Modi Government Big Plan: ಹೋಮ್ ಇನ್ಸೂರೆನ್ಸ್ ಯೋಜನೆ ಜಾರಿಗೆ ತರಲು ಮುಂದಾದ ಮೋದಿ ಸರ್ಕಾರ, ಎನಿರಲಿದೆ ವಿಶೇಷತೆ

Home Insurance Scheme ನಲ್ಲಿ ಭೂಕಂಪ, ಪ್ರವಾಹದಿಂದ ಉಂಟಾಗಿರುವ ಹಾನಿಗೆ 3 ಲಕ್ಷ ರೂ. ವಿಮಾ ರಕ್ಷಣೆ ಸಿಗೆಲಿದೆ. ಇದಲ್ಲದೆ, ಮನೆಯಲ್ಲಿನ ಸಾಮಾನುಗಳಿಗಾಗಿ ಪ್ರತ್ಯೇಕ 3 ಲಕ್ಷ ರೂ. ಕವರೇಜ್ ಹಾಗೂ ಮನೆಯ ಇಬ್ಬರು ಸದಸ್ಯರಿಗೆ ತಲಾ 3-3 ಲಕ್ಷ ರೂ.ಗಳ ವೈಯಕ್ತಿಕ ಅಪಘಾತದ ಕವರೇಜ್ ಸಿಗಲಿದೆ.

Written by - Nitin Tabib | Last Updated : Jul 28, 2021, 06:38 PM IST
  • ಗೃಹ ವಿಮಾ ಯೋಜನೆ ಜಾರಿಗೆ ತರಲು ಮುಂದಾಗಿದೆ ಮೋದಿ ಸರ್ಕಾರ.
  • ಪ್ರವಾಹ, ಭೂಕಂಪಗಳಂತಹ ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ವಿಮಾ ರಕ್ಷಣೆ ನೀಡುವ ಉದ್ದೇಶ ಸರ್ಕಾರ ಹೊಂದಿದೆ.
  • ಸರ್ಕಾರ ಈ ಪಾಲಸಿಯ ಪ್ರೀಮಿಯಂ ವಾರ್ಷಿಕ ರೂ.500ಕ್ಕೆ ನಿಗದಿಪಡಿಸಲು ಬಯಸುತ್ತಿದೆ.
Modi Government Big Plan: ಹೋಮ್ ಇನ್ಸೂರೆನ್ಸ್  ಯೋಜನೆ ಜಾರಿಗೆ ತರಲು ಮುಂದಾದ ಮೋದಿ ಸರ್ಕಾರ, ಎನಿರಲಿದೆ ವಿಶೇಷತೆ title=
Modi Government Home Insurance Scheme (File Photo)

Modi Government Home Insurance Scheme - ಭೂಕಂಪ ಅಥವಾ ಪ್ರವಾಹದಂತಹ ನೈಸರ್ಗಿಕ ವಿಪತ್ತುಗಳ ಸಂದರ್ಭಗಳಲ್ಲಿ ಮನೆಗಳಿಗೆ ಆಗುವ ನಷ್ಟವನ್ನು ಸರಿದೂಗಿಸಲು ಯೋಜನೆಯೊಂದನ್ನು ಜಾರಿಗೆ ತರಲು ಮೋದಿ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY) ಮತ್ತು ಪ್ರಧಾನ್ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಮೂಲಕ ಕೋಟ್ಯಂತರ ಜನರ ಜೀವನಕ್ಕೆ ಭದ್ರತಾ ರಕ್ಷಣೆ ನೀಡಿದ ನಂತರ, ಇದೀಗ ಕೇಂದ್ರ ಸರ್ಕಾರವು ಮನೆಗಳಿಗೆ  ಭದ್ರತೆ ಒದಗಿಸುವ ಯೋಜನೆಯನ್ನು ಜಾರಿಗೆ ತರಲು ಚಿಂತನೆ ನಡೆಸುತ್ತಿದೆ. ಇದು ಮನೆಯ ನಷ್ಟ ಮತ್ತು ಸಾಮಾನು ಸರಂಜಾಮು ಮತ್ತು ವೈಯಕ್ತಿಕ ಅಪಘಾತ ಕವರೇಜ್  ಒಳಗೊಂಡಿರುತ್ತದೆ.

ಮೂಲಗಳಿಂದ ದೊರೆತ ಮಾಹಿತಿಗಳ ಪ್ರಕಾರ, ಪ್ರವಾಹ, ಭೂಕಂಪಗಳಂತಹ ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ಜನರ ಮನೆಗಳಿಗೆ ಆಗುವ ಹಾನಿಯನ್ನು ಸರಿದೂಗಿಸಲು ಕೇಂದ್ರ ಸರ್ಕಾರವು ಗೃಹ ವಿಮಾ ಯೋಜನೆಯ (Home Insurance Scheme) ಮೂಲಕ 3,00,000 ರೂ ಇನ್ಸೂರೆನ್ಸ್ ಕವರೇಜ್ ನೀಡಲಿದೆ. ಇದಲ್ಲದೆ ಮನೆಯ ವಸ್ತುಗಳಿಗೆ 3 ಲಕ್ಷ ರೂ.ಗಳ ರಕ್ಷಣೆ  ನೀಡಲಾಗುವುದು ಮತ್ತು ಪಾಲಿಸಿ ತೆಗೆದುಕೊಳ್ಳುವ ಕುಟುಂಬದ ಇಬ್ಬರು ಸದಸ್ಯರಿಗೆ ಪ್ರತ್ಯೇಕ 3 ಲಕ್ಷ ರೂ.ಗಳ ವೈಯಕ್ತಿಕ ಅಪಘಾತ ಕವರೇಜ್ ನೀಡಲಾಗುವುದು ಎನ್ನಲಾಗಿದೆ. 

500 ರೂ.ಪ್ರಿಮಿಯಂ ಇರುವ ಸಾಧ್ಯತೆ
ಕೇಂದ್ರ ಸರ್ಕಾರದ ಈ ಯೋಜನೆ ಜನರಲ್ ಇನ್ಸೂರೆನ್ಸ್ ಕಂಪನಿಗಳ ಮೂಲಕ ಜಾರಿಗೆ ಬರಲಿದ್ದು, ಇದರ ಪ್ರಿಮಿಯಂ ಜನರ ಬ್ಯಾಂಕ್ ಖಾತೆಗೆ ಲಿಂಕ್ ಆಗಿರಲಿದೆ. ಜನರಲ್ ಇನ್ಸೂರೆನ್ಸ್ ಕಂಪನಿಗಳ ವತಿಯಿಂದ ಪ್ರತಿ ಪಾಲಸಿಯ ಕೊಟೇಶನ್ 1000 ರೂ.ಗಿಂತ ಹೆಚ್ಚು ಎಂದು ನೀಡಲಾಗಿದೆ. ಆದರೆ, ಸರ್ಕಾರ ಈ ಪಾಲಸಿಯ ಪ್ರೀಮಿಯಂ ವಾರ್ಷಿಕ ರೂ.500ಕ್ಕೆ  ನಿಗದಿಪಡಿಸಲು ಬಯಸುತ್ತಿದೆ. ಭಾರಿ ಮಳೆ ಹಾಗೂ ಇತರೆ ನೈಸರ್ಗಿಕ ವಿಪತ್ತುಗಳಿಂದಾಗುವ ಹಾನಿಯಿಂದ ಜನರಿಗೆ ಸುರಕ್ಷಾ ಕವಚ ಒದಗಿಸುವ ಉದ್ದೇಶ ಕೇಂದ್ರದ ನರೇಂದ್ರ ಮೋದಿ ನೇತೃತ್ವದ (Modi Government Big Decision) ಸರ್ಕಾರದ್ದಾಗಿದ್ದು, ಸರ್ಕಾರ ದೊಡ್ಡ ಮಟ್ಟದಲ್ಲಿ ಈ ಯೋಜನೆಯ ಮೇಲೆ ಕಾರ್ಯನಿರ್ವಹಿಸುತ್ತಿದೆ.

ಇದನ್ನೂ ಓದಿ-7th Pay Commission: ಸರ್ಕಾರಿ ನೌಕರರಿಗೆ ಮೋದಿ ಸರ್ಕಾರದಿಂದ ಮತ್ತೊಂದು ಉಡುಗೊರೆ, LTC Claim ಕುರಿತು ಮಹತ್ವದ ನಿರ್ಧಾರ

PMJJBY, PMSBY ನಲ್ಲಿ 4 ಲಕ್ಷ ರೂ.ವರೆಗೆ ಕವರೇಜ್ ಸಿಗುತ್ತದೆ
ಈಗಾಗಲೇ ಮೋದಿ ಸರ್ಕಾರದ ವತಿಯಿಂದ ಎರಡು ಸಾಮಾಜಿಕ ಭದ್ರತಾ ಯೋಜನೆಗಳನ್ನು ನಡೆಸಲಾಗುತ್ತಿದೆ. ಇವುಗಳಲ್ಲಿ ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY) ಕೂಡ ಒಂದಾಗಿದೆ. ಇದು 2015 ರಲ್ಲಿ ಆರಂಭಗೊಂಡಿದೆ. ಈ ಯೋಜನೆಯಲ್ಲಿ 55 ವರ್ಷ ವಯಸ್ಸಿನವರೆಗೆ ಲೈಫ್ ಕವರ್ ಲಭ್ಯವಿದೆ. ಯಾವುದೇ ಕಾರಣದಿಂದ ವಿಮಾದಾರನ ಸಾವು ಸಂಭವಿಸಿದ ಸಂದರ್ಭದಲ್ಲಿ, ನಾಮಿನಿಗೆ 2 ಲಕ್ಷ ರೂ.  ವಿಮಾ ರಕ್ಷಣೆ ಸಿಗುತ್ತದೆ. ಈ ಯೋಜನೆಯ ವಾರ್ಷಿಕ ಪ್ರೀಮಿಯಂ 330 ರೂ. ಆಗಿದ್ದು,  18 ರಿಂದ 50 ವರ್ಷ ವಯಸ್ಸಿನವರೆಗೆ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ-PSU Insurance Companies Privatization: ಇನ್ಮುಂದೆ ಸರ್ಕಾರಿ ವಿಮಾ ಕಂಪನಿಗಳೂ ಕೂಡ ಖಾಸಗಿಯಾಗಲಿವೆ! ನಿಯಮ ಬದಲಾವಣೆಗೆ ಕೇಂದ್ರ ಸರ್ಕಾರದ ಸಿದ್ಧತೆ

ಪ್ರಧಾನ್ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಸರ್ಕಾರ ನಡೆಸುತ್ತಿರುವ ಎರಡನೇ ಯೋಜನೆಯಾಗಿದ್ದು, ಇದನ್ನೂ ಕೂಡ 2015 ರಲ್ಲಿ ಪ್ರಾರಂಭಿಸಲಾಗಿದೆ. ಈ ಯೋಜನೆಯಡಿಯಲ್ಲಿ, ವಿಮೆದಾರರಿಗೆ ಆಕಸ್ಮಿಕ ಸಾವು ಅಥವಾ ಒಟ್ಟು ಅಂಗವೈಕಲ್ಯದ ಸಂದರ್ಭದಲ್ಲಿ 2 ಲಕ್ಷ ರೂ. ವಿಮಾ ರಕ್ಷಣೆ ಸಿಗುತ್ತದೆ. ಇದಲ್ಲದೆ ಶಾಶ್ವತ ಭಾಗಶಃ ಅಂಗವೈಕಲ್ಯದ ಸಂದರ್ಭದಲ್ಲಿ, 1 ಲಕ್ಷ ರೂ. ವಿಮಾ ರಕ್ಷಣೆ ಸಿಗುತ್ತದೆ. 18 ರಿಂದ 70 ವರ್ಷದೊಳಗಿನ ಭಾರತೀಯರು ಈ ಯೋಜನೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

ಇದನ್ನೂ ಓದಿ-Grand Water Saving Challenge: ಕೇಂದ್ರ ಸರ್ಕಾರದ ಈ Digital India Challange ಗೆದ್ದು, 5 ಲಕ್ಷ ರೂ. ನಿಮ್ಮದಾಗಿಸಿಕೊಳ್ಳಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News