130 KM ವೇಗ, 6 ಗಂಟೆಗೆ 520 KM; ದೇಶದ 17ನೇ ವಂದೇ ಭಾರತ್ ರೈಲು ಈ ಮಾರ್ಗದಲ್ಲಿ ಓಡಲಿದೆ!

ಪುರಿ-ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್: ಇದು ಒಡಿಶಾಗೆ ಮೊದಲ ವಂದೇ ಭಾರತ್ ರೈಲು ಆಗಿದ್ದರೆ, ಬಂಗಾಳಕ್ಕೆ 2ನೇಯದು. ಈ ಹಿಂದೆ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಪರೀಕ್ಷೆಯನ್ನೂ ನಡೆಸಲಾಗಿತ್ತು. ನಂತರ ಈ ರೈಲು ಖರಗ್‌ಪುರ, ಬಾಲಸೋರ್, ಭದ್ರಕ್, ಜಾಜ್‌ಪುರ, ಕಿಯೋಂಜಾರ್ ರಸ್ತೆ, ಕಟಕ್, ಭುವನೇಶ್ವರ ಮತ್ತು ಖುರ್ದಾದಲ್ಲಿ ತಲಾ 2 ನಿಮಿಷಗಳ ಕಾಲ ನಿಲುಗಡೆಯಾಗಿತ್ತು.

Written by - Puttaraj K Alur | Last Updated : May 11, 2023, 07:46 PM IST
  • ದೇಶದಲ್ಲಿ ಶೀಘ್ರವೇ 17ನೇ ವಂದೇ ಭಾರತ್ ರೈಲು ಸಂಚಾರ ನಡೆಸಲಿದೆ
  • ಈ ರೈಲು ಹೌರಾದಿಂದ ಪುರಿ ನಡುವೆ ಸಂಚರಿಸಲಿದ್ದು, ಮೇ 15ರಂದು ಉದ್ಘಾಟನೆಗೊಳ್ಳಲಿದೆ
  • ಪ್ರಧಾನಿ ಮೋದಿಯವರು ಹೌರಾ-ಪುರಿ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ
130 KM ವೇಗ, 6 ಗಂಟೆಗೆ 520 KM; ದೇಶದ 17ನೇ ವಂದೇ ಭಾರತ್ ರೈಲು ಈ ಮಾರ್ಗದಲ್ಲಿ ಓಡಲಿದೆ! title=
17ನೇ ವಂದೇ ಭಾರತ್ ರೈಲು ಸಂಚಾರ

ನವದೆಹಲಿ: ದೇಶದಲ್ಲಿ 17ನೇ ವಂದೇ ಭಾರತ್ ರೈಲು ಶೀಘ್ರದಲ್ಲಿಯೇ ಸಂಚರಿಸಲಿದೆ. ಈ ಸೆಮಿ ಹೈಸ್ಪೀಡ್ ರೈಲು ಹೌರಾದಿಂದ ಪುರಿ ನಡುವೆ ಓಡಲಿದ್ದು, ಮೇ 15ರಂದು ಉದ್ಘಾಟನೆಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹೌರಾ-ಪುರಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ಸದ್ಯಕ್ಕೆ ಈ ರೈಲು ಎಲ್ಲಿ ನಿಲುಗಡೆಯಾಗಲಿದೆ, ಸಮಯ ಎಷ್ಟು ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.

ಇದು ಒಡಿಶಾಗೆ ವಂದೇ ಭಾರತ್ ರೈಲಿನ ಮೊದಲ ಉಡುಗೊರೆಯಾಗಿದ್ದರೆ, ಬಂಗಾಳಕ್ಕೆ 2ನೇಯದು. ಈ ಹಿಂದೆ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಪರೀಕ್ಷೆಯನ್ನೂ ನಡೆಸಲಾಗಿತ್ತು. ನಂತರ ಈ ರೈಲು ಖರಗ್‌ಪುರ, ಬಾಲಸೋರ್, ಭದ್ರಕ್, ಜಾಜ್‌ಪುರ, ಕಿಯೋಂಜಾರ್ ರಸ್ತೆ, ಕಟಕ್, ಭುವನೇಶ್ವರ ಮತ್ತು ಖುರ್ದಾದಲ್ಲಿ ತಲಾ 2 ನಿಮಿಷಗಳ ಕಾಲ ನಿಲುಗಡೆಯಾಗಿತ್ತು.

ಇದನ್ನೂ ಓದಿ: ಇಮ್ರಾನ್ ಖಾನ್ ಬಂಧನ: ಅಲ್ - ಖಾದಿರ್ ಟ್ರಸ್ಟ್ ಪ್ರಕರಣ ನಡೆದು ಬಂದ ಹಾದಿ

6 ಗಂಟೆಗಳಲ್ಲಿ 520 ಕಿಮೀ

ಹೌರಾ ಮತ್ತು ಪುರಿ ನಡುವೆ ಚಲಿಸುವ ಈ 17ನೇ ವಂದೇ ಭಾರತ್ ಎಕ್ಸ್‌ಪ್ರೆಸ್ 6 ಗಂಟೆಗಳಲ್ಲಿ 520 ಕಿಮೀ ದೂರವನ್ನು ಕ್ರಮಿಸುತ್ತದೆ. ವಂದೇ ಭಾರತ್ ರೈಲಿನ ಪ್ರಾಯೋಗಿಕ ಓಡಾಟ ಏಪ್ರಿಲ್ 28 ಮತ್ತು 30ರಂದು ನಡೆಯಿತು. ಆ ಸಮಯದಲ್ಲಿ ಈ ರೈಲು ಬಂಗಾಳದ ಹೌರಾ ನಿಲ್ದಾಣದಿಂದ ಬೆಳಗ್ಗೆ 6.10ಕ್ಕೆ ಪ್ರಾರಂಭವಾಗಿ ನಂತರದ 6 ಗಂಟೆಯೊಳಗೆ ಪುರಿ ತಲುಪಿತು.

ರೈಲಿನ ಸಮಯ?

ದೇಶದ 17ನೇ ವಂದೇ ಭಾರತ್ ರೈಲು (ಹೌರಾದಿಂದ ಪುರಿ) ಗಂಟೆಗೆ 130 ಕಿಮೀ ವೇಗದಲ್ಲಿ ಹಳಿಗಳ ಮೇಲೆ ಚಲಿಸುತ್ತದೆ. ವರದಿಗಳ ಪ್ರಕಾರ, ಈ ರೈಲು ಹೌರಾದಿಂದ ಪುರಿಗೆ ಬೆಳಗ್ಗೆ 6.10ಕ್ಕೆ ಹೊರಡಲಿದೆ. ಇದು ಬೆಳಗ್ಗೆ 7.38ಕ್ಕೆ ಖರಗ್‌ಪುರ, 9.45ಕ್ಕೆ ಭದ್ರಕ್, 10.25ಕ್ಕೆ ಜಾಜ್‌ಪುರ್ ಕೆಂಡುಜಾರ್ ರಸ್ತೆ, 11ಕ್ಕೆ ಕಟಕ್, 11.25ಕ್ಕೆ ಭುವನೇಶ್ವರ, 11.45ಕ್ಕೆ ಖುರ್ದಾ ರಸ್ತೆ ಮತ್ತು 12.35ಕ್ಕೆ ಪುರಿ ತಲುಪಲಿದೆ. ಇದರ ನಂತರ ಈ ರೈಲು 1.50ಕ್ಕೆ ಪುರಿಯಿಂದ ಹೌರಾಕ್ಕೆ ಹೊರಟು ಬೆಳಗ್ಗೆ 8.30ಕ್ಕೆ ತಲುಪಲಿದೆ.

ಇದನ್ನೂ ಓದಿ: RPC Singh Joins BJP: ಕೇಂದ್ರ ಮಾಜಿ ಕೇಂದ್ರ ಸಚಿವ ಆರ್ಸಿಪಿ ಸಿಂಗ್ ಬಿಜೆಪಿಗೆ ಸೇರ್ಪಡೆ

ಕಳೆದ ತಿಂಗಳು ತಿರುವನಂತಪುರ ರೈಲು ನಿಲ್ದಾಣದಿಂದ ಕೇರಳದ ಮೊದಲ ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ಈ ರೈಲು ಕಾಸರಗೋಡಿನಿಂದ ಆರಂಭಗೊಂಡು 7 ಗಂಟೆ 50 ನಿಮಿಷಗಳಲ್ಲಿ ತಿರುವನಂತಪುರಂ ತಲುಪುತ್ತದೆ. ರೈಲು ಕೊಲ್ಲಂ, ಕೊಟ್ಟಾಯಂ, ತ್ರಿಶ್ಶೂರ್, ಶೋರನೂರು, ಕೋಝಿಕ್ಕೋಡ್ ಮತ್ತು ಕಣ್ಣೂರಿನಲ್ಲಿ ನಿಂತು ಕಾಸರಗೋಡಿನಲ್ಲಿ ಕೊನೆಗೊಳ್ಳುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News