ವರ್ಷಾಂತ್ಯದ ಮೊದಲು, ಗೌತಮ್ ಅದಾನಿ ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. 25 ವರ್ಷಗಳ ಹಳೆಯ ಸಂಬಂಧವನ್ನು ಕೊನೆಗೊಳಿಸುವ ನಿರ್ಧಾರಕ್ಕೆ ಬಂದಿದ್ದಾರೆ.ಆದರೆ ಅದಾನಿಯ ಈ ನಿರ್ಧಾರದ ಹಿಂದಿನ ಕಾರಣ ಏನು ಎನ್ನುವುದೇ ಈಗ ಸದ್ಯಕ್ಕೆ  ಇರುವ ಪ್ರಶ್ನೆ.  
 
ಅದಾನಿಯ ಪ್ರಮುಖ ಕಂಪನಿ ಅದಾನಿ ಎಂಟರ್‌ಪ್ರೈಸಸ್ ಅದಾನಿ ವಿಲ್ಮಾರ್‌ನಿಂದ ದೂರ ಸರಿಯಲು ನಿರ್ಧರಿಸಿದೆ. ಅದಾನಿ ಗ್ರೂಪ್ ಎಫ್‌ಎಂಸಿಜಿ ಕಂಪನಿ ಅದಾನಿ ವಿಲ್ಮರ್‌ನಿಂದ ಹೊರಬರಲು ದಾರಿ ಕಂಡುಕೊಂಡಿದೆ. ಇದರೊಂದಿಗೆ ಅದಾನಿ 25 ವರ್ಷಗಳ ಹಳೆಯ ಸಂಬಂಧ ಕೊನೆಯಾಗಲಿದೆ. ಹಿಟ್ಟು, ಎಣ್ಣೆ, ಕಾಳುಗಳು ಮತ್ತು ಅಕ್ಕಿಯಂತಹ ದಿನಸಿ ವಸ್ತುಗಳನ್ನು ಇನ್ನು ಮುಂದೆ ಮಾರಾಟ ಮಾಡದುರಲು ಅದಾನಿ ನಿರ್ಧರಿಸಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : RBI ಮತ್ತೊಂದು ಮಹತ್ವದ ನಿರ್ಧಾರ.. ಏಪ್ರಿಲ್ 1 ರಿಂದ ಹೊಸ ನಿಯಮಗಳು ಜಾರಿ!


ಅದಾನಿ ವಿಲ್ಮಾರ್‌ನ ಸಂಪೂರ್ಣ ಪಾಲನ್ನು ಮಾರಾಟ ಮಾಡುವ ಗೌತಮ್ ಅದಾನಿ : 
ಅದಾನಿ ಗ್ರೂಪ್ ಸೋಮವಾರ ಅದಾನಿ ವಿಲ್ಮಾರ್ ಲಿಮಿಟೆಡ್‌ನಲ್ಲಿ ತನ್ನ ಸಂಪೂರ್ಣ 44 ಶೇಕಡಾ ಪಾಲನ್ನು ಮಾರಾಟ ಮಾಡಲು ನಿರ್ಧರಿಸಿದೆ. ಈ ಪಾಲನ್ನು ಎರಡು ಭಾಗಗಳಲ್ಲಿ ಮಾರಾಟ ಮಾಡಲಾಗುತ್ತದೆ. ಮೊದಲಿಗೆ, ಇದು ಸಾರ್ವಜನಿಕ ಷೇರುದಾರರ ನಿಯಮಗಳನ್ನು ಪೂರೈಸಲು 13% ಪಾಲನ್ನು ಮಾರಾಟ ಮಾಡುತ್ತದೆ. ನಂತರ ಸಿಂಗಾಪುರದ ವಿಲ್ಮಾರ್ ಗ್ರೂಪ್ ಉಳಿದ 31% ಪಾಲನ್ನು ಪಡೆದುಕೊಳ್ಳುತ್ತದೆ. ಈ ಸುದ್ದಿ ಬಂದ ತಕ್ಷಣ ಅದಾನಿ ವಿಲ್ಮಾರ್ ಷೇರು ಶೇ.8ರಷ್ಟು ಕುಸಿದಿದೆ. 


ಈ ಒಪ್ಪಂದದ ಬೆಲೆ ಎಷ್ಟು? : 
ಈ ಒಪ್ಪಂದದಿಂದ ಅದಾನಿ ಗ್ರೂಪ್ ಸುಮಾರು 2 ಬಿಲಿಯನ್ ಡಾಲರ್ ಅಂದರೆ ಸುಮಾರು 17,000 ಕೋಟಿ ರೂ.ಪಡೆಯುತ್ತದೆ. ಅದಾನಿ ವಿಲ್ಮಾರ್ ಭಾರತದ ಪ್ರಮುಖ ಎಫ್‌ಎಂಸಿಜಿ ಕಂಪನಿಯಾಗಿದ್ದು, ಅದಾನಿ ಗ್ರೂಪ್ ಮತ್ತು ಸಿಂಗಾಪುರ ಮೂಲದ ವಿಲ್ಮಾರ್ ಇಂಟರ್‌ನ್ಯಾಶನಲ್ ನಡುವೆ 50:50 ಜಂಟಿ ಉದ್ಯಮವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ಈ ಕಂಪನಿಯಿಂದ ಅದಾನಿ ನಿರ್ಗಮಿಸಿದ ನಂತರ, ಈ ಕಂಪನಿಯಲ್ಲಿ ವಿಲ್ಮರ್ ಗ್ರೂಪ್‌ನ ಪಾಲು ಶೇಕಡಾ 75 ಆಗಲಿದೆ. 1999ರಲ್ಲಿ ಅದಾನಿ ಮತ್ತು ಸಿಂಗಾಪುರ್ ಕಂಪನಿ ವಿಲ್ಮರ್ ಈ ಜಂಟಿ ಉದ್ಯಮದ ಅಡಿಪಾಯವನ್ನು ಹಾಕಿದೆ.  


ಇದನ್ನೂ ಓದಿ :  Income Tax Rules: ಆದಾಯ ತೆರಿಗೆಗೆ ಸಂಬಂಧಿಸಿದಂತೆ 5 ಪ್ರಮುಖ ಬದಲಾವಣೆ, ತೆರಿಗೆದಾರರಿಗೆ ಗುಡ್ ನ್ಯೂಸ್..!


ಇಷ್ಟು ಹಣವನ್ನು ಅದಾನಿ ಏನು ಮಾಡುತ್ತಾರೆ? :
ಈ ಒಪ್ಪಂದದಿಂದ ಪಡೆದ 2 ಬಿಲಿಯನ್ ಹಣವನ್ನು ಅದಾನಿ ತನ್ನ ಪ್ರಮುಖ ವ್ಯವಹಾರವನ್ನು ವಿಸ್ತರಿಸಲು ಬಳಸುತ್ತಾರೆ. ಇಂಧನ, ಉಪಯುಕ್ತತೆಗಳು, ಸಾರಿಗೆ ಮತ್ತು ಲಾಜಿಸ್ಟಿಕ್ಸ್‌ನಂತಹ ಕಂಪನಿಗಳಲ್ಲಿ ಹೂಡಿಕೆ ಮಾಡುವುದು ಅದಾನಿ ಉದ್ದೇಶ. ಅದಾನಿ ಎಂಟರ್‌ಪ್ರೈಸಸ್ ತನ್ನ ಸಂಪೂರ್ಣ ಪಾಲನ್ನು ಅದಾನಿ ವಿಲ್ಮಾರ್‌ನಲ್ಲಿ ಮಾರಾಟ ಮಾಡುವುದರಿಂದ ಪಡೆದ ಹಣವನ್ನು ಪ್ರಮುಖ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡಲು ಬಳಸುತ್ತದೆ.  


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.