7th Pay Commission: ಸರ್ಕಾರಿ ನೌಕರರಿಗೆ ಮತ್ತೊಂದು ಸಂತಸದ ಸುದ್ದಿ, ಇಲ್ಲಿದೆ ಹೊಸ ಅಪ್ಡೇಟ್

7th Pay Commission Latest Updates: ಸರ್ಕಾರಿ ನೌಕರರಿಗೆ ಶೀಘ್ರದಲ್ಲಿಯೇ ಮತ್ತೊಂದು ಶುಭ ಸುದ್ದಿ ಸಿಗಲಿದೆ. ದೀಪಾವಳಿ ಬೋನಸ್ ಜೊತೆಗೆ DA ಮತ್ತು TA ಹೆಚ್ಚಳದ ನಂತರ, ನೌಕರರ ಭತ್ಯೆಯಲ್ಲಿ ಮತ್ತೊಂದು ಹೆಚ್ಚಳವಾಗುವ ನಿರೀಕ್ಷೆ ಇದೆ.   

Written by - Nitin Tabib | Last Updated : Nov 23, 2021, 12:11 PM IST
  • ಶೀಘ್ರದಲ್ಲಿಯೇ ರೈಲ್ವೆ ನೌಕರರು ಕೂಡ ಎಚ್‌ಆರ್‌ಎ ಪ್ರಯೋಜನ ಪಡೆಯಲಿದ್ದಾರೆ ಎನ್ನಲಾಗಿದೆ.
  • ಈ ಪ್ರಯೋಜನವೂ ಅವರಿಗೆ ಜನವರಿ 2021 ರಿಂದ ಸಿಗಲಿದೆ
  • ಈ ಕುರಿತು ಈಗಾಗಲೇ ರೈಲ್ವೆ ಮಂಡಳಿಗೆ ಪ್ರಸ್ತಾವನೆ ಕಳುಹಿಸಲಾಗಿದೆ.
7th Pay Commission: ಸರ್ಕಾರಿ ನೌಕರರಿಗೆ ಮತ್ತೊಂದು ಸಂತಸದ ಸುದ್ದಿ, ಇಲ್ಲಿದೆ ಹೊಸ ಅಪ್ಡೇಟ್ title=
7th Pay Commission Latest Updates (File Photo)

ನವದೆಹಲಿ: 7th CPC - ಸುದೀರ್ಘ ಕಾಯುವಿಕೆಯ ನಂತರ, 2021 ರಲ್ಲಿ, ಸರ್ಕಾರಿ ನೌಕರರಿಗೆ ಹಲವು ಬಾರಿ ಒಳ್ಳೆಯ ಸುದ್ದಿ ಸಿಕ್ಕಿದೆ. ಇದರೊಂದಿಗೆ ಹಿಂದಿನ ತುಟ್ಟಿ ಭತ್ಯೆಯನ್ನೂ (Dearness Allowance) ಸೇರಿಸಲಾಗುತ್ತಿದೆ. ಇದೀಗ ಕೇಂದ್ರ ನೌಕರರ ಮತ್ತೊಂದು ಭತ್ಯೆ ಕುರಿತು ಚರ್ಚೆ ನಡೆಯುತ್ತಿದ್ದು, ಇದರ ಲಾಭವನ್ನು ಜನವರಿಯಿಂದ ಅವರಿಗೆ ಸಿಗುವ ಸಾಧ್ಯತೆ ಇದೆ

ಮಂಡಳಿಗೆ ಪ್ರಸ್ತಾವನೆ ಕಳುಹಿಸಲಾಗಿದೆ
ಈ ಹೆಚ್ಚಳವನ್ನು ಮನೆ ಬಾಡಿಗೆ ಭತ್ಯೆ (House Rent Allowance) ಅಂದರೆ ಎಚ್‌ಆರ್‌ಎಯಲ್ಲಿ (Salary HRA) ಮಾಡಲಾಗುತ್ತಿದೆ. ಇದರಿಂದ ನೌಕರರ ಸಂಬಳದಲ್ಲಿ ಬಂಪರ್ ಏರಿಕೆಯಾಗಲಿದೆ. ಈ ನಿಟ್ಟಿನಲ್ಲಿ 11.56 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳ (Central Government Employees) ಮನೆ ಬಾಡಿಗೆ ಭತ್ಯೆ (HRA) ಜಾರಿಗೊಳಿಸುವ ಬೇಡಿಕೆಯ ಕುರಿತು ಹಣಕಾಸು ಸಚಿವಾಲಯವು ಚಿಂತನೆ ಆರಂಭಿಸಿದೆ. ಈಗಾಗಲೇ ಈ ಕುರಿತಾದ ಪ್ರಸ್ತಾವನೆಯನ್ನು ಅನುಮೋದನೆಗಾಗಿ ರೈಲ್ವೆ ಮಂಡಳಿಗೆ ಕಳುಹಿಸಲಾಗಿದೆ ಎಂದು ಮೂಲಗಳು ವರದಿ ಮಾಡಿವೆ.

ಈ ಪ್ರಸ್ತಾವನೆಗೆ ಒಂದು ವೇಳೆ ಮಂಡಳಿಯ ಅನುಮೋದನೆ ದೊರೆತರೆ, ಉದ್ಯೋಗಿಗಳು ಜನವರಿ 2021 ರಿಂದ HRA ಪ್ರಯೋಜನವನ್ನು ಪಡೆಯಲಿದ್ದಾರೆ. ಈ ಉದ್ಯೋಗಿಗಳು ಎಚ್‌ಆರ್‌ಎ ಪಡೆದ ತಕ್ಷಣ ಅವರ ಸಂಬಳದಲ್ಲಿ ಭಾರಿ ಏರಿಕೆಯಾಗಲಿದೆ. ಭಾರತೀಯ ರೈಲ್ವೇ ತಾಂತ್ರಿಕ ಮೇಲ್ವಿಚಾರಕರ ಸಂಘ (IRTSA) ಮತ್ತು ರಾಷ್ಟ್ರೀಯ ರೈಲ್ವೇಮೆನ್ ಫೆಡರೇಶನ್ (NFIR) ಜನವರಿ 1, 2021 ರಿಂದ HRA ಜಾರಿಗೆ ತರಲು ಸರ್ಕಾರವನ್ನು ಒತ್ತಾಯಿಸಿವೆ.

ಉದ್ಯೋಗಿಗಳು ಹೆಚ್ಚಿದ HRA ಪಡೆಯಲು ಪ್ರಾರಂಭಿಸಿದರು
ಹಾಗೆ ನೋಡಿದರೆ, ತುಟ್ಟಿಭತ್ಯೆ 25% ಕ್ಕಿಂತ ಹೆಚ್ಚಾದರೆ HRA ಅನ್ನು ಸ್ವಯಂಚಾಲಿತವಾಗಿ ಪರಿಷ್ಕರಿಸಲಾಗುತ್ತದೆ. DoPT ಅಧಿಸೂಚನೆಯ ಪ್ರಕಾರ, ಕೇಂದ್ರ ಉದ್ಯೋಗಿಗಳಿಗೆ ಮನೆ ಬಾಡಿಗೆ ಭತ್ಯೆ (HRA) ಬದಲಾವಣೆಯನ್ನು ತುಟ್ಟಿ ಭತ್ಯೆಯ ಆಧಾರದ ಮೇಲೆ ಮಾಡಲಾಗುತ್ತದೆ. ಹೀಗಾಗಿ ಕೇಂದ್ರ ಸರ್ಕಾರ HRA ಹೆಚ್ಚಿಸಲಾಗಿರುವ ನೌಕರರ ಪಟ್ಟಿಗೆ  ಇದೀಗ ಇತರ ಕೇಂದ್ರ ನೌಕರರನ್ನು ಸೇರಿಸಲು ಪ್ರಾರಂಭಿಸಿದೆ.

ಅದರಂತೆ, ಎಲ್ಲಾ ಉದ್ಯೋಗಿಗಳು ಹೆಚ್ಚಾಗಿರುವ HRA ಲಾಭವನ್ನು ಪಡೆಯಲು ಪ್ರಾರಂಭಿಸಿದ್ದಾರೆ. ನಗರದ  ವರ್ಗಗಳ ಪ್ರಕಾರ  ಶೇ.27, ಶೇ.18 ಮತ್ತು ಶೇ.9ರಷ್ಟು ಎಚ್‌ಆರ್‌ಎ ಲಾಭ ನೀಡಲಾಗುತ್ತಿದೆ. ಈ ಹೆಚ್ಚಳವು 1 ಜುಲೈ 2021 ರಿಂದ DA ಜೊತೆಗೆ ಜಾರಿಗೆ ಬಂದಿದೆ.

ಇದನ್ನೂ ಓದಿ-ರೈತರೆ ಗಮನಿಸಿ : PM Kisan ಯೋಜನೆಯ ನಿಮ್ಮ 10ನೇ ಕಂತಿನ ₹4000 ಸಿಕ್ಕಿಬೀಳಬಹುದು!

ನಗರವಾರು HRA ಕೆಳಗಿನಂತಿದೆ
X, Y ಮತ್ತು Z ವರ್ಗದ ನಗರಗಳ ಪ್ರಕಾರ ಮನೆ ಬಾಡಿಗೆ ಭತ್ಯೆಯ (HRA) ವಿವಿಧ ವರ್ಗಗಳನ್ನಾಗಿ ವಿಂಗಡಿಸಲಾಗಿದೆ ಎಂಬುದು ಇಲ್ಲಿ ಗಮನಾರ್ಹ. ಅಂದರೆ, X ವರ್ಗದಲ್ಲಿ ಬರುವ ಉದ್ಯೋಗಿಗಳು ಇದೀಗ ತಿಂಗಳಿಗೆ 5400 ರೂ.ಗಿಂತ ಹೆಚ್ಚು ಎಚ್‌ಆರ್‌ಎ ಪಡೆಯುತ್ತಾರೆ. ಇದರ ನಂತರ, Y ವರ್ಗದ ವ್ಯಕ್ತಿಗೆ ತಿಂಗಳಿಗೆ 3600 ರೂ. ಮತ್ತು ನಂತರ Z ವರ್ಗದ ವ್ಯಕ್ತಿಗೆ ತಿಂಗಳಿಗೆ 1800 ರೂ. HRA ಸಿಗಲಿದೆ.

ಇದನ್ನೂ ಓದಿ-7th Pay Commission: ಸರ್ಕಾರಿ ನೌಕರರ ವೇತನದಲ್ಲಿ ಬಂಪರ್ ಏರಿಕೆ! ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ

50 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳು X ವರ್ಗದಲ್ಲಿ ಬರುತ್ತವೆ. ಈ ನಗರಗಳಲ್ಲಿನ ಕೇಂದ್ರ ಉದ್ಯೋಗಿಗಳಿಗೆ 27% HRA ಸಿಗುತ್ತದೆ. ಇದು Y ವರ್ಗದ ನಗರಗಳಲ್ಲಿ ಶೇ.18  ಮತ್ತು Z ವರ್ಗದಲ್ಲಿ ಶೇ. 9 ಇರಲಿದೆ.

ಇದನ್ನೂ ಓದಿ-Provident Fund: PF ನಾಮನಿರ್ದೇಶನಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು EPFO ಚಂದಾದಾರರಿಗೆ ಇಲ್ಲಿದೆ ಮಾರ್ಗದರ್ಶಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News