ಈ ಬ್ಯಾಂಕ್ ಗ್ರಾಹಕರಿಗೆ ನೀಡುತ್ತಿದೆ 2 ಲಕ್ಷ ರೂ. ಗಳ ಲಾಭ, ಬಳಸಿಕೊಳ್ಳುವುದು ಹೇಗೆ ತಿಳಿಯಿರಿ
PNB Rupay Jandhan Card ಸೌಲಭ್ಯವನ್ನು ಬ್ಯಾಂಕ್ ತನ್ನ ಗ್ರಾಹಕರಿಗೆ ನೀಡುತ್ತಿದೆ. ಈ ಕಾರ್ಡ್‌ನಲ್ಲಿ, ಬ್ಯಾಂಕ್ ಗ್ರಾಹಕರಿಗೆ 2 ಲಕ್ಷ ರೂ.ವರೆಗಿನ ವಿಮಾ ಸೌಲಭ್ಯವನ್ನು ಒದಗಿಸುತ್ತದೆ.
ನವದೆಹಲಿ : ನೀವು ಪಂಜಾಬ್ ನ್ಯಾಷನಲ್ (Punjab National Bank) ತನ್ನ ಗ್ರಾಹಕರಿಗೆ ಹಲವು ಸೌಲಭ್ಯಗಳನ್ನು ಒದಗಿಸುತ್ತಿದೆ. PNB ತನ್ನ ಗ್ರಾಹಕರಿಗೆ 2 ಲಕ್ಷದವರೆಗೆ ಉಚಿತ ವಿಮೆಯನ್ನು ನೀಡುತ್ತಿದೆ. ಆದರೆ, ಬ್ಯಾಂಕ್ ಈ ಸೌಲಭ್ಯವನ್ನು ಜನ್ ಧನ್ ಖಾತೆಗಳನ್ನು ಹೊಂದಿರುವ ಗ್ರಾಹಕರಿಗೆ ಮಾತ್ರ ನೀಡುತ್ತಿದೆ. ಇದರ ಹೊರತಾಗಿ, ಗ್ರಾಹಕರು ಬ್ಯಾಂಕಿನ ಇತರ ಅನೇಕ ಸೌಲಭ್ಯಗಳ ಲಾಭವನ್ನು ಪಡೆಯಬಹುದು.
ಉಚಿತವಾಗಿ ಸಿಗಲಿದೆ 2 ಲಕ್ಷ ರೂಪಾಯಿಗಳ ಲಾಭ :
PNB Rupay Jandhan Card ಸೌಲಭ್ಯವನ್ನು ಬ್ಯಾಂಕ್ ತನ್ನ ಗ್ರಾಹಕರಿಗೆ ನೀಡುತ್ತಿದೆ. ಈ ಕಾರ್ಡ್‌ನಲ್ಲಿ, ಬ್ಯಾಂಕ್ ಗ್ರಾಹಕರಿಗೆ 2 ಲಕ್ಷ ರೂ.ವರೆಗಿನ ವಿಮಾ ಸೌಲಭ್ಯವನ್ನು ಒದಗಿಸುತ್ತದೆ. Rupay Card ಮೂಲಕ ಖಾತೆಯಿಂದ ಹಣವನ್ನು ಹಿಂಪಡೆಯಬಹುದು ಮತ್ತು ಖರೀದಿಗಳನ್ನು ಸಹ ಮಾಡಬಹುದು.
ಆಧಾರ್ ಗೆ ಸಂಬಂಧಿಸಿದ ಈ ಕೆಲಸವನ್ನು ತಕ್ಷಣ ಮಾಡಿ ಮುಗಿಸಿ, ಇಲ್ಲವಾದರೆ ತೆರಬೇಕಾದೀತು ದಂಡ
330 ರೂ.ಗಳ ವಾರ್ಷಿಕ ಕಂತಿನಲ್ಲಿ 2 ಲಕ್ಷ ಲಾಭ :
ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಗೆ (PMJJBY) ಪ್ರತಿ ವರ್ಷ 330 ರೂಯನ್ನು ಪಾವತಿಸಬೇಕು. ಈ ಯೋಜನೆಯಡಿ, ಗ್ರಾಹಕರಿಗೆ ಜೀವ ರಕ್ಷಣೆ ವಿಮೆಯನ್ನು ನೀಡಲಾಗುತ್ತದೆ. ಇದರ ಅಡಿಯಲ್ಲಿ, ಡೆತ್ ಬೆನಿಫಿಟ್ ಕೂಡಾ ನೀಡಲಾಗುತ್ತದೆ. ಈ ಮೊತ್ತವನ್ನು ನಿಮ್ಮ ಬ್ಯಾಂಕ್ (Bank) ಖಾತೆಯಿಂದ ಇಸಿಎಸ್ ಮೂಲಕ ತೆಗೆದುಕೊಳ್ಳಲಾಗುತ್ತದೆ.
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ:
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ PMSBY ಅತ್ಯಂತ ಕಡಿಮೆ ಪ್ರೀಮಿಯಂನಲ್ಲಿ ಜೀವ ವಿಮೆಯನ್ನು ನೀಡುತ್ತದೆ. ಕೇಂದ್ರ ಸರ್ಕಾರದ ಯೋಜನೆಯಾಗಿರುವ ಪಿಎಮ್‌ಎಸ್‌ಬಿವೈ ಯಲ್ಲಿ ಖಾತೆದಾರರು ಕೇವಲ 12 ರೂ. ಪಾವತಿಸಿದರೆ 2 ಲಕ್ಷ ರೂ.ಗಳ ವಿಮಾ ರಕ್ಷಣೆಯನ್ನು ಪಡೆಯುತ್ತಾರೆ.
ಇದನ್ನೂ ಓದಿ :National Pension Scheme: ಪ್ರತಿದಿನ 50 ರೂ. ಹೂಡಿದರೆ ಸಿಗಲಿದೆ 34 ಲಕ್ಷ ರೂ. ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ