India's Per Capta Income: 2030 ರ ಹೊತ್ತಿಗೆ, ಪ್ರತಿಯೊಬ್ಬ ಭಾರತೀಯನ ಆದಾಯ $4000, ಈ ರಾಜ್ಯಗಳು ಮುಂಚೂಣಿಯಲ್ಲಿರಲಿವೆ!

India's Per Capta Income: 2030 ರ ಆರ್ಥಿಕ ವರ್ಷದ ವೇಳೆಗೆ, ಭಾರತದ ತಲಾ ಆದಾಯವು ಶೇ.70 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಮತ್ತು ಆ ಸಮಯದಲ್ಲಿ ತಲಾ ಆದಾಯವು 4 ಸಾವಿರ ಡಾಲರ್ ಆಗೈರಲಿದೆ ಎಂದು ಅಂದಾಜಿಸಲಾಗಿದೆ.  

Written by - Nitin Tabib | Last Updated : Jul 31, 2023, 09:08 PM IST
  • ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮುಂದಿನ ಅಧಿಕಾರಾವಧಿಯಲ್ಲಿ ಭಾರತದ ಆರ್ಥಿಕತೆಯು ದೇಶವನ್ನು
  • ವಿಶ್ವದ ಅಗ್ರ 3 ರಾಷ್ಟ್ರಗಳಲ್ಲಿ ಸೇರಿಸಲಿದೆ ಮತ್ತು 5 ಟ್ರಿಲಿಯನ್ ಡಾಲರ್‌ಗೆ ತಲುಪಲಿದೆ ಎಂದು ಹಲವು ಬಾರಿ ಹೇಳಿದ್ದಾರೆ.
  • ಪ್ರಸ್ತುತ ಜಪಾನ್, ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾ ಭಾರಟಕ್ಕಿಂತ ಆರ್ಥಿಕತೆಯಲ್ಲಿ ಮುಂದಿವೆ.
India's Per Capta Income: 2030 ರ ಹೊತ್ತಿಗೆ, ಪ್ರತಿಯೊಬ್ಬ ಭಾರತೀಯನ ಆದಾಯ $4000, ಈ ರಾಜ್ಯಗಳು ಮುಂಚೂಣಿಯಲ್ಲಿರಲಿವೆ! title=

India's Per Capta Income: 2030 ರ ಹೊತ್ತಿಗೆ ಭಾರತದ ತಲಾ ಆದಾಯವು ಶೇ.70 ರಷ್ಟು ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್‌ನ ಸಂಶೋಧನಾ ವರದಿಯು ತಲಾ ಆದಾಯವು ಪ್ರಸ್ತುತ ಇರುವ $ 2,450 ಮತ್ತು 2030 ರ ವೇಳೆಗೆ $ 4,000 ತಲುಪುವ ನಿರೀಕ್ಷೆಯಿದೆ ಎಂದು ಹೇಳಿದೆ. ಆದಾಯದ ಹೆಚ್ಚಳವು ದೇಶವು $ 6 ಟ್ರಿಲಿಯನ್ ಜಿಡಿಪಿಯೊಂದಿಗೆ ಮಧ್ಯಮ-ಆದಾಯದ ಆರ್ಥಿಕತೆಯಾಗಲು ಸಹಾಯ ಮಾಡುತ್ತದೆ ಮತ್ತು ಅದರ ಅರ್ಧದಷ್ಟು ದೇಶೀಯ ಬಳಕೆಯಿಂದ ಬರಲಿದೆ ಎಂದು ಈ ಸಂಶೋಧನಾ ವರದಿ ಹೇಳಿದೆ.

2001 ರಿಂದ ತಲಾ ಆದಾಯದಲ್ಲಿ ದಾಖಲೆಯ ಏರಿಕೆ
2001 ರಿಂದ, ತಲಾ ಆದಾಯದಲ್ಲಿ ದಾಖಲೆ ಮಟ್ಟದ ಏರಿಕೆ ಕಂಡುಬಂದಿದೆ. ಇದು 2001 ರಲ್ಲಿ $460 ಆಗಿತ್ತು, ಇದು 2011 ರಲ್ಲಿ $1,413 ಮತ್ತು 2021 ರಲ್ಲಿ $2,150 ಗೆ ಏರಿಕೆಯಾಗಿದೆ. ಬಾಹ್ಯ ವ್ಯಾಪಾರದಿಂದಾಗಿ ಭಾರತದ ಆರ್ಥಿಕತೆಯು ಗರಿಷ್ಠ ವೇಗವನ್ನು ಪಡೆಯಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಇದು ಪ್ರಸಕ್ತ ಹಣಕಾಸು ವರ್ಷದಲ್ಲಿ $ 1.2 ಟ್ರಿಲಿಯನ್‌ನಿಂದ 2030 ರ ವೇಳೆಗೆ ಸುಮಾರು ದ್ವಿಗುಣವಾಗಿ $ 2.1 ಟ್ರಿಲಿಯನ್‌ಗೆ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.

ದೇಶೀಯ ಬಳಕೆ ಬೆಳವಣಿಗೆಯಲ್ಲಿ ಎರಡನೇ ಪಾಲುದಾರ
ಇನ್ನೊಂದೆಡೆ ಇದೆ ವರದಿಯಲ್ಲಿ ಜಿಡಿಪಿಯಲ್ಲಿ ಶೇ 10ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಇದಲ್ಲದೆ, ಈ ಹೆಚ್ಚಳಕ್ಕೆ ಎರಡನೇ ಪ್ರಮುಖ ಕೊಡುಗೆ ದೇಶೀಯ ಬಳಕೆ ಎಂದು ವರದಿಯಲ್ಲಿ ಹೇಳಲಾಗಿದೆ. ಇದು 2030 ರ ವೇಳೆಗೆ $ 3.4 ಟ್ರಿಲಿಯನ್ ತಲುಪುತ್ತದೆ ಎಂದು ಅಂದಾಜಿಸಲಾಗಿದೆ, ಇದು ಪ್ರಸ್ತುತ GDP ಗಾತ್ರಕ್ಕೆ ಸಮನಾಗಿರುತ್ತದೆ. ಇದಕ್ಕೆ ವಿರುದ್ಧವಾಗಿ, FY2023 ರಲ್ಲಿ ದೇಶೀಯ ಬಳಕೆ $2.1 ಟ್ರಿಲಿಯನ್ ಆಗಿತ್ತು.

ಇದನ್ನೂ ಓದಿ-Internet Speed Boosting ಗಾಗಿ ಇದಕ್ಕಿಂತ ಅಗ್ಗದ ಪರ್ಯಾಯ ನೀವು ಈ ಹಿಂದೆ ಎಂದೂ ನೋಡಿರಲಿಕ್ಕಿಲ್ಲ!

ಭಾರತದ ಆರ್ಥಿಕತೆ 5 ಟ್ರಿಲಿಯನ್ ಡಾಲರ್ ತಲುಪಲಿದೆ
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮುಂದಿನ ಅಧಿಕಾರಾವಧಿಯಲ್ಲಿ ಭಾರತದ ಆರ್ಥಿಕತೆಯು ದೇಶವನ್ನು ವಿಶ್ವದ ಅಗ್ರ 3 ರಾಷ್ಟ್ರಗಳಲ್ಲಿ ಸೇರಿಸಲಿದೆ ಮತ್ತು 5 ಟ್ರಿಲಿಯನ್ ಡಾಲರ್‌ಗೆ ತಲುಪಲಿದೆ ಎಂದು ಹಲವು ಬಾರಿ ಹೇಳಿದ್ದಾರೆ. ಪ್ರಸ್ತುತ  ಜಪಾನ್, ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾ ಭಾರಟಕ್ಕಿಂತ ಆರ್ಥಿಕತೆಯಲ್ಲಿ ಮುಂದಿವೆ.

ಇದನ್ನೂ ಓದಿ-Reliance Jio ಬಳಕೆದಾರರಿಗೊಂದು ಭಾರಿ ಸಂತಸದ ಸುದ್ದಿ!

ಯಾವ ರಾಜ್ಯವು ಮುಂಚೂಣಿಯಲ್ಲಿರಲಿದೆ
ತಲಾ ಆದಾಯದಲ್ಲಿ ತೆಲಂಗಾಣ ರಾಜ್ಯ 2.75 ಲಕ್ಷ ರೂ.ಗಳೊಂದಿಗೆ ಅಗ್ರ ಸ್ಥಾನದಲ್ಲಿದೆ ಎಂದು ವರದಿ ಹೇಳಿದೆ. ಇದಾದ ಬಳಿಕ ಕರ್ನಾಟಕ 2.65 ಲಕ್ಷ, ತಮಿಳುನಾಡು 2.41 ಲಕ್ಷ, ಕೇರಳ 2.30 ಲಕ್ಷ ಮತ್ತು ಆಂಧ್ರಪ್ರದೇಶ 2.07 ಲಕ್ಷ ರೂ ನಂತರದ ಸ್ಥಾನದಲ್ಲಿರಲಿವೆ. ಇದೇ ವೇಳೆ, ವರದಿಯ ಪ್ರಕಾರ, 2030 ರ ಆರ್ಥಿಕ ವರ್ಷದ ವೇಳೆಗೆ ಈ ಶ್ರೇಯಾಂಕದಲ್ಲಿ ಬದಲಾವಣೆಯಾಗಬಹುದು, ಇದರಲ್ಲಿ ಗುಜರಾತ್ ಅಗ್ರಸ್ಥಾನಕ್ಕೆ ಬರಬಹುದು. ಇದರ ನಂತರ ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ಹರಿಯಾಣ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಿರಲಿವೆ ಎನ್ನಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News