ಧನ್ತೇರಸ್‌-ದೀಪಾವಳಿ ಬಳಿಕ ಚಿನ್ನದ ಬೆಲೆ 8 ಸಾವಿರ ರೂ. ಏರಿಕೆ ಸಾಧ್ಯತೆ: ಈಗ ಖರೀದಿಸುವುದು ಸೂಕ್ತವೇ?

ಸಾಂಪ್ರದಾಯಿಕವಾಗಿ ಭಾರತದಲ್ಲಿ ಜನರು ಧನ್ತೇರಸ್ ನಲ್ಲಿ ಚಿನ್ನ, ಬೆಳ್ಳಿ ಮತ್ತು ಇತರ ಲೋಹಗಳನ್ನು ಖರೀದಿಸುವುದನ್ನು ಮಂಗಳಕರವೆಂದು ಪರಿಗಣಿಸುತ್ತಾರೆ.

Written by - Puttaraj K Alur | Last Updated : Oct 31, 2021, 12:29 PM IST
  • ಧನತ್ರಯೋದಶಿಯಂದು ಚಿನ್ನ ಖರೀದಿಸುವುದು ಮಂಗಳಕರವೆಂದು ಪರಗಣಿಸಲಾಗಿದೆ
  • ಧನ್ತೇರಸ್‌ ಮತ್ತು ದೀಪಾವಳಿ ಬಳಿಕೆ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗುವ ಸಾಧ್ಯತೆ
  • ಅಗ್ಗವಾಗಿರುವಾಗಲೇ ಚಿನ್ನ ಖರೀದಿಸುವುದುದು ಸೂಕ್ತವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ
ಧನ್ತೇರಸ್‌-ದೀಪಾವಳಿ ಬಳಿಕ ಚಿನ್ನದ ಬೆಲೆ 8 ಸಾವಿರ ರೂ. ಏರಿಕೆ ಸಾಧ್ಯತೆ: ಈಗ ಖರೀದಿಸುವುದು ಸೂಕ್ತವೇ?  title=
ಚಿನ್ನ ಖರೀದಿಗೆ ಇದು ಸೂಕ್ತ ಸಮಯವೇ..?

ನವದೆಹಲಿ: ದೇಶದೆಲ್ಲೆಡೆ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಈಗಾಗಲೇ ದೀಪಾವಳಿ ಹಬ್ಬಕ್ಕೆ ದೇಶದ ಜನರು ಸಕಲ ತಯಾರಿಯನ್ನು ಮಾಡಿಕೊಂಡಿದ್ದಾರೆ. ಧನತ್ರಯೋದಶಿ ಅಥವಾ ಧನ್ತೇರಸ್‌ ಎಂದು ಕರೆಯಲ್ಪಡುವ ಆಚರಣೆಯನ್ನು ದೀಪಾವಳಿ ಹಬ್ಬದ ಮೊದಲ ದಿನದಂದು ಆಚರಣೆ ಮಾಡಲಾಗುತ್ತದೆ. ಧನತ್ರಯೋದಶಿ & ದೀಪಾವಳಿ(Dhanteras and Diwali 2021)ಯ ಶುಭ ಸಂದರ್ಭದಂದು ಚಿನ್ನ ಖರೀದಿ ಸೂಕ್ತವೇ ಅನ್ನೋ ಪ್ರಶ್ನೆ ಮೂಡಿದೆ.

ನೀವು ಈ ಧನ್ತೇರಸ್(Dhanteras) ಅಥವಾ ದೀಪಾವಳಿ ಹಬ್ಬಕ್ಕೆ ಚಿನ್ನವನ್ನು ಖರೀದಿಸಲು ಯೋಜಿಸುತ್ತಿದ್ದೀರಾ? ಸಾಂಪ್ರದಾಯಿಕವಾಗಿ ಭಾರತದಲ್ಲಿ ಜನರು ಧನ್ತೇರಸ್ ನಲ್ಲಿ ಚಿನ್ನ, ಬೆಳ್ಳಿ ಮತ್ತು ಇತರ ಲೋಹಗಳನ್ನು ಖರೀದಿಸುವುದನ್ನು ಮಂಗಳಕರವೆಂದು ಪರಿಗಣಿಸುತ್ತಾರೆ. ಆಭರಣಗಳು ಅಥವಾ ನಾಣ್ಯಗಳು ಅಥವಾ ಪಾತ್ರೆಗಳ ರೂಪದಲ್ಲಿ ಅಮೂಲ್ಯವಾದ ಲೋಹಗಳನ್ನು ಖರೀದಿಸುವುದು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ಈ ವರ್ಷ ಧನ್ತೇರಸ್ ಅನ್ನು ಶುಕ್ರವಾರ ಮತ್ತು ದೀಪಾವಳಿಯನ್ನು ಭಾನುವಾರದಂದು ಆಚರಿಸಲಾಗುತ್ತದೆ.

ಇದನ್ನೂ ಓದಿ: Petrol Diesel Price Today: ಪೆಟ್ರೋಲ್-ಡೀಸೆಲ್ ಮತ್ತಷ್ಟು ದುಬಾರಿ, ಜನಸಾಮಾನ್ಯರ ಪರದಾಟ

ನೀವು ಧನ್ತೇರಸ್‌ ಮತ್ತು ದೀಪಾವಳಿಯಂದು ಚಿನ್ನ/ಬೆಳ್ಳಿ ನಾಣ್ಯ ಅಥವಾ ಆಭರಣಗಳನ್ನು ಖರೀದಿಸಲು ಯೋಜಿಸುತ್ತಿದ್ದರೆ ಈಗಲೇ ಖರೀದಿಸುವುದು ಸೂಕ್ತ. ಏಕೆಂದರೆ 2021ರ ಅಂತ್ಯದ ವೇಳೆಗೆ ಬೆಲೆಬಾಳುವ ಲೋಹದ ಬೆಲೆಗಳು ಗರಿಷ್ಠ ಮಟ್ಟಕ್ಕೆ ಏರಿಕೆಯಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಚಿನ್ನ ಖರೀದಿಸಲು ಇದೇ ಸೂಕ್ತ ಸಮಯ ಎಂದು ಹೇಳಲಾಗುತ್ತಿದೆ. ಪ್ರಸ್ತುತ 10 ಗ್ರಾಂ 24ಕ್ಯಾರೆಟ್ ಚಿನ್ನ 47,050 ರೂ. ಇದ್ದರೆ, ಬೆಳ್ಳಿ ಪ್ರತಿ ಕೆಜಿಗೆ 64,600 ರೂ. ಇದೆ. 

ಚಿನ್ನದ ಬೆಲೆ 52 ರಿಂದ 53 ಸಾವಿರ ರೂ. ತಲುಪುವ ಸಾಧ್ಯತೆ

ಮುಂದಿನ 12 ತಿಂಗಳುಗಳಲ್ಲಿ ದೇಶೀಯ ಚಿನ್ನದ ಬೆಲೆ(Gold Price)ಗಳು ಗರಿಷ್ಠ 52 ರಿಂದ 53 ಸಾವಿರ ರೂ.ಗೆ ಏರುವ ನಿರೀಕ್ಷೆಯಿದೆ. ಈ ವರ್ಷ ಬೆಲೆಬಾಳುವ ಲೋಹದ ಬೆಲೆಗಳು 10 ಗ್ರಾಂಗೆ 47 ರಿಂದ 49 ಸಾವಿರ ರೂ. ನಡುವೆ ವಹಿವಾಟು ನಡೆಸುತ್ತಿವೆ. ಆದಾಗ್ಯೂ ಚಿನ್ನದ ಬೆಲೆಗಳು 2019ರಲ್ಲಿ ಶೇ.52 ಮತ್ತು 2020ರಲ್ಲಿ ಶೇ.25ರಷ್ಟು ಏರಿಕೆ ಕಂಡಿದೆ.

ಮಾಹಿತಿಯ ಪ್ರಕಾರ, ಕಳೆದ ದೀಪಾವಳಿಯಿಂದ ಈ ದೀಪಾವಳಿ(Deepavali Festival)ಯವರೆಗೆ ಚಿನ್ನದ ಬೆಲೆಯು ಏರುಗತಿಯಲ್ಲಿದೆ. ಅಮೆರಿಕನ್ ಡಾಲರ್ ಮತ್ತು Bond Yieldsನ ಕಾರಣ ಚಿನ್ನದ ಬೆಲೆಯಲ್ಲಿ ಸ್ವಲ್ಪ ಕುಸಿತ ಕಂಡಿದೆ. ‘ಚಿನ್ನವು ಮತ್ತೊಮ್ಮೆ 2,000 ಅಮೆರಿಕನ್ ಡಾಲರ್ ನಷ್ಟು ಏರುವ ಸಾಮರ್ಥ್ಯ ಹೊಂದಿದೆ. ದೇಶೀಯ ಮಾರುಕಟ್ಟೆಯಲ್ಲಿ ಮುಂದಿನ 12 ತಿಂಗಳುಗಳಲ್ಲಿ ಚಿನ್ನದ ಬೆಲೆ ಗರಿಷ್ಠ 52 ರಿಂದ 53 ಸಾವಿರ ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.  

ಇದನ್ನೂ ಓದಿ: Aadhaar Card Update: ನಿಮ್ಮ ಆಧಾರ್‌ಗೆ eSign ಅಥವಾ ಡಿಜಿಟಲ್ ಸಹಿ ಮಾಡುವುದು ಹೇಗೆ?

ಧನ್ತೇರಸ್‌ ಮತ್ತು ದೀಪಾವಳಿ(Dhanteras and Diwali) ಹಬ್ಬದಂದು ಚಿನ್ನವನ್ನು ಖರೀದಿಸಿದರೆ ಮುಂದಿನ ದಿನಗಳಲ್ಲಿ ಉತ್ತಮ ಲಾಭವಾಗಲಿದೆ. ಡಿಜಿಟಲ್ ರೂಪದಲ್ಲಿ ಖರೀದಿಸುವಂತೆ ತಜ್ಞರು ಹೂಡಿಕೆದಾರರಿಗೆ ಸಲಹೆ ನೀಡಿದ್ದಾರೆ. ಶೇ.55ರಷ್ಟು ಜನರು ಮುಂಬರುವ ಹಬ್ಬದ ಋತುವಿನಲ್ಲಿ ಚಿನ್ನ ಮತ್ತು ಚಿನ್ನದ ಆಭರಣಗಳನ್ನು ಖರೀದಿಸಲು ಎದುರು ನೋಡುತ್ತಿದ್ದಾರೆ ಎಂದು ತಿಳಿದುಂದಿದೆ. ಈ ಪೈಕಿ ಶೇ.37ರಷ್ಟು ಜನರು ಹಳದಿ ಲೋಹ ಖರೀದಿಸಲು ಧನ್ತೇರಸ್‌ ಮುಖ್ಯ ಕಾರಣವೆಂದು ತಿಳಿಸಿದ್ದಾರೆ.      

ಮುಂದುವರಿದ ಚಿನ್ನದ ಬೆಲೆ ಕುಸಿತ

ರಾಷ್ಟ್ರೀಯ ರಾಜಧಾನಿಯಲ್ಲಿ ಚಿನ್ನದ ಬೆಲೆ(Gold Price) 10 ಗ್ರಾಂ.ಗೆ 271 ರೂ.ಗೆ ಕುಸಿತ ಕಂಡಿದ್ದು, 46,887 ರೂ.ಗೆ ತಲುಪಿದೆ. ಇದು ಅಂತಾರಾಷ್ಟ್ರೀಯ ಬೆಲೆಬಾಳುವ ಲೋಹದ ಬೆಲೆಯಲ್ಲಿನ ಕುಸಿತವನ್ನು ಪ್ರತಿಬಿಂಬಿಸುತ್ತದೆ. ಬೆಳ್ಳಿ ಕೂಡ ಹಿಂದಿನ ವಹಿವಾಟಿನಲ್ಲಿ ಪ್ರತಿ ಕೆಜಿಗೆ 687 ರೂ.ನಷ್ಟು ಕುಸಿತವಾಗಿದ್ದು, 63,210 ರೂ.ಗೆ ತಲುಪಿದೆ. ಸಾಕಷ್ಟು ಅಗ್ಗವಾಗಿದ್ದಾಗಲೇ ಚಿನ್ನ ಖರೀದಿ ಮಾಡುವುದು ಸೂಕ್ತವೆನ್ನುವ ಅಭಿಪ್ರಾಯಗಳು ಕೇಳಿಬರುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News