Gold/Silver Price Today: ವಾರದ ಎರಡನೇ ವ್ಯಾಪಾರದ ದಿನ ಅಂದರೆ ಮಂಗಳವಾರ ಚಿನ್ನ (Gold Price) ಮತ್ತು ಬೆಳ್ಳಿ ಬೆಲೆಯಲ್ಲಿ (Silver Price Today) ಭಾರಿ ಇಳಿಕೆ ಕಂಡುಬಂದಿದೆ. ಮಲ್ಟಿ ಕಮಾಡಿಟಿ ಎಕ್ಸ್ ಚೇಂಜ್ ನಲ್ಲಿ ಫೆಬ್ರುವರಿ ವಾಯದಾ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಶೇ.0.17 ರಷ್ಟು ಪ್ರತಿ 10ಗ್ರಾಂನಷ್ಟು ಇಳಿಕೆಯಾಗಿದ್ದರೆ, ಮಾರ್ಚ್ ವಾಯದಾ ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆ ಶೇ.0.14ರಷ್ಟು ಪ್ರತಿ ಕೆ.ಜಿಗೆ ಇಳಿಕೆಯಾಗಿದೆ. ಆದರೆ, ಜಾಗತಿಕ ಮಾರುಕಟ್ಟೆಯ ಕುರಿತು ಹೇಳುವುದಾದರೆ, ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸ್ಥಿರವಾಗಿದೆ. ಯುಎಸ್ ಡಾಲರ್ ಹಾಗೂ ಹೈಯರ್ ಯುಸ್ ಟ್ರೆಸರಿ ಇಲ್ಡ್ಸ್ ಹಿನ್ನೆಲೆ ಚಿನ್ನ ತನ್ನ ನಿಗದಿತ ಮಿತಿಯೋಳಗೆಯೇ ತನ್ನ ವಹಿವಾಟನ್ನು ಮುಂದುವರೆಸಿದೆ.
ಚಿನ್ನ ಮತ್ತು ಬೆಳ್ಳಿಯ ಹೊಸ ದರಗಳು (Gold Silver Price on 7 December 2021)
ಮಂಗಳವಾರ, ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ ಅಂದರೆ MCX ನಲ್ಲಿ, ಫೆಬ್ರವರಿ ಫ್ಯೂಚರ್ಸ್ ಚಿನ್ನದ ಬೆಲೆ 10 ಗ್ರಾಂಗೆ 82 ರೂ. ಇಳಿಕೆ ಕಂಡು 47,832 ರೂ.ಗೆ ಬಂದು ನಿಂತಿದೆ. ಇದೇ ಅವಧಿಯಲ್ಲಿ, ಮಾರ್ಚ್ ಫ್ಯೂಚರ್ಸ್ ನಲ್ಲಿ ಬೆಳ್ಳಿಯ ಬೆಲೆ (Silver Price) ಪ್ರತಿ ಕೆಜಿಗೆ 78 ರೂ.ಗಳಷ್ಟು ಇಳಿಕೆ ಕಂಡು 61,192 ರೂ.ಗೆ ಬಂದು ನಿಂತಿದೆ.
ದಾಖಲೆಯ ಮಟ್ಟಕ್ಕಿಂತ ರೂ.8310 ರಷ್ಟು ಇಳಿಕೆ ಕಂಡ ಚಿನ್ನ
2020 ಕ್ಕೆ ಹೋಲಿಸಿದರೆ, ಕಳೆದ ವರ್ಷ ಇದೇ ಅವಧಿಯಲ್ಲಿ, MCX ನಲ್ಲಿ 10 ಗ್ರಾಂ ಚಿನ್ನದ ಬೆಲೆ ಗರಿಷ್ಠ 56,200 ರೂ. ಗಳಾಗಿತ್ತು. ಇಂದು ಡಿಸೆಂಬರ್ ಫ್ಯೂಚರ್ಸ್ ಎಂಸಿಎಕ್ಸ್‌ನಲ್ಲಿ ಪ್ರತಿ 10 ಗ್ರಾಂ ಚಿನ್ನ 47,890 ರೂ.ಗಳ ಮಟ್ಟದಲ್ಲಿದೆ. ಅಂದರೆ ಇದು ಸುಮಾರು 8310 ರೂ.ಗಳಷ್ಟು ಇಳಿಕೆಯನ್ನು ಸೂಚಿಸುತ್ತದೆ.
ಚಿನ್ನ-ಬೆಳ್ಳಿಯ ಬೆಲೆ ಎಷ್ಟು ಗೊತ್ತಾ
ಅಕ್ಟೋಬರ್ ವಿತರಣೆಯಾದ ಚಿನ್ನದ ಬೆಲೆ ಇಂದು ಶೇಕಡಾ 0.05 ರಷ್ಟು ಇಳಿಕೆಯಾಗಿದ್ದು, ಪ್ರತಿ 10 ಗ್ರಾಂಗೆ 47,890 ರೂ. ಗಳಷ್ಟಿದೆ. ಇದೇ ವೇಳೆ, ಇಂದಿನ ವಹಿವಾಟಿನಲ್ಲಿ ಬೆಳ್ಳಿ ಶೇಕಡಾ 0.8 ರಷ್ಟು ಕುಸಿದಿದೆ ಮತ್ತು ಇಂದು 1 ಕೆಜಿ ಬೆಳ್ಳಿಯ ಬೆಲೆ 61,221 ರೂ.ಗೆ ತಲುಪಿದೆ
ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ
ಸೋಮವಾರ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿತ್ತು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ 10 ಗ್ರಾಂ ಚಿನ್ನಕ್ಕೆ 29 ರೂಪಾಯಿ ಏರಿಕೆಯಾಗಿ 46,974 ರೂಪಾಯಿಗಳಿಗೆ ತಲುಪಿತ್ತು ಮತ್ತು ಬೆಳ್ಳಿ ಪ್ರತಿ ಕೆಜಿಗೆ 149 ರೂಪಾಯಿ ಇಳಿಕೆಯಾಗಿ 60,137 ರೂಪಾಯಿಗಳಿಗೆ ತಲುಪಿತ್ತು.
ಇದನ್ನೂ ಓದಿ-Crypto Rules:ನಿಯಮ ಉಲ್ಲಂಘಿಸಿದರೆ ಬೀಳಬಹುದು ₹20 ಕೋಟಿ ದಂಡ/ಜೈಲು ಶಿಕ್ಷೆ.!?
ಈ ರೀತಿಯಾಗಿ ನೀವು ಚಿನ್ನದ ಶುದ್ಧತೆಯನ್ನು ಪರಿಶೀಲಿಸಬಹುದು
ನೀವೂ ಕೂಡ ಒಂಚು ವೇಳೆ ಚಿನ್ನದ ಶುದ್ಧತೆಯನ್ನು ಪರಿಶೀಲಿಸಲು ಬಯಸಿದರೆ, ಇದಕ್ಕಾಗಿ ಸರ್ಕಾರದಿಂದ ಅಪ್ಲಿಕೇಶನ್ ಅನ್ನು ಸಿದ್ಧಪಡಿಸಿದೆ. 'ಬಿಐಎಸ್ ಕೇರ್ ಆಪ್' ಮೂಲಕ ಗ್ರಾಹಕರು ಚಿನ್ನದ ಪರಿಶುದ್ಧತೆಯನ್ನು ಪರಿಶೀಲಿಸಬಹುದು. ಈ ಆ್ಯಪ್ ಮೂಲಕ ಚಿನ್ನದ ಪರಿಶುದ್ಧತೆಯನ್ನು ಪರಿಶೀಲಿಸುವುದು ಮಾತ್ರವಲ್ಲದೆ ಅದಕ್ಕೆ ಸಂಬಂಧಿಸಿದ ಯಾವುದೇ ದೂರು ಕೂಡ ನೀಡಬಹುದು.
ಇದನ್ನೂ ಓದಿ-FD Interest Rates : ಬ್ಯಾಂಕ್ ಎಫ್ ಡಿ ಮೇಲಿನ ಬಡ್ಡಿ ದರ ಹೆಚ್ಚಳ, ಯಾವ ಬ್ಯಾಂಕ್ ನೀಡುತ್ತಿದೆ ಅತಿ ಹೆಚ್ಚು ರಿಟರ್ನ್
ಮಿಸ್ಡ್ ಕಾಲ್ ನೀಡುವ ಮೂಲಕ ಚಿನ್ನದ ದರವನ್ನು ಕಂಡುಹಿಡಿಯಿರಿ
ಮನೆಯಲ್ಲಿ ಕುಳಿತು ಈ ದರಗಳನ್ನು ನೀವು ಸುಲಭವಾಗಿ ತಿಳಿದುಕೊಳ್ಳಬಹುದು. ಇದಕ್ಕಾಗಿ ನೀವು ಈ ಮೊಬೈಲ್ ಸಂಖ್ಯೆ 8955664433 ಕ್ಕೆ ಮಿಸ್ಡ್ ಕಾಲ್ ನೀಡಬೇಕಾಗುತ್ತದೆ ಮತ್ತು ನಿಮ್ಮ ಆಗ ಫೋನ್‌ಗೆ ಸಂದೇಶ ಬರುತ್ತದೆ, ಇದರಲ್ಲಿ ನೀವು ಇತ್ತೀಚಿನ ದರಗಳನ್ನು ಪರಿಶೀಲಿಸಬಹುದು.
ಇದನ್ನೂ ಓದಿ-PMSBY Scheme: ಸರ್ಕಾರದ ಈ ಸೂಪರ್‌ಹಿಟ್ ಯೋಜನೆಯಲ್ಲಿ 1 ರೂ. ಹೂಡಿಕೆ ಮಾಡಿ, 2 ಲಕ್ಷ ರೂ.ಗಳ ಲಾಭ ಗಳಿಸಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ