ನವದೆಹಲಿ: ಅಮೆಜಾನ್ ಪ್ರೈಮ್ ಡೇ ಮಾರಾಟದ ಕೇವಲ ಒಂದು ವಾರದ ನಂತರ ಕಂಪನಿಯು ಇದೀಗ ಆಗಸ್ಟ್ ತಿಂಗಳಿನಲ್ಲಿ ತನ್ನ ದೊಡ್ಡ ಮಾರಾಟವನ್ನು ಘೋಷಿಸಿದೆ. ಆಗಸ್ಟ್ 6ರಿಂದ ‘ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್’ ಮಾರಾಟ ಆರಂಭವಾಗಲಿದ್ದು, ಗ್ರಾಹಕರಿಗೆ ಮೊಬೈಲ್‌ಗಳ ಮೇಲೆ ಶೇ.40ರಷ್ಟು ಮತ್ತು ಟಿವಿ ಹಾಗೂ ಉಪಕರಣಗಳ ಮೇಲೆ ಶೇ.60ರಷ್ಟು ರಿಯಾಯಿತಿ ಸಿಗಲಿದೆ. ವಿಶ್ವದ ದೊಡ್ಡ ಇ-ಕಾಮರ್ಸ್ ಪ್ಲಾಟ್‌ ಫಾರ್ಮ್ ಅಮೆಜಾನ್ 5 ದಿನಗಳ ಸ್ವಾತಂತ್ರ್ಯ ದಿನದ ಮಾರಾಟದಲ್ಲಿ ಗ್ರಾಹಕರಿಗೆ ಉನ್ನತ ಶ್ರೇಣಿಯ ಉತ್ಪನ್ನಗಳ   ದೊಡ್ಡ ರಿಯಾಯಿತಿಯನ್ನು ನೀಡುತ್ತಿದೆ.


COMMERCIAL BREAK
SCROLL TO CONTINUE READING

ಆಗಸ್ಟ್ 6 ರಿಂದ 10ರವರೆಗೆ ನಡೆಯಲಿದೆ


ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್’ ಭಾರತದಲ್ಲಿ ಆಗಸ್ಟ್ 6ರಿಂದ ಆಗಸ್ಟ್ 10ರವರೆಗೆ ನಡೆಯಲಿದೆ. ಹೊಸ ಫೋನ್‌ಗಳು, ಟಿವಿಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ ಹಲವಾರು ಉತ್ಪನ್ನಗಳ ಭರ್ಜರಿ ಡಿಸ್ಕೌಂಟ್ ಸಿಗಲಿದೆ. ರಿಯಾಯಿತಿ ಹೊರತಾಗಿ ಅಮೆಜಾನ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಕ್ರೆಡಿಟ್ ಕಾರ್ಡ್‌ಗಳ ವಹಿವಾಟಿನ ಮೇಲೆ ಶೇ.10ರಷ್ಟು ತ್ವರಿತ ರಿಯಾಯಿತಿ ಸಹ ನೀಡುತ್ತದೆ. ಇದರೊಂದಿಗೆ ಗ್ರಾಹಕರಿಗೆ ವಿವಿಧ ಕೊಡುಗೆಗಳೂ ಸಹ ಇರುತ್ತವೆ.


ಇದನ್ನೂ ಓದಿ: Pulsar NS160 ಬೈಕ್ ಗೆ ಭಾರಿ ಪೈಪೋಟಿ ನೀಡಲು ಬಿಡುಗಡೆಯಾಗಿದೆ ಹೀರೋ ಕಂಪನಿಯ ಈ ಹೊಸ ಬೈಕ್


ಮೊಬೈಲ್ ಫೋನ್‍ ಖರೀದಿ ಮೇಲೆ No-Cost EMI ಆಯ್ಕೆ ಇರುತ್ತದೆ. ಗ್ರಾಹಕರು ಸುಲಭವಾಗಿ ತಮ್ಮಿಷ್ಟದ ಹೊಸ ಮೊಬೈಲ್‍ಗಳನ್ನು ಖರೀದಿಸಬಹುದು. ಮೊಬೈಲ್‌ ಮತ್ತು ಪರಿಕರಗಳ ಮೇಲೆ ಶೇ.40ವರೆಗೆ ರಿಯಾಯಿತಿ ನೀಡಲಾಗುತ್ತದೆ. OnePlus, Xiaomi ಮತ್ತು Samsung ಸೇರಿದಂತೆ ಹಲವಾರು ಬ್ರ್ಯಾಂಡ್‍ಗಳ ಮೇಲೆ ಭರ್ಜರಿ ರಿಯಾಯತಿ ಸಿಗುತ್ತದೆ. ಗೃಹೋಪಯೋಗಿ ವಸ್ತುಗಳ ಮೇಲೆ ಗ್ರಾಹಕರು ಶೇ.70 ವರೆಗೆ ರಿಯಾಯಿತಿ ಪಡೆಯಬಹುದು. ಎಲೆಕ್ಟ್ರಾನಿಕ್ಸ್ ಮತ್ತು ಪರಿಕರಗಳ ಮೇಲೆ ಶೇ.75ವರೆಗೆ ರಿಯಾಯಿತಿ ಸಿಗಲಿದೆ. ಇದಲ್ಲದೆ ಲ್ಯಾಪ್‍ಟಾಪ್‍(Notebook)ಗಳ ಮೇಲೆ 40,000 ರೂ.ವರೆಗೆ, ಸ್ಮಾರ್ಟ್ ವಾಚ್‍ಗಳ ಮೇಲೆ ಶೇ.70ರಷ್ಟು ಮತ್ತು ಟ್ಯಾಬ್ಲೆಟ್‌ಗಳ ಮೇಲೆ ಶೇ.45ವರೆಗೆ ರಿಯಾಯಿತಿ ಸಿಗಲಿದೆ.


ಹೊಸ ಬಟ್ಟೆ ಖರೀದಿಸಬಯಸುವ ಗ್ರಾಹಕರಿಗೆ ಅಮೆಜಾನ್ ಫ್ಯಾಶನ್ ಮಾರಾಟದಲ್ಲಿ 40 ಲಕ್ಷ + ಸ್ಟೈಲ್‌ ಗಳ ಮೇಲೆ ಶೇ.80 ವರೆಗೆ ರಿಯಾಯಿತಿ ದೊರೆಯಲಿದೆ. ಇದಲ್ಲದೆ ಪುಸ್ತಕಗಳು, ಆಟಿಕೆಗಳು, ಗ್ರೂಮಿಂಗ್, ಅಮೆಜಾನ್ ಬ್ರಾಂಡ್‌ ಗಳು ಮತ್ತು ಅಲೆಕ್ಸಾ, ಫೈರ್ ಟಿವಿ ಮತ್ತು ಕಿಂಡಲ್‌ ನಂತಹ ಉತ್ಪನ್ನಗಳಿಗೂ ಸಹ ಬಿಗ್ ಡಿಸ್ಕೌಂಟ್ ಇರುತ್ತದೆ. ಭಾರತದಲ್ಲಿ ಅಮೆಜಾನ್‌ನ ದೊಡ್ಡ ಸ್ಪರ್ಥಿ ಎಂದರೆ ಫ್ಲಿಪ್‌ಕಾರ್ಟ್. ನಿರೀಕ್ಷೆಯಂತೆ ಫ್ಲಿಪ್‌ಕಾರ್ಟ್ ಸಹ ತನ್ನ ‘ಸೂಪರ್ ಸೇವಿಂಗ್ ಡೇಸ್’ ಮಾರಾಟವನ್ನು ಆಗಸ್ಟ್ 6ರಿಂದ ದೇಶದಲ್ಲಿ ಪ್ರಾರಂಭಿಸುತ್ತಿದೆ.


ಇದನ್ನೂ ಓದಿ: Paperless Banking: ಬ್ಯಾಂಕ್‌ಗಳಲ್ಲಿ ‘ಪೇಪರ್’ ಬಳಕೆ ಬಂದ್, ‘ಇ-ರಶೀದಿ ನೀಡುವಂತೆ RBI ಆದೇಶ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.