ನವದೆಹಲಿ : 7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ (Central government employees) ಹೊಸ ವರ್ಷದಲ್ಲಿ ಮತ್ತೆ ಸಿಹಿ ಸುದ್ದಿ ಸಿಗಲಿದೆ. ಹಬ್ಬದಂತೆಯೇ ಹೊಸ ವರ್ಷದಂದು ತನ್ನ ಉದ್ಯೋಗಿಗಳಿಗೆ ಉಡುಗೊರೆ ನೀಡಲು ಮೋದಿ ಸರ್ಕಾರ (Modi government) ಸಿದ್ಧತೆ ನಡೆಸಿದೆ. ಮಾಹಿತಿ ಪ್ರಕಾರ ಹೊಸ ವರ್ಷದಲ್ಲಿ ಡಿಎ ಹೆಚ್ಚಳದ ಜತೆಗೆ ಎಚ್ ಆರ್ ಎ (HRA) ಬಗ್ಗೆಯೂ ಚರ್ಚೆ ನಡೆಯುತ್ತಿದೆ.


COMMERCIAL BREAK
SCROLL TO CONTINUE READING

ದೀಪಾವಳಿಯಂದು ಮೋದಿ ಸರ್ಕಾರವು (Modi Government) ಉದ್ಯೋಗಿಗಳ ತುಟ್ಟಿಭತ್ಯೆಯನ್ನು (DA) 3 ಶೇಕಡಾ ಹೆಚ್ಚಿಸಿತ್ತು. ಇದೀಗ ಕೇಂದ್ರ ಸರ್ಕಾರ ಮತ್ತೊಮ್ಮೆ ನೌಕರರಿಗೆ ಸಿಹಿ ಸುದ್ದಿ ನೀಡಲಿದೆ ಎನ್ನಲಾಗಿದೆ. 2022 ರ ಆರಂಭದಲ್ಲಿ ಮನೆ ಬಾಡಿಗೆ ಭತ್ಯೆಯನ್ನು (HRA) ಹೆಚ್ಚಿಸುವ ಬಗ್ಗೆ ಸರ್ಕಾರ ಘೋಷಿಸಬಹುದು.


ಇದನ್ನೂ ಓದಿ : Gold-Silver Price Down: ಚಿನ್ನ ಪ್ರಿಯರಿಗೊಂದು ಸಂತಸದ ಸುದ್ದಿ! ಕಳೆದ ಒಂದು ವರ್ಷದಲ್ಲಿಯೇ ಮೊದಲ ಬಾರಿಗೆ ಭಾರಿ ಕುಸಿತ ಕಂಡ ಚಿನ್ನದ ಬೆಲೆ


ಪ್ರಸ್ತಾಪ ರವಾನೆ : 
11.56 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳ ಮನೆ ಬಾಡಿಗೆ ಭತ್ಯೆ (HRA) ಜಾರಿಗೆ ತರಲು ಹಣಕಾಸು ಸಚಿವಾಲಯ ಚಿಂತನೆ ನಡೆಸಿದೆ. ಈ ಪ್ರಸ್ತಾವನೆ ಅನುಮೋದನೆಗಾಗಿ ರೈಲ್ವೆ ಮಂಡಳಿಗೆ ಪ್ರಸ್ತಾವನೆಯನ್ನೂ ರವಾನಿಸಲಾಗಿದೆ. ಈ ಪ್ರಸ್ತಾವನೆ ಅನುಮೋದನೆಗೊಂಡರೆ, ಉದ್ಯೋಗಿಗಳು ಜನವರಿ 2021 ರಲ್ಲಿ HRAಯಲ್ಲಿ ಹೆಚ್ಚಳ ಪಡೆಯುವುದು ಸಾಧ್ಯವಾಗುತ್ತದೆ. ಭಾರತೀಯ ರೈಲ್ವೇ ತಾಂತ್ರಿಕ ಮೇಲ್ವಿಚಾರಕರ ಸಂಘ ಮತ್ತು ರಾಷ್ಟ್ರೀಯ ರೈಲ್ವೇಮೆನ್ ಫೆಡರೇಶನ್ ಜನವರಿ 1, 2021 ರಿಂದ HRA ಅನ್ನು ಜಾರಿಗೆ ತರಲು ಒತ್ತಾಯಿಸುತ್ತಿವೆ. ಮನೆ ಬಾಡಿಗೆ ಭತ್ಯೆ ಹೆಚ್ಚಳವಾದರೆ ವೇತನದಲ್ಲಿ ಬಂಪರ್ ಹೆಚ್ಚಳ ಕಂಡು ಬರಲಿದೆ. 


'ಮನೆ ಬಾಡಿಗೆ ಭತ್ಯೆ' ಎಷ್ಟು ಆಗಿರುತ್ತದೆ?
50 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳು 'X' ವರ್ಗದ ಅಡಿಯಲ್ಲಿ ಬರುತ್ತವೆ. 5 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವವರು 'ವೈ' ವರ್ಗಕ್ಕೆ ಸೇರುತ್ತಾರೆ. ಮತ್ತು 5 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರಗಳು 'Z' ವರ್ಗದ ಅಡಿಯಲ್ಲಿ ಬರುತ್ತವೆ. ಎಲ್ಲಾ ಮೂರು ವರ್ಗಗಳಿಗೆ ಕನಿಷ್ಠ HRA 5400, 3600 ಮತ್ತು 1800 ರೂ ಆಗಿರುತ್ತದೆ. ತುಟ್ಟಿಭತ್ಯೆ (DA Hike) ಶೇಕಡಾ 50 ಕ್ಕೆ ತಲುಪಿದಾಗ, ಗರಿಷ್ಠ ಮನೆ ಬಾಡಿಗೆ ಭತ್ಯೆಯು ಶೇಕಡಾ 30 ಕ್ಕೆ ಹೆಚ್ಚಾಗುತ್ತದೆ. 


ಇದನ್ನೂ ಓದಿ : Crypto Rules:ನಿಯಮ ಉಲ್ಲಂಘಿಸಿದರೆ ಬೀಳಬಹುದು ₹20 ಕೋಟಿ ದಂಡ/ಜೈಲು ಶಿಕ್ಷೆ.!?


ಡಿಎ ಹೆಚ್ಚಿಸಿದ ರಾಜ್ಯ ಸರ್ಕಾರ :
ಇದಕ್ಕೂ ಮೊದಲು, ಜಾರ್ಖಂಡ್ ಸರ್ಕಾರವು ತನ್ನ ಎಲ್ಲಾ ಉದ್ಯೋಗಿಗಳು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ಮೂರು ಪ್ರತಿಶತದಷ್ಟು ಹೆಚ್ಚಿಸಿದ್ದು, ಜುಲೈ 1 ರಿಂದ ಇದು ಅನ್ವಯವಾಗಲಿದೆ. ಮುಖ್ಯಮಂತ್ರಿ ಹೇಮಂತ್ ಸೊರೇನ್ ಅಧ್ಯಕ್ಷತೆಯಲ್ಲಿ ನಡೆದ ಜಾರ್ಖಂಡ್ ಸರ್ಕಾರದ ಸಂಪುಟ ಸಭೆಯಲ್ಲಿ (Cabinet meet) ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದರ ಪ್ರಕಾರ, ರಾಜ್ಯ ಸರ್ಕಾರದ ಐದನೇ, ಆರನೇ ಮತ್ತು ಏಳನೇ ವೇತನ ಆಯೋಗದ ಅಡಿಯಲ್ಲಿ ಸಂಬಳ ಪಡೆಯುವ ಎಲ್ಲಾ ನೌಕರರು ಮತ್ತು ಪಿಂಚಣಿದಾರರು ಜುಲೈ 1, 2021 ರಿಂದ ಮೂರು ಪ್ರತಿಶತದಷ್ಟು ತುಟ್ಟಿಭತ್ಯೆಯನ್ನು ಪಡೆಯುತ್ತಾರೆ. 

 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ