7th Pay Commission: ಒಂದು ವೇಳೆ ನೀವೂ ಕೂಡ ಕೇಂದ್ರ ಸರ್ಕಾರಿ ನೌಕರರಾಗಿದ್ದರೆ  ಈ ಸುದ್ದಿ ನಿಮಗಾಗಿ. ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಅಡಿ ವೇತನವನ್ನು ಪಾವತಿಸಲಾಗುತ್ತಿದೆ. 7ನೇ ವೇತನ ಆಯೋಗದ ಪ್ರಕಾರ, ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯ ರೂಪದಲ್ಲಿ ಲಾಭ ಸಿಗುತ್ತಿದೆ. ಏತನ್ಮಧ್ಯೆ ಶೀಘ್ರದಲ್ಲಿಯೇ ಕೇಂದ್ರ ಸರ್ಕಾರ ನೌಕರರಿಗೆ ಒಂದು ಮಹತ್ವದ ಸುದ್ದಿ ನೀಡುವ ಸಾಧ್ಯತೆ ಇದೆ . 


COMMERCIAL BREAK
SCROLL TO CONTINUE READING

ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಲಿದೇಯಾ ಸರ್ಕಾರ
ಹೌದು, ಕೇಂದ್ರ ಸರ್ಕಾರ, ಸರ್ಕಾರಿ ನೌಕರರ ವೇತನಕ್ಕೆ ಸಂಬಂಧಿಸದಂತೆ ಹೊಸ ಸೂತ್ರ ಜಾರಿಗೊಳಿಸುವ ಸಾಧ್ಯತೆ ಇದೆ  ಎನ್ನಲಾಗಿದೆ. ಇದಕ್ಕೂ ಮುನ್ನ ಈ ಕುರಿತು ಜುಲೈ  2016ರಲ್ಲಿ ಮಾಹಿತಿ ನೀಡಿದ್ದ ಮಾಜಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, 'ವೇತನ ಆಯೋಗವನ್ನು ಹೊರತುಪಡಿಸಿ ಕೇಂದ್ರ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಹೊಸ ಮಾರ್ಗ ಜಾರಿಗೆ ತರುವ ಕಾಲ ಬಂದಿದೆ' ಎಂದಿದ್ದರು. ಕೇಂದ್ರ ವಿತ್ತ ಸಚಿವಾಲಯದ ಮೂಲಗಳು ನೀಡಿದ ಮಾಹಿತಿಯ ಪ್ರಕಾರ, ಸರ್ಕಾರ ಕೇಂದ್ರ ನೌಕರರಗಾಗಿ ಹೊಸ ವೇತನ ಆಯೋಗ ಜಾರಿಗೆ ತರುವ ಕುರಿತು ಯಾವುದೇ ಚಿಂತನೆ ನಡೆಸುತ್ತಿಲ್ಲ ಎನ್ನಲಾಗಿದೆ. ಜೊತೆಗೆ ಕೇಂದ್ರ ಸರ್ಕಾರಿ ನೌಕರರಿಗೆ ಅವರ ಪರ್ಫಾರ್ಮೆನ್ಸ್  ಆಧಾರದ ಮೇಲೆ  ವೇತನ ಪರಿಷ್ಕರಿಸುವ  ಸೂತ್ರದ ಮೇಲೆ ಸಚಿವಾಲಯ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ. 


ಇದನ್ನೂ ಓದಿ-ರೈತರೆ ಈಗ ತಿಂಗಳಿಗೆ ₹6,000 ಜೊತೆಗೆ 3,000 ಸಿಗುತ್ತದೆ : ಈ ಲಾಭ ಪಡೆಯಲು ಹೀಗೆ ಮಾಡಿ!


8ನೇ ವೇತನ ಆಯೋಗದ ಕುರಿತಾದ ನಿರ್ಣಯ
ನಮ್ಮ ನಮ್ಮ ಪಾಲುದಾರ ವೆಬ್‌ಸೈಟ್ ಝೀ ಬಿಸಿನೆಸ್ ಗೆ ಮೂಲಗಳಿಂದ ದೊರೆತ ಮಾಹಿತಿಯ ಪ್ರಕಾರ, 7 ನೇ ವೇತನ ಆಯೋಗದ ನಂತರ, ಈಗ ಮುಂದಿನ ವೇತನ ಆಯೋಗವು ಬರುವುದು ಕಷ್ಟ ಎನ್ನಲಾಗಿದೆ. 68 ಲಕ್ಷ ಕೇಂದ್ರ ನೌಕರರು ಮತ್ತು 52 ಲಕ್ಷ ಪಿಂಚಣಿದಾರರು ಡಿಎ ಶೇ. 50% ಕ್ಕಿಂತ ಹೆಚ್ಚಿದ್ದರೆ ವೇತನದಲ್ಲಿ ಸ್ವಯಂಚಾಲಿತ ಪರಿಷ್ಕರಣೆ ಪಡೆಯುವ  ವ್ಯವಸ್ಥೆಯನ್ನು ಇದೀಗ ಸರ್ಕಾರ ಜಾರಿಗೆ ತರಲು ಬಯಸಿದೆ ಎನ್ನಲಾಗಿದೆ. ಅಂದರೆ, ಇದಕ್ಕಾಗಿ ‘ಸ್ವಯಂಚಾಲಿತ ವೇತನ ಪರಿಷ್ಕರಣೆ ವ್ಯವಸ್ಥೆ’ ಮಾಡಲು ಸರಕಾರ ಬಯಸಿದೆ ಎನ್ನಲಾಗಿದೆ. ಆದರೆ ಹಣದುಬ್ಬರ ದರ ನಿರಂತರವಾಗಿ ಹೆಚ್ಚುತ್ತಲೇ ಇದೇ, ಹೀಗಾಗಿ  2016 ರಿಂದ ಬಂದ  ಶಿಫಾರಸುಗಳೊಂದಿಗೆ ಜೀವನ ನಡೆಸುವುದು ತುಂಬಾ ಕಷ್ಟಕಾರ್ಯವಾಗುತ್ತದೆ ಎಂದು ನೌಕರರು ತಮ್ಮ ವಾದ ಮಂಡಿಸಿದ್ದಾರೆ. ಆದರೆ, ಇದುವರೆಗೂ ಸರ್ಕಾರ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ.


ಇದನ್ನೂ ಓದಿ-Ration Card: ಪಡಿತರ ಚೀಟಿಯಲ್ಲಿ ತಕ್ಷಣವೆ ಈ ಅಪ್ಡೇಟ್ ಮಾಡಿ, ಇಲ್ಲಿದೆ ಸರಳ ವಿಧಾನ


ಈ ನೌಕರರಿಗೆ ಸಿಗಲಿದೆ ಲಾಭ
ಹಣಕಾಸು ಸಚಿವಾಲಯದಿಂದ ದೊರೆತ ಮಾಹಿತಿಯ ಪ್ರಕಾರ, ಆಗಿನ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ ಅವರು ಮಧ್ಯಮ ಮತ್ತು ಕೆಳ ಹಂತದ ನೌಕರರ ವೇತನವನ್ನು ಹೆಚ್ಚಿಸಲು ಬಯಸಿದ್ದರು. ಆದರೆ ಹೊಸ ಸೂತ್ರದ ನಂತರ, ಮಧ್ಯಮ ಹಂತದ ಉದ್ಯೋಗಿಗಳ  ಸಂಬಳದ ಮಟ್ಟವು ಹೆಚ್ಚಿನ ಹೆಚ್ಚಳವನ್ನು ಕಾಣುವುದಿಲ್ಲ ಎಂಬಂತೆ ತೋರುತ್ತದೆ. ಆದರೆ, ಸರಕಾರದ ಈ ಕ್ರಮದಿಂದ ಕೆಳಹಂತದ ನೌಕರರಿಗೆ ಅನುಕೂಲವಾಗಲಿದೆ ಎನ್ನಲಾಗಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.