ಅಯೋಧ್ಯೆಗೆ ವಿಮಾನ ಟಿಕೆಟ್ ದರ ಬಿಸಿ; ಥೈಲ್ಯಾಂಡ್, ಹಾಂಗ್ ಕಾಂಗ್ ಗಿಂತ ದುಬಾರಿ!
Ayodhya Flight Ticket Rate: ಇತರ ದಿನಗಳಿಗಿಂತ ಜನವರಿ 20 ರಿಂದ ಅಯೋಧ್ಯೆಗೆ ಟಿಕೆಟ್ ದರಗಳು ಹೆಚ್ಚಿವೆ. ಸಮಾರಂಭಕ್ಕೆ ಒಂದು ದಿನ ಮುಂಚಿತವಾಗಿ ಅನೇಕ ಜನರು ಅಯೋಧ್ಯೆಗೆ ತಲುಪುವ ಸಾಧ್ಯತೆಯಿರುವುದರಿಂದ ವಿಮಾನ ಟಿಕೆಟ್ ದರದ ಬಿಸಿ ಹೆಚ್ಚಾಗಿದೆ..
Ayodhya: ಅಯೋಧ್ಯೆ ರಾಮಮಂದಿರ ದೇಗುಲ ವಿಗ್ರಹ ಪ್ರತಿಷ್ಠಾಪನಾ ದಿನದಂದು ಅಯೋಧ್ಯೆಗೆ ಭೇಟಿ ನೀಡಲು ಯೋಜಿಸುತ್ತಿದ್ದೀರಾ..? ರೈಲು ಟಿಕೆಟ್‌ಗಾಗಿ ಕಾಯುವ ಪಟ್ಟಿ ಈಗಾಗಲೇ ತುಂಬಾ ಉದ್ದವಾಗಿದೆ. ನೀವು ಜನವರಿ 22 ರಂದು ಅಯೋಧ್ಯೆಯನ್ನು ತಲುಪಲು ಬಯಸಿದರೆ, ವಿಮಾನದಲ್ಲಿ ಮಾತ್ರ ಅವಕಾಶವಿದೆ. ಆದರೆ ಅಯೋಧ್ಯೆಯ ವಿಮಾನ ದರ ಕೇಳಿದರೆ ಬೆಚ್ಚಿ ಬೀಳುತ್ತೀರಿ. ಅಯೋಧ್ಯೆಗೆ ಹೋಗುವ ವಿಮಾನ ಟಿಕೆಟ್ ದರಗಳು ಥೈಲ್ಯಾಂಡ್, ಸಿಂಗಾಪುರ್ ಮತ್ತು ಹಾಂಗ್ ಕಾಂಗ್ ದೇಶಗಳಿಗಿಂತ ಹೆಚ್ಚಾಗಿವೆ..
ಹೌದು ದೇಶದ ನಾಲ್ಕು ಮೂಲೆಗಳಿಂದ ಅಯೋಧ್ಯೆಗೆ ವಿಮಾನ ಸೇವೆಗಳಿವೆ. ದೆಹಲಿ ಹೊರತುಪಡಿಸಿ, ಅಹಮದಾಬಾದ್, ಕೋಲ್ಕತ್ತಾ ಮತ್ತು ಬೆಂಗಳೂರಿನಿಂದ ವಿಮಾನಗಳು ಈಗಾಗಲೇ ಪ್ರಾರಂಭವಾಗಿವೆ. ಪ್ರತಿಷ್ಠಾ ದಿನದಂದು ಮೂರು ಲಕ್ಷದಿಂದ ಐದು ಲಕ್ಷ ಪ್ರಯಾಣಿಕರು ಅಯೋಧ್ಯೆಗೆ ಬರುತ್ತಾರೆ ಎಂದು ಅಂದಾಜಿಸಲಾಗಿದೆ. ರಾಮಮಂದಿರ ನಿರ್ಮಾಣದೊಂದಿಗೆ ಅಯೋಧ್ಯೆಯು ಪ್ರಮುಖ ಯಾತ್ರಾಸ್ಥಳ ಮತ್ತು ಪ್ರವಾಸಿ ಕೇಂದ್ರವಾಗುತ್ತಿದೆ. ರಾಮಮಂದಿರ ಉದ್ಘಾಟನೆಗೂ ಮುನ್ನವೇ ನಗರಕ್ಕೆ ಪ್ರವಾಸಿಗರ ಆಗಮನ ಆರಂಭವಾಗಿದೆ. ಇತರ ದಿನಗಳಿಗಿಂತ ಜನವರಿ 21 ರಂದು ಅಯೋಧ್ಯೆಗೆ ಟಿಕೆಟ್ ದರಗಳು ಹೆಚ್ಚಿವೆ. ಏಕೆಂದರೆ ಸಮಾರಂಭಕ್ಕೆ ಒಂದು ದಿನ ಮುಂಚಿತವಾಗಿ ಅನೇಕ ಜನರು ಅಯೋಧ್ಯೆಗೆ ತಲುಪುವ ಸಾಧ್ಯತೆಯಿದೆ.
ಇದನ್ನೂ ಓದಿ-BBK10 Finalist: ಫಿನಾಲೆಗೆ ವರ್ತೂರು ಸಂತೋಷ್ ಗ್ರ್ಯಾಂಡ್ ಎಂಟ್ರಿ.. ಹಾಗಾದ್ರೆ ಹೊರ ಹೋದವರು ಯಾರು?
ಸಾಮಾನ್ಯ ದಿನಗಳಲ್ಲಿ ದೆಹಲಿಯಿಂದ ಅಯೋಧ್ಯೆಗೆ ಟಿಕೆಟ್ ದರ 5000 ರಿಂದ 7000 ರೂಪಾಯಿಗಳವರೆಗೆ ಇರುತ್ತದೆ. ಆದರೆ ಜನವರಿ 20 ಮತ್ತು 21 ರಂದು 15193 ರೂ... ಬೆಂಗಳೂರಿನಿಂದ ಅಯೋಧ್ಯೆಗೆ ಟಿಕೆಟ್ ದರ 19358 ರೂಗಳಾಗಿವೆ.. ಮುಂಬೈ ಮತ್ತು ಚೆನ್ನೈನಂತಹ ನಗರಗಳಿಂದ ಅಯೋಧ್ಯೆಗೆ ತಲುಪಲು, ಮೊದಲು ದೆಹಲಿಗೆ ಹೋಗಿ ನಂತರ ಮುಂಬೈನಿಂದ ಅಯೋಧ್ಯೆಗೆ ದೆಹಲಿ ಮೂಲಕ ಟಿಕೆಟ್ 33,534 ರೂಗಳ ಟಿಕೆಟ್ ಪಡೆಯಬೇಕು..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.