ಸರ್ಕಾರಿ ನೌಕರರಿಗೆ ಮೂಲ ವೇತನದಲ್ಲಿ ಹೆಚ್ಚಳ ! ಶೇ.44ರಷ್ಟು ಏರಿಕೆಯಾಗುವುದು ಸ್ಯಾಲರಿ
8th Pay Commission, Latest Update:8ನೇ ವೇತನ ಆಯೋಗವನ್ನು ಆದಷ್ಟು ಬೇಗ ಜಾರಿಗೆ ತರುವಂತೆ ನೌಕರರ ಸಂಘಟನೆಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ. ಆದರೆ, ಇಲ್ಲಿಯವರೆಗೆ ಸರ್ಕಾರ ಈ ಬಗ್ಗೆ ಏನನ್ನೂ ಹೇಳಿಲ್ಲ. ಆದರೆ, ಈಗ ಸರ್ಕಾರಿ ನೌಕರರ ಈ ಬೇಡಿಕೆಯನ್ನು ಸರ್ಕಾರ ಒಪ್ಪಿಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ ಎನ್ನಲಾಗಿದೆ.
8th Pay Commission, Latest Update : ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಹಲವು ಶುಭ ಸುದ್ದಿಗಳು ಕಾದಿವೆ. ಮೂಲ ವೇತನದಲ್ಲಿ ಹೆಚ್ಚಳ, ಅರಿಯರ್ ಮೊತ್ತ, 8ನೇ ವೇತನ ಆಯೋಗ ರಚನೆ ಇವುಗಳಲ್ಲಿ ಪ್ರಮುಖವಾಗಿವೆ. 8ನೇ ವೇತನ ಆಯೋಗದ ಕುರಿತು ಕೆಲವು ಪ್ರಮುಖ ಮಾಹಿತಿಗಳು ಹೊರ ಬಿದ್ದಿವೆ.
8ನೇ ವೇತನ ಆಯೋಗ: ಹೊಸ ವೇತನ ಆಯೋಗ :
ಹೊಸ ವೇತನ ಆಯೋಗ ರಚನೆ ಮಾಡಬೇಕೆಂಬ ಬೇಡಿಕೆ ಬಹಳ ದಿನಗಳಿಂದ ಕೇಳಿ ಬರುತ್ತಿತ್ತು. ಆದರೆ ಇದೀಗ ಇದಕ್ಕಾಗಿ ನೌಕರರ ಬೇಡಿಕೆ ತೀವ್ರಗೊಂಡಿದೆ. 8ನೇ ವೇತನ ಆಯೋಗವನ್ನು ಆದಷ್ಟು ಬೇಗ ಜಾರಿಗೆ ತರುವಂತೆ ನೌಕರರ ಸಂಘಟನೆಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ. ಆದರೆ, ಇಲ್ಲಿಯವರೆಗೆ ಸರ್ಕಾರ ಈ ಬಗ್ಗೆ ಏನನ್ನೂ ಹೇಳಿಲ್ಲ. ಈಗ ಸರ್ಕಾರಿ ನೌಕರರ ಈ ಬೇಡಿಕೆಯನ್ನು ಸರ್ಕಾರ ಒಪ್ಪಿಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ ಎನ್ನಲಾಗಿದೆ. ಇದಕ್ಕೆ ಹಲವು ಕಾರಣಗಳಿವೆ. ಅದಕ್ಕೆ ಪ್ರಮುಖ ಕಾರಣವೆಂದರೆ ಹೊಸ ವೇತನ ಆಯೋಗದ ರಚನೆಯ ಬೇಡಿಕೆಯನ್ನು ನೌಕರರು ನಿಗದಿತ ಸಮಯಕ್ಕೆ ಮುಂಚಿತವಾಗಿ ಮಂಡಿಸಲಿಲ್ಲ. ನಿಯಮದ ಪ್ರಕಾರ ಹೊಸ ವೇತನ ಆಯೋಗ ರಚನೆಗೆ ಕಾಲ ಸನ್ನಿಹಿತವಾಗಿದೆ.
ಇದನ್ನೂ ಓದಿ : ಲೋನ್ ಪಡೆದವರಿಗೆ ಸಿಹಿ ಸುದ್ದಿ ಪ್ರಕಟಿಸಿದ ಆರ್‌ಬಿಐ ಗವರ್ನರ್ ! ಇನ್ನು ಇಷ್ಟಾಗಿರಲಿದೆ ನಿಮ್ಮ ಸಾಲದ ಬಡ್ಡಿ
ಪ್ರತಿ 10 ವರ್ಷಗಳಿಗೊಮ್ಮೆ ಹೊಸ ವೇತನ ಆಯೋಗ ಜಾರಿಗೆ :
7ನೇ ವೇತನ ಆಯೋಗ ರಚನೆಯಾಗಿರುವುದು 2013ರಲ್ಲಿ. ಇದಾದ ನಂತರ ಅದನ್ನು ಜಾರಿಗೆ ತಂದಿರುವುದು 2016 ರಲ್ಲಿ. ಈ ವೇತನ ಆಯೋಗ ಜಾರಿಯಾದ ನಂತರ ಸರ್ಕಾರಿ ನೌಕರರ ವೇತನ ಗಣನೀಯವಾಗಿ ಏರಿಕೆ ಕಂಡಿದೆ. ಈಗ ಮತ್ತೆ ನೌಕರರು ಮುಂದಿನ ವೇತನ ಆಯೋಗ ರಚನೆಗಾಗಿ ಕಾಯುತ್ತಿದ್ದಾರೆ. ಹೊಸ ವೇತನ ಆಯೋಗದ ಶಿಫಾರಸುಗಳನ್ನು ಪ್ರತಿ 10 ವರ್ಷಗಳಿಗೊಮ್ಮೆ ಜಾರಿಗೆ ತರಲಾಗುತ್ತದೆ ಎಂಬುದು ಗಮನಿಸಬೇಕಾದ ಸಂಗತಿ. ಹಾಗಾಗಿ ಮುಂದಿನ ವೇತನ ಆಯೋಗದ ವರದಿಯನ್ನು ಸರ್ಕಾರ ಈ ವರ್ಷವೇ ಬಿಡುಗಡೆ ಮಾಡಲಿದೆ ಎನ್ನುವುದು ಸರ್ಕಾರಿ ನೌಕರರ ನಿರೀಕ್ಷೆ.
ಹೊಸ ವೇತನ ಆಯೋಗದ ರಚನೆ ಅನಿವಾರ್ಯ :
7 ನೇ ವೇತನ ಆಯೋಗದ ನಿಯಮಗಳ ಪ್ರಕಾರ, ತುಟ್ಟಿಭತ್ಯೆ 50 ಪ್ರತಿಶತವನ್ನು ತಲುಪಿದಾಗ, ಅದನ್ನು ಶೂನ್ಯಕ್ಕೆ ಇಳಿಸಲಾಗುತ್ತದೆ. ಇದಾದ ಬಳಿಕ ಆಗ ಇದ್ದ ಮೂಲ ವೇತನಕ್ಕೆ ಶೇ.50 ಡಿಎ ಸೇರ್ಪಡೆಯಾಗುತ್ತದೆ. ನಂತರ ತುಟ್ಟಿಭತ್ಯೆ ಶೂನ್ಯದಿಂದ ಆರಂಭವಾಗುತ್ತದೆ. ಜುಲೈ 2023 ಕ್ಕೆ ತುಟ್ಟಿಭತ್ಯೆಯನ್ನು 4% ಹೆಚ್ಚಿಸುವ ನಿರೀಕ್ಷೆಯಿದೆ. ಆಗ ಒಟ್ಟು ತುಟ್ಟಿಭತ್ಯೆ 46% ಕ್ಕೆ ಏರಿಕೆಯಾಗಲಿದೆ. ಅಲ್ಲದೆ, ಜನವರಿ 2024 ರಲ್ಲಿ ಮತ್ತೆ ಡಿಎ ಶೇಕಡಾ 4 ರಷ್ಟು ಹೆಚ್ಚಳವಾದರೆ ಒಟ್ಟು ತುಟ್ಟಿಭತ್ಯೆ ಶೇಕಡಾ 50 ಕ್ಕೆ ತಲುಪುತ್ತದೆ. ಹೀಗಾದರೆ ವೇತನ ಪರಿಷ್ಕರಣೆ ಮಾಡಬೇಕಾಗುತ್ತದೆ. ಆದರೆ ವೇತನ ಪರಿಷ್ಕರಣೆಯಾಗಬೇಕಾದರೆ ಹೊಸ ವೇತನ ಆಯೋಗದ ರಚನೆ ಅನಿವಾರ್ಯ. ಅದಲ್ಲದೆ ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆಗಳು ನಡೆಯಲಿದ್ದು, ಕೇಂದ್ರ ಸರ್ಕಾರಿ ನೌಕರರಿಗೆ ಸರ್ಕಾರ ಭರ್ಜರಿ ಉಡುಗೊರೆಯನ್ನು ನೀಡುವ ನಿರೀಕ್ಷೆಯಿದೆ.
ಸರ್ಕಾರದ ನಿಲುವೇನು? :
ಸಂಸತ್ತಿನ ಅಧಿವೇಶನದ ವೇಳೆ ಹಣಕಾಸು ಸಚಿವ ಪಂಕಜ್ ಚೌಧರಿ ಅವರು 'ಮುಂದಿನ ವೇತನ ಆಯೋಗವನ್ನು ಸ್ಥಾಪಿಸುವ ಬಗ್ಗೆ ಸರ್ಕಾರ ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ ಎಂದು ಹೇಳಿದ್ದರು. ಆದರೆ, ನೌಕರರ ವೇತನ ನಿಗದಿಗೂ ಸರ್ಕಾರ ಹೊಸ ಸೂತ್ರ ರೂಪಿಸಲು ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ : ಹಬ್ಬಗಳ ಋತುವಿನಲ್ಲೂ 5 ಸಾವಿರದಷ್ಟು ಇಳಿಕೆ ಕಂಡ ಬಂಗಾರ ! ಮುಂದುವರಿಯಲಿದೆಯೇ ಇದೇ ಚಮತ್ಕಾರ
ನೌಕರರ ವೇತನ 44% ಹೆಚ್ಚಳ :
8ನೇ ವೇತನ ಆಯೋಗ ಜಾರಿಗೆ ಬಂದರೆ ನೌಕರರ ವೇತನದಲ್ಲಿ ಶೇ.44ರಷ್ಟು ಹೆಚ್ಚಳವಾಗಲಿದೆ. 8ನೇ ವೇತನ ಆಯೋಗ ಜಾರಿಯಾದರೆ ಅಥವಾ ಫಿಟ್‌ಮೆಂಟ್ ಅಂಶದ ಶೇಕಡಾವಾರು ಪ್ರಮಾಣವನ್ನು ಸರ್ಕಾರ ಹೆಚ್ಚಿಸಿದರೆ ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಾಗಲಿದೆ. ಇದನ್ನು ಒಂದು ಉದಾಹರಣೆಯೊಂದಿಗೆ ಅರ್ಥಮಾಡಿಕೊಳ್ಳೋಣ.
ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರ ಫಿಟ್‌ಮೆಂಟ್ ಅಂಶ ಶೇ.2.57ರಷ್ಟಿದೆ. ಇದರ ಪ್ರಕಾರ ಕೇಂದ್ರ ನೌಕರರ ಕನಿಷ್ಠ ಮೂಲ ವೇತನ 18,000 ರೂ. ಫಿಟ್‌ಮೆಂಟ್ ಅಂಶವನ್ನು ಶೇ.3.68ಕ್ಕೆ ಹೆಚ್ಚಿಸಬೇಕೆಂಬ ಬೇಡಿಕೆ ಇದೆ. ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸಿದರೆ, ಕನಿಷ್ಠ ಮೂಲ ವೇತನವು ಶೇಕಡಾ 44 ಕ್ಕಿಂತ ಹೆಚ್ಚು ಅಂದರೆ ನೇರವಾಗಿ ರೂ.18,000 ರಿಂದ ರೂ.26,000 ಕ್ಕೆ ಹೆಚ್ಚಾಗುತ್ತದೆ. ಆದರೆ ಇದಕ್ಕೆ ಸರ್ಕಾರದ ಅಧಿಸೂಚನೆ ಯಾವಾಗ ಬರುತ್ತದೆ? ಸರ್ಕಾರ ಈ ವರ್ಷ ಹೊಸ ವೇತನ ಆಯೋಗವನ್ನು ಸ್ಥಾಪಿಸುತ್ತದೆಯೇ? ಈ ಪ್ರಶ್ನೆಗಳಿಗೆ ಸರ್ಕಾರದ ಕಡೆಯಿಂದ ಶೀಘ್ರದಲ್ಲೇ ಉತ್ತರ ಸಿಗಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.