7th Pay Commission Upddate: ಕೇಂದ್ರ ಸರ್ಕಾರಿ ನೌಕರರಿಗೊಂದು ಭಾರಿ ಸಂತಸದ ಸುದ್ದಿ ಪ್ರಕಟವಾಗಿದೆ. ಸರ್ಕಾರಿ ನೌಕರರಿಗಾಗಿ ಇಂದು ಸಂಜೆ, ಲೇಬರ್ ಬ್ಯೂರೋ ವತಿಯಿಂದ ಡಿಎ ಅಂಕಿಅಂಶಗಳು ಬಿಡುಗಡೆಯಾಗಲಿದ್ದು, ಮುಂಬರುವ  ದಿನಗಳಲ್ಲಿ ಸರ್ಕಾರಿ ನೌಕರರ ತುಟ್ಟಿಭತ್ಯೆ ಮತ್ತು ವೇತನ ಎಷ್ಟು ಹೆಚ್ಚಾಗಲಿದೆ ಎಂಬುದು ತಿಳಿಯಲಿದೆ. ಏಪ್ರಿಲ್ 28 ರ ಸಂಜೆ ಕಾರ್ಮಿಕ ಇಲಾಖೆ ವತಿಯಿಂದ ದತ್ತಾಂಶಗಳನ್ನು ಬಿಡುಗಡೆ ಮಾಡಲಾಗುವುದು ಎನ್ನಲಾಗಿದೆ. ಮೂಲಗಳ ಪ್ರಕಾರ, ಜುಲೈ ತಿಂಗಳಿನಲ್ಲಿ, ಸರ್ಕಾರವು 4% ರಷ್ಟು DA ಹೆಚ್ಚಳ ಮಾಡಬಹುದು ಎಂದು ನಿರೀಕ್ಷಿಸಲಾಗುತ್ತಿದೆ, ಇದರಿಂದ ಮುಂಬರುವ ದಿನಗಳಲ್ಲಿ ಸರ್ಕಾರಿ ನೌಕರರು ಶೇ. 46 ರಷ್ಟು ತುಟ್ಟಿಭತ್ಯೆಯನ್ನು ಪಡೆಯಬಹುದು.


COMMERCIAL BREAK
SCROLL TO CONTINUE READING

ಜುಲೈ 1 ರಂದು ತುಟ್ಟಿಭತ್ಯೆಯಲ್ಲಿ ಹೆಚ್ಚಳ
ಸರ್ಕಾರವು ಜುಲೈ 1, 2023 ರಂದು ತುಟ್ಟಿಭತ್ಯೆಯನ್ನು ಜಾರಿಗೊಳಿಸುತ್ತದೆ, ನಂತರ ನೌಕರರ ಡಿಎ ಹೆಚ್ಚಾಗಲಿದೆ. ಪ್ರಸ್ತುತ ಕೇಂದ್ರ ನೌಕರರು ಶೇ.42 ದರದಲ್ಲಿ ಡಿಎ ಪಡೆಯುತ್ತಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ.


ಮಾರ್ಚ್ ತಿಂಗಳ ಅಂಕಿ-ಅಂಶಗಳು ಬಿಡುಗಡೆಯಾಗಲಿವೆ
ಪ್ರತಿ 6 ತಿಂಗಳಿಗೊಮ್ಮೆ CPI-IW ಸೂಚ್ಯಂಕದ ಆಧಾರದ ಮೇಲೆ ತುಟ್ಟಿ ಭತ್ಯೆಯಲ್ಲಿ ಪರಿಷ್ಕರಣೆ ಮಾಡಲಾಗುತ್ತದೆ. ಡೇಟಾವನ್ನು AICPI-IW ಮೂಲಕ ನೀಡಲಾಗುತ್ತದೆ. ಇದುವರೆಗೆ ತುಟ್ಟಿಭತ್ಯೆ ಸೂಚ್ಯಂಕದ ಆಧಾರದ ಮೇಲೆ 43.79 ತಲುಪಿದೆ. ಆದರೆ, ಮಾರ್ಚ್ ತಿಂಗಳ ಅಂಕಿ-ಸಂಖ್ಯೆಗಳು ಏಪ್ರಿಲ್ 28 ರ ಸಂಜೆ ಬಿಡುಗಡೆಯಾಗಲಿವೆ.


ತುಟ್ಟಿಭತ್ಯೆ ಶೇ. 46 ಕ್ಕೆ ತಲುಪಲಿದೆ
ಮಾಧ್ಯಮ ವರದಿಗಳ ಪ್ರಕಾರ, ಜುಲೈನಲ್ಲಿ ಸರ್ಕಾರವು ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು ಹೆಚ್ಚಿಸಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ತಜ್ಞರ ಪ್ರಕಾರ, ಸರ್ಕಾರವು ಶೇಕಡಾ 4 ರ ದರವನ್ನು ಹೆಚ್ಚಿಸಿದರೆ, ಕೇಂದ್ರ ನೌಕರರು ಶೇಕಡಾ 46 ರ ದರದಲ್ಲಿ ಡಿಎ ಲಾಭವನ್ನು ಪಡೆಯುತ್ತಾರೆ. ಪ್ರಸ್ತುತ, ನೌಕರರು ತುಟ್ಟಿಭತ್ಯೆಯನ್ನು ಶೇಕಡಾ 42 ರ ದರದಲ್ಲಿ ಪಡೆಯುತ್ತಿದ್ದಾರೆ.


ಇದನ್ನೂ ಓದಿ-Big Update: 8ನೇ ವೇತನ ಆಯೋಗದ ಕುರಿತು ಬಿಗ್ ಅಪ್ಡೇಟ್ ಪ್ರಕಟ, ಮೂಲ ವೇತನ ರೂ.26,000 ವರೆಗೆ ಹೆಚ್ಚಳ!


ಫೆಬ್ರವರಿಯಲ್ಲಿನ ಅಂಕಿ ಅಂಶಗಳು ಹೇಗಿದ್ದವು? 
ಫೆಬ್ರವರಿಯಲ್ಲಿ, ಈ ಸೂಚ್ಯಂಕವು 132.8 ರಿಂದ 132.7 ಕ್ಕೆ ಇಳಿಕೆಯಾಗಿದೆ. ಅದರ ಮುಂದಿನ ತಿಂಗಳು ಅಂದರೆ ಮಾರ್ಚ್ ತಿಂಗಳಿನಲ್ಲಿ ಈ ಸೂಚ್ಯಂಕ ಸಂಖ್ಯೆಯು ಬದಲಾಗದೆ 132.7 ರಷ್ಟಿದ್ದರೂ ಕೂಡ, ತುಟ್ಟಿಭತ್ಯೆಯಲ್ಲಿ ಕನಿಷ್ಠ ಶೇ.3 ರಷ್ಟು ಹೆಚ್ಚಾಗಲಿದೆ.


ಇದನ್ನೂ ಓದಿ-Appraisal: ತನ್ನ ಆಪ್ರೇಸಲ್ ತಾನೇ ಮಾಡಿಕೊಂಡು 10 ಪಟ್ಟು ವೇತನ ಹೆಚ್ಚಿಸಿಕೊಂಡ ಮಹಿಳಾ ಬಾಸ್


ಪ್ರತಿ ತಿಂಗಳ ಕೊನೆಯ ದಿನಾಂಕದಂದು ಈ ಅಂಕಿ-ಅಂಶಗಳು ಬಿಡುಗಡೆಯಾಗುತ್ತವೆ
ಕೇಂದ್ರ ಕಾರ್ಮಿಕ ಸಚಿವಾಲಯ ಪ್ರತಿ ತಿಂಗಳ ಕೊನೆಯ ದಿನದಂದು ICPI-IW ಡೇಟಾವನ್ನು ಬಿಡುಗಡೆ ಮಾಡುತ್ತದೆ. ಪ್ರತಿ ತಿಂಗಳ ಕೊನೆಯ ಕೆಲಸದ ದಿನದಂದು ಡೇಟಾವನ್ನು ಬಿಡುಗಡೆ ಮಾಡಲಾಗುತ್ತದೆ. ಇದರಲ್ಲಿ, ವಿವಿಧ ಕೈಗಾರಿಕಾ ಪ್ರದೇಶಗಳಿಂದ ಅನೇಕ ಸಂಗತಿಗಳ ದತ್ತಾಂಶವನ್ನು ಸಂಗ್ರಹಿಸಲಾಗುತ್ತದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.