ನವದೆಹಲಿ :  ನೀವು Paytm ಬಳಕೆದಾರರಾಗಿದ್ದು, ಕ್ರಿಕೆಟ್ ವೀಕ್ಷಣೆ ಇಷ್ಟಪಡುತ್ತಿದ್ದರೆ ಈ ಸುದ್ದಿಯನ್ನು ನೀವು ಓದಲೇಬೇಕು. ಮುಂಬರುವ Paytm ಇಂಡಿಯಾ vs ವೆಸ್ಟ್ ಇಂಡೀಸ್ ODI ಮತ್ತು T20 ಪಂದ್ಯಗಳಲ್ಲಿ UPI ಹಣ ವರ್ಗಾವಣೆಯ ಮೇಲೆ Paytm ಅತ್ಯಾಕರ್ಷಕ ಕ್ಯಾಶ್‌ಬ್ಯಾಕ್ ಮತ್ತು ಇತರ ಬಹುಮಾನಗಳನ್ನು ಘೋಷಿಸಿದೆ. ಪಂದ್ಯಗಳನ್ನು ಫೆಬ್ರವರಿ 6 ರಿಂದ ಫೆಬ್ರವರಿ 20, 2022 ರವರೆಗೆ ನಿಗದಿಪಡಿಸಲಾಗಿದೆ. ಕಂಪನಿಯು ನೀಡಿದ ಮಾಹಿತಿಯ ಪ್ರಕಾರ, ಪಂದ್ಯದ ದಿನಗಳಲ್ಲಿ, ಹೊಸ ಬಳಕೆದಾರರು '4 ಕಾ 100' ಕ್ಯಾಶ್‌ಬ್ಯಾಕ್ ಆಫರ್'ನ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ, ಇದರಲ್ಲಿ ಅವರು Paytm UPI ಮೂಲಕ ಹಣ ವರ್ಗಾವಣೆಗೆ 100 ರೂಗಳ ಖಚಿತವಾದ ಕ್ಯಾಶ್‌ಬ್ಯಾಕ್ ಸಿಗಲಿದೆ. 


COMMERCIAL BREAK
SCROLL TO CONTINUE READING

ರೆಫರರ್‌ನಲ್ಲಿ  100 ರೂ. ಕ್ಯಾಶ್‌ಬ್ಯಾಕ್ :
ಹೊಸ ಬಳಕೆದಾರರು 4ರೂ.ಗಳ ಎಲ್ಲಾ ಹಣ ವರ್ಗಾವಣೆಗಳಲ್ಲಿ ಈ ಆಫರ್ ನ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಇದರ ಹೊರತಾಗಿ, ಬಳಕೆದಾರರು ರೆಫರಲ್ ಪ್ರೋಗ್ರಾಂನಲ್ಲಿ ಭಾಗವಹಿಸುವ ಮೂಲಕ ಹೆಚ್ಚುವರಿ cashback ಗೆಲ್ಲಬಹುದು. ಬಳಕೆದಾರರು UPI ಹಣ ವರ್ಗಾವಣೆಗಾಗಿ Paytm ಬಳಸಲು ಸ್ನೇಹಿತರು ಮತ್ತು ಕುಟುಂಬವನ್ನು ಆಹ್ವಾನಿಸಿದಾಗ, ರೆಫರರ್ ಮತ್ತು ರೆಫರಿ ಇಬ್ಬರೂ 100 ರೂ. ಕ್ಯಾಶ್‌ಬ್ಯಾಕ್ ಗಳಿಸಬಹುದು. ಪೇಟಿಎಂ ಆಫರ್ ಅನ್ನು ಪ್ರಚಾರ ಮಾಡಲು ಭಾರತೀಯ ಕ್ರಿಕೆಟಿಗರಾದ ಯುಜ್ವೇಂದ್ರ ಚಹಾಲ್, ಹರ್ಭಜನ್ ಸಿಂಗ್ ಮತ್ತು ವೆಸ್ಟ್ ಇಂಡೀಸ್ ಆಟಗಾರ ಕ್ರಿಸ್ ಗೇಲ್ ಅವರೊಂದಿಗೆ ಆನ್‌ಲೈನ್ ಅಭಿಯಾನವನ್ನು ನಡೆಸಲಾಯಿತು. 


ಇದನ್ನೂ ಓದಿ :  EPFO Rules: ಹಳೆ ಕಂಪನಿಯ ಇಪಿಎಫ್ ವರ್ಗಾವಣೆಯಾಗದಿದ್ದರೆ EPFO ಖಾತೆ ಕ್ಲೋಸ್ ಆಗಬಹುದು!


ಪೇಟಿಎಂ ಹೇಳಿದ್ದೇನು?
 ಈ ಬಗ್ಗೆ  ಮಾತನಾಡಿದ Paytm ಉಪಾಧ್ಯಕ್ಷ ನರೇಂದ್ರ ಯಾದವ್, “Paytm UPI ಸೂಪರ್‌ಫಾಸ್ಟ್ ಮತ್ತು ಸುರಕ್ಷಿತ ಹಣ ವರ್ಗಾವಣೆ ಸೇವೆಯನ್ನು ನೀಡುತ್ತದೆ. ಇದರಿಂದಾಗಿ ಲಕ್ಷಾಂತರ ಬಳಕೆದಾರರಿಗೆ ಅನುಕೂಲವಾಗುತ್ತಿದೆ. ಮುಂಬರುವ ಕ್ರಿಕೆಟ್ ಋತುವಿನಲ್ಲಿ, ನಮ್ಮ ಬಳಕೆದಾರರಿಗೆ  ನಾವು ವಿಶೇಷ ಕೊಡುಗೆಯೊಂದಿಗೆ  100 ರೂ Cashback ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ. 


Paytm UPI ಗೆ ನೋಂದಾಯಿಸುವುದು ಹೇಗೆ ?
ಬಳಕೆದಾರರು ತಮ್ಮ Paytm ಅಪ್ಲಿಕೇಶನ್ ಅನ್ನು ಬಳಸಿಕೊಂಡು ಕೆಲವೇ ನಿಮಿಷಗಳಲ್ಲಿ Paytm UPI ಗೆ ನೋಂದಾಯಿಸಿಕೊಳ್ಳಬಹುದು. ಇದು ಅವರ ಬ್ಯಾಂಕ್ ಖಾತೆಯಿಂದ ನೇರವಾಗಿ ತಡೆರಹಿತ ಮತ್ತು ಸುರಕ್ಷಿತ ಆನ್‌ಲೈನ್ ಪಾವತಿಗಳನ್ನು ಮಾಡಲು  ಅನುವು ಮಾಡಿಕೊಡುತ್ತದೆ. ಲಿಂಕ್ ಮಾಡಲಾದ ಖಾತೆಯ ಬ್ಯಾಲೆನ್ಸ್ ಅನ್ನು ತಕ್ಷಣವೇ ಪರಿಶೀಲಿಸಲು ಮತ್ತು ಯಾವುದೇ UPI QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಪಾವತಿಗಳನ್ನು ಮಾಡಲು  ಸಹಾಯವಾಗುತ್ತದೆ. 


ಇದನ್ನೂ ಓದಿ : ಟಾಟಾದ ಈ ಫ್ಯಾಮಿಲಿ ಕಾರಿನ ಮೇಲೆ ಸಿಗುತ್ತಿದೆ ಭಾರೀ Discount, 6 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದು ಈ ಕಾರು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.