ನವದೆಹಲಿ: Big Banking Update - ನೀವು ಆಕ್ಸಿಸ್ ಬ್ಯಾಂಕ್ ಗ್ರಾಹಕರಾಗಿದ್ದರೆ ನಿಮಗಾಗಿ ಒಂದು ಪ್ರಮುಖ ಸುದ್ದಿ ಪ್ರಕಟವಾಗಿದೆ. ನೀವು ಆಕ್ಸಿಸ್ ಬ್ಯಾಂಕ್ ಚೆಕ್ ಬುಕ್ ಬಳಸುತ್ತಿದ್ದರೆ, ನೀವು ಈ ಸುದ್ದಿಯನ್ನು ಓದಲೇಬೇಕು. ಸೆಪ್ಟೆಂಬರ್ 1, 2021 ರಿಂದ ಜಾರಿಗೆ ಬರುವಂತೆ, ಆಕ್ಸಿಸ್ ಬ್ಯಾಂಕ್‌ನಲ್ಲಿ ಚೆಕ್ ಕ್ಲಿಯರಿಂಗ್ ವ್ಯವಸ್ಥೆಯು ಬದಲಾಗುತ್ತಿದೆ. ಈ ಬಗ್ಗೆ ಆಕ್ಸಿಸ್ ಬ್ಯಾಂಕ್ ತನ್ನ ಗ್ರಾಹಕರಿಗೆ SMS ಮೂಲಕ ಮಾಹಿತಿ ನೀಡಿದೆ. ಸೆಪ್ಟೆಂಬರ್ 1 ರಿಂದ ಚೆಕ್ ಅನ್ನು ಕ್ಲಿಯರ್ ಮಾಡುವ ಒಂದು ವರ್ಕಿಂಗ್ ಡೇ ಮೊದಲು ಪಾಸಿಟಿವ್ ಪೇ ವಿವರಗಳನ್ನು ನೀಡಬೇಕಾಗಲಿದೆ. ಹಾಗೆ ಮಾಡದಿದ್ದರೆ ನಿಮ್ಮ ಚೆಕ್ ಅನ್ನು ಹಿಂದಿರುಗಿಸಲಾಗುವುದು.


COMMERCIAL BREAK
SCROLL TO CONTINUE READING

ಆಟೋಮೆಟೆಡ್ ಫ್ರಾಡ್ ಡಿಟೆಕ್ಶನ್ ಟೂಲ್ 
ಜನವರಿ 1, 2021ರಿಂದ ದೇಶಾದ್ಯಂತ ಹೊಸ ಪಾಸಿಟಿವ್ ಪೇ ಸಿಸ್ಟಂ (Positive Pay System) ಜಾರಿಗೆ ಬರಲಿದೆ. ಪಾಸಿಟಿವ್ ಪೆ ಸಿಸ್ಟಂ ಒಂದು ಆಟೋಮೇಟೆಡ್ ಫ್ರಾಡ್ ಡಿಟೆಕ್ಶನ್ ಟೂಲ್ ಆಗಿದೆ. ಚೆಕ್‌ಗಳ ದುರುಪಯೋಗದ ಮೇಲೆ ಕಡಿವಾಣ ಹಾಗುವುದು ಈ ನಿಯಮದ ಹಿಂದಿನ ಉದ್ದೇಶವಾಗಿದೆ ಎಂದು ಆರ್‌ಬಿಐ ಹೇಳಿದೆ. ಈ ಹಿನ್ನೆಲೆ ಬ್ಯಾಂಕ್ ತನ್ನ ಗ್ರಾಹಕರಿಗೆ SMS ಕಳುಹಿಸಿದೆ. ಗ್ರಾಹಕರಿಗೆ ಕಳುಹಿಸಿದ SMS ನಲ್ಲಿ, ಆಕ್ಸಿಸ್ ಬ್ಯಾಂಕ್, "ಚೆಕ್ ಕ್ಲಿಯರಿಂಗ್ ದಿನಾಂಕದಿಂದ ಒಂದು ಕೆಲಸದ ದಿನದ ಮೊದಲು ಪಾಸಿಟಿವ್ ಪೇ ವಿವರಗಳನ್ನು ನೀಡದಿದ್ದರೆ, ಸೆಪ್ಟೆಂಬರ್ 1, 2021 ರಿಂದ ರೂ. 5 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಚೆಕ್‌ಗಳನ್ನು ಹಿಂತಿರುಗಿಸಲಾಗುತ್ತದೆ" ಎಂದು ಹೇಳಿದೆ.


ಇದನ್ನೂ ಓದಿ-Pensionಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಪ್ರಕಟ, PFRDA ತರುತ್ತಿದೆ ಈ ಜಬರ್ದಸ್ತ್ ಸ್ಕೀಮ್


ಪಾಸಿಟಿವ್ ಪೆ ಸಿಸ್ಟಂ ಅಂದರೇನು?
ಚೆಕ್ ಮೊಟಕುಗೊಳಿಸುವಿಕೆ ವ್ಯವಸ್ಥೆಯ ಅಡಿಯಲ್ಲಿ ಚೆಕ್‌ಗಳನ್ನು ತೆರವುಗೊಳಿಸುವಲ್ಲಿ ವಂಚನೆಯ ವಿರುದ್ಧ ರಕ್ಷಣೆ ನೀಡುವ ಇದೊಂದು ಧನಾತ್ಮಕ ವೇತನ ವ್ಯವಸ್ಥೆಯಾಗಿದೆ. ಮೊಟಕುಗೊಳಿಸುವಿಕೆ ವ್ಯವಸ್ಥೆಯನ್ನು ಪರಿಶೀಲಿಸಿ ಚೆಕ್‌ಗಳನ್ನು ತೆರವುಗೊಳಿಸುವ ಪ್ರಕ್ರಿಯೆ ನಡೆಸಲಾಗುವದು. ಇದು ಚೆಕ್‌ಗಳ ಸಂಗ್ರಹ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಬ್ಯಾಂಕುಗಳಿಗೆ ಚೆಕ್ ಟ್ರಂಕೇಶನ್ ಸಿಸ್ಟಮ್ (CTS) ನಲ್ಲಿ ಧನಾತ್ಮಕ ವೇತನ ಸೌಲಭ್ಯವನ್ನು ಒದಗಿಸುತ್ತಿದೆ. ಈ ವ್ಯವಸ್ಥೆಯು 50 ಸಾವಿರ ಅಥವಾ ಹೆಚ್ಚಿನ ಮೊತ್ತದ ಚೆಕ್ ಮೂಲಕ ಪಾವತಿಗೆ ಅನ್ವಯವಾಗುತ್ತದೆ.


ಇದನ್ನೂ ಓದಿ-Today Gold Rate : ಭಾರಿ ಇಳಿಕೆ ಕಂಡ ಚಿನ್ನದ ಬೆಲೆ : ಇಂದು 9,000 ರೂ. ಅಗ್ಗವಾದ ಹಳದಿ ಲೋಹ!


ಇದು ಹೇಗೆ ಕಾರ್ಯನಿರ್ವಹಿಸುತ್ತದೆ?
ಈ ಸಿಸ್ಟಂ ಮೂಲಕ ಚೆಕ್ ಮಾಹಿತಿಯನ್ನು SMS, ಮೊಬೈಲ್ ಆಪ್, ಇಂಟರ್ನೆಟ್ ಬ್ಯಾಂಕಿಂಗ್ ಹಾಗೂ ATM ಮಾಧ್ಯಮದ ಮೂಲಕ ನೀಡಲಾಗುವುದು. ಚೆಕ್ ಪೇಮೆಂಟ್ ಮಾಡುವ ಮೊದಲು ಈ ಮಾಹಿತಿಯನ್ನು ಮರುಪರಿಶೀಲಿಸಲಾಗುವುದು. ಒಂದು ವೇಳೆ ಇದರಲ್ಲಿ ಯಾವುದೇ ವಂಚನೆ ಕಂಡುಬಂದಲ್ಲಿ ಬ್ಯಾಂಕ್ ಆ ಚೆಕ್ ಅನ್ನು ತಿರಸ್ಕರಿಸಲಿದೆ. ಇದರಲ್ಲಿ ಒಂದು ವೇಳೆ ಎರಡು ವಿವಿಧ ಬ್ಯಾಂಕ್ ಗಳು ಒಳಗೊಂಡಿದ್ದರೆ, ಯಾವ ಬ್ಯಾಂಕ್ ನ ಚೆಕ್ಕು ನೀಡಲಾಗಿದೆಯೋ ಮತ್ತು ಯಾವ ಬ್ಯಾಂಕ್ ಗೆ ಚೆಕ್ ಸಂದಾಯ ಮಾಡಲಾಗಿದೆಯೋ, ಆ ಎರಡೂ ಬ್ಯಾಂಕ್ ಗಳಿಗೆ ಮಾಹಿತಿ ಒದಗಿಸಬೇಕು.


ಇದನ್ನೂ ಓದಿ-Bank Alert! ಇಂದಿನಿಂದ 18 ಗಂಟೆಗಳ ಕಾಲ ಸ್ಥಗಿತಗೊಳ್ಳಲಿವೆ ಈ ಸೇವೆ, ಡೀಟೇಲ್ಸ್ ಇಲ್ಲಿದೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.