Bank Alert! ಇಂದಿನಿಂದ 18 ಗಂಟೆಗಳ ಕಾಲ ಸ್ಥಗಿತಗೊಳ್ಳಲಿವೆ ಈ ಸೇವೆ, ಡೀಟೇಲ್ಸ್ ಇಲ್ಲಿದೆ

Bank Alert! ನೀವು HDFC ಬ್ಯಾಂಕ್ ಗ್ರಾಹಕರಾಗಿದ್ದರೆ, ಈ ಸುದ್ದಿ ಖಂಡಿತವಾಗಿ ಓದಿ. HDFC BANKನ ಕೆಲವು ಆನ್‌ಲೈನ್ ಸೇವೆಗಳನ್ನು ಶನಿವಾರದಿಂದ ಭಾನುವಾರದವರೆಗೆ 18 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗುತ್ತಿದೆ ಈ ಮಾಹಿತಿಯನ್ನು ಬ್ಯಾಂಕ್ ತನ್ನ ಗ್ರಾಹಕರಿಗೆ ಇ-ಮೇಲ್ ಮೂಲಕ ತಿಳಿಸಿದೆ. 

Written by - Nitin Tabib | Last Updated : Aug 21, 2021, 01:07 PM IST
  • HDFC ಗ್ರಾಹಕರು ತಪ್ಪದೆ ಓದಲೇ ಬೇಕಾದ ಸುದ್ದಿ ಇದು.
  • ಇಂದಿನಿಂದ 18 ಗಂಟೆಗಳ ಕಾಲ ಬ್ಯಾಂಕ್ ನ ಈ ಸೇವೆಗಳು ಬಂದ್ ಇರಲಿವೆ.
  • ಹೆಚ್ಚಿನ ವಿವರಕ್ಕಾಗಿ ಸುದ್ದಿ ಓದಿ.
Bank Alert! ಇಂದಿನಿಂದ 18 ಗಂಟೆಗಳ ಕಾಲ ಸ್ಥಗಿತಗೊಳ್ಳಲಿವೆ ಈ ಸೇವೆ, ಡೀಟೇಲ್ಸ್ ಇಲ್ಲಿದೆ title=
Banking Alert(File Photo)

ನವದೆಹಲಿ: HDFC Banking Servide - ನೀವು HDFC BANKನ ಗ್ರಾಹಕರಾಗಿದ್ದರೆ, ಇಲ್ಲಿದೆ ನಿಮ್ಮ ಪಾಲಿಗೊಂದು ಮಹತ್ವದ ಸುದ್ದಿ. ಹೌದು, ಎಚ್‌ಡಿಎಫ್‌ಸಿ ಬ್ಯಾಂಕ್‌ನ ಗ್ರಾಹಕರು ವಾರಾಂತ್ಯದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಬ್ಯಾಂಕ್ ತನ್ನ ಕೆಲವು ಸೇವೆಗಳನ್ನು ಶನಿವಾರದಿಂದ ಭಾನುವಾರದವರೆಗೆ 18 ಗಂಟೆಗಳ ಕಾಲ ಸ್ಥಗಿತಗೊಳಿಸಲಿದೆ ಎಂದು ತಿಳಿಸಿದೆ. ಈ ಮಾಹಿತಿಯನ್ನು ಬ್ಯಾಂಕ್ ತನ್ನ ಗ್ರಾಹಕರಿಗೆ ಇ-ಮೇಲ್ ಮೂಲಕ ತಿಳಿಸಿದೆ. ಬ್ಯಾಂಕ್ ಪ್ರಕಾರ, ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯಗಳನ್ನು ಮತ್ತಷ್ಟು ಸುಧಾರಿಸಲು, ಬ್ಯಾಕೆಂಡ್ ನಿರ್ವಹಣೆ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ.

ಎಷ್ಟು ಗಂಟೆ ಸೇವೆಗಳು ಬಂದ್ ಇರಲಿವೆ?
ಈ ಕುರಿತು ಮಾಹಿತಿ ನೀಡಿರುವ  ಎಚ್‌ಡಿಎಫ್‌ಸಿ ಬ್ಯಾಂಕ್ ನ ಈ ನಿರ್ವಹಣಾ ಕೆಲಸ  ಬ್ಯಾಂಕಿಂಗ್ ಸೇವೆಗಳ (Banking Service) ಮೇಲೆ 21 ಆಗಸ್ಟ್ 2021 ರ ರಾತ್ರಿ 9 ಗಂಟೆಯಿಂದ 22 ಆಗಸ್ಟ್ 2021 ರ ಮಧ್ಯಾಹ್ನ 3 ಗಂಟೆಯವರೆಗೆ ಪರಿಣಾಮ ಬೀರಲಿದೆ ಎಂದು ಹೇಳಿದೆ. ಇದರಿಂದ ಗ್ರಾಹಕರಿಗೆ ಉಂಟಾಗುವ ಅನಾನುಕೂಲತೆಗಾಗಿ ಬ್ಯಾಂಕ್ ಕ್ಷಮೆಯಾಚಿಸಿದೆ. ಇದಲ್ಲದೆ ಈ ಕೆಲಸದಲ್ಲಿ ಗ್ರಾಹಕರು ಸಹಕರಿಸುವ ನಿರೀಕ್ಷೆ ಇದೆ ಎಂದು ಬ್ಯಾಂಕ್ ಹೇಳಿದೆ.

ಇದನ್ನೂ ಓದಿ-Today Gold-Silver Price : ಚಿನ್ನಾಭರಣ ಪ್ರಿಯರೆ ಗಮನಿಸಿ : ಚಿನ್ನದ ಬೆಲೆಯಲ್ಲಿ ₹270 ಏರಿಕೆ ಮತ್ತೆ ಬೆಳ್ಳಿ ₹300 ಇಳಿಕೆ!

ಯಾವ ಯಾವ ಸೇವೆಗಳು ಸ್ಥಗಿತಗೊಳ್ಳಲಿವೆ
ಮೆಂಟೆನೆನ್ಸ್ ಅವಧಿಯಲ್ಲಿ  ನೆಟ್ ಬ್ಯಾಂಕಿಂಗ್ (HDFC Net And Mobile Banking) ಮತ್ತು ಮೊಬೈಲ್ ಬ್ಯಾಂಕಿಂಗ್ ಮೇಲಿನ ಸಾಲಗಳಿಗೆ ಸಂಬಂಧಿಸಿದ ಸೇವೆಗಳು ಸ್ಥಗಿತಗೊಳ್ಳಲಿವೆ. ಆದ್ದರಿಂದ, ಈ ನಿಟ್ಟಿನಲ್ಲಿ ನೀವು ಯಾವುದೇ ಪ್ರಮುಖ ಕೆಲಸಗಳನ್ನು ಹೊಂದಿದ್ದರೆ, ಇಂದು ಸಂಜೆ 6 ಗಂಟೆಯ ಮೊದಲು ಅದನ್ನು ಪೂರ್ಣಗೊಳಿಸಿ. ಇಲ್ಲದಿದ್ದರೆ ನೀವು ಸೋಮವಾರದವರೆಗೆ ಕಾಯಬೇಕಾಗಬಹುದು.

ಇದನ್ನೂ ಓದಿ-Today Petrol-Diesel prices : ಇಲ್ಲಿದೆ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ : ನಿಮ್ಮ ನಗರದಲ್ಲಿ ಎಷ್ಟಿದೆ ನೋಡಿ ಬೆಲೆ?

ಬ್ಯಾಂಕ್ ತನ್ನ ಹೇಳಿಕೆಯಲ್ಲಿ ಹೇಳಿದ್ದೇನು?
ಈ ಕುರಿತು ತನ್ನ ಮೇಲ್ ನಲ್ಲಿ ಬರೆದುಕೊಂಡಿರುವ HDFC ಬ್ಯಾಂಕ್ ಪ್ರಿಯ ಗ್ರಾಹಕರಿಗೆ HDFC ಬ್ಯಾಂಕ್ ಜೊತೆಗಿನ ನಿಮ್ಮ ಸಂಬಂಧಕ್ಕಾಗಿ ಧನ್ಯವಾದಗಳು. ನೀವು ಹಾಗೂ ನಿಮ್ಮ ಆಪ್ತ ಬಂಧು-ಮಿತ್ರರು ಸುರಕ್ಷಿತವಾಗಿರುವಿರಿ ಎಂದು ನಾವು ಆಶಿಸುತ್ತೇವೆ. ನಿಮಗೆ ಯಾವುದೇ ಅಡೆತಡೆ ಇಲ್ಲದೆ, ಅತ್ಯುತ್ತಮ ಡಿಜಿಟಲ್ ಬ್ಯಾಂಕಿಂಗ್ ಅನುಭವ ನೀಡಲು ನಾವು ನಿರಂತರವಾಗಿ ಪ್ರಯತ್ನಿಸುತ್ತಿದ್ದು, ಪ್ರಸ್ತುತ ನಾವು ಮೆಂಟೆನೆನ್ಸ್ ಎದುರಿಸುತ್ತಿದ್ದೇವೆ. ಈ ಅವಧಿಯಲ್ಲಿ ಲೋನ್ ಗೆ ಸಂಬಂಧಿಸಿದ ಸೇವೆಗಳು ಪ್ರಭಾವಕ್ಕೆ ಒಳಗಾಗಲಿವೆ. ಈ ಅನಾನುಕೂಲತೆಗೆ ನಾವು ವಿಷಾಧ ವ್ಯಕ್ತಪಡಿಸುತ್ತೇವೆ ಎಂದಿದೆ.

ಇದನ್ನೂ ಓದಿ-PPF ಅಥವಾ ಸುಕನ್ಯಾ ಸಮೃದ್ಧಿ ಯೋಜನೆ ನಿಮ್ಮ ಮಗಳ ಭವಿಷ್ಯ ದೃಷ್ಟಿಯಿಂದ ಹೂಡಿಕೆಗೆ ಯಾವುದು ಉತ್ತಮ ಆಯ್ಕೆ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News