ನವದೆಹಲಿ : ಜನವರಿ 2022 ರಲ್ಲಿ ದೇಶಾದ್ಯಂತ 16 ದಿನ ಬ್ಯಾಂಕ್ ರಜೆ ಇದೆ. ಇದು 2ನೇ ಮತ್ತು 4ನೇ ಶನಿವಾರ ಮತ್ತು ಭಾನುವಾರ ಒಳಗೊಂಡಿರುತ್ತದೆ. ವಾರದ ರಜೆಗಳ ಹೊರತಾಗಿ, ಇತರ ರಜಾದಿನಗಳ ಕಾರಣದಿಂದಾಗಿ ವಿವಿಧ ರಾಜ್ಯಗಳಲ್ಲಿ ಬ್ಯಾಂಕುಗಳು ಬಂದ್ ಇರುತ್ತವೆ.


COMMERCIAL BREAK
SCROLL TO CONTINUE READING

ಭಾರತೀಯ ರಿಸರ್ವ್ ಬ್ಯಾಂಕ್‌(RBI)ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ಬ್ಯಾಂಕ್ ರಜಾದಿನಗಳ ಪಟ್ಟಿಯ ಪ್ರಕಾರ, ಅಗರ್ತಲಾ, ಭೋಪಾಲ್, ಭುವನೇಶ್ವರ್, ಚಂಡೀಗಢ, ಗುವಾಹಟಿ, ಕೊಚ್ಚಿ ಮತ್ತು ಶ್ರೀನಗರದ ಬ್ಯಾಂಕ್‌ಗಳು ಗಣರಾಜ್ಯೋತ್ಸವದಂದು (ಜನವರಿ 26) ತೆರೆದಿರುತ್ತವೆ.


ಇದನ್ನೂ ಓದಿ : PM Kisan Samman Yojana: ಈ ತಪ್ಪುಗಳಿಂದಾಗಿ ಹಲವು ರೈತರಿಗೆ ಪಿಎಂ ಕಿಸಾನ್ 10ನೇ ಕಂತು ಕೈತಪ್ಪಬಹುದು!


RBI ರಜಾದಿನಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಿದೆ: ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್(Negotiable Instruments Act) ಅಡಿಯಲ್ಲಿ ರಜಾದಿನಗಳು, ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನಗಳು ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ಹಾಲಿಡೇ, ಮತ್ತು ಬ್ಯಾಂಕ್ಗಳ ಖಾತೆಗಳನ್ನು ಮುಚ್ಚುವುದು. RBI ಈ ಕೆಳಗಿನ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.


ಜನವರಿ 2022 ರಲ್ಲಿ ಬ್ಯಾಂಕ್ ರಜಾದಿನಗಳು


01 ಜನವರಿ 2022: ಹೊಸ ವರ್ಷದ ದಿನ


03 ಜನವರಿ 2022: ಹೊಸ ವರ್ಷದ ಆಚರಣೆ/ಲೋಸೂಂಗ್


04 ಜನವರಿ 2022: ಲೋಸೂಂಗ್


11 ಜನವರಿ 2022: ಮಿಷನರಿ ದಿನ


12 ಜನವರಿ 2022: ಸ್ವಾಮಿ ವಿವೇಕಾನಂದರ ಜನ್ಮದಿನ


14 ಜನವರಿ 2022: ಮಕರ ಸಂಕ್ರಾಂತಿ/ಪೊಂಗಲ್


15 ಜನವರಿ 2022: ಉತ್ತರಾಯಣ ಪುಣ್ಯಕಾಲ ಮಕರ ಸಂಕ್ರಾಂತಿ ಹಬ್ಬ/ಮಾಘೆ ಸಂಕ್ರಾಂತಿ/ಸಂಕ್ರಾಂತಿ/ಪೊಂಗಲ್/ತಿರುವಳ್ಳುವರ್ ದಿನ


18 ಜನವರಿ 2022: ಥಾಯ್ ಪೂಸಂ 


26 ಜನವರಿ 2022: ಗಣರಾಜ್ಯೋತ್ಸವ


ಜನವರಿ 1, 2022 ರಂದು ಐಜ್ವಾಲ್, ಚೆನ್ನೈ, ಗ್ಯಾಂಗ್ಟಾಕ್ ಮತ್ತು ಶಿಲ್ಲಾಂಗ್‌ನಲ್ಲಿ ಬ್ಯಾಂಕುಗಳು ಬಂದ್(Bank Holidays) ಇರುತ್ತವೆ. ಹೊಸ ವರ್ಷದ ಹಬ್ಬ ಅಥವಾ ಲೊಸೂಂಗ್ ಸಂದರ್ಭದಲ್ಲಿ, ಜನವರಿ 3, 2022 ರಂದು ಐಜ್ವಾಲ್ ಮತ್ತು ಗ್ಯಾಂಗ್‌ಟಾಕ್‌ನಲ್ಲಿನ ಬ್ಯಾಂಕ್‌ಗಳನ್ನು ಸೋಮವಾರ ಬಂದ್ ಇರುತ್ತವೆ. ಲೋಸೂಂಗ್ ಅನ್ನು ಗುರುತಿಸಲು ಗ್ಯಾಂಗ್‌ಟಾಕ್‌ನಲ್ಲಿನ ಬ್ಯಾಂಕ್‌ಗಳನ್ನು ಜನವರಿ 4, 2022 ರಂದು ಮುಚ್ಚಲಾಗುತ್ತದೆ. ಜನವರಿ 11, 2022 ರಂದು, ಐಜ್ವಾಲ್‌ನಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಸ್ವಾಮಿ ವಿವೇಕಾನಂದರ ಜನ್ಮದಿನದ ಸಂದರ್ಭದಲ್ಲಿ ಕೋಲ್ಕತ್ತಾದ ಬ್ಯಾಂಕ್‌ಗಳು ಜನವರಿ 12 ರಂದು ಬಂದ್ ಇರುತ್ತವೆ.


ಇದನ್ನೂ ಓದಿ : Post Office ಸೇವಿಂಗ್ಸ್ ಅಕೌಂಟ್ ಮತ್ತು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಲು ಇಲ್ಲಿದೆ ಸುಲಭ ವಿಧಾನ


ಜನವರಿ 2022 ರಲ್ಲಿ ವಾರಾಂತ್ಯದ ರಜಾದಿನಗಳು


02 ಜನವರಿ 2022: ವಾರಾಂತ್ಯದ ರಜೆ (ಭಾನುವಾರ)


08 ಜನವರಿ 2022: ಎರಡನೇ ಶನಿವಾರ


09 ಜನವರಿ 2022: ವಾರಾಂತ್ಯದ ರಜೆ (ಭಾನುವಾರ)


16 ಜನವರಿ 2022: ವಾರಾಂತ್ಯದ ರಜೆ (ಭಾನುವಾರ)


22 ಜನವರಿ 2022: ನಾಲ್ಕನೇ ಶನಿವಾರ 


23 ಜನವರಿ 2022: ವಾರಾಂತ್ಯದ ರಜೆ (ಭಾನುವಾರ)


30 ಜನವರಿ 2022: ವಾರಾಂತ್ಯದ ರಜೆ (ಭಾನುವಾರ)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.