Senior Citizen Investment Tips : ಹಿರಿಯ ನಾಗರಿಕರನ್ನು ಆರ್ಥಿಕವಾಗಿ ಸದೃಢರನ್ನಾಗಿಸಲು ಸರ್ಕಾರ ಹೊಸ ಹೊಸ ಯೋಜನೆ ಪರಿಚಯಿಸುತ್ತಿದೆ. ನಿವೃತ್ತಿಯ ನಂತರವೂ ಹಿರಿಯ ನಾಗರಿಕರಿಗೆ ಮಾಸಿಕ ಆದಾಯ ಸಿಗುವಂತೆ ಮಾಡಲು ಕೂಡಾ ಅನೇಕ ಯೋಜನೆಗಳು ಜಾರಿಯಲ್ಲಿವೆ. ನಿವೃತ್ತಿ ನಂತರವೂ ಆದಾಯ ಸಿಗುವಂತೆ ಆದರೆ ಆರ್ಥಿಕವಾಗಿ ಸದೃಢರಾಗಿರಬಹುದು. ಈ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರು ಹೂಡಿಕೆ ಮಾಡುವುದರಿಂದ ಪ್ರಯೋಜನ ಪಡೆಯಬಹುದಾದ ಕೆಲವು ಯೋಜನೆಗಳನ್ನು ನಾವು ಹೇಳಲಿದ್ದೇವೆ. ಅಲ್ಲದೆ, ಈ ಯೋಜನೆಯಲ್ಲಿ  ಹೂಡಿಕೆ ಮಾಡುವುದರಿಂದ ಲಕ್ಷಗಳಲ್ಲಿ ಹಣ  ಸಂಗ್ರಹಿಸಬಹುದು. 


COMMERCIAL BREAK
SCROLL TO CONTINUE READING

ಹಿರಿಯ ನಾಗರಿಕ ಉಳಿತಾಯ ಯೋಜನೆ (SCSS) :
60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಸಣ್ಣ ಉಳಿತಾಯ ಯೋಜನೆ, ಹಿರಿಯ ನಾಗರಿಕ ಉಳಿತಾಯ ಯೋಜನೆ (SCSS)ಯಲ್ಲಿ ಹೂಡಿಕೆ ಮಾಡಬಹುದು. ಈ ಹೂಡಿಕೆ ಮೇಲೆ ನಿಯಮಿತ ಬಡ್ಡಿ ಆದಾಯವನ್ನು ಗಳಿಸಬಹುದು. ಬಡ್ಡಿಯನ್ನು ತ್ರೈಮಾಸಿಕ ಆಧಾರದ ಮೇಲೆ ಪಾವತಿಸಲಾಗುತ್ತದೆ. ಠೇವಣಿ ಮಾಡಿದ ದಿನಾಂಕದಿಂದ 31ನೇ ಮಾರ್ಚ್/30ನೇ ಜೂನ್/30ನೇ ಸೆಪ್ಟೆಂಬರ್/31ನೇ ಡಿಸೆಂಬರ್ ವರೆಗೆ ಅನ್ವಯಿಸುತ್ತದೆ ಈ ಬಡ್ಡಿ ಅನ್ವಯವಾಗುತ್ತದೆ. ಇದರ ಅಡಿಯಲ್ಲಿ, ಅಸಲು ಮೊತ್ತಕ್ಕೆ ಐದು ವರ್ಷಗಳ ಲಾಕ್-ಇನ್ ಅವಧಿ ಇದೆ. 


ಇದನ್ನೂ ಓದಿ : ಡಿಜಿಟಲ್ ರೂಪಾಯಿ ಕುರಿತು ಹೊಸ ಅಪ್ಡೇಟ್ ಪ್ರಕಟ!


ಹಿರಿಯ ನಾಗರಿಕ ಉಳಿತಾಯ ಯೋಜನೆ (SCSS) - ಒಬ್ಬ ವ್ಯಕ್ತಿಯಿಂದ ತೆರೆಯಲಾದ ಎಲ್ಲಾ SCSS ಖಾತೆಗಳು ಕನಿಷ್ಠ ಠೇವಣಿ 1000 ರೂ ಮತ್ತು ಗರಿಷ್ಠ ಮಿತಿ  30 ಲಕ್ಷ ರೂ ಆಗಿದೆ. SCSS ಖಾತೆಯನ್ನು  ಸಂಗಾತಿಯೊಂದಿಗೆ ಜಂಟಿಯಾಗಿಯೂ ತೆರೆಯಬಹುದು. ಇಲ್ಲಿ 1 ಲಕ್ಷಕ್ಕಿಂತ ಹೆಚ್ಚಿನ ಠೇವಣಿಗಳನ್ನು ಚೆಕ್ ಮೂಲಕ ಮಾತ್ರ ಸ್ವೀಕರಿಸಲಾಗುತ್ತದೆ. ಈ ಯೋಜನೆಯಲ್ಲಿ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಕೂಡಾ ಸಿಗುತ್ತದೆ. 


ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (POMIS) ಖಾತೆ :
POMIS (ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ) ಮತ್ತೊಂದು ಸಣ್ಣ ಉಳಿತಾಯ ಯೋಜನೆಯಾಗಿದೆ. ಪ್ರಸ್ತುತ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ 9 ಲಕ್ಷದವರೆಗೆ ಉಳಿತಾಯ ಮಾಡಬಹುದು.  ಅದೇ ಸಮಯದಲ್ಲಿ ಹೂಡಿಕೆ ಮಾಡಿದ ಮೊತ್ತದ ಮೇಲೆ ಪ್ರತಿ ತಿಂಗಳು ಆದಾಯವನ್ನು ಪಡೆಯಬಹುದು. ಪ್ರಸ್ತುತ ಈ ಯೋಜನೆಯ ಬಡ್ಡಿ ದರವು ಶೇಕಡಾ 7.4 ಆಗಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿದರ ಬದಲಾಗುತ್ತದೆ. ಆದರೆ POMIS ನಲ್ಲಿನ ಹೂಡಿಕೆಗಳ ಮೇಲೆ ತೆರಿಗೆ ವಿನಾಯಿತಿ ಇರುವುದಿಲ್ಲ.  ಇದರಲ್ಲಿ ಸಿಗುವ ಬಡ್ಡಿಯು ಸಂಪೂರ್ಣವಾಗಿ ತೆರಿಗೆಗೆ ಒಳಪಡುತ್ತದೆ.


ಇದನ್ನೂ ಓದಿ : ನೆದರ್ಲೆಂಡ್ಸ್ ಪ್ರಧಾನಿ ಜತೆ ಹೂಡಿಕೆ, ಸುಸ್ಥಿರ ಅಭಿವೃದ್ಧಿ, ನಾವೀನ್ಯತೆ ಕುರಿತು ವಿಸ್ತೃತ ಚರ್ಚೆ


ಸ್ಥಿರ ಠೇವಣಿ (FD):
ಹೆಚ್ಚಿನ ಬ್ಯಾಂಕುಗಳು ಸಾಮಾನ್ಯವಾಗಿ ಹಿರಿಯ ನಾಗರಿಕರಿಗೆ ವಿವಿಧ ಅವಧಿಯ FDಗಳ ಮೇಲೆ ನೀಡಲಾಗುವ ಸಾಮಾನ್ಯ ಬಡ್ಡಿದರಗಳ ಮೇಲೆ 0.50 ಪ್ರತಿಶತದಷ್ಟು ಹೆಚ್ಚುವರಿ ಬಡ್ಡಿಯನ್ನು ನೀಡುತ್ತವೆ. FD ಬಡ್ಡಿಯನ್ನು ಹೂಡಿಕೆದಾರರಿಗೆ ನಿಯಮಿತ ಮಧ್ಯಂತರಗಳಲ್ಲಿ ಪಾವತಿಸಲಾಗುತ್ತದೆ. ಮಾಸಿಕ, ತ್ರೈಮಾಸಿಕ, ಅರ್ಧ-ವಾರ್ಷಿಕ ಅಥವಾ ವಾರ್ಷಿಕವಾಗಿ ಬಡ್ಡಿ ಪಾವತಿಸಲಾಗುತ್ತದೆ. ಠೇವಣಿ ಅವಧಿಯ ಆಧಾರದ ಮೇಲೆ ಬ್ಯಾಂಕುಗಳು ಆದಾಯವನ್ನು ನೀಡುತ್ತವೆ. ಕೆಲವು ನಿಶ್ಚಿತ ಠೇವಣಿಗಳಿಗೆ, ಮುಕ್ತಾಯದ ಅವಧಿಯು 5 ವರ್ಷಗಳು ಅಥವಾ ಅದಕ್ಕಿಂತ ಹೆಚ್ಚಾಗಿರುತ್ತದೆ. ಇದರ ಮೇಲೆ ನೀವು ತೆರಿಗೆ ಪ್ರಯೋಜನಗಳನ್ನು ಸಹ ಪಡೆಯಬಹುದು. ಹಿರಿಯ ನಾಗರಿಕರ ಉಳಿತಾಯ ಯೋಜನೆಯು ಗರಿಷ್ಠ ಹೂಡಿಕೆ ಮಿತಿಯನ್ನು ಹೊಂದಿದೆ. ಆದರೆ, FD ಯೋಜನೆಯಲ್ಲಿ ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲ. ಇದಲ್ಲದೆ ಇದು ಹಲವು ಆಯ್ಕೆಗಳೊಂದಿಗೆ ಬರುತ್ತದೆ. ಆದ್ದರಿಂದ, ಇದು ಅವರಿಗೆ ಸುರಕ್ಷಿತ ಮತ್ತು ವಿಶ್ವಾಸಾರ್ಹ ಆದಾಯದ ಮೂಲವಾಗಿದೆ. 


ಇದನ್ನೂ ಓದಿ : 7th Pay Commission: ಡಿಎ ಹೆಚ್ಚಳದ ಬಳಿಕ ಸರ್ಕಾರಿ ನೌಕರರ ತುಟ್ಟಿಭತ್ಯೆ 3 ಲಕ್ಷ 14 ಸಾವಿರ 088 ಆಗಲಿದೆ, ಸಿಗಲಿದೆ ಬಂಪರ್ ಲಾಭ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ