Gold Price 12th May:ಬಹಳ ದಿನಗಳ ನಂತರ ಇಷ್ಟು ಕುಸಿತ ಕಂಡ ಬಂಗಾರದ ಬೆಲೆ !
Gold Price 12th May:ಬುಲಿಯನ್ ಮಾರುಕಟ್ಟೆ ಮತ್ತು ಮಲ್ಟಿ-ಕಮಾಡಿಟಿ ಎಕ್ಸ್‌ಚೇಂಜ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ದೊಡ್ಡ ಮಟ್ಟದ ಕುಸಿತ ದಾಖಲಾಗಿದೆ.
Gold Price 12th May : ಚಿನ್ನ ಮತ್ತು ಬೆಳ್ಳಿಯ ನಿರಂತರ ಏರಿಕೆಯಿಂದಾಗಿ ಜನರು ಈ ಲೋಹಗಳನ್ನು ಖರೀದಿಸಲು ಬಹಳ ಯೋಚನೆ ಮಾಡುವಂತಾಗಿದೆ. ಇದೇ ಕಾರಣಕ್ಕೆ ಮದುವೆ ಸೀಸನ್‌ನಲ್ಲಿಯೂ ಆಭರಣಗಳ ಮಾರಾಟ ಚುರುಕು ಪಡೆಯುತ್ತಿಲ್ಲ. ಚಿನ್ನ ಮತ್ತು ಬೆಳ್ಳಿಯ ಬೆಲೆ ಇಳಿಯುತ್ತದೆ ಎಂದು ನೀವು ಕಾಯುತ್ತಿದ್ದರೆ, ಇಂದೇ ಆ ಸದಿನ. ಬುಲಿಯನ್ ಮಾರುಕಟ್ಟೆ ಮತ್ತು ಮಲ್ಟಿ-ಕಮಾಡಿಟಿ ಎಕ್ಸ್‌ಚೇಂಜ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ದೊಡ್ಡ ಮಟ್ಟದ ಕುಸಿತ ದಾಖಲಾಗಿದೆ.
ದರ ಕುಸಿತದಿಂದ ಜನರು ನೆಮ್ಮದಿಯ ನಿಟ್ಟುಸಿರು :
ಈಗ ಚಿನ್ನ ಮತ್ತು ಬೆಳ್ಳಿ ಅಗ್ಗವಾಗಿರುವುದರಿಂದ ಆಭರಣ ಖರೀದಿಸಲು ಮುಂದಾಗಿರುವ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ದೀಪಾವಳಿ ಹೊತ್ತಿನಲ್ಲಿ ಚಿನ್ನದ ದರ 10 ಗ್ರಾಂಗೆ 65,000 ರೂ.ಗೆ ಏರಿಕೆಯಾಗಲಿದೆ ಎನ್ನಲಾಗುತ್ತಿದೆ. ಅದೇ ರೀತಿ, ಬೆಳ್ಳಿಯ ದರವು ಕೆಜಿಗೆ 80,000 ರೂ.ವರೆಗೆ ಏರಿಕೆಯಾಗುವ ನಿರೀಕ್ಷೆಯಿದೆ. ಶುಕ್ರವಾರ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಎರಡರ ಬೆಲೆಯಲ್ಲಿಯೂ ಇಳಿಕೆ ಕಂಡುಬಂದಿದೆ. ಮಲ್ಟಿ-ಕಮೊಡಿಟಿ ಎಕ್ಸ್‌ಚೇಂಜ್ ನಲ್ಲಿಯೂ ಎರಡೂ ಲೋಹದ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ. ಬಹಳ ದಿನಗಳ ಬಳಿಕ ಎರಡೂ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆ ಕಂಡಿದೆ.
ಇದನ್ನೂ ಓದಿ : ಹೆಚ್ಚುವರಿ ಪಿಂಚಣಿ ಬಗ್ಗೆ ಸರ್ಕಾರದ ಬಿಗ್ ಅಪ್ಡೇಟ್ ! ಉದ್ಯೋಗದಲ್ಲಿರುವವರಿಗೆ ತಿಳಿದಿರಬೇಕಾದ ವಿಚಾರ !
ಚಿನ್ನ ಮತ್ತು ಬೆಳ್ಳಿ ಎರಡರಲ್ಲೂ ಇಳಿಕೆ :
ಮಲ್ಟಿ-ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (ಎಂಸಿಎಕ್ಸ್), ಶುಕ್ರವಾರ ಚಿನ್ನ ಮತ್ತು ಬೆಳ್ಳಿ ಎರಡರಲ್ಲೂ ಕುಸಿತ ಕಂಡುಬಂದಿದೆ. ಮಧ್ಯಾಹ್ನದ ವೇಳೆಗೆ ಬೆಳ್ಳಿ ದರದಲ್ಲಿ 537 ರೂ.ಗಳ ಕುಸಿತ ಕಂಡು ಪ್ರತಿ ಕೆಜಿಗೆ 73271 ರೂ.ನಲ್ಲಿ ವಹಿವಾಟು ನಡೆಸುತ್ತಿದೆ. ಇದಲ್ಲದೇ ಚಿನ್ನ 95 ಕುಸಿತದೊಂದಿಗೆ 60797ರಲ್ಲಿ ವಹಿವಾಟು ಕಂಡಿದೆ.
ಬುಲಿಯನ್ ಮಾರುಕಟ್ಟೆ ದರದಲ್ಲಿ ತೀವ್ರ ಕುಸಿತ :
ಭಾರತ ಬುಲಿಯನ್ಸ್ ಅಸೋಸಿಯೇಷನ್ ( https://ibjarates.com) ಬುಲಿಯನ್ ಮಾರುಕಟ್ಟೆ ದರವನ್ನು ಪ್ರತಿದಿನ ನೀಡುತ್ತದೆ. ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾದ ದರದ ಪ್ರಕಾರ ಪ್ರತಿ 10 ಗ್ರಾಂ ಚಿನ್ನಕ್ಕೆ 548 ರೂಪಾಯಿ ಇಳಿಕೆಯಾಗಿ 61037 ರೂ. ಆದರೆ, ಬೆಳ್ಳಿ ಕೆಜಿಗೆ 2431 ರೂಪಾಯಿಗಳಷ್ಟು ಇಳಿಕೆಯಾಗಿ 72354 ರೂಪಾಯಿಗಳಿಗೆ ತಲುಪಿದೆ.
ಇದನ್ನೂ ಓದಿ : Car Sales: ಮಾರಾಟದಲ್ಲಿ ದಾಖಲೆ ನಿರ್ಮಿಸಿದ ಟಾಟಾದ 3 ಕಾರುಗಳು..!
ಶುಕ್ರವಾರ 23 ಕ್ಯಾರೆಟ್ ಚಿನ್ನ 60793 ರೂ., 22 ಕ್ಯಾರೆಟ್ ಚಿನ್ನ 55909 ರೂ., 20 ಕ್ಯಾರೆಟ್ ಚಿನ್ನ 10 ಗ್ರಾಂಗೆ 45777 ರೂ. ಆಗಿದೆ. ಕೆಲ ದಿನಗಳಿಂದ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ತೀವ್ರ ಏರಿಳಿತವಾಗುತ್ತಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.