ಆಕಸ್ಮಿಕವಾಗಿ ಬೇರೆಯವರ ಹಣ ನಿಮ್ಮ ಅಕೌಂಟ್`ಗೆ ಬಂದಿದ್ಯಾ? ಈ ವಿಷಯಗಳು ನಿಮಗೂ ತಿಳಿದಿರಲಿ
Banking: ಆಕಸ್ಮಿಕವಾಗಿ ಬೇರೆಯವರ ಖಾತೆ ಸೇರಬೇಕಿದ್ದ ಹಣ ನಿಮ್ಮ ಖಾತೆ ಸೇರಿರಬಹುದು. ಅಂತಹ ಸಂದರ್ಭದಲ್ಲಿ ಅದನ್ನು ಖರ್ಚು ಮಾಡುವ ತಪ್ಪನ್ನು ಎಂದಿಗೂ ಮಾಡಬಾರದು.
Banking: ಇದು ಡಿಜಿಟಲ್ ಯುಗ. ಈ ಡಿಜಿಟಲ್ ಯುಗದಲ್ಲಿ ಆನ್‌ಲೈನ್ ಬ್ಯಾಂಕಿಂಗ್ ಸಹಕಾರದಿಂದಾಗಿ ಬಹುತೇಕ ಬ್ಯಾಂಕಿಂಗ್ ಸಂಬಂಧಿತ ಕೆಲಸಗಳನ್ನು ನೀವು ಕುಳಿತಿರುವಲ್ಲಿಯೇ ಪೂರ್ಣಗೊಳಿಸಬಹುದು. ಕೆಲವೊಮ್ಮೆ ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣ ವರ್ಗಾವಣೆ ಮಾಡುವಾಗ ಅದು ತಪ್ಪಾಗಿ ಬೇರೆ ಖಾತೆಗೆ ವರ್ಗಾವಣೆಯಾಗಬಹುದು. ಈ ರೀತಿ ಹಠಾತ್ ಆಗಿ ನೀವು ಯಾರದಾದರೂ ಹಣವನ್ನು ನಿಮ್ಮ ಖಾತೆಯಲ್ಲಿ ಸ್ವೀಕರಿಸಿದರೆ ಏನು ಮಾಡಬೇಕು ಗೊತ್ತಾ?
ನಿಮ್ಮ ಬ್ಯಾಂಕ್ ಖಾತೆಗೆ ಆಕಸ್ಮಿಕವಾಗಿ ಬೇರೆಯವರ ಹಣ ಬಂದರೆ ಏನು ಮಾಡಬೇಕು?
ಈ ಕೆಲಸವನ್ನು ಎಂದಿಗೂ ಮಾಡಬೇಡಿ:
ಮೊದಲೇ ತಿಳಿಸಿದಂತೆ ಅಜ್ಞಾತ ಮೂಲಗಳಿಂದ ಇಲ್ಲವೇ ಬೇರೆಯವರ ಹಣ ನಿಮ್ಮ ಖಾತೆಗೆ ಬಂದರೆ ಅಂತಹ ಹಣವನ್ನು ಬಳಸಿಕೊಳ್ಳುವ ತಪ್ಪನ್ನು ಎಂದಿಗೂ ಮಾಡಬಾರದು.
ಡಾಕ್ಯುಮೆಂಟ್ :
ನಿಮ್ಮ ಖಾತೆಗೆ ವರ್ಗಾವಣೆಯಾಗಿರುವ ಹಠಾತ್ ಠೇವಣಿಗಳ ದಾಖಲೆಯನ್ನು ಇರಿಸಿಕೊಳ್ಳಲು ಅಥವಾ ವಹಿವಾಟಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಸಂಗ್ರಹಿಸಲು ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಳ್ಳಿ. ವಾಸ್ತವವಾಗಿ, ಈ ಕುರಿತಂತೆ ಬ್ಯಾಂಕ್‌ನೊಂದಿಗೆ ಸಂವಹನ ನಡೆಸುವಾಗ ನಿಮಗೆ ಈ ಡಾಕ್ಯುಮೆಂಟ್ ಬೇಕಾಗಬಹುದು.
ಇದನ್ನೂ ಓದಿ- ಮಾರ್ಚ್ ವೇಳೆಗೆ ಬದಲಾಗಲಿದೆ ಟೋಲ್-ಟ್ಯಾಕ್ಸ್ ಸಂಗ್ರಹ ವಿಧಾನ: ಈ ಬಗ್ಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದೇನು?
ಕಾನೂನು ಪ್ರಕ್ರಿಯೆ:
ಹಠಾತ್ ಹಣ ವರ್ಗಾವಣೆಗೆ ಸಂಬಂಧಿಸಿದ ಕಾನೂನುಗಳ ಬಗ್ಗೆ ತಿಳಿದಿರಲಿ. ಬೇರೊಬ್ಬರ ಹಣವನ್ನು ಅನಧಿಕೃತವಾಗಿ ಬಳಸುವುದು ನಿಮ್ಮ ವಿರುದ್ಧ ಕಾನೂನು ಕ್ರಮಕ್ಕೆ ಕಾರಣವಾಗಬಹುದು. ಪರಿಸ್ಥಿತಿಯನ್ನು ಸುಧಾರಿಸುವ ನಿಮ್ಮ ಬಯಕೆಯನ್ನು ಪ್ರದರ್ಶಿಸಲು ಬ್ಯಾಂಕಿನ ತನಿಖೆಯೊಂದಿಗೆ ಸಂಪೂರ್ಣವಾಗಿ ಸಹಕರಿಸಿ.
ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ:
ನಿಮ್ಮ ಬ್ಯಾಂಕ್ ಖಾತೆಗೆ ಅಜ್ಞಾತ ಮೂಲದಿಂದ ಹಣ ವರ್ಗಾವಣೆಯಾಗಿರುವ ಬಗ್ಗೆ ಮಾಹಿತಿ ನೀಡಲು ನಿಮ್ಮ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ. ವಹಿವಾಟಿನ ಉಲ್ಲೇಖ ಸಂಖ್ಯೆ, ದಿನಾಂಕ ಮತ್ತು ಮೊತ್ತ ಸೇರಿದಂತೆ ಎಲ್ಲಾ ವಿವರಗಳನ್ನು ಅವರಿಗೆ ಒದಗಿಸಿ. ಈ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳಲು ಬ್ಯಾಂಕ್‌ಗಳು ಪ್ರೋಟೋಕಾಲ್‌ಗಳನ್ನು ಹೊಂದಿವೆ.
ಬ್ಯಾಂಕ್ ವಿಚಾರಣೆ ಪ್ರಕ್ರಿಯೆ:
ಬ್ಯಾಂಕ್‌ಗಳು ಹಣದ ಮೂಲವನ್ನು ಪತ್ತೆಹಚ್ಚಲು ಮತ್ತು ವಹಿವಾಟಿನಲ್ಲಿ ಆಗಿರುವ ತಪ್ಪನ್ನು ಸರಿಪಡಿಸಲು ಆಂತರಿಕ ತನಿಖೆಯನ್ನು ನಡೆಸುತ್ತವೆ. ಈ ಪ್ರಕ್ರಿಯೆಯು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು, ಆದರೆ ಸಮಸ್ಯೆಯನ್ನು ನಿಖರವಾಗಿ ಪರಿಹರಿಸಲು ಇದು ತುಂಬಾ ಅವಶ್ಯಕ ಮಾರ್ಗವಾಗಿದೆ.
ಇದನ್ನೂ ಓದಿ- ಹೊಸ ವರ್ಷಕ್ಕೂ ಮುನ್ನವೇ ವೇತನ ಹೆಚ್ಚಿಸಿದ ಸರ್ಕಾರ! ಸರ್ಕಾರಿ ನೌಕರರ ಕೈ ಸೇರುವ ಮೊತ್ತ ಎಷ್ಟು ?
ಬ್ಯಾಂಕ್‌ನೊಂದಿಗೆ ಸಂವಹನ:
ತಪ್ಪಾದ ವಹಿವಾಟಿನ ಮೂಲಕ ನಿಮ್ಮ ಖಾತೆ ಸೇರಿರುವ ಹಣವನ್ನು ಸರಿಯಾದ ಖಾತೆ ಸೇರಿಸಲು ಪರಿಶೀಲನೆ ಪ್ರಕ್ರಿಯೆಯ ಉದ್ದಕ್ಕೂ ನಿಮ್ಮ ಬ್ಯಾಂಕ್‌ನೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿರಿ.
ಮರುಪಾವತಿ:
ಬ್ಯಾಂಕ್ ನಿಮ್ಮ ಖಾತೆ ಸೇರಿರುವ ಹಣದ ಸರಿಯಾದ ಮಾಲೀಕರ ಬಗ್ಗೆ ಮಾಹಿತಿ ಪಡೆದ ಬಳಿಕ ಖಾತೆಯಲ್ಲಿರುವ ಹಣವನ್ನು ಅವರ ಖಾತೆಗೆ ಮರುಪಾವತಿ ಮಾಡುವಂತೆ ಮಾರ್ಗದರ್ಶನ ನೀಡುತ್ತದೆ. ಯಾವುದೇ ಹೆಚ್ಚಿನ ತೊಡಕುಗಳನ್ನು ತಪ್ಪಿಸಲು ಬ್ಯಾಂಕ್ ನೀಡಿದ ಸೂಚನೆಗಳನ್ನು ತಕ್ಷಣವೇ ಅನುಸರಿಸಿ. ಈ ಮಾರ್ಗಗಳನ್ನು ಅನುಸರಿಸುವ ಮೂಲಕ ನೀವು ಬೇರೆಯವರ ಹಣ ನಿಮ್ಮ ಖಾತೆ ಸೇರಿದಾಗಲೂ ಕೂಡ ಯಾವುದೇ ಕಾನೂನಾತ್ಮಕ ತೊಡಕುಗಳನ್ನು ಎದುರಿಸುವುದನ್ನು ತಪ್ಪಿಸಬಹುದು. ನಿಮ್ಮ ಬ್ಯಾಂಕ್ ಖಾತೆ ಫ್ರೀಜ್ ಆಗುವುದರಿಂದಲೂ ಬಚಾವ್ ಆಗಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.