ನವದೆಹಲಿ: ರೈಲ್ವೇ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಭಾರತೀಯ ರೈಲ್ವೆ ಹೊಸ ಸೇವೆಯನ್ನು ಆರಂಭಿಸಿದೆ. ಕಳೆದ ಹಲವು ವರ್ಷಗಳಲ್ಲಿ, ರೈಲ್ವೆಯು ಆಹಾರದ ನೈರ್ಮಲ್ಯವನ್ನು ಸುಧಾರಿಸಲು ಮತ್ತು ಪ್ರಯಾಣಿಕರಿಗೆ ಸುಲಭವಾಗಿ ಆಹಾರ ಲಭ್ಯವಾಗುವಂತೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ ಪ್ರಯಾಣಿಕರಿಗೆ ಆನ್ಲೈನ್ ಆಹಾರ ಒದಗಿಸುವ ಸೌಲಭ್ಯವನ್ನು ರೈಲ್ವೇ ಒದಗಿಸಿದೆ. ಇದೀಗ ವಾಟ್ಸಾಪ್ ಮೂಲಕ ಆಹಾರ ಆರ್ಡರ್ ಮಾಡುವ ಆಯ್ಕೆಯನ್ನು ರೈಲ್ವೇ ಪ್ರಯಾಣಿಕರಿಗೆ ನೀಡಿದೆ.
ಹೌದು, ರೈಲ್ವೇ ಪ್ರಯಾಣಿಕರು ವಾಟ್ಸಾಪ್ ಮೂಲಕವೂ ಫುಡ್ ಆರ್ಡರ್ ಮಾಡಬಹುದು. ಇ-ಕೇಟರಿಂಗ್ ಸೇವೆಯನ್ನು ಗ್ರಾಹಕರನ್ನು ಕೇಂದ್ರೀಕರಿಸಲು ರೈಲ್ವೆ ಈ ಉಪಕ್ರಮವನ್ನು ತೆಗೆದುಕೊಂಡಿದೆ. ಆಹಾರ ಆರ್ಡರ್ ಮಾಡಲು ರೈಲ್ವೇಯಿಂದ ವಾಟ್ಸಾಪ್ ನಂಬರ್ ಕೂಡ ನೀಡಲಾಗಿದೆ.
ಇದನ್ನೂ ಓದಿ- ಹಿರಿಯ ನಾಗರಿಕರಿಗೆ ಭಾರತೀಯ ರೈಲ್ವೆ ಇಲಾಖೆಯಿಂದ ಬೊಂಬಾಟ್ ಗಿಫ್ಟ್: ಮತ್ತೆ ಬರಲಿದೆ ಈ ವ್ಯವಸ್ಥೆ!
ವಾಸ್ತವವಾಗಿ, ರೈಲ್ವೇ ಗ್ರಾಹಕರಿಗೆ ಐಆರ್ಸಿಟಿಸಿ ಮೂಲಕ ತನ್ನ ಇ-ಕೇಟರಿಂಗ್ ಸೇವೆಯನ್ನು ಒದಗಿಸುತ್ತದೆ. ಇದೀಗ ಇ-ಕೇಟರಿಂಗ್ ಸೇವೆಯ ಮೂಲಕ ಆಹಾರವನ್ನು ಆರ್ಡರ್ ಮಾಡಲು ಪ್ರಯಾಣಿಕರಿಗೆ ವಾಟ್ಸಾಪ್ ಸಂವಹನ ಸೇವೆಯನ್ನು ಪ್ರಾರಂಭಿಸಲಾಗಿದೆ. ನೀವು ರೈಲ್ವೆ ಪ್ರಯಾಣದ ವೇಳೆ ವಾಟ್ಸಾಪ್ ಸಂಖ್ಯೆ +91-8750001323ನಲ್ಲಿ ಆನ್ಲೈನ್ ಫುಡ್ ಆರ್ಡರ್ ಮಾಡಬಹುದು. ಇನ್ನೊಂದು ಪ್ರಮುಖ ವಿಷಯವೆಂದರೆ ಇದಕ್ಕಾಗಿ ನೀವು ಆ್ಯಪ್ ಡೌನ್ಲೋಡ್ ಮಾಡುವ ಅಗತ್ಯವೂ ಇಲ್ಲ.
ಇದನ್ನೂ ಓದಿ- Indian Railways: ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಸುವ ಯಾತ್ರಿಗಳಿಗೆ ಒಂದು ಭಾರಿ ಸಂತಸದ ಸುದ್ದಿ
ವಾಟ್ಸಾಪ್ ಮೂಲಕ ಫುಡ್ ಆರ್ಡರ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:
ವಾಟ್ಸಾಪ್ ಮೂಲಕ ಫುಡ್ ಆರ್ಡರ್ ಮಾಡಲು ರೈಲ್ವೇ ಎರಡು ಹಂತಗಳನ್ನು ಯೋಜಿಸಿದೆ. ಮೊದಲ ಹಂತದಲ್ಲಿ-
* www.ecatering.irctc.co.in ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಇ-ಕೇಟರಿಂಗ್ ಸೇವೆಯನ್ನು ಆಯ್ಕೆ ಮಾಡಲು ಇ-ಟಿಕೆಟ್ ಅನ್ನು ಬುಕ್ ಮಾಡುವ ಗ್ರಾಹಕರಿಗೆ ವಾಟ್ಸಾಪ್ ಬಿಸಿನೆಸ್ ಸಂಖ್ಯೆಯನ್ನು ಸಂದೇಶದ ಮೂಲಕ ಕಳುಹಿಸುತ್ತದೆ.
* ಈ ಆಯ್ಕೆಯ ಮೂಲಕ, ಗ್ರಾಹಕರು ಐಆರ್ಸಿಟಿಸಿಯ ಇ-ಕೇಟರಿಂಗ್ ವೆಬ್ಸೈಟ್ ಮೂಲಕ ನಿಲ್ದಾಣಗಳಲ್ಲಿ ಲಭ್ಯವಿರುವ ರೆಸ್ಟೋರೆಂಟ್ಗಳಿಂದ ಆಹಾರವನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ.
ಎರಡನೇ ಹಂತ-
>> ಈ ಹಂತದಲ್ಲಿ ಪ್ರಯಾಣಿಕರಿಗೆ ಈ ವಾಟ್ಸಾಪ್ ಸಂಖ್ಯೆಯು ದ್ವಿಮುಖ ಸಂವಹನ ವೇದಿಕೆಯಾಗಲು ಸಾಧ್ಯವಾಗುತ್ತದೆ.
>> ಇದರಲ್ಲಿ, AI ಪವರ್ ಚಾಟ್ಬಾಟ್ ಪ್ರಯಾಣಿಕರ ಇ-ಕೇಟರಿಂಗ್ ಸೇವೆಗೆ ಸಂಬಂಧಿಸಿದ ಎಲ್ಲಾ ರೀತಿಯ ಪ್ರಶ್ನೆಗಳನ್ನು ತೆಗೆದುಕೊಳ್ಳುತ್ತದೆ. ಮಾತ್ರವಲ್ಲ, ಇದರಲ್ಲಿ ಪ್ರಯಾಣಿಕರು ಫುಡ್ ಕೂಡ ಆರ್ಡರ್ ಮಾಡಬಹುದು.
>> ಸದ್ಯ ಕೆಲವು ಆಯ್ದ ರೈಲುಗಳಲ್ಲಷ್ಟೇ ಈ ವಾಟ್ಸ್ಆ್ಯಪ್ ಸಂವಹನ ಆಯ್ಕೆ ಲಭ್ಯವಿದ್ದು, ಮುಂಬರುವ ದಿನಗಳಲ್ಲಿ ಈ ಸೇವೆ ಎಲ್ಲಾ ರೈಲ್ಲುಗಳಲ್ಲೂ ಲಭ್ಯವಾಗುವ ಸಾಧ್ಯತೆ ಇದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.