Good News:ತನ್ನ ಗ್ರಾಹಕರಿಗೆ ಸಂತಸದ ಸುದ್ದಿ ಪ್ರಕಟಿಸಿದ SBI, ಕೂಡಲೇ ಈ ಎರಡು ನಂಬರ್ ಮೊಬೈಲ್ ನಲ್ಲಿ ಸೇವ್ ಮಾಡಿ

SBI Latest News - ಎಸ್‌ಬಿಐ (SBI) ನಲ್ಲಿ ಖಾತೆ ಹೊಂದಿರುವವರಿಗೆ ಪ್ರಮುಖ ಸುದ್ದಿಯೊಂದು ಪ್ರಕಟವಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಸಂಪರ್ಕ ರಹಿತ ಸೇವೆಯನ್ನು (Contactless Service) ಆರಂಭಿಸಿದೆ. ಹಾಗಾದರೆ ಬನ್ನಿ ಈ ವಿಶೇಷ ಸೇವೆಗಳ ಕುರಿತು ತಿಳಿದುಕೊಳ್ಳೋಣ.

Written by - Nitin Tabib | Last Updated : Aug 21, 2021, 04:15 PM IST
  • ತನ್ನ ಗ್ರಾಹಕರಿಗೆ ಸಂಪರ್ಕ ರಹಿತ ಸೇವೆ ಆರಂಭಿಸಿದ SBI
  • ಈ ಸೇವೆಗಾಗಿ ಎರಡು ಟೋಲ್ ಫ್ರೀ ಸಂಖ್ಯೆಗಳನ್ನು ಬಿಡುಗಡೆ ಮಾಡಿದ SBI.
  • ಈ ಸೇವೆಯನ್ನು ಬಳಸಿ ಗ್ರಾಹಕರು ಮನೆಯಿಂದಲೇ ತಮ್ಮ ಬ್ಯಾಂಕ್ ಗೆ ಸಂಬಂಧಿಸಿದ ಸೇವೆಯನ್ನು ಪಡೆಯಬಹುದು.
Good News:ತನ್ನ ಗ್ರಾಹಕರಿಗೆ ಸಂತಸದ ಸುದ್ದಿ ಪ್ರಕಟಿಸಿದ SBI, ಕೂಡಲೇ ಈ ಎರಡು ನಂಬರ್ ಮೊಬೈಲ್ ನಲ್ಲಿ ಸೇವ್ ಮಾಡಿ title=
SBI Latest News (File Photo)

ನವದೆಹಲಿ: SBI Latest News - SBI ಗ್ರಾಹಕರಿಗೊಂದು ಸಂತಸದ ಸುದ್ದಿ ಪ್ರಕಟವಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಸಂಪರ್ಕ ರಹಿತ ಸೇವೆಯನ್ನು (SBI Contactless Service) ಆರಂಭಿಸಿದೆ. ಈ ಸೇವೆಯನ್ನು ಬಳಸಿ ಇದೀಗ ಗ್ರಾಹಕರು ಮನೆಯಲ್ಲಿಯೇ ಕುಳಿತು ಫೋನ್ ಮೂಲಕ ಬ್ಯಾಂಕ್ ಗೆ ಸಂಬಂಧಿಸಿದ ಹಲವು ಕೆಲಸಗಳನ್ನು ಮಾಡಬಹುದು. ಈ ಕುರಿತು ಟ್ವೀಟ್ ಮಾಡುವ ಮೂಲಕ ಬ್ಯಾಂಕ್ ಮಾಹಿತಿ ನೀಡಿದೆ.

SBI ಜಾರಿಗೊಳಿಸಿದೆ ಎರಡು ಟೋಲ್ ಫ್ರೀ ನಂಬರ್ 
ಭಾರತೀಯ ಸ್ಟೇಟ್ ಬ್ಯಾಂಕ್ (State Bank Of India) ತನ್ನ ಗ್ರಾಹಕರ ಅನುಕೂಲಕ್ಕಾಗಿ ಎರಡು ಟೋಲ್ ಫ್ರೀ ಸಂಖ್ಯೆಗಳನ್ನೂ ಆರಂಭಿಸಿದೆ. ಈ ಕುರಿತು ತನ್ನ ಟ್ವೀಟ್ ನಲ್ಲಿ ಬರೆದುಕೊಂಡಿರುವ ಬ್ಯಾಂಕ್, ಮನೆಯಲ್ಲಿಯೇ ಇರಿ, ಸುರಕ್ಷಿತವಾಗಿರಿ, ನಾವು ನಿಮ್ಮ ಸೇವೆಗೆ ಅಲ್ಲಿಯೇ ಬರುವೆವು. ಇದಕ್ಕಾಗಿ SBI ನಿಮಗೆ ಒಂದು ಸಂಪರ್ಕ ರಹಿತ ಸೇವೆಯನ್ನು ಆರಂಭಿಸುತ್ತಿದ್ದು, ಇದರಿಂದ ನೀವು ನಿಮ್ಮ ತುರ್ತು ಬ್ಯಾಂಕಿಂಗ್ ಅಗತ್ಯತೆಗಳನ್ನು ಪೂರ್ಣಗೊಳಿಸಲು ಬ್ಯಾಂಕ್ ನಿಮಗೆ ಸಹಾಯ ಮಾಡಲಿದೆ. ನಮ್ಮ ಟೋಲ್ ಫ್ರೀ ಸಂಖ್ಯೆಗಳು (SBI Toll Free Numbers) - 1800 112 211  ಅಥವಾ  1800 425 3800. ಈ ಸಂಖ್ಯೆಗಳಿಗೆ ಕಾಲ್ ಮಾಡಿ. 

ಇದನ್ನೂ ಓದಿ-New Pension System : ಈ ಯೋಜನೆಯಲ್ಲಿ ಹೂಡಿಕೆ ಮಾಡಿ ನಿವೃತ್ತಿ ಮೊದಲು ಮಿಲಿಯನೇರ್ ಆಗಿ ನಂತರ ಪ್ರತಿ ತಿಂಗಳು ₹50,000 ಪಿಂಚಣಿ

ಒಂದೇ ಕಾಲ್ ನಲ್ಲಿ ಸಿಗಲಿವೆ ಈ ಎಲ್ಲಾ ಸೇವೆಗಳು
ಈ ಟ್ವೀಟ್ ನೊಂದಿಗೆ ವಿಡಿಯೋವೊಂದನ್ನು ಕೂಡ SBI ಜಾರಿಗೊಳಿಸಿದೆ. ಈ ವಿಡಿಯೋದಲ್ಲಿ ಮೇಲೆ ಸೂಚಿಸಲಾಗಿರುವ ನಂಬರ್ ಗಳಿಗೆ ಕರೆ ಮಾಡುವ ಮೂಲಕ ಗ್ರಾಹಕರು ಮನೆಯಲ್ಲಿಯೇ ಕುಳಿತು ಯಾವ ಯಾವ ಸೇವೆಗಳ ಲಾಭ ಪಡೆಯಬಹುದು ಎಂದು ತಿಳಿಸಲಾಗಿದೆ. ವಿಡಿಯೋ ಪ್ರಕಾರ ಅಕೌಂಟ್ ಬ್ಯಾಲೆನ್ಸ್ ಹಾಗೂ ಕೊನೆಯ 5 ವಹಿವಾಟುಗಳು, ATM ಕಾರ್ಡ್ ಬ್ಲಾಕ್ ಅಥವಾ ಅನ್ ಬ್ಲಾಕ್ ಮಾಡುವುದು, ATM ಪಿನ್ ಅಥವಾ ಗ್ರೀನ್ ಪಿನ್ ಜನರೇಟ್ ಮಾಡುವುದು, ಹೊಸ ATM ಕಾರ್ಡ್ ಗೆ ಅರ್ಜಿ ಸಲ್ಲಿಸಲು ಈ ಟೋಲ್ ಫ್ರೀ ಸಂಖ್ಯೆಗಳನ್ನು ಗ್ರಾಹಕರು ಬಳಸಬಹುದು ಎನ್ನಲಾಗಿದೆ. 

ಇದನ್ನೂ ಓದಿ-Bank Alert! ಇಂದಿನಿಂದ 18 ಗಂಟೆಗಳ ಕಾಲ ಸ್ಥಗಿತಗೊಳ್ಳಲಿವೆ ಈ ಸೇವೆ, ಡೀಟೇಲ್ಸ್ ಇಲ್ಲಿದೆ

ಈ ಫೋನ್ ನಂಬರ್ ಗಳನ್ನು ಯಾವಾಗ ಬೇಕಾದರೂ ನೀವು ನಿಮ್ಮ ಫೋನ್ ನಲ್ಲಿ ಸೇವ್ ಮಾಡಬಹುದು
ಇದೇ ವೇಳೆ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿರುವ ಬ್ಯಾಂಕ್ ಖಾತೆ ಸಂಖ್ಯೆ, ಪಾಸ್ ವರ್ಡ್, ಏಟಿಎಂ ಕಾರ್ಡ್ ಸಂಖ್ಯೆ ಅಥವಾ ಅದರ ಫೋಟೋ ತೆಗೆದುಕೊಂಡು ಮೊಬೈಲ್ ನಲ್ಲಿ ಸಂಗ್ರಹಿಸುವುದರಿಂದಲೂ ಕೂಡ ಮಾಹಿತಿ ಸೋರಿಕೆಯಾಗುವ ಅಪಾಯವಿರುತ್ತದೆ ಎಂದು ಎಚ್ಚರಿಸಿದೆ. ಇದಲ್ಲದೆ ನಿಮ್ಮ ಖಾತೆಯೂ ಕೂಡ ಸಂಪೂರ್ಣ ಖಾಲಿಯಾಗುವ ಅಪಾಯವಿರುತ್ತದೆ. 

ಇದನ್ನೂ ಓದಿ-Today Gold-Silver Price : ಚಿನ್ನಾಭರಣ ಪ್ರಿಯರೆ ಗಮನಿಸಿ : ಚಿನ್ನದ ಬೆಲೆಯಲ್ಲಿ ₹270 ಏರಿಕೆ ಮತ್ತೆ ಬೆಳ್ಳಿ ₹300 ಇಳಿಕೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News