Aadhaar Card Photo Update : ಆಧಾರ್ ಕಾರ್ಡ್ ಭಾರತದ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಭಾರತದಲ್ಲಿ ಆಧಾರ್ ಕಾರ್ಡ್ ಅನ್ನು ಗುರುತಿನ ಚೀಟಿಯಾಗಿಯೂ ಬಳಸಲಾಗುತ್ತದೆ. ಇದರೊಂದಿಗೆ ದೇಶದ ಹಲವು ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಆಧಾರ್ ಕಾರ್ಡ್ ಕೂಡ ಕಡ್ಡಾಯಗೊಳಿಸಲಾಗಿದೆ. ಆಧಾರ್ ಕಾರ್ಡ್ನಲ್ಲಿ 12 ಅಂಕೆಗಳ ಸಂಖ್ಯೆಯನ್ನು ನಮೂದಿಸಲಾಗಿದೆ. ಇದರೊಂದಿಗೆ ಆಧಾರ್ ಕಾರ್ಡ್ ಹೊಂದಿರುವವರ ಫೋಟೋ ಮತ್ತು ಅವರ ವಿಳಾಸವನ್ನು ಸಹ ನಮೂದಿಸಲಾಗಿದೆ. ನಿಮ್ಮ ಆಧಾರ್ ನಲ್ಲಿರುವ ಫೋಟೋ ಚೆನ್ನಾಗಿಲ್ಲದಿದ್ದರೆ ನೀವು ಅದನ್ನ ಅಪ್ಡೇಟ್ ಮಾಡಬಹುದು. ಹೇಗೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..
ಆಧಾರ್ ಕಾರ್ಡ್
ಆಧಾರ್ ಕಾರ್ಡ್ನಲ್ಲಿ ಅಪ್ಡೇಟ್ ಅವಶ್ಯಕತೆಯಿದೆ. ಅಲ್ಲದೆ, ಕೆಲವರು ಆಧಾರ್ ಕಾರ್ಡ್ನಲ್ಲಿ ಮುದ್ರಿಸಲಾದ ತಮ್ಮದೇ ಫೋಟೋವನ್ನು ಇಷ್ಟಪಡುವುದಿಲ್ಲ ಅಥವಾ ಜನರು ಆಧಾರ್ ಕಾರ್ಡ್ನಲ್ಲಿ ನಮೂದಿಸಿದ ಫೋಟೋವನ್ನು ಬದಲಾಯಿಸಲು ಬಯಸುತ್ತಾರೆ. ಅದಕ್ಕೆ, ಈಗ ನೀವು ಆಧಾರ್ ಕಾರ್ಡ್ನಲ್ಲಿರುವ ಫೋಟೋವನ್ನು ಸಹ ಬದಲಾಯಿಸಿ ಹೊಸ ಫೋಟೋ ಅಪ್ಡೇಟ್ ಮಾಡಬಹುದು. ನೀವು ಆಧಾರ್ ಕಾರ್ಡ್ನಲ್ಲಿ ಫೋಟೋವನ್ನು ಬದಲಾಯಿಸಲು ಬಯಸಿದರೆ, ಅದಕ್ಕಾಗಿ ಕೆಲವು ಹಂತಗಳನ್ನು ಅನುಸರಿಸಬೇಕು. ಇದರೊಂದಿಗೆ ಆಧಾರ್ ಕಾರ್ಡ್ನ ಫೋಟೋವನ್ನು ಬದಲಾಯಿಸಬಹುದು.
ಇದನ್ನೂ ಓದಿ : Tax Savings Tips : ನೀವು 7 ಲಕ್ಷಗಿಂತ ಹೆಚ್ಚು ಆದಾಯ ಗಳಿಸುತ್ತೀರಾ? ಇಲ್ಲಿವೆ, ತೆರಿಗೆ ಉಳಿಸಲು ಸಿಂಪಲ್ ಟಿಪ್ಸ್!
ಈ ಹಂತಗಳನ್ನು ಅನುಸರಿಸಿ
- UIDAI ನ ಅಧಿಕೃತ ವೆಬ್ಸೈಟ್ uidai.gov.in ಗೆ ಹೋಗಿ ಅಥವಾ ಈ ಲಿಂಕ್ ಅನ್ನು ಕ್ಲಿಕ್ ಮಾಡಿ https://uidai.gov.in/
- ಈಗ 'ಅಪ್ಡೇಟ್ ಆಧಾರ್' ಆಯ್ಕೆಯನ್ನು ಕ್ಲಿಕ್ ಮಾಡಿ.
- ಆಧಾರ್ ನೋಂದಣಿ ಫಾರ್ಮ್ ಅನ್ನು ಡೌನ್ಲೋಡ್ ಮಾಡಿ ಮತ್ತು ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ.
ಫಾರ್ಮ್ ಅನ್ನು ಹತ್ತಿರದ ಆಧಾರ್ ನೋಂದಣಿ ಕೇಂದ್ರದಲ್ಲಿ ಸಲ್ಲಿಸಿ.
- ಪ್ರಸ್ತುತ ಇರುವ ಆಧಾರ್ ಉದ್ಯೋಗಿ ಬಯೋಮೆಟ್ರಿಕ್ ಪರಿಶೀಲನೆಯ ಮೂಲಕ ಎಲ್ಲಾ ವಿವರಗಳನ್ನು ಪರಿಶೀಲಿಸುತ್ತಾರೆ.
- ಉದ್ಯೋಗಿ ನಿಮ್ಮ ಆಧಾರ್ ಕಾರ್ಡ್ನಲ್ಲಿ ಅಪ್ಡೇಟ್ ಮಾಡಿರುವ ಹೊಸ ಫೋಟೋ ಮೇಲೆ ಕ್ಲಿಕ್ ಮಾಡುತ್ತಾರೆ.
- 100 ರೂ. ಶುಲ್ಕ ಮತ್ತು ಜಿಎಸ್ಟಿ ಪಾವತಿಸಬೇಕಾಗುತ್ತದೆ.
- ಆಧಾರ್ ಉದ್ಯೋಗಿ ನಿಮಗೆ ಸ್ವೀಕೃತಿ ಸ್ಲಿಪ್ ಮತ್ತು ಅಪ್ಡೇಟ್ ರಿಕ್ವೆಸ್ಟ್ ಸಂಖ್ಯೆ (URN) ನೀಡುತ್ತಾರೆ.
- ನಿಮ್ಮ ಫೋಟೋವನ್ನು 90 ದಿನಗಳಲ್ಲಿ ಅಪ್ಡೇಟ್ ಮಾಡುಲಾಗುತ್ತದೆ.
ಈ ರೀತಿ ಹೊಸ ಫೋಟೋ ಅಪ್ಡೇಟ್
ಇದರ ನಂತರ ನೀವು ನಿಮ್ಮ ಅರ್ಜಿಯನ್ನು ಆನ್ಲೈನ್ನಲ್ಲಿ ಟ್ರ್ಯಾಕ್ ಮಾಡಬಹುದು. UIDAI ನ ಅಧಿಕೃತ ವೆಬ್ಸೈಟ್ನಲ್ಲಿ URN ಸಂಖ್ಯೆಯನ್ನು ಬಳಸಿಕೊಂಡು ನೀವು ಹೊಸ ಆಧಾರ್ ಕಾರ್ಡ್ನ ಸ್ಟೇಟಸ್ ಸಹ ಟ್ರ್ಯಾಕ್ ಮಾಡಬಹುದು. ನೀವು ಒದಗಿಸಿದ ವಿವರಗಳನ್ನು ಆಧಾರ್ ಪೋರ್ಟಲ್ನಲ್ಲಿ ಅಪ್ಡೇಟ್ ಮಾಡಲು 90 ದಿನಗಳನ್ನು ತೆಗೆದುಕೊಳ್ಳುತ್ತದೆ. ನೀವು ನೀಡಿದ ವಿವರಗಳು ಮತ್ತು ಫೋಟೋವನ್ನು ಅಪ್ಡೇಟ್ ನಂತರ, ಹೊಸ ಪ್ರತಿಯನ್ನು ಡೌನ್ಲೋಡ್ ಮಾಡಿ, ಪ್ರಿಂಟ್ ತೆಗೆದುಕೊಳ್ಳಬಹದು. ಆಧಾರ್ ಕಾರ್ಡ್ನಲ್ಲಿ ಫೋಟೋವನ್ನು ಅಪ್ಡೇಟ್ ಸಂಪೂರ್ಣ ಪ್ರಕ್ರಿಯೆಯನ್ನು ಆನ್ಲೈನ್ನಲ್ಲಿ ಮಾಡಲು ಸಾಧ್ಯವಿಲ್ಲ ಎಂಬುವುದು ಗಮನಿಸಬೇಕು.
ಇದನ್ನೂ ಓದಿ : Aadhaar Card : ಆಧಾರ್ ಮೂಲಕ ಬ್ಯಾಂಕ್ ಬ್ಯಾಲೆನ್ಸ್ ಚಕ್ ಮಾಡಬಹುದು : ಹೇಗೆ? ಇಲ್ಲಿದೆ ನೋಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.