Price hike : ಪೆಟ್ರೋಲ್ ಡಿಸೇಲ್ ನಂತರ ಅಡುಗೆ ಎಣ್ಣೆ ಬೆಲೆಯೂ ದುಬಾರಿ
ಕಚ್ಚಾ ತಾಳೆ ಎಣ್ಣೆಯ ಬೆಲೆಯು ದಾಖಲೆ ಮಟ್ಟವನ್ನು ತಲುಪುತ್ತಿದೆ. ಸೋಯಾಬೀನ್ ಮತ್ತು ಸೋಯಾ ತೈಲ ಬೆಲೆಗಳು ಕೂಡಾ ಉತ್ತುಂಗಕ್ಕೇರಿವೆ. ಅವುಗಳ ಬೆಲೆಗಳು ಒಂದು ವರ್ಷದಲ್ಲಿ 30% ರಿಂದ 60% ರಷ್ಟು ಏರಿದೆ.
ನವದೆಹಲಿ : ಪೆಟ್ರೋಲ್ ಡಿಸೇಲ್ ಬೆಲೆ ಮುಗಿಲು ಮುಟ್ಟುತ್ತಿದೆ. ಇದೀಗ ಅಡುಗೆ ಎಣ್ಣೆಯ (Edible Oil) ಬೆಲೆಯೂ ಹೆಚ್ಚಳವಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ ಕಚ್ಚಾ ತೈಲಗಳ ಬೆಲೆಯಲ್ಲಿ ಶೇ 95ರಷ್ಟು ಏರಿಕೆ ಕಂಡುಬಂದಿದ್ದರೆ, ಅಡುಗೆ ಎಣ್ಣೆಯ ಬೆಲೆಯಲ್ಲೂ 30 ರಿಂದ 60 ಶೇ ದಷ್ಟು ಹೆಚ್ಚಳವಾಗಿದೆ.
ಅಡುಗೆ ಎಣ್ಣೆಯ ಬೆಲೆ ಏರಿಕೆಯಿಂದ ಬಿಗಡಾಯಿಸಿದ ಮನೆ ಬಜೆಟ್ :
ಕಚ್ಚಾ ತಾಳೆ ಎಣ್ಣೆಯ ಬೆಲೆಯು ದಾಖಲೆ ಮಟ್ಟವನ್ನು ತಲುಪುತ್ತಿದೆ. ಸೋಯಾಬೀನ್ (Soybean)ಮತ್ತು ಸೋಯಾ ತೈಲ ಬೆಲೆಗಳು ಕೂಡಾ ಉತ್ತುಂಗಕ್ಕೇರಿವೆ. ಅವುಗಳ ಬೆಲೆಗಳು ಒಂದು ವರ್ಷದಲ್ಲಿ 30% ರಿಂದ 60% ರಷ್ಟು ಏರಿದೆ. ಎಲ್ಲಾ ಅಡುಗೆ ಎಣ್ಣೆಯೂ (Edible Oil) ಬಹಳ ದುಬಾರಿಯಾಗಿದೆ.
ಇದನ್ನೂ ಓದಿ : SBI SME Gold Loan : ಎಸ್ ಬಿಐ ನೀಡುತ್ತಿದೆ ಕಡಿಮೆ ಬಡ್ಡಿದರದಲ್ಲಿ ಚಿನ್ನದ ಮೇಲಿನ ಸಾಲ..!
ಅಡುಗೆ ಎಣ್ಣೆಯ ಬೆಲೆಯಲ್ಲಿ ಏರಿಕೆಯಾಗಲು ಕಾರಣ :
ಜಾಗತಿಕ ಮಾರುಕಟ್ಟೆಗೆ (Global market) ಅಡುಗೆ ಎಣ್ಣೆಯ ಪೂರೈಕೆ ಕಡಿಮೆಯಾಗಿದೆ. ಸೆಮಿ ಫ್ಯೂಲ್ ಗಾಗಿ ಕಚ್ಚಾ ತಾಳೆ ಎಣ್ಣೆಯ ಬೇಡಿಕೆ ಹೆಚ್ಚಾಗಿದೆ. ಚೀನಾದಲ್ಲಿ ಸೋಯಾಬೀನ್ ಬೇಡಿಕೆಯೂ ಹೆಚ್ಚುತ್ತಿದೆ. ಅರ್ಜೆಂಟೀನಾದ ಬ್ರೆಜಿಲ್ ನಲ್ಲಿ (Brazil) ಪ್ರತಿಕೂಲ ಹವಾಮಾನ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ದೇಶೀಯ ಮಾರುಕಟ್ಟೆಯಲ್ಲೂ ಬಳಕೆ ಹೆಚ್ಚಾಗಿದೆ. ಹಬ್ಬದ, ಸಮಯದಲ್ಲಿ ಅಡುಗೆ ಎಣ್ಣೆಯ ಬೇಡಿಕೆ ಹೆಚ್ಚಾಗುತ್ತದೆ ಮತ್ತು ಬೆಲೆಗಳು ಮತ್ತಷ್ಟು ಹೆಚ್ಚಾಗಬಹುದು.
ಇನ್ನೂ ಎರಡು ತಿಂಗಳವರೆಗೆ ದುಬಾರಿಯಾಗಲಿದೆ ಅಡುಗೆ ಎಣ್ಣೆ :
Indian Vegetable Oil Producers' Association (IVPA)) ಪ್ರಕಾರ, ಫೆಬ್ರವರಿಯಲ್ಲಿ ತಾಳೆ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯ (Sunflower oil) ಬೆಲೆಯಲ್ಲು ಹೆಚ್ಚಳವಾಗಿದೆ. ಕಳೆದ ಎರಡು ವಾರಗಳಲ್ಲಿ ಸೋಯಾಬೀನ್ ಎಣ್ಣೆಯ ಬೆಲೆ ಕೂಡಾ ಏರಿಕೆಯಾಗಿದೆ. ಬ್ರೆಜಿಲ್ ನಲ್ಲಿ ಪ್ರತಿಕೂಲ ಹವಾಮಾನ ಉಂಟಾಗಿದ್ದು ಸಾಕಷ್ಟು ಮಳೆಯಾಗಿದೆ (Rain). ಈ ಕಾರನದಿಂದ ಸೂರ್ಯಕಾಂತಿ ಎಣ್ಣೆ ಯ ಬೆಲೆ 1700 ಡಾಲರ್ ತಲುಪಿದೆ. ದೇಶೀಯ ಮಾರುಕಟ್ಟೆಯ (Market) ಬಗ್ಗೆ ಹೇಳುವುದಾದರೆ, ಫೆಬ್ರವರಿಯಲ್ಲಿ ಶಿಪ್ಪಿಂಗ್ ಕೂಡಾ ಬಹಳ ಕಡಿಮೆ ಪ್ರಮಾಣದಲ್ಲಿ ನಡೆದಿತ್ತು. ಕೇವಲ 4 ಲಕ್ಷ ಟನ್ ಪಾಮ್, ಮತ್ತು 4 ಲಕ್ಷ ಟನ್ ಸೋಯಾ ಭಾರತಕ್ಕೆ ಬಂದಿತ್ತು. ಏಪ್ರಿಲ್-ಮೇ ವರೆಗೆ ಬೆಲೆ ಇಳಿಯುವ ಯಾವುದೇ ಸಂಭವ ಇಲ್ಲ ಎನ್ನಲಾಗಿದೆ.
ಇದನ್ನೂ ಓದಿ : LPG Gas Cylinder - ದುಬಾರಿ LPG Cylinder ನಿಂದ ನೆಮ್ಮದಿ, ಈ ರೀತಿ ಸಿಲಿಂಡರ್ ಬುಕ್ ಮಾಡಿ ಹಣ ಉಳಿತಾಯ ಮಾಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.