ನವದೆಹಲಿ: Bajaj Chetak Electric Scooter - ಭಾರತದ ದ್ವಿಚಕ್ರ ವಾಹನ ತಯಾರಕ ಕಂಪನಿ ಬಜಾಜ್ 2020 ರ ಆರಂಭದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಚೇತಕ್  ಅನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಆದರೆ, ಕೊರೊನಾ ಪ್ರಕೋಪದ ಹಿನ್ನೆಲೆ ಈ ಸ್ಕೂಟರ್‌ನ ಮಾರಾಟ ಅಷ್ಟೊಂದು ಹೇಳಿಕೊಳ್ಳುವ ಹಾಗೆ ನಡೆಯಲಿಲ್ಲ.  ಆದರೆ ಇದೀಗ  ಪರಿಸ್ಥಿತಿ ಸಾಮಾನ್ಯಕ್ಕೆ ಮರಳಿದೆ ಎಂಬಂತೆ ತೋರುತ್ತಿದೆ. ಏಕೆಂದರೆ ಕಳೆದ ಕೆಲವು ತಿಂಗಳಿನಲ್ಲಿ ಈ ಸ್ಕೂಟರ್ ಮಾರಾಟ ಚೇತರಿಸಿಕೊಂಡಿದೆ. ವರದಿಯ ಪ್ರಕಾರ, ಚೇತಕ್‌ನ ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ಮೂರು ತಿಂಗಳಲ್ಲಿ ಒಟ್ಟು 800 ಯುನಿಟ್‌ಗಳು ಮಾರುಕಟ್ಟೆಯಲ್ಲಿ ಮಾರಾಟವಾಗಿವೆ. ಈ ಅಂಕಿಗಳು ಅಷ್ಟೇನೂ ಹೆಚ್ಚಲ್ಲ.  ಆದರೆ ಇಲೆಕ್ಟ್ರಿಕ್ ಸ್ಕೂಟರ್ ವಿಭಾಗದ ಇತರೆ ಸ್ಪರ್ಧಿಗಳಿಗೆ ಹೋಲಿಸಿದರೆ ಚೇತಕ್ ಮಾರಾಟ ತುಂಬಾ ಉತ್ತಮವಾಗಿದೆ. ಈ ಅವಧಿಯಲ್ಲಿ ಟಿವಿಎಸ್ ಕಂಪನಿ ಕೇವಲ 138 ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಗಳ ಮಾರಾಟ ನಡೆಸಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- ಎಲೆಕ್ಟ್ರಿಕ್ ಸ್ಕೂಟರ್ ತಯಾರಿಕೆಗೆ ಮುಂದಾದ OLA


Bajaj Chetak ವೈಶಿಷ್ಟ್ಯಗಳು
ಬಜಾಜ್ ಚೇತಕ್ ಸ್ಕೂಟರ್ ವೈಶಿಷ್ಟ್ಯಗಳ ಕುರಿತು ಹೇಳುವುದಾದರೆ, ಇದರಲ್ಲಿ 3 ಕಿ.ವ್ಯಾ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದೆ. ಇದು 4.8 ಕಿಲೋವ್ಯಾಟ್ ಮೋಟರ್ ಗೆ ಶಕ್ತಿ ಒದಗಿಸುತ್ತದೆ. ಈ ಮೋಟರ್ 16nm ನ ಗರಿಷ್ಠ ಟಾರ್ಕ್ ಮತ್ತು 6.44bhp ಗರಿಷ್ಠ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ (Electric Scootar) ಪರಿಸರ ಮೋಡ್‌ನಲ್ಲಿ 95 ಕಿ.ಮೀ ಮತ್ತು ಸ್ಪೋರ್ಟ್ ಮೋಡ್‌ನಲ್ಲಿ 85 ಕಿ.ಮೀ ವ್ಯಾಪ್ತಿಯನ್ನು ನೀಡುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.


ಇದನ್ನು ಓದಿ- ಡಿಸೆಂಬರ್‌ನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ ಹೊಸ ಎಲೆಕ್ಟ್ರಿಕ್ ಸ್ಕೂಟರ್-ಇಲ್ಲಿದೆ ಅದರ ಬೆಲೆ, ವೈಶಿಷ್ಟ್ಯ


ಶೀಘ್ರದಲ್ಲಿ ಸುಜುಕಿ ಕೂಡ ತನ್ನ ಇಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ
ಇಲೆಕ್ಟ್ರಿಕ್ ವಾಹನ ಸೆಗ್ಮೆಂಟ್ ಗೆ ಎಂಟ್ರಿ ನೀಡಲು ಸುಜುಕಿ ಮೋಟರ್ ಸೈಕಲ್ ಇಂಡಿಯಾ ಕೂಡ ಭಾರದ ಸಿದ್ಧತೆ ನಡೆಸಿದ್ದು, ತನ್ನ ಅತಿ ಪ್ರಚಲಿತ ಬ್ರಾಂಡ್ ಆಗಿರುವ ಬರ್ಗ್ ಮ್ಯಾನ್ ನ ಇಲೆಕ್ಟ್ರಿಕ್ ಆವೃತ್ತಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಇತ್ತೀಚೆಗಷ್ಟೇ ಗುರುಗ್ರಾಮ್ ನ ರಸ್ತೆಯ ಮೇಲೆ ಇದರ ಪರೀಕ್ಷೆಗಳು ನಡೆದಿವೆ. ಇನ್ನೊಂದೆಡೆ ಯುರೋಪಿಯನ್ ಮಾರುಕಟ್ಟೆಯ ದಾರಿ ಸುಗಮವಾಗಿಸಿಕೊಂಡಿರುವ ಬಜಾಜ್ ಕೂಡ ತನ್ನ ಚೇತಕ್ ಬೈಕ್ ಅನ್ನು ಅಲ್ಲಿನ ಮಾರುಕಟ್ಟೆಗೆ ಪರಿಚಯಿಸಲು ಲೈಸನ್ಸ್ ಪಡೆದುಕೊಂಡಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.