ಹೊಸದಿಲ್ಲಿ: PNB MySalary Account - ನೀವು ಸಹ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಗ್ರಾಹಕರಾಗಿದ್ದರೆ, ನೀವು ಸಂಪೂರ್ಣ 20 ಲಕ್ಷ ರೂಪಾಯಿಗಳ ಪ್ರಯೋಜನವನ್ನು (20 Lakh Rupees Benefits) ಉಚಿತವಾಗಿ ಪಡೆಯಬಹುದು ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಈ ವಿಶೇಷ ಕೊಡುಗೆಯ ಅಡಿಯಲ್ಲಿ ನೀವು ನೌಕರಿಯನ್ನು ಮಾಡುತಿದ್ದರೆ,  ನೀವು ಬ್ಯಾಂಕಿನಲ್ಲಿ PNB MySalary ಖಾತೆಯನ್ನು ತೆರೆಯಬೇಕಾಗುತ್ತದೆ. ಅಷ್ಟೇ ಅಲ್ಲ,  ಬ್ಯಾಂಕ್ ವತಿಯಿಂದ ಹಲವು ರೀತಿಯ ಸೌಲಭ್ಯಗಳನ್ನು ಇದರಲ್ಲಿ ನಿಮಗೆ ನೀಡಲಾಗುತ್ತದೆ. ಈ ಖಾತೆಯ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

PNB ಒದಗಿಸುತ್ತದೆ ಸೌಲಭ್ಯ
PNB ನೀಡಿರುವ ಮಾಹಿತಿಯ ಪ್ರಕಾರ, ನಿಮ್ಮ ಸಂಬಳವನ್ನು (Salary Account) ನೀವು ಉತ್ತಮವಾಗಿ ನಿರ್ವಹಿಸಲು ನೀವು  ಬಯಸುತ್ತಿದ್ದರೆ ನೀವು 'PNB MySalary Account' ಖಾತೆಯನ್ನು ತೆರೆಯಿರಿ. ಇದರ ಅಡಿಯಲ್ಲಿ, ಯಾರಿಗಾದರೂ ವೈಯಕ್ತಿಕ ಅಪಘಾತ ಸಂಭವಿಸಿದಲ್ಲಿ, ವಿಮೆಯೊಂದಿಗೆ ಓವರ್‌ಡ್ರಾಫ್ಟ್ (ಹೆಚ್ಚುವರಿ ಹಿಂಪಡೆಯುವಿಕೆ) ಮತ್ತು ಸ್ವೀಪ್ ಸೌಲಭ್ಯವೂ ಸಿಗುತ್ತದೆ.


ಹೇಗೆ ಸಿಗುತ್ತದೆ 20 ಲಕ್ಷ ರೂ.ಗಳವರೆಗೆ ಲಾಭ?
PNB ತನ್ನ ವೇತನ ಖಾತೆ ಹೊಂದಿರುವ ಗ್ರಾಹಕರಿಗೆ ವಿಮಾ ರಕ್ಷಣೆ ಸೇರಿದಂತೆ ಅನೇಕ ಇತರ ಪ್ರಯೋಜನಗಳನ್ನು ನೀಡುತ್ತಿದೆ. ಶೂನ್ಯ ಬ್ಯಾಲೆನ್ಸ್ ಮತ್ತು ಶೂನ್ಯ ತ್ರೈಮಾಸಿಕ ಸರಾಸರಿ ಬ್ಯಾಲೆನ್ಸ್ ಸೌಲಭ್ಯದೊಂದಿಗೆ PNB MySalary ಖಾತೆಯನ್ನು ತೆರೆಯುವಾಗ, ನಿಮಗೆ 20 ಲಕ್ಷ ರೂಪಾಯಿಗಳ ವೈಯಕ್ತಿಕ ಅಪಘಾತ ರಕ್ಷಣೆಯನ್ನು ನೀಡಲಾಗುತ್ತಿದೆ. ಅಂದರೆ, ಈ ಖಾತೆಯನ್ನು ತೆರೆಯುವುದು ನಿಮಗೆ ಲಾಭವೇ ಲಾಭ ನೀಡಲಿದೆ.


ಇದನ್ನೂ ಓದಿ-Petrol Diesel Price Today: ಪೆಟ್ರೋಲ್-ಡೀಸೆಲ್ ಮತ್ತಷ್ಟು ದುಬಾರಿ, ಜನಸಾಮಾನ್ಯರ ಪರದಾಟ


ಈ ಖಾತೆಯಲ್ಲಿ ಒಟ್ಟು ನಾಲ್ಕು ವಿಧಗಳಿವೆ
>> ಇದರಲ್ಲಿ ಮಾಸಿಕ 10 ಸಾವಿರದಿಂದ 25 ಸಾವಿರ ವೇತನ ಪಡೆಯುವವರನ್ನು ‘ಬೆಳ್ಳಿ’ ವಿಭಾಗದಲ್ಲಿ ಇರಿಸಲಾಗಿದೆ.
>> 25001 ರಿಂದ 75000 ವರೆಗಿನ ಮಾಸಿಕ ವೇತನ ಹೊಂದಿರುವವರನ್ನು 'ಚಿನ್ನ' ವಿಭಾಗದಲ್ಲಿ ಇರಿಸಲಾಗಿದೆ.
>> ರೂ 75001 ರಿಂದ ರೂ 150000 ರವರೆಗಿನ ಮಾಸಿಕ ವೇತನ ಹೊಂದಿರುವವರನ್ನು 'ಪ್ರೀಮಿಯಂ' ವಿಭಾಗದಲ್ಲಿ ಇರಿಸಲಾಗಿದೆ.
>> 150001 ರೂ.ಗಿಂತ ಹೆಚ್ಚು ಮಾಸಿಕ ವೇತನ ಹೊಂದಿರುವವರನ್ನು 'ಪ್ಲಾಟಿನಂ' ವಿಭಾಗದಲ್ಲಿ ಇರಿಸಲಾಗಿದೆ.


ಇದನ್ನೂ ಓದಿ-ಧನ್ತೇರಸ್‌-ದೀಪಾವಳಿ ಬಳಿಕ ಚಿನ್ನದ ಬೆಲೆ 8 ಸಾವಿರ ರೂ. ಏರಿಕೆ ಸಾಧ್ಯತೆ: ಈಗ ಖರೀದಿಸುವುದು ಸೂಕ್ತವೇ?


ಯಾರಿಗೆ ಎಷ್ಟು ಲಾಭ ?
>> ಬ್ಯಾಂಕ್‌ನಿಂದ ಗ್ರಾಹಕರಿಗೆ ಓವರ್‌ಡ್ರಾಫ್ಟ್ ಸೌಲಭ್ಯವನ್ನು ನೀಡಲಾಗುತ್ತದೆ.
>> ಬೆಳ್ಳಿ ವರ್ಗದ ಜನರು 50,000 ರೂ.ವರೆಗೆ ಓವರ್‌ಡ್ರಾಫ್ಟ್ ಸೌಲಭ್ಯವನ್ನು ಪಡೆಯುತ್ತಾರೆ.
>> ಚಿನ್ನ ವರ್ಗ  ಹೊಂದಿರುವವರು 150000 ರೂ.ವರೆಗೆ ಓವರ್‌ಡ್ರಾಫ್ಟ್ ಸೌಲಭ್ಯವನ್ನು ಪಡೆಯುತ್ತಾರೆ.
>> ಪ್ರೀಮಿಯಂ ವರ್ಗದ ಗ್ರಾಹಕರಿಗೆ  225000 ರೂ.ವರೆಗೆ ಓವರ್‌ಡ್ರಾಫ್ಟ್ ಸೌಲಭ್ಯ ದೊರೆಯುತ್ತದೆ.
>> ಪ್ಲಾಟಿನಂ ವರ್ಗದ  ಜನರು 300000 ರೂ.ವರೆಗೆ ಓವರ್‌ಡ್ರಾಫ್ಟ್ ಸೌಲಭ್ಯವನ್ನು ಪಡೆಯುತ್ತಾರೆ.
>> ಈ ಲಿಂಕ್ https://www.pnbindia.in/salary saving products.html ಗೆ ಭೇಟಿ ನೀಡುವ ಮೂಲಕ ನೀವು ವಿವರವಾದ ಮಾಹಿತಿಯನ್ನು ಪಡೆಯಬಹುದು.


ಇದನ್ನೂ ಓದಿ-Aadhaar Card Update: ನಿಮ್ಮ ಆಧಾರ್‌ಗೆ eSign ಅಥವಾ ಡಿಜಿಟಲ್ ಸಹಿ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ