ಎಐಸಿಪಿಐ ಸೂಚ್ಯಂಕ ಏರಿಕೆ : ಸಿಗುವುದು ಶೇ.46 ಡಿಎ, ಖಚಿತವಾಯಿತು ಸರ್ಕಾರಿ ನೌಕರರ ವೇತನ ಹೆಚ್ಚಳ

Salary Hike news :ಜೂನ್ 2023 ರ AICPI ಸೂಚ್ಯಂಕಗಳನ್ನು ನಿನ್ನೆ ಬಿಡುಗಡೆ ಮಾಡಲಾಗಿದೆ. ಇದರ ಬೆನ್ನಲ್ಲೇ ನೌಕರರ ತುಟ್ಟಿಭತ್ಯೆ ಶೇ.46ಕ್ಕೆ ಏರಿಕೆಯಾಗುವುದು ಖಚಿತವಾಗಿದೆ.  

Written by - Ranjitha R K | Last Updated : Aug 1, 2023, 09:30 AM IST
  • ಜೂನ್ ತಿಂಗಳ ಎಐಸಿಬಿಐ ಸೂಚ್ಯಂಕವನ್ನು ನಿನ್ನೆ ಬಿಡುಗಡೆ
  • ಜುಲೈ 2023 ರಿಂದ ಶೇ 46 ರಷ್ಟು ಆಗಲಿದೆ ತುಟ್ಟಿಭತ್ಯೆ
  • ನೌಕರರ ಭತ್ಯೆ ಶೇ.4ರಷ್ಟು ಹೆಚ್ಚಳ
ಎಐಸಿಪಿಐ ಸೂಚ್ಯಂಕ ಏರಿಕೆ : ಸಿಗುವುದು ಶೇ.46 ಡಿಎ,  ಖಚಿತವಾಯಿತು ಸರ್ಕಾರಿ ನೌಕರರ ವೇತನ ಹೆಚ್ಚಳ  title=

Salary Hike news : ಜೂನ್ ತಿಂಗಳ ಎಐಸಿಬಿಐ  ಸೂಚ್ಯಂಕವನ್ನು ನಿನ್ನೆ ಬಿಡುಗಡೆ ಮಾಡಲಾಗಿದೆ. ಇದಾದ ನಂತರ ಜುಲೈ 2023 ರಿಂದ ತುಟ್ಟಿಭತ್ಯೆ  ಶೇ 46 ರಷ್ಟು ಆಗಲಿದೆ ಎನ್ನುವುದು ಖಚಿತವಾಗಿದೆ. ತುಟ್ಟಿಭತ್ಯೆ  ಶೇ 46ಕ್ಕೆ ಏರಿಕೆಯಾದರೆ ನೌಕರರ ವೇತನದಲ್ಲಿ ಕೂಡಾ ಭಾರೀ  ಹೆಚ್ಚಳವಾಗಲಿದೆ. 

ಜೂನ್ 2023 ರ AICPI ಸೂಚ್ಯಂಕಗಳನ್ನು ನಿನ್ನೆ ಬಿಡುಗಡೆ ಮಾಡಲಾಗಿದೆ. ಇದರ ಬೆನ್ನಲ್ಲೇ ನೌಕರರ ತುಟ್ಟಿಭತ್ಯೆ ಶೇ.46ಕ್ಕೆ ಏರಿಕೆಯಾಗುವುದು ಖಚಿತವಾಗಿದೆ. ಪ್ರಸ್ತುತ  ಕೇಂದ್ರ ಸರ್ಕಾರಿ ನೌಕರರು 42 ಪ್ರತಿಶತ ತುಟ್ಟಿಭತ್ಯೆ ಪಡೆಯುತ್ತಿದ್ದಾರೆ. ಪ್ರಸ್ತುತ ನೌಕರರ ಭತ್ಯೆಯನ್ನು ಶೇ.4ರಷ್ಟು ಹೆಚ್ಚಿಸಲಾಗಿದೆ. 

ಇದನ್ನೂ ಓದಿ : ಜನಸಾಮಾನ್ಯರೇ ಗಮನಿಸಿ: ಇಂದಿನಿಂದ ಬದಲಾಗಲಿದೆ ಈ ಎಲ್ಲಾ ನಿಯಮಗಳು!

ಜೂನ್ ಎಐಬಿಸಿಐ ಸೂಚ್ಯಂಕದಲ್ಲಿಏರಿಕೆ : 
ಜೂನ್ 2023 ಎಐಸಿಪಿಐ ಸೂಚ್ಯಂಕಗಳನ್ನು ನಿನ್ನೆ ಬಿಡುಗಡೆ ಮಾಡಲಾಗಿದೆ.  ಇದರಲ್ಲಿ ಉತ್ತಮ ಸುಧಾರಣೆಯನ್ನು ಕಂಡು ಬಂದಿದೆ. ಜೂನ್ ಸೂಚ್ಯಂಕವು 136.4 ಅಂಕಗಳನ್ನು ತಲುಪಿದೆ.  ಮೇ ತಿಂಗಳಲ್ಲಿ ಸೂಚ್ಯಂಕವು 134.7 ಪಾಯಿಂಟ್‌ಗಳಷ್ಟಿತ್ತು. ಅಂದರೆ ಜೂನ್ ನಲ್ಲಿ ಒಟ್ಟು 1.7 ಪಾಯಿಂಟ್ ಗಳ ಏರಿಕೆಯಾಗಿದೆ. ಮೇ ಅಂಕಿಅಂಶಗಳ ಪ್ರಕಾರ, ಒಟ್ಟು ತುಟ್ಟಿಭತ್ಯೆ  45.58 ಶೇಕಡಾ ಆಗಿದ್ದು, ಇದು ಜೂನ್ 2023 ರಲ್ಲಿ 46.24 ಶೇಕಡಾಕ್ಕೆ ಏರಿದೆ.  ಈ ಹಿನ್ನೆಲೆಯಲ್ಲಿ ಕೇಂದ್ರ ನೌಕರರಿಗೆ ಶೇ.46 ತುಟ್ಟಿಭತ್ಯೆ ನೀಡಲಾಗುವುದು. ಸರ್ಕಾರದ ಮೂಲಗಳ ಪ್ರಕಾರ, ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರ ಈ ಕುರಿತು ಅಧಿಸೂಚನೆ ಹೊರಡಿಸಲಿದೆ.  

1 ಜುಲೈ 2023 ರಿಂದಲೇ ಡಿಎ ಹೆಚ್ಚಳ ಜಾರಿ :
ಹೊಸ ತುಟ್ಟಿಭತ್ಯೆ ಹೆಚ್ಚಳ ಘೋಷಣೆಯಾಗುವವರೆಗೆ ಕೇಂದ್ರ ಸರ್ಕಾರಿ ನೌಕರರಿಗೆ ಶೇ.42 ತುಟ್ಟಿಭತ್ಯೆ ನೀಡಲಾಗುವುದು. ಆದರೆ, ಅಧಿಸೂಚನೆಯ ನಂತರ ಮುಂದಿನ ತಿಂಗಳ ವೇತನದೊಂದಿಗೆ ಬಾಕಿ ಇರುವ ಅರಿಯರ್ಸ್ ಅನ್ನು ಕೂಡಾ ಪಾವತಿಸಲಾಗುವುದು. ಈ ತುಟ್ಟಿಭತ್ಯೆ ಹೆಚ್ಚಳದ ಲಾಭವನ್ನು 7ನೇ ವೇತನ ಶ್ರೇಣಿಯಡಿ ವೇತನ ಪಡೆಯುವ ಕೇಂದ್ರ ಸರ್ಕಾರಿ ನೌಕರರಿಗೆ ನೀಡಲಾಗುವುದು. ವರದಿಗಳ ಪ್ರಕಾರ, ಒಟ್ಟು 1 ಕೋಟಿಗೂ ಹೆಚ್ಚು ಕೇಂದ್ರ ನೌಕರರು ಮತ್ತು ಪಿಂಚಣಿದಾರರು ಈ ಹೆಚ್ಚಳದ ನೇರ  ಪ್ರಯೋಜನ ಪಡೆಯಲಿದ್ದಾರೆ.

ಇದನ್ನೂ ಓದಿ : LPG Price: ತಿಂಗಳ ಮೊದಲ ದಿನವೇ ಗುಡ್ ನ್ಯೂಸ್, ಎಲ್‌ಪಿ‌ಜಿ ಬೆಲೆ ಇಳಿಕೆ

ವರ್ಷದಲ್ಲಿ ಎರಡು ಬಾರಿ ತುಟ್ಟಿಭತ್ಯೆ ಹೆಚ್ಚಳ :  
ಪ್ರತಿ ವರ್ಷ ಎರಡು ಬಾರಿ ತುಟ್ಟಿಭತ್ಯೆ ಹೆಚ್ಚಿಸಲಾಗುತ್ತದೆ. ಅದರಂತೆಯೇ  ಅಧಿಸೂಚನೆಯನ್ನು ಪ್ರಕಟಿಸಲಾಗುತ್ತದೆ. ಸರ್ಕಾರದ ಹಣಕಾಸು ಸಚಿವಾಲಯ ಇದನ್ನು ಅನುಮೋದಿಸುತ್ತದೆ. ಇದನ್ನು ಕಾರ್ಮಿಕ ಆಧಾರದ ಮೇಲೆ ನಿರ್ಧರಿಸುತ್ತದೆ. ಜನವರಿ 1 ಮತ್ತು ಜುಲೈ 1 ರಿಯಾಯಿತಿ ದರಗಳ ಹೆಚ್ಚಳಕ್ಕೆ ನಿಗದಿತ ದಿನಾಂಕಗಳಾಗಿವೆ. ಆದರೆ ಸಾಮಾನ್ಯವಾಗಿ  ಮಾರ್ಚ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಈ ಹೆಚ್ಚಳವನ್ನು ಘೋಷಿಸಲಾಗುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News