SBI Special FD: ಜನರು ಸುರಕ್ಷಿತ ಯೋಜನೆಗಳಲ್ಲಿ ಹೂಡಿಕೆ ಮಾಡಲು ಇಚ್ಚಿಸುತ್ತಾರೆ. ಇದಕ್ಕಾಗಿ ಬ್ಯಾಂಕ್ ಎಫ್‌ಡಿ ಅತ್ಯುತ್ತಮ ಆಯ್ಕೆ ಎಂಬುದು ಕೆಲವರ ಅಭಿಪ್ರಾಯ. ನೀವೂ ಸಹ ಹೊಸ ಎಫ್‌ಡಿ ತೆರೆಯಲು ಯೋಚಿಸುತ್ತಿದ್ದರೆ ಎಸ್‌ಬಿ‌ಐನ ಅಮೃತ್ ಕಲಶ ಎಂಬ ವಿಶೇಶ ಎಫ್‌ಡಿ ಯೋಜನೆ ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ವಾಸ್ತವವಾಗಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರಿಗಾಗಿ ತನ್ನ 'ಅಮೃತ್ ಕಲಶ' ವಿಶೇಷ ನಿಶ್ಚಿತ ಠೇವಣಿ ಯೋಜನೆಯನ್ನು ವಿಸ್ತರಿಸಿದೆ.


COMMERCIAL BREAK
SCROLL TO CONTINUE READING

ಹೌದು, ಭಾರತೀಯ ಸ್ಟೇಟ್ ಬ್ಯಾಂಕ್‌ನ ವಿಶೇಷ ಎಫ್‌ಡಿ ಯೋಜನೆ ಅಮೃತ್ ಕಲಶ ಠೇವಣಿ ಯೋಜನೆ ಈ ತಿಂಗಳು ಕೊನೆಗೊಳ್ಳಲಿದೆ. 12- ಏಪ್ರಿಲ್- 2023 ರಿಂದ ಆರಂಭವಾಗಿರುವ ಈ ಯೋಜನೆಯು ಇದೆ ಆಗಸ್ಟ್ 15, 2023ಕ್ಕೆ ಕೊನೆಗೊಳ್ಳಲಿದೆ.  ಗಮನಾರ್ಹವಾಗಿ, ಈ ಮೊದಲು ಜೂನ್ 30, 2023ರವರೆಗೆ ಮಾತ್ರ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು ಎಂದು ಹೇಳಲಾಗಿತ್ತು. 


ಏನಿದು ಎಸ್‌ಬಿ‌ಐ ಅಮೃತ್ ಕಲಶ್ ಎಫ್‌ಡಿ ಯೋಜನೆ: 
ಎಸ್‌ಬಿ‌ಐ ಅಮೃತ್ ಕಲಶ್ 400 ದಿನಗಳ ಎಫ್‌ಡಿ ಯೋಜನೆ ಆಗಿದೆ. ಎಸ್‌ಬಿ‌ಐ ಅಮೃತ್ ಕಲಶ್ ಎಫ್‌ಡಿ ಯೋಜನೆಯಲ್ಲಿ  ಗ್ರಾಹಕರಿಗೆ ಶೇ.7.1ರಷ್ಟು ಹಾಗೂ  ಹಿರಿಯ ನಾಗರಿಕರಿಗೆ 0.50 ಹೆಚ್ಚುವರಿ ಬಡ್ಡಿ ಸೌಲಭ್ಯ ಲಭ್ಯವಾಗಲಿದೆ.  ಎಂದರೆ, ಹಿರಿಯ ನಾಗರಿಕರಿಗೆ ಈ ಯೋಜನೆಯಲ್ಲಿ ಶೇ.7.6ರಷ್ಟು ಬಡ್ಡಿ ದೊರೆಯುತ್ತಿದೆ.


ಇದನ್ನೂ ಓದಿ- ಎಐಸಿಪಿಐ ಸೂಚ್ಯಂಕ ಏರಿಕೆ : ಸಿಗುವುದು ಶೇ.46 ಡಿಎ, ಖಚಿತವಾಯಿತು ಸರ್ಕಾರಿ ನೌಕರರ ವೇತನ ಹೆಚ್ಚಳ


ಎಸ್‌ಬಿಐ ಅಮೃತ್ ಕಲಶ್‌ನಲ್ಲಿ ಹೂಡಿಕೆ ಮಾಡುವುದು ಹೇಗೆ? 
ಗ್ರಾಹಕರು ಎಸ್‌ಬಿ‌ಐ ಶಾಖೆಗೆ ಭೇಟಿ ನೀಡುವ ಮೂಲಕ ಅಥವಾ ನೆಟ್ ಬ್ಯಾಂಕಿಂಗ್ ಮತ್ತು ಎಸ್‌ಬಿ‌ಐ ಯೋನೋ ಅಪ್ಲಿಕೇಶನ್ ಮೂಲಕ ಎಸ್‌ಬಿ‌ಐ ಅಮೃತ್ ಕಲಶ್ ಎಫ್‌ಡಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ.  


ಎಸ್‌ಬಿಐ ಅಮೃತ್ ಕಲಶ್‌ನ ಪ್ರಮುಖ ವೈಶಿಷ್ಟ್ಯಗಳು:
* ಈ ಎಸ್‌ಬಿಐ ವಿಶೇಷ ಎಫ್‌ಡಿ ಯೋಜನೆಯು ಅಕಾಲಿಕ ಹಿಂಪಡೆಯುವಿಕೆ ಮತ್ತು ಠೇವಣಿ ಆಯ್ಕೆಗಳ ವಿರುದ್ಧ ಸಾಲವನ್ನು ಸಹ ಒಳಗೊಂಡಿದೆ.
* ಈ ಯೋಜನೆಯಲ್ಲಿ ಹೂಡಿಕೆಯ ಮೇಲೆ  ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಆಧಾರದ ಮೇಲೆ ಬಡ್ಡಿಯನ್ನು ಪಾವತಿಸಲಾಗುತ್ತದೆ. 
* ಎಫ್‌ಡಿಯ ಮುಕ್ತಾಯದ ಬಳಿಕ ಟಿ‌ಡಿ‌ಎಸ್ ಕಡಿತಗೊಳಿಸಿ ನಂತರ ಗ್ರಾಹಕರ ಖಾತೆಗೆ ಬಡ್ಡಿಯನ್ನು ಕಳುಹಿಸಲಾಗುತ್ತದೆ.  ಸರಳವಾಗಿ ಹೇಳುವುದಾದರೆ, ಈ ಯೋಜನೆಯಲ್ಲಿ ಹೂಡಿಕೆಯ ಮೇಲೆ ಆದಾಯ ತೆರಿಗೆ ನಿಯಮಗಳ ಪ್ರಕಾರ ಟಿಡಿಎಸ್ ವಿಧಿಸಲಾಗುತ್ತದೆ. 
* ಆದಾಗ್ಯೂ, ಐಟಿ ನಿಯಮಗಳ ಅಡಿಯಲ್ಲಿ ತೆರಿಗೆ ಕಡಿತದಿಂದ ವಿನಾಯಿತಿಯನ್ನು ವಿನಂತಿಸಲು ಹೂಡಿಕೆದಾರರು ಫಾರ್ಮ್ 15G/15H ಅನ್ನು ಬಳಸಬಹುದಾಗಿದೆ. 


ಇದನ್ನೂ ಓದಿ- LPG Price: ತಿಂಗಳ ಮೊದಲ ದಿನವೇ ಗುಡ್ ನ್ಯೂಸ್, ಎಲ್‌ಪಿ‌ಜಿ ಬೆಲೆ ಇಳಿಕೆ


ಅಕಾಲಿಕ ಹಿಂತೆಗೆದುಕೊಳ್ಳುವಿಕೆ
ಎಸ್‌ಬಿಐ ವೆಬ್‌ಸೈಟ್ ಪ್ರಕಾರ, "ಬ್ಯಾಂಕ್‌ನಲ್ಲಿ ಅವಧಿಗೂ ಮುನ್ನವೇ ನೀವು ಅಮೃತ್ ಕಲಶ್ ವಿಶೇಷ ಎಫ್‌ಡಿಯಿಂದ ಹಣವನ್ನು ಹಿಂಪಡೆಯಲು ಸಹ ಅವಕಾಶವಿದೆ. ಅಂತಹ ಸಂದರ್ಭದಲ್ಲಿ, ಅನ್ವಯವಾಗುವ ದರಕ್ಕಿಂತ 0.50% ರಿಂದ 1% ರಷ್ಟು ಬಡ್ಡಿಯನ್ನು ಕಡಿತಗೊಳಿಸಲಾಗುತ್ತದೆ. ಇಲ್ಲವೇ ಒಪ್ಪಂದದ ದರಕ್ಕಿಂತ 0.50% ಅಥವಾ 1% ಕಡಿಮೆ ಇವುಗಳಲ್ಲಿ ಯಾವುದು ಕಡಿಮೆಯೋ ಅದರನ್ವಯ ಪಾವತಿ ಲಭಿಸಲಿದೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.