Arecanut Price: ರಾಜ್ಯದಲ್ಲಿ ಮಾರುಕಟ್ಟೆಯಲ್ಲಿ ಮತ್ತೆ ಭರ್ಜರಿ ಏರಿಳಿತ ಕಂಡ ಅಡಿಕೆ ಧಾರಣೆ

ಕರ್ನಾಟಕ ರೈತರ ಪ್ರಮುಖ ಬೆಳೆಗಳಲ್ಲಿ ಒಂದಾಗಿರುವ ಅಡಿಕೆ(Arecanut) ಧಾರಣೆ ಇತ್ತೀಚಿನ ದಿನಗಳಲ್ಲಿ ಉತ್ತಮ ಸ್ಥಿತಿಯಲ್ಲಿದೆ.

Written by - Puttaraj K Alur | Last Updated : Dec 28, 2021, 04:18 PM IST
  • ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಳಿತ ಕಂಡಿದೆ
  • ಕರ್ನಾಟಕದ ಮಾರುಕಟ್ಟೆಯಲ್ಲಿ ರಾಶಿ ಅಡಿಕೆಗೆ ಬಂಪರ್ ಬೆಲೆ ಸಿಗುತ್ತಿದೆ
  • ಯಲ್ಲಾಪುರದಲ್ಲಿ ಅಡಿಕೆಯು 52,499 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ
Arecanut Price: ರಾಜ್ಯದಲ್ಲಿ ಮಾರುಕಟ್ಟೆಯಲ್ಲಿ ಮತ್ತೆ ಭರ್ಜರಿ ಏರಿಳಿತ ಕಂಡ ಅಡಿಕೆ ಧಾರಣೆ  title=
ಇತ್ತೀಚಿನ ರಾಶಿ ಅಡಿಕೆ ಬೆಲೆ ಎಷ್ಟಿದೆ ತಿಳಿಯಿರಿ (Photo Courtesy: @India.com)

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಏರಿಳಿತ ಕಂಡಿದೆ. ಕೆಲವು ಜಿಲ್ಲೆಗಳಲ್ಲಿ ಅಡಿಕೆ ಬೆಲೆ ಭರ್ಜರಿ ಏರಿಕೆ ಕಂಡಿದ್ದರೆ, ಇನ್ನು ಕೆಲವು ಜಿಲ್ಲೆಗಳಲ್ಲಿ ಕುಸಿತ ಕಂಡಿದೆ. ಅಡಿಕೆಗೆ ಬಂಪರ್ ಬೆಲೆ ಸಿಗುತ್ತಿದ್ದು, ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಕರ್ನಾಟಕ ರೈತರ ಪ್ರಮುಖ ಬೆಳೆಗಳಲ್ಲಿ ಒಂದಾಗಿರುವ ಅಡಿಕೆ(Arecanut) ಧಾರಣೆ ಇತ್ತೀಚಿನ ದಿನಗಳಲ್ಲಿ ಉತ್ತಮ ಸ್ಥಿತಿಯಲ್ಲಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ರಾಜ್ಯದ ವಿವಿಧ ಜಿಲ್ಲೆಗಳ ಮಾರುಕಟ್ಟೆಯಲ್ಲಿನ ಅಡಿಕೆ ಧಾರಣೆಯ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಅಡಿಕೆ ಧಾರಣೆ 52,499 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌(Market)ಗಳಲ್ಲಿ ಇತ್ತೀಚಿನ(27-12-2021)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಬಗ್ಗೆ ತಿಳಿದುಕೊಳ್ಳಿ.

ಇದನ್ನೂ ಓದಿ: ಕೈ-ಕಾಲುಗಳಿಲ್ಲದೇ ವಾಹನ ಓಡಿಸುವ ವ್ಯಕ್ತಿಗೆ ಆನಂದ್ ಮಹೀಂದ್ರಾ ಕೊಟ್ರು ಭರ್ಜರಿ ಆಫರ್.!

ತಾಲೂಕು     

ಅಡಿಕೆ  

ಗರಿಷ್ಠ ಬೆಲೆ (ಡಿಸೆಂಬರ್ 27, 2021)

ಕೊಪ್ಪ (ಚಿಕ್ಕಮಗಳೂರು ಜಿಲ್ಲೆ)                  

ರಾಶಿ ಅಡಿಕೆ  

41,319  ರೂ.   

ಚನ್ನಗಿರಿ   (ದಾವಣಗೆರೆ ಜಿಲ್ಲೆ)     

ರಾಶಿ ಅಡಿಕೆ 

47,939 ರೂ.   

ದಾವಣಗೆರೆ (ದಾವಣಗೆರೆ ಜಿಲ್ಲೆ)    

ರಾಶಿ ಅಡಿಕೆ 

47,600 ರೂ.   

ಹೊನ್ನಾಳಿ (ದಾವಣಗೆರೆ ಜಿಲ್ಲೆ)  

ರಾಶಿ ಅಡಿಕೆ 

47,899 ರೂ.   

ಸಿದ್ದಾಪುರ (ಉತ್ತರ ಕನ್ನಡ ಜಿಲ್ಲೆ)                          

ರಾಶಿ ಅಡಿಕೆ 

48,599 ರೂ.   

ಶಿರಸಿ  (ಉತ್ತರ ಕನ್ನಡ ಜಿಲ್ಲೆ)

ರಾಶಿ ಅಡಿಕೆ 

48,869 ರೂ.   

ಯಲ್ಲಾಪುರ (ಉತ್ತರ ಕನ್ನಡ ಜಿಲ್ಲೆ)                                          

ರಾಶಿ ಅಡಿಕೆ 

52,499 ರೂ.   

ಭದ್ರಾವತಿ (ಶಿವಮೊಗ್ಗ ಜಿಲ್ಲೆ)

ರಾಶಿ ಅಡಿಕೆ 

47,969 ರೂ.   

ಹೊಸನಗರ  (ಶಿವಮೊಗ್ಗ ಜಿಲ್ಲೆ)

ರಾಶಿ ಅಡಿಕೆ 

48,399 ರೂ.   

ಸಾಗರ     (ಶಿವಮೊಗ್ಗ ಜಿಲ್ಲೆ)

ರಾಶಿ ಅಡಿಕೆ 

48,199 ರೂ.   

ಶಿಕಾರಿಪುರ  (ಶಿವಮೊಗ್ಗ ಜಿಲ್ಲೆ)

ರಾಶಿ ಅಡಿಕೆ 

45,900 ರೂ.   

ಶಿವಮೊಗ್ಗ  (ಶಿವಮೊಗ್ಗ ಜಿಲ್ಲೆ)

ರಾಶಿ ಅಡಿಕೆ 

47,801 ರೂ.   

ತೀರ್ಥಹಳ್ಳಿ  (ಶಿವಮೊಗ್ಗ ಜಿಲ್ಲೆ)

ರಾಶಿ ಅಡಿಕೆ 

47,099 ರೂ.   

ತುಮಕೂರು (ತುಮಕೂರು ಜಿಲ್ಲೆ) ರಾಶಿ ಅಡಿಕೆ 46,800 ರೂ.  

ಇದನ್ನೂ ಓದಿ: ಷೇರುಪೇಟೆ ಹೂಡಿಕೆದಾರರ ಗಮನಕ್ಕೆ.. ಡಿಮ್ಯಾಟ್ ಖಾತೆ ಮೂರು ದಿನದೊಳಗೆ ನವೀಕರಿಸದಿದ್ದರೆ ನಿಷ್ಕ್ರಿಯಗೊಳ್ಳುವುದು ಖಚಿತ.!

ನಿಮ್ಮ Zee Hindustan Kannada ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Hindustan Kannada App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News