Bank FD rates: ಈ ಬ್ಯಾಂಕುಗಳಿಂದ ಎಫ್ಡಿ ಬಡ್ಡಿದರ ಪರಿಷ್ಕರಣೆ, ಎಷ್ಟಿದೆ ಪರಿಶೀಲಿಸಿ
Bank FD Interest Rates: ಇತ್ತೀಚೆಗೆ ಕೆಲವು ಬ್ಯಾಂಕುಗಳು ಎಫ್ಡಿ ಬಡ್ಡಿದರಗಳನ್ನು ಪರಿಷ್ಕರಿಸಿವೆ. ಈ ಪೈಕಿ ಕೋಟಕ್ ಮಹೀಂದ್ರಾ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಐಡಿಬಿಐ ಬ್ಯಾಂಕ್ ಸೇರಿವೆ. ಇವುಗಳ ಬಡ್ಡಿದರ ಎಷ್ಟಿದೆ ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳಿರಿ.
ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಕಡಿಮೆ ಅವಧಿಯಲ್ಲಿ 6 ಬಾರಿ ರೆಪೋ ರೇಟ್ಅನ್ನು ಏರಿಕೆ ಮಾಡಿದೆ. ಹೀಗಾಗಿ ಬ್ಯಾಂಕ್ಗಳಲ್ಲಿ ಫಿಕ್ಸಿಡ್ ಡೆಪಾಸಿಟ್ (FD), ಸಾಲದ ಬಡ್ಡಿದರವನ್ನು ಏರಿಕೆ ಮಾಡಿವೆ. 2023ರಲ್ಲಿ ಬ್ಯಾಂಕ್ ಎಫ್ಡಿ ದರಗಳು ಆಕರ್ಷಕವಾಗಿದೆ. ಅನೇಕ ಬ್ಯಾಂಕುಗಳು ಸಾಮಾನ್ಯ ಗ್ರಾಹಕರಿಗೆ ಶೇ.7ಕ್ಕಿಂತ ಅಧಿಕ ಬಡ್ಡಿದರ ನೀಡುತ್ತದೆ.
ಆರ್ಬಿಐ ರೆಪೋ ರೇಟ್ ಏರಿಕೆ ನಿಲ್ಲಿಸಿದ ಬಳಿಕ ಬ್ಯಾಂಕುಗಳು ಸಹ ಎಫ್ಡಿ ಬಡ್ಡಿದರ ಏರಿಸುವುದನ್ನು ನಿಲ್ಲಿಸಿವೆ. ಮೇ 2022ರಿಂದ ಈವರೆಗೆ RBI ಒಟ್ಟು 6 ಬಾರಿ 250 ಬೇಸಿಸ್ ಪಾಯಿಂಟ್ಗಳಷ್ಟು (BPS) ರೆಪೋ ರೇಟ್ ಹೆಚ್ಚಿಸಿದೆ. ಇತ್ತೀಚೆಗೆ ಕೆಲವು ಬ್ಯಾಂಕುಗಳು ಎಫ್ಡಿ ಬಡ್ಡಿದರಗಳನ್ನು ಪರಿಷ್ಕರಿಸಿವೆ. ಈ ಪೈಕಿ ಕೋಟಕ್ ಮಹೀಂದ್ರಾ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಐಡಿಬಿಐ ಬ್ಯಾಂಕ್ ಸೇರಿವೆ. ಇವುಗಳ ಬಡ್ಡಿದರ ಎಷ್ಟಿದೆ ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳಿರಿ.
ಇದನ್ನೂ ಓದಿ: ಈ ಬ್ಯಾಂಕ್ನಲ್ಲಿ ನೀವು ಖಾತೆ ಹೊಂದಿದ್ದರೆ ಸಿಗಲಿದೆ ಮೂರು ಹೊಸ ಸೇವೆ
ಕೋಟಕ್ ಮಹೀಂದ್ರಾ ಬ್ಯಾಂಕ್: ಕೋಟಕ್ ಮಹೀಂದ್ರಾ ಬ್ಯಾಂಕ್ ಗ್ರಾಹಕರಿಗಾಗಿ ಎಫ್ಡಿ ಬಡ್ಡಿದರ ಪರಿಷ್ಕರಿಸಿದೆ. 7 ದಿನಗಳಿಂದ 10 ವರ್ಷಗಳಲ್ಲಿ ಮೆಚ್ಯೂರ್ ಆಗುವ ಡೆಪಾಸಿಟ್ಗಳ ಮೇಲೆ ಸಾಮಾನ್ಯ ಗ್ರಾಹಕರಿಗೆ ಶೇ.2.75 ರಿಂದ ಶೇ.7.25ವರೆಗೆ ಬಡ್ಡಿದರ ನೀಡುತ್ತಿದೆ. ಹಿರಿಯ ನಾಗರಿಕರು ಈ ಎಫ್ಡಿಗಳಲ್ಲಿ ಶೇ.3.25 ರಿಂದ ಶೇ.7.75ರವರೆಗೆ ಪಡೆಯಬಹುದು. ಪರಿಷ್ಕೃತ ದರಗಳು ಸೆಪ್ಟೆಂಬರ್ 13ರಿಂದಲೇ ಜಾರಿಯಾಗಿವೆ.
ಆಕ್ಸಿಸ್ ಬ್ಯಾಂಕ್: ಆಕ್ಸಿಸ್ ಬ್ಯಾಂಕ್ ತನ್ನ ಎಫ್ಡಿ ಮೇಲಿನ ಬಡ್ಡಿದರವನ್ನು ಪರಿಷ್ಕರಿಸಿದೆ. ಸೆಪ್ಟೆಂಬರ್ 18ರಿಂದ ಜಾರಿಗೆ ಬರುವಂತೆ ಆಕ್ಸಿಸ್ ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ ಶೇ.3ರಿಂದ ಶೇ.7.10ವರೆಗೆ ಮತ್ತು ಹಿರಿಯ ನಾಗರಿಕರಿಗೆ ಶೇ.3ರಿಂದ ಶೇ.7.75ರವರೆಗೆ ಬಡ್ಡಿದರ ನೀಡುತ್ತಿದೆ.
ಐಡಿಬಿಐ ಬ್ಯಾಂಕ್: ಐಡಿಬಿಐ ಬ್ಯಾಂಕ್ ತನ್ನ ಎಫ್ಡಿ ಮೇಲಿನ ಬಡ್ಡಿದರವನ್ನು ಪರಿಷ್ಕರಿಸಿದೆ. ಸೆಪ್ಟೆಂಬರ್ 15ರಿಂದ ಜಾರಿಗೆ ಬರುವಂತೆ ಐಡಿಬಿಐ ಬ್ಯಾಂಕ್ ಸಾಮಾನ್ಯ ಗ್ರಾಹಕರಿಗೆ 7 ದಿನಗಳಿಂದ 5 ವರ್ಷಗಳಲ್ಲಿ ಮೆಚ್ಯೂರ್ ಆಗುವ ಎಫ್ಡಿ ಮೇಲೆ ಶೇ.3ರಿಂದ ಶೇ.6.8ವರೆಗೆ ಮತ್ತು ಹಿರಿಯ ನಾಗರಿಕರಿಗೆ ಶೇ.3.5ರಿಂದ ಶೇ.7.3ರವರೆಗೆ ಬಡ್ಡಿದರ ನೀಡುತ್ತಿದೆ.
ಇದನ್ನೂ ಓದಿ: ರೈತರಿಗಾಗಿ ಕಿಸಾನ್ ರಿನ್ ಪೋರ್ಟಲ್ ಆರಂಭಿಸಿದ ಕೇಂದ್ರ ಸರ್ಕಾರ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.