Good news for pensioners: ಪಿಂಚಣಿದಾರರಿಗೆ ಶುಭ ಸುದ್ದಿ!

Good news for Pensioners: ಪಿಂಚಣಿದಾರರಿಗೆ ಜೀವ ಪ್ರಮಾಣ ಪತ್ರ ನೀಡುವ ದಿನಾಂಕವನ್ನು ಕೇಂದ್ರ ಸರ್ಕಾರ ಡಿಸೆಂಬರ್ 31ರವರೆಗೆ ವಿಸ್ತರಿಸಿದೆ.

Written by - Yashaswini V | Last Updated : Dec 8, 2021, 07:11 AM IST
  • ಪಿಂಚಣಿ ಪಡೆಯಲು, ಪಿಂಚಣಿದಾರರು ಜೀವನ ಪ್ರಮಾಣಪತ್ರವನ್ನು ನೀಡಬೇಕು
  • ಪ್ರಸ್ತುತ ಪಿಂಚಣಿದಾರರಿಗೆ ಜೀವಿತ ಪ್ರಮಾಣ ಪತ್ರ ನೀಡಲು ನವೆಂಬರ್ 30 ಕೊನೆಯ ದಿನವಾಗಿತ್ತು
  • ಆದರೆ, ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಪಿಂಚಣಿದಾರರಿಗೆ ಜೀವ ಪ್ರಮಾಣ ಪತ್ರ ನೀಡುವ ದಿನಾಂಕವನ್ನು ವಿಸ್ತರಿಸಲಾಗಿದೆ
Good news for pensioners: ಪಿಂಚಣಿದಾರರಿಗೆ ಶುಭ ಸುದ್ದಿ! title=
Pensioners Life Certificate

Good news for pensioners: ಪಿಂಚಣಿದಾರರಿಗೆ ಜೀವ ಪ್ರಮಾಣ ಪತ್ರ ನೀಡುವ ದಿನಾಂಕವನ್ನು ಕೇಂದ್ರ ಸರ್ಕಾರ ಡಿಸೆಂಬರ್ 31ರವರೆಗೆ ವಿಸ್ತರಿಸಿದೆ. ಹಿರಿಯ ನಾಗರಿಕರಿಗೆ ಜೀವನ ಸೌಕರ್ಯವನ್ನು ಹೆಚ್ಚಿಸುವ ಪ್ರಯತ್ನದಲ್ಲಿ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಮಂಗಳವಾರ ಕೇಂದ್ರ ಸರ್ಕಾರದ ಪಿಂಚಣಿದಾರರು ಜೀವನ ಪ್ರಮಾಣಪತ್ರವನ್ನು ಸಲ್ಲಿಸುವ ಅವಧಿಯನ್ನು ಡಿಸೆಂಬರ್ 31 ರವರೆಗೆ ವಿಸ್ತರಿಸುವ ಸರ್ಕಾರದ ನಿರ್ಧಾರವನ್ನು ಪ್ರಕಟಿಸಿದರು.

ವಾಸ್ತವವಾಗಿ, ಪಿಂಚಣಿ ಪಡೆಯಲು, ಪಿಂಚಣಿದಾರರು ಜೀವನ ಪ್ರಮಾಣಪತ್ರವನ್ನು ನೀಡಬೇಕು. ಪ್ರಸ್ತುತ ಪಿಂಚಣಿದಾರರಿಗೆ ಜೀವಿತ ಪ್ರಮಾಣ ಪತ್ರ ನೀಡಲು ನವೆಂಬರ್ 30 ಕೊನೆಯ ದಿನವಾಗಿತ್ತು. ಆದರೆ, ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಪಿಂಚಣಿದಾರರಿಗೆ ಜೀವ ಪ್ರಮಾಣ ಪತ್ರ (Life Certificate) ನೀಡುವ ದಿನಾಂಕವನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಲಾಗಿದೆ ಎಂದು ಸಚಿವ ಜಿತೇಂದ್ರ ಸಿಂಗ್ ಹೇಳಿದರು. 

ಇದನ್ನೂ ಓದಿ- LPG Cylinder: ಅಡುಗೆ ಅನಿಲ ಸಿಲಿಂಡರ್ ತೂಕ ಕಡಿಮೆ ಮಾಡಲಿರುವ ಸರ್ಕಾರ

ಪಿಂಚಣಿದಾರರು (Pensioners) ವಿಸ್ತೃತ ಅವಧಿಯಲ್ಲಿ ಶಾಖೆಗಳಿಗೆ ಸ್ವತಃ ಭೇಟಿ ನೀಡುವ ಮೂಲಕ ಅಥವಾ ಆನ್‌ಲೈನ್ ವ್ಯವಸ್ಥೆಯ ಮೂಲಕ ಡಿಜಿಟಲ್ ಮೂಲಕ ಈ ಪ್ರಮಾಣಪತ್ರವನ್ನು ಸಲ್ಲಿಸಬಹುದು ಎಂದು ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಮಾಹಿತಿ ನೀಡಿದ್ದಾರೆ. ಈ ವಿಸ್ತೃತ ಅವಧಿಯಲ್ಲಿ ಪಿಂಚಣಿ ವಿತರಿಸುವ ಅಧಿಕಾರಿಗಳು (ಪಿಡಿಎ) ತಡೆರಹಿತವಾಗಿ ಪಿಂಚಣಿ ಪಾವತಿಸುವುದನ್ನು ಮುಂದುವರಿಸಲಾಗುವುದು ಎಂದು ಸಿಬ್ಬಂದಿ ಸಚಿವಾಲಯದ ಹೇಳಿಕೆ ತಿಳಿಸಿದೆ.

ಇದನ್ನೂ ಓದಿ- Crypto Rules:ನಿಯಮ ಉಲ್ಲಂಘಿಸಿದರೆ ಬೀಳಬಹುದು ₹20 ಕೋಟಿ ದಂಡ/ಜೈಲು ಶಿಕ್ಷೆ.!?

ಪಿಂಚಣಿ ವಿತರಿಸುವ ಬ್ಯಾಂಕ್‌ಗಳು ತಮ್ಮ ಶಾಖೆಗಳಲ್ಲಿ ಜನಸಂದಣಿಯನ್ನು ತಪ್ಪಿಸಲು ಮತ್ತು ಸಾಮಾಜಿಕ ದೂರ ಕ್ರಮಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News