ಸರ್ಕಾರ ಜಾರಿಗೊಳಿಸಿದೆ ಮತ್ತೊಂದು ಪಿಂಚಣಿ ಯೋಜನೆ! ಎಲ್ಲಕ್ಕಿಂತ ಹೆಚ್ಚು ಲಾಭ ಇದರಲ್ಲೇ !
ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ರಾಜಕೀಯ ಪಕ್ಷಗಳು ಹಳೆಯ ಪಿಂಚಣಿ ಜಾರಿಗೊಳಿಸುವುದಾಗಿ ಭರವಸೆ ನೀಡುತ್ತಿವೆ. ಆದರೆ, ಇದು ಕಷ್ಟ ಸಾಧ್ಯ ಎನ್ನುತ್ತಿದೆ ಆರ್ ಬಿಐ.
ಬೆಂಗಳೂರು : ಹಳೆ ಪಿಂಚಣಿ ಯೋಜನೆ ಜಾರಿಗೆ ತರುವಂತೆ ದೇಶಾದ್ಯಂತ ಸರಕಾರಿ ನೌಕರರು ಆಗ್ರಹಿಸುತ್ತಿದ್ದಾರೆ. ನೌಕರರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಕೆಲವು ರಾಜ್ಯ ಸರ್ಕಾರಗಳು ಕೂಡಾ ಹಳೇ ಯೋಜನೆಯನ್ನು ಮತ್ತೆ ಜಾರಿಗೆ ತಂದಿವೆ. ಇದು ಇಡೀ ದೇಶದಲ್ಲಿ ರಾಜಕೀಯ ವಿಷಯವಾಗಿ ಮಾರ್ಪಟ್ಟಿದೆ. ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ರಾಜಕೀಯ ಪಕ್ಷಗಳು ಹಳೆಯ ಪಿಂಚಣಿ ಜಾರಿಗೊಳಿಸುವುದಾಗಿ ಭರವಸೆ ನೀಡುತ್ತಿವೆ. ಆದರೆ, ಇದು ಕಷ್ಟ ಸಾಧ್ಯ ಎನ್ನುತ್ತಿದೆ ಆರ್ ಬಿಐ. ಒಂದು ವೇಳೆ ಹಳೇ ಪಿಂಚಣಿ ಯಿಜನೆ ಜಾರಿಯಾದರೆ ಮುಂದಿನ ದಿನಗಳಲ್ಲಿ ತೊಂದರೆ ಎದುರಿಸಬೇಕಾಗುತ್ತದೆ ಎನ್ನುವ ಎಚ್ಚರಿಕೆ ನೀಡುತ್ತಿದೆ ಕೇಂದ್ರ ಬ್ಯಾಂಕ್. ಆದರೆ ಇದೆಲ್ಲದರ ನಡುವೆ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸರ್ಕಾರ ಹೊಸ ಪಿಂಚಣಿ ಯೋಜನೆ ಜಾರಿಗೆ ಮುಂದಾಗಿದೆ.
ಸೇರಿಸಲಾಗಿದೆ ಹೊಸ ಮತ್ತು ಹಳೆಯ ಪಿಂಚಣಿ ಯೋಜನೆಯ ನಿಬಂಧನೆ :
ಸರ್ಕಾರ ಈ ಹೊಸ ಯೋಜನೆಗೆ ಗ್ಯಾರಂಟೀಡ್ ಪೆನ್ಶನ್ ಸ್ಕೀಮ್ ಎಂದು ಹೆಸರಿಟ್ಟಿದೆ. ಆದರೆ ಈ ಸಂಬಂಧ ಯಾವುದೇ ಪ್ರಸ್ತಾವನೆಯನ್ನು ಹಣಕಾಸು ಸಚಿವಾಲಯಕ್ಕೆ ಕಳುಹಿಸಿಲ್ಲ. ಆದರೆ, ರೆಡ್ಡಿ ಸರ್ಕಾರ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಪಿಂಚಣಿ ಯೋಜನೆಯ ವಿಶೇಷವೆಂದರೆ ಹೊಸ ಪಿಂಚಣಿ ಮತ್ತು ಹಳೆ ಪಿಂಚಣಿ ಯೋಜನೆ ಎರಡರ ನಿಬಂಧನೆಗಳನ್ನು ಇದರಲ್ಲಿ ಸೇರಿಸಲಾಗಿದೆ.
ಇದನ್ನೂ ಓದಿ : Aadhaar Card : ಆಧಾರ್ ಕಾರ್ಡ್‌ನಲ್ಲಿರುವ ನಿಮ್ಮ ಫೋಟೋ ಚೆನ್ನಾಗಿಲ್ಲವೇ? ಈ ರೀತಿ ಚೇಂಜ್ ಮಾಡಿ!
ಖಾತರಿಯ ಪಿಂಚಣಿ ಯೋಜನೆ :
ಗ್ಯಾರಂಟೀಡ್ ಪೆನ್ಶನ್ ಸ್ಕೀಮ್ ಅಥವಾ ಜಿಪಿಎಸ್ ಅಡಿಯಲ್ಲಿ, ಉದ್ಯೋಗಿ ತನ್ನ ಮೂಲ ವೇತನದ 10 ಪ್ರತಿಶತವನ್ನು ಪ್ರತಿ ತಿಂಗಳು ಠೇವಣಿ ಮಾಡಿದರೆ, ನಿವೃತ್ತಿಯ ನಂತರ ವೇತನದ 33 ಪ್ರತಿಶತವನ್ನು ಪಿಂಚಣಿಯಾಗಿ ಪಡೆಯುತ್ತಾನೆ. 10 ಶೇ.ದಷ್ಟನ್ನು ರಾಜ್ಯ ಸರ್ಕಾರವು ಜಿಪಿಎಸ್‌ನಲ್ಲಿ ಠೇವಣಿ ಮಾಡುತ್ತದೆ. ಇದರಲ್ಲಿ ಎರಡನೇ ನಿಬಂಧನೆ ಏನೆಂದರೆ, ಉದ್ಯೋಗಿ ತನ್ನ ವೇತನದ ಶೇಕಡಾ 14 ರಷ್ಟು ಠೇವಣಿ ಇಟ್ಟರೆ, ನಿವೃತ್ತಿಯ ನಂತರ ಶೇಕಡಾ 40 ರಷ್ಟು ಪಿಂಚಣಿ ಪಡೆಯುವ ಸಾಧ್ಯತೆ ಇದೆ.
ಆಂಧ್ರಪ್ರದೇಶದಲ್ಲಿ ಚರ್ಚೆಯಲ್ಲಿರುವ ಈ ಪಿಂಚಣಿ ಯೋಜನೆ ಜಾರಿಗೆ ಸದ್ಯ ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ. ಆದರೆ ಇದು ಸಾಕಷ್ಟು ಕುತೂಹಲಕಾರಿಯಾಗಿದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ,ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯ ಅಗತ್ಯವಿದೆ ಎಂದಿದ್ದಾರೆ. ಹಳೆಯ ಪಿಂಚಣಿ ಯೋಜನೆಯಡಿ, ಉದ್ಯೋಗಿ ಕೊನೆಯ ವೇತನದ 50 ಪ್ರತಿಶತದಷ್ಟನ್ನು ಪಿಂಚಣಿ ರೂಪದಲ್ಲಿ ಪಡೆಯುತ್ತಿದ್ದರು. ಪಿಂಚಣಿಯಾಗಿ ಪಡೆಯುವ ಸಂಪೂರ್ಣ ಮೊತ್ತವನ್ನು ಸರ್ಕಾರವೇ ಪಾವತಿಸುತ್ತಿದೆ.
ಇದನ್ನೂ ಓದಿ : Arecanut today price: ರಾಜ್ಯದ ಇಂದಿನ ಅಡಿಕೆ ಮಾರುಕಟ್ಟೆ ಧಾರಣೆ ಹೀಗಿದೆ ನೋಡಿ
ಅದೇ ಸಮಯದಲ್ಲಿ, ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಅಂದರೆ ಹೊಸ ಪಿಂಚಣಿ ವ್ಯವಸ್ಥೆಯಲ್ಲಿ ದೀರ್ಘಾವಧಿಯ ಹೂಡಿಕೆ ಯೋಜನೆ ಇದೆ. ಇದರ ಅಡಿಯಲ್ಲಿ, ನಿವೃತ್ತಿಯ ನಂತರ, ಉದ್ಯೋಗಿ ಒಂದೇ ಬಾರಿಗೆ ದೊಡ್ಡ ಮೊತ್ತದ ಹಣವನ್ನು ಪಡೆಯುವುದು ಸಾಧ್ಯವಾಗುತ್ತದೆ. ಇದರಲ್ಲಿ ಹೂಡಿಕೆ ಮಾಡುವ ವ್ಯಕ್ತಿಗೆ 80-CCD (1B) ಅಡಿಯಲ್ಲಿ 50,000 ರೂ ಪಾಯಿ ರಿಯಾಯಿತಿ ಸಿಗುತ್ತದೆ. ಇದಲ್ಲದೆ, ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80-ಸಿ ಅಡಿಯಲ್ಲಿ 1.5 ಲಕ್ಷದವರೆಗೆ ರಿಯಾಯಿತಿ ಲಭ್ಯವಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.