆ ಶೀಘ್ರದಲ್ಲೇ ಅಧಿಕೃತವಾಗಿ ಘೋಷಣೆ ಹೊರಬೀಳಬಹುದು ಎಂದು ಸರ್ಕಾರಿ ಮೂಲಗಳು ತಿಳಿಸಿವೆ

ಸಂಬಳ ಎಷ್ಟು ಹೆಚ್ಚಾಗುತ್ತದೆ ಗೊತ್ತಾ?
ಮಾಧ್ಯಮ ವರದಿಗಳ ಪ್ರಕಾರ, DR (DR Hike) ಲೆಕ್ಕಾಚಾರವನ್ನು ನೌಕರರ ಮೂಲ ವೇತನದ ಮೇಲೆ ಮಾಡಲಾಗುತ್ತದೆ. ನೌಕರನ ಪಿಂಚಣಿ 20,000 ರೂಪಾಯಿ ಇದೆ ಎಂದು ಭಾವಿಸಿದರೆ,  ಆಗ ಅವನ ಸಂಬಳ ತಿಂಗಳಿಗೆ ಸುಮಾರು 600 ರೂಪಾಯಿಗಳಷ್ಟು ಹೆಚ್ಚಾಗಲಿದೆ.

ಇದನ್ನೂ ಓದಿ-Aadhaar-Ration Link: ಕುಳಿತಲ್ಲೇ ಮಾಡಿಬಿಡಬಹುದು ಆಧಾರ್ ಮತ್ತು ರೇಶನ್ ಕಾರ್ಡ್ ಲಿಂಕ್, ಸಿಗಲಿದೆ ಬಹಳಷ್ಟು ಪ್ರಯೋಜನ

ಎಷ್ಟು ಬಾಕಿ ಸಿಗುತ್ತದೆ?
7ನೇ ವೇತನ ಆಯೋಗದ ಅಡಿಯಲ್ಲಿ ಪಡೆದಿರುವ ಬಾಕಿ ಮೊತ್ತದ ಕುರಿತು ಹೇಳುವುದಾದರೆ, ಎಲ್ಲಾ ಉದ್ಯೋಗಿಗಳ ಮೊತ್ತವು ಅವರ ದರ್ಜೆಗೆ ಅನುಗುಣವಾಗಿರುತ್ತದೆ. ಪ್ರಸ್ತುತ ನೌಕರನ ಮೂಲ ವೇತನ 31550 ರೂ ಆಗಿದ್ದರೆ, 28 ಪರ್ಸೆಂಟ್ DR ಪ್ರಕಾರ 8834 ರೂ. ಆಗಲಿದೆ, ಆದರೆ ಸರ್ಕಾರವು 3 ಪರ್ಸೆಂಟ್ ಡಿಎ ಹೆಚ್ಚಿಸಿದರೆ, 31 ಪರ್ಸೆಂಟ್ ಪ್ರಕಾರ, ಅವನ ಸಂಬಳ ತಿಂಗಳಿಗೆ 9781 ರೂ. DR ಹೆಚ್ಚಾಗಲಿದೆ.

ಇದನ್ನೂ ಓದಿ-Good News: ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿ ಪ್ರಕಟ, ಈ ವರದಿ ಓದಿ

ಪಿಂಚಣಿ ಎಷ್ಟು ಸಿಗುತ್ತದೆ?
ಆಫೀಸರ್ ಗ್ರೇಡ್ ಸಂಬಳದ ಆಧಾರದ ಮೇಲೆ ಲೆಕ್ಕ ಹಾಕಿದರೆ, DR ಪ್ರತಿ ತಿಂಗಳು 947 ರೂ. ಇರಲಿದೆ. ಅಂದರೆ ನಾಲ್ಕು ತಿಂಗಳ ಬಾಕಿ 3,788 ರೂ. ನಾವು ನವೆಂಬರ್‌ನ ಹೆಚ್ಚಿದ ಡಿಆರ್ ಅನ್ನು ಸಹ ಸೇರಿಸಿದರೆ, ಪಿಂಚಣಿದಾರರಿಗೆ 4,375 ರೂ. ಸಿಗಲಿದೆ.

ಇದನ್ನೂ ಓದಿ-EPFO Big Update: ಇನ್ಮುಂದೆ ಎಷ್ಟೇ ನೌಕರಿ ಬದಲಿಸಿದರೂ ಒಂದೇ UAN ಸಂಖ್ಯೆ ಮತ್ತು ಒಂದೇ EPFO ಖಾತೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News