Bank Locker Rules Change: ಬ್ಯಾಂಕ್ ಲಾಕರ್‌ಗಳಿಗೆ ಸಂಬಂಧಿಸಿದಂತೆ ಹೊಸ ವರ್ಷದ ಮೊದಲ ದಿನದಿಂದಲೇ ಹೊಸ ನಿಯಮಗಳು ಜಾರಿಗೆ ಬರುತ್ತಿವೆ. ನೀವು ಸಹ ನಿಮ್ಮ ಚಿನ್ನಾಭರಣಗಳನ್ನೂ ಬ್ಯಾಂಕ್ ಲಾಕರ್‌ನಲ್ಲಿ ಇದ್ರಿಸಿದ್ದರೆ ಅಥವಾ ಇರಿಸಲು ಯೋಜಿಸುತ್ತಿದ್ದರೆ, ಈ ಪ್ರಮುಖ ಸುದ್ದಿ ನಿಮಗಾಗಿ. ಆರ್.ಬಿ.ಐ ನಿಯಮಗಳ ಪ್ರಕಾರ, ಜನವರಿ 1, 2023 ರಿಂದ, ಬ್ಯಾಂಕ್ ಲಾಕರ್‌ಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆಯಾಗಲಿದೆ, ಇದು ಗ್ರಾಹಕರ ಮೇಲೆ ನೇರ ಪರಿಣಾಮ ಬೀರುತ್ತದೆ. ಈ ನಿಯಮದಿಂದ ಬ್ಯಾಂಕ್ ಗ್ರಾಹಕರಿಗೆ ಹೆಚ್ಚಿನ ಲಾಭ ಸಿಗಲಿದೆ.


COMMERCIAL BREAK
SCROLL TO CONTINUE READING

ಜನವರಿ 1 ರಿಂದ ಲಾಕರ್ ನಿಯಮಗಳು ಬದಲಾಗಲಿವೆ
ಈ ನಿಯಮದ ಪ್ರಕಾರ, ಲಾಕರ್‌ನಲ್ಲಿ ಇರಿಸಲಾದ ವಸ್ತುಗಳಿಗೆ ಯಾವುದೇ ಹಾನಿಯಾಗಿದ್ದರೆ, ಅದಕ್ಕೆ ಸಂಬಂಧಪಟ್ಟ ಬ್ಯಾಂಕ್ ಪರಿಹಾರವನ್ನು ಒದಗಿಸಬೇಕಾಗಲಿದೆ. ಅಷ್ಟೇ ಅಲ್ಲ ಗ್ರಾಹಕರು ಡಿಸೆಂಬರ್ 31ರವರೆಗೆ ಈ ಕುರಿತಾದ ಒಪ್ಪಂದಕ್ಕೆ ಸಹಿ ಹಾಕಬೇಕಿದ್ದು, ಅದರಲ್ಲಿ ಲಾಕರ್ ಬಗ್ಗೆ ಎಲ್ಲ ಮಾಹಿತಿ ನೀಡಲಾಗುವುದು. ಇದರೊಂದಿಗೆ, ಬ್ಯಾಂಕ್ ಗ್ರಾಹಕರಿಗೆ ಲಾಕರ್ ನಲ್ಲಿರುವ ತಮ್ಮ ವಸ್ತುಗಳ ಬಗ್ಗೆ ನಿರಂತರ ಅಪ್ಡೇಟ್ ಸಿಗಲಿದೆ.


ಲಾಕರ್ ಒಪ್ಪಂದದ ಅಗತ್ಯವೇನು?
ಹೊಸ ವರ್ಷದ ಮೊದಲ ದಿನ ಅಂದರೆ ಜನವರಿ 1, 2023 ರ ಮೊದಲು, ಲಾಕರ್ ಮಾಲೀಕರು ಈ ಕುರಿತಾದ ಒಪ್ಪಂದವನ್ನು ಮಾಡಿಕೊಳ್ಳಬೇಕು ಮತ್ತು ಇದಕ್ಕಾಗಿ ಅವರು ಅರ್ಹರಾಗಿರುವುದು ಅವಶ್ಯಕ. ಲಾಕರ್ ಅಗ್ರಿಮೆಂಟ್ ಮಾಡಿಕೊಳ್ಳುವಂತೆ ಬ್ಯಾಂಕ್ ಗಳಿಂದ ಗ್ರಾಹಕರಿಗೆ ಸಂದೇಶಗಳೂ ರವಾನೆಯಾಗುತ್ತಿವೆ. ಪಂಜಾಬ್ ನ್ಯಾಷನಲ್ ಬ್ಯಾಂಕ್  ತನ್ನ ಗ್ರಾಹಕರಿಗೆ ಈಗಾಗಲೇ ಅಲರ್ಟ್ ಕಳುಹಿಸುತ್ತಿದೆ, ಇದರಲ್ಲಿ 'ಆರ್.ಬಿ.ಐ ಮಾರ್ಗಸೂಚಿಗಳ ಪ್ರಕಾರ, ಹೊಸ ಲಾಕರ್ ಒಪ್ಪಂದವನ್ನು 31 ಡಿಸೆಂಬರ್ 2022 ರ ಮೊದಲು ಕಾರ್ಯಗತಗೊಳಿಸಬೇಕು' ಎಂದು ಸೂಚಿಸಲಾಗಿದೆ.


ಇದನ್ನೂ ಓದಿ-Investment: ಸರ್ಕಾರದ ಈ ಯೋಜನೆಯಲ್ಲಿ ಇಂದೇ ಹೂಡಿಕೆ ಮಾಡಿ ನಿವೃತ್ತಿಯ ಬಳಿಕ 2.25 ಕೋಟಿ ಸಂಪಾದಿಸಿ


ಯಾವ ಸಂದರ್ಭಗಳಲ್ಲಿ, ಬ್ಯಾಂಕ್ ಪರಿಹಾರವನ್ನು ನೀಡುತ್ತದೆ
ಆರ್‌ಬಿಐನ ಹೊಸ ನಿಯಮಗಳ ಪ್ರಕಾರ, ಇನ್ಮುಂದೆ ಗ್ರಾಹಕರಿಗೆ ದೊಡ್ಡ ಲಾಭ ಸಿಗಲಿದೆ. ವಾಸ್ತವದಲ್ಲಿ  ಬ್ಯಾಂಕಿನ ನಿರ್ಲಕ್ಷ್ಯದಿಂದ ಲಾಕರ್‌ನಲ್ಲಿ ಇಟ್ಟಿರುವ ಸರಕುಗಳಿಗೆ  ಹಾನಿಯಾಗಿದ್ದರೆ ಸಂಬಂಧಪಟ್ಟ  ಬ್ಯಾಂಕ್‌ ಹಣ ಪಾವತಿಸಬೇಕಾಗುತ್ತದೆ. ಅಂದರೆ ಈಗ ಹೊಸ ನಿಯಮದ ಪ್ರಕಾರ ಬ್ಯಾಂಕಿನ ಜವಾಬ್ದಾರಿ ಹೆಚ್ಚಾಗಿದೆ. ಅಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಿಗಳಿಂದ ವಂಚನೆಯಿಂದ ಆಗುವ ನಷ್ಟವನ್ನೂ ಬ್ಯಾಂಕ್ ಭರಿಸಬೇಕಾಗಲಿದೆ. ಇದರ ಅಡಿಯಲ್ಲಿ, ಬ್ಯಾಂಕಿನ ಹೊಣೆಗಾರಿಕೆಯು ಲಾಕರ್‌ನ ವಾರ್ಷಿಕ ಬಾಡಿಗೆಯ 100 ಪಟ್ಟು ಹೆಚ್ಚಾಗಲಿದೆ.


ಇದನ್ನೂ ಓದಿ-PM Kisan 13ನೇ ಕಂತಿಗೂ ಮುನ್ನವೇ ರೈತ ಬಾಂಧವರಿಗೊಂದು ಭಾರಿ ಸಂತಸದ ಸುದ್ದಿ


ಪರಿಹಾರ ಯಾವಾಗ ಸಿಗುವುದಿಲ್ಲ
ಈಗ ಯಾವ ಸಂದರ್ಭದಲ್ಲಿ ಗ್ರಾಹಕರಿಗೆ ಪರಿಹಾರ ಸಿಗುವುದಿಲ್ಲ ಎಂಬುದರ ಕುರಿತು ಚರ್ಚಿಸೋಣ. ಹೊಸ ನಿಯಮದ ಪ್ರಕಾರ, ಮಿಂಚು, ಭೂಕಂಪ, ಪ್ರವಾಹ, ಚಂಡಮಾರುತ ಮುಂತಾದ ಪ್ರಕೃತಿ ವಿಕೋಪಗಳಿಂದ ಅಥವಾ ಗ್ರಾಹಕರ ನಿರ್ಲಕ್ಷ ಅಥವಾ ಗ್ರಾಹಕರ ತಪ್ಪಿನಿಂದ  ಲಾಕರ್‌ನಲ್ಲಿ ಇಟ್ಟಿರುವ  ವಸ್ತುಗಳಿಗೆ  ಹಾನಿಯಾದರೆ ಅದಕ್ಕೆ ಬ್ಯಾಂಕ್ ಹೊಣೆಯಾಗುವುದಿಲ್ಲ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.