ರೈತ ಬಾಂಧವರೆ ಸೆಪ್ಟೆಂಬರ್ 30 ನೆನಪಿನಲ್ಲಿಟ್ಟುಕೊಳ್ಳಿ, ಈ ಕೆಲಸ ಮಾಡದೆ ಹೋದಲ್ಲಿ ಖಾತೆಗೆ ಬರಲ್ಲ 2000 ರೂ.!

Kisan Samman Nidhi Yojana Update: ನೀವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭಾರ್ಥಿಗಳಾಗಿದ್ದಾರೆ ಈ ಸುದ್ದಿ ವಿಶೇಷವಾಗಿ ನಿಮಗಾಗಿ,  ಹೌದು, ನೀವು ಸೆಪ್ಟೆಂಬರ್ 30 ರ ಮೊದಲು ಕೆಲವು ಪ್ರಮುಖ ಕೆಲಸವನ್ನು ಪೂರ್ಣಗೊಳಿಸಬೇಕು (Business News In Kannada).  

Written by - Nitin Tabib | Last Updated : Sep 10, 2023, 06:13 PM IST
  • ರೈತರ ಕಲ್ಯಾಣ ಸಚಿವಾಲಯವು ಪ್ರಾರಂಭಿಸಿದ ಪಿಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ 'ಫೇಸ್ ಅಥೆಂಟಿಕೇಶನ್ ಫೀಚರ್'ನೊಂದಿಗೆ,
  • ದೂರದ ಪ್ರದೇಶಗಳಲ್ಲಿನ ರೈತರು ಈಗ ಒಟಿಪಿ ಅಥವಾ ಫಿಂಗರ್‌ಪ್ರಿಂಟ್ ಇಲ್ಲದೆ ತಮ್ಮ ಮುಖವನ್ನು ಮನೆಯಿಂದಲೇ ಕುಳಿತುಕೊಂಡು ಇ-ಕೆವೈಸಿ ಮಾಡಬಹುದು.
  • ನೀವು ಸೆಪ್ಟೆಂಬರ್ 30 ರ ಮೊದಲು ಈ ಪ್ರಮುಖ ಕೆಲಸವನ್ನು ಪೂರ್ಣಗೊಳಿಸಬೇಕು (Business News In Kannada).
ರೈತ ಬಾಂಧವರೆ ಸೆಪ್ಟೆಂಬರ್ 30 ನೆನಪಿನಲ್ಲಿಟ್ಟುಕೊಳ್ಳಿ, ಈ ಕೆಲಸ ಮಾಡದೆ ಹೋದಲ್ಲಿ ಖಾತೆಗೆ ಬರಲ್ಲ 2000 ರೂ.! title=

PM Kisan Update: ದೇಶದಾದ್ಯಂತ ಇರುವ ಕೋಟ್ಯಾಂತರ ರೈತರ ಪಾಲಿಗೆ ಒಂದು ಮಹತ್ವದ ಸುದ್ದಿ ಪ್ರಕಟವಾಗಿದೆ. ನೀವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭವನ್ನು ಪಡೆಯುತ್ತಿದ್ದರೆ ಅಥವಾ ಅದನ್ನು ತೆಗೆದುಕೊಳ್ಳಲು ಬಯಸಿದರೆ, ನೀವು ಸೆಪ್ಟೆಂಬರ್ 30 ರ ಮೊದಲು ಕೆಲವು ಪ್ರಮುಖ ಕೆಲಸವನ್ನು ಪೂರ್ಣಗೊಳಿಸಬೇಕು. ಇದುವರೆಗೆ ಕೇಂದ್ರ ಸರ್ಕಾರದಿಂದ 14 ಕಂತುಗಳ ಹಣ ವರ್ಗಾವಣೆಯಾಗಿದೆ. ಇದೀಗ 15ನೇ ಕಂತಿನ ಹಣವನ್ನು ರೈತರಿಗೆ ನೀಡಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಸರಕಾರ ರೈತರ ಖಾತೆಗೆ 15ನೇ ಕಂತಿನ 2000-2000 ರೂ.ಶೀಘ್ರದಲ್ಲಿಯೇ ವರ್ಗಾಯಿಸಲಿದೆ (Business News In Kannada). 

15 ನೇ ಕಂತಿನ ಹಣ ಬರುವ ಮುನ್ನ ಈ ಕೆಲಸವನ್ನು ಮಾಡಿ
ಈ ಕುರಿತು ಮಾಹಿತಿ ನೀಡಿರುವ ಸರ್ಕಾರ, 15ನೇ ಕಂತಿನ ಲಾಭ ಪಡೆಯಲು ಇಚ್ಛಿಸುವ ಎಲ್ಲ ರೈತರು ಇ-ಕೆವೈಸಿ ಪರಿಶೀಲನೆ ಮಾಡಿಸಿಕೊಳ್ಳುವುದು ಅಗತ್ಯ ಎಂದು ಹೇಳಿದೆ. ನೀವು ಇನ್ನೂ ಇ-ಕೆವೈಸಿ ಮಾಡದಿದ್ದರೆ, ಮುಂದಿನ ಕಂತಿನ ಹಣ ನಿಮಗೆ ಸಿಗುವುದಿಲ್ಲ

ಈ ರೀತಿಯೂ ಕೂಡ ಇ-ಕೆವೈಸಿ ಮಾಡಿಸಿಕೊಳ್ಳಬಹುದು
ರೈತರ ಕಲ್ಯಾಣ ಸಚಿವಾಲಯವು ಪ್ರಾರಂಭಿಸಿದ ಪಿಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ 'ಫೇಸ್ ಅಥೆಂಟಿಕೇಶನ್ ಫೀಚರ್'ನೊಂದಿಗೆ, ದೂರದ ಪ್ರದೇಶಗಳಲ್ಲಿನ ರೈತರು ಈಗ ಒಟಿಪಿ ಅಥವಾ ಫಿಂಗರ್‌ಪ್ರಿಂಟ್ ಇಲ್ಲದೆ ತಮ್ಮ ಮುಖವನ್ನು ಮನೆಯಿಂದಲೇ  ಕುಳಿತುಕೊಂಡು ಇ-ಕೆವೈಸಿ ಮಾಡಬಹುದು.

ಇದನ್ನೂ ಓದಿ-ಜೀವನದಲ್ಲಿ ಎಂದಿಗೂ ಕೂಡ ಹಣಕಾಸಿನ ಮುಗ್ಗಟ್ಟು ಎದುರಾಗಲ್ಲ, ಜಸ್ಟ್ ಈ ಒಂದು ಫಾರ್ಮ್ಯೂಲಾ ನಿಮಗೆ ಗೊತ್ತಿರಲಿ!

ಇಲ್ಲಿ ಸಂಪರ್ಕಿಸಿ
ನಿಮ್ಮ ಖಾತೆಗೆ 14 ನೇ ಕಂತಿನ ಹಣ ಇನ್ನೂ ಬಂದಿಲ್ಲ ಎಂದಾದಲ್ಲಿ, ನೀವು ಸಹಾಯವಾಣಿ ಸಂಖ್ಯೆ 155261 ಅಥವಾ 1800115526 ಅಥವಾ ಈ ಸಂಖ್ಯೆ 011-23381092 ಅನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆದುಕೊಳ್ಳಬಹುದು. ಇದಲ್ಲದೇ pmkisan-ict@gov.in ಗೆ ಇಮೇಲ್ ಕಳುಹಿಸುವ ಮೂಲಕವೂ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.

ಇದನ್ನೂ ಓದಿ-Business Concept: ಕಡಿಮೆ ಹೂಡಿಕೆ ಮಾಡಿ ಲಕ್ಷಾಂತರ ಲಾಭ ಗಳಿಕೆ ಮಾಡಬೇಕೆ? ಇಲ್ಲಿದೆ ಒಂದು ಅದ್ಭುತ ಪರಿಕಲ್ಪನೆ!

ಅರ್ಜಿಗಳು ಪ್ರಾರಂಭವಾಗಿವೆ
ಪಿಎಂ ಕಿಸಾನ್ ಯೋಜನೆಯ 15ನೇ ಕಂತಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಬಯಸುವ ಯಾವುದೇ ರೈತರು ಸಾಮಾನ್ಯ ಸೇವಾ ಕೇಂದ್ರಕ್ಕೆ ಹೋಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಇದಲ್ಲದೆ, ನೀವು ಅಧಿಕೃತ ವೆಬ್‌ಸೈಟ್ pmkisan.gov.in ಗೆ ಭೇಟಿ ನೀಡುವ ಮೂಲಕ ಕೂಡ ನಿಮ್ಮ ಹೆಸರನ್ನು ನೀವು ನೋಂದಾಯಿಸಿಕೊಳ್ಳಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News