ನಾಳೆಯೊಳಗೆ ಆಧಾರ್ ಗೆ ಸಂಬಂಧಿಸಿದ ಈ ಕೆಲಸ ಮಾಡದೇ ಹೋದರೆ ಬೀಳಲಿದೆ ಭಾರೀ ದಂಡ
ಏಪ್ರಿಲ್ 1 ರಿಂದ ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ ಮತ್ತು ಮಾರ್ಚ್ 31 ರ ನಂತರ ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಮಾಡಲು ದಂಡವನ್ನು ಪಾವತಿಸಲಾಗುವುದು ಎಂದು ಸಿಬಿಡಿಟಿ ಅಧಿಸೂಚನೆಯನ್ನು ಹೊರಡಿಸಿದೆ.
ಬೆಂಗಳೂರು : ಆಧಾರ್ ಮತ್ತು ಪ್ಯಾನ್ ಕಾರ್ಡ್ (Aadhaar-PAN Link) ಲಿಂಕ್ ಮಾಡಲು ಮಾರ್ಚ್ 31 ಕೊನೆಯ ದಿನ. ನೀವು ಇನ್ನೂ ನಿಮ್ಮ ಆಧಾರ್ ಮತ್ತು ಪ್ಯಾನ್ ಕಾರ್ಡ್ ಅನ್ನು ಲಿಂಕ್ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ ಎಂದಾದರೆ, ನಾಳೆಯೊಳಗೆ ಈ ಕೆಲಸವನ್ನು ಮುಗಿಸಿಕೊಳ್ಳಿ. ಇಲ್ಲವಾದರೆ ಭಾರೀ ದಂಡವನ್ನು ತೆರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಿಬಿಡಿಟಿ (CBDT) ಅಧಿಸೂಚನೆಯನ್ನು ಹೊರಡಿಸಿದೆ.
ದಂಡವನ್ನು ಪಾವತಿಸುವ ಮೂಲಕ ಮಾರ್ಚ್ 31 ರ ನಂತರವೂ ಲಿಂಕ್ ಮಾಡಬಹುದು :
ಆಧಾರ್‌ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು (Aadhaar-PAN Link) ಕೊನೆಯ ದಿನಾಂಕ ಮಾರ್ಚ್ 31 ಅಂದರೆ ನಾಳೆ. ಆದರೆ ಇದರ ನಂತರವೂ ದಂಡ ಪಾವತಿಸುವ ಮೂಲಕ ಆಧಾರ್ (Aadhaar) ಮತ್ತು ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಬಹುದು. ಮಾರ್ಚ್ 31 ರ ನಂತರವೂ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡಬಹುದು ಎಂದು CBDT ಅಧಿಸೂಚನೆಯನ್ನು ಹೊರಡಿಸಿತ್ತು. ಆದರೆ ನಾಳೆಯ ನಂತರ ದಂಡವನ್ನು ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ : Hero Splendor Electric: Hero Splendor ಬೈಕ್ ನ ಎಲೆಕ್ಟ್ರಿಕ್ ಅವತಾರ ನೋಡಿದ್ದೀರಾ? ಇಲ್ಲ ಎಂದಾದರೆ ಈಗಲೇ ನೋಡಿ
ಮಾರ್ಚ್ 31 ರ ನಂತರ ಎಷ್ಟು ದಂಡ ತೆರಬೇಕಾಗುತ್ತದೆ :
ಅಧಿಸೂಚನೆಯ ಪ್ರಕಾರ, ಮಾರ್ಚ್ 31 ರ ನಂತರ 3 ತಿಂಗಳೊಳಗೆ ಆಧಾರ್ ಮತ್ತು ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಿದರೆ, 500 ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ (Aadhaar-PAN Link). 3 ತಿಂಗಳವರೆಗೆ ಅಂದರೆ ಜೂನ್ ವರೆಗೆ ಲಿಂಕ್ ಮಾಡದಿದ್ದರೆ, ನಂತರ 1000 ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ.
ಆನ್‌ಲೈನ್‌ನಲ್ಲಿ ಪ್ಯಾನ್ ಮತ್ತು ಆಧಾರ್ ಅನ್ನು ಈ ರೀತಿ ಲಿಂಕ್ ಮಾಡಿ :
1. ಪ್ಯಾನ್-ಆಧಾರ್ ಲಿಂಕ್ ಮಾಡಲು ಆದಾಯ ತೆರಿಗೆ ಇ-ಫೈಲಿಂಗ್ ವೆಬ್‌ಸೈಟ್‌ಗೆ ಭೇಟಿ ನೀಡಿ.
2. ಸೈಟ್‌ನ ಎಡಭಾಗದಲ್ಲಿ, ನೀವು ಕ್ವಿಕ್ ಲಿಂಕ್‌ಗಳ ಆಯ್ಕೆ ಕಾಣಿಸುತ್ತದೆ. ಇಲ್ಲಿ 'ಲಿಂಕ್ ಆಧಾರ್' ಆಯ್ಕೆಯನ್ನು ಕ್ಲಿಕ್ ಮಾಡಬೇಕು.
3. ಇಲ್ಲಿ ನೀವು ನಿಮ್ಮ ಪ್ಯಾನ್, ಆಧಾರ್ ಸಂಖ್ಯೆ ಮತ್ತು ಹೆಸರನ್ನು ನಮೂದಿಸಬೇಕು.
4. ಮಾಹಿತಿ ನೀಡಿದ ನಂತರ, ನಿಮಗೆ OTP ಕಳುಹಿಸಲಾಗುತ್ತದೆ. OTP ಅನ್ನು ನಮೂದಿಸಿದ ನಂತರ, ನಿಮ್ಮ ಆಧಾರ್ ಮತ್ತು PAN ಅನ್ನು ಲಿಂಕ್ ಮಾಡಲಾಗುತ್ತದೆ.
ಇದನ್ನೂ ಓದಿ : ನೌಕರರಿಗೆ ಬಿಗ್ ಶಾಕ್ : 15 ದಿನಗಳ ಬದಲಿಗೆ 30 ದಿನಗಳ ಗ್ರಾಚ್ಯುಟಿ ಪ್ರಸ್ತಾವನೆ ನಿರಾಕರಿಸಿದ ಕೇಂದ್ರ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.