Repo Rate Unchanged : ರಿಯಲ್ ಎಸ್ಟೇಟ್ ಮಾರುಕಟ್ಟೆಯ ಬೂಮ್ ನಡುವೆಯೂ ಮನೆಯನ್ನು ಖರೀದಿಸುವ ಬಗ್ಗೆ ಯೋಜಿಸುತ್ತಿದ್ದರೆ, ಈ ಸುದ್ದಿ ಸಮಾಧಾನ ನೀಡಲಿದೆ. ಇದಲ್ಲದೇ ನೀವು ಈಗಾಗಲೇ ಲೋನ್ ಪಡೆದಿದ್ದರೂ ಕೂಡಾ ಈ ಸುದ್ದಿ ನಿಮಗೆ ಸಂತಸವನ್ನುಂಟು ಮಾಡುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಡೆಸಿದ ಸತತ ನಾಲ್ಕನೇ ಹಣಕಾಸು ನೀತಿ ಪರಾಮರ್ಶೆ ಸಭೆಯಲ್ಲಿ (ಎಂಪಿಸಿ ಸಭೆ) ರೆಪೊ ದರವನ್ನು ಹಳೆಯ ಮಟ್ಟದಲ್ಲಿಯೇ ಮುಂದುವರಿಸಲು ನಿರ್ಧರಿಸಲಾಗಿದೆ. ಏಪ್ರಿಲ್, ಜೂನ್, ಆಗಸ್ಟ್ ನಂತರ ಈಗ ಅಕ್ಟೋಬರ್‌ನಲ್ಲಿ ಕೂಡಾ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ಆರ್‌ಬಿಐ ನಿರ್ಧರಿಸಿದೆ.
ಹಿಂದಿನ ಮಟ್ಟದಲ್ಲಿಯೇ ರೆಪೊ ದರ :
ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇಂದು ಆರು ಸದಸ್ಯರ ಎಂಪಿಸಿ ಸಭೆಯ ಆಧಾರದ ಮೇಲೆ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದರು. ಸತತ ನಾಲ್ಕನೇ ಬಾರಿಗೆ ಎಲ್ಲಾ ಸದಸ್ಯರ ಒಪ್ಪಿಗೆ ಮೇರೆಗೆ ರೆಪೊ ದರವನ್ನು ಶೇ.6.5ರ ಹಳೆಯ ಮಟ್ಟದಲ್ಲಿಯೇ ಉಳಿಸಿಕೊಳ್ಳಲಾಗಿದೆ ಎಂದು ಹೇಳಿದರು. ಈ ಹಿಂದೆ ಹಣದುಬ್ಬರವನ್ನು ನಿಯಂತ್ರಿಸಲು ರಿಸರ್ವ್ ಬ್ಯಾಂಕ್ ಮೇ 2022 ರಿಂದ ಮಾರ್ಚ್ 2023 ರವರೆಗೆ ರೆಪೊ ದರವನ್ನು ಎರಡೂವರೆ ಶೇಕಡಾದಷ್ಟು ಹೆಚ್ಚಿಸಿತ್ತು.
ಇದನ್ನೂ ಓದಿ : ಹಬ್ಬಗಳ ಋತುವಿನಲ್ಲೂ 5 ಸಾವಿರದಷ್ಟು ಇಳಿಕೆ ಕಂಡ ಬಂಗಾರ ! ಮುಂದುವರಿಯಲಿದೆಯೇ ಇದೇ ಚಮತ್ಕಾರ
ಇಎಂಐ ಮೇಲೆ ಯಾವುದೇ ಪರಿಣಾಮವಿಲ್ಲ :
ಸತತ ನಾಲ್ಕನೇ ಬಾರಿಗೆ ಆರ್‌ಬಿಐ ಹಳೆಯ ರೆಪೋ ದರವನ್ನು ಕಾಯ್ದುಕೊಂಡಿದೆ. ರೆಪೊ ದರದಲ್ಲಿ ಯಾವುದೇ ಬದಲಾವಣೆ ಇಲ್ಲದಿರುವುದರಿಂದ ಇಎಂಐ ಮೇಲೆ ಕೂಡಾ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಮತ್ತೊಂದೆಡೆ, ಮುಂಬರುವ ಸಮಯದಲ್ಲಿ ಎಫ್‌ಡಿ ಬಡ್ಡಿದರಗಳನ್ನು ಕಡಿಮೆ ಮಾಡುವ ಸಾಧ್ಯತೆಯನ್ನು ಬ್ಯಾಂಕ್‌ಗಳು ವ್ಯಕ್ತಪಡಿಸುತ್ತಿವೆ. ರೆಪೊ ದರವು ಕಳೆದ ನಾಲ್ಕು ವರ್ಷಗಳ ದಾಖಲೆಯ ಮಟ್ಟದಲ್ಲಿ ಪ್ರಸ್ತುತ ಚಾಲನೆಯಲ್ಲಿದೆ. ಹಣದುಬ್ಬರವನ್ನು ನಿಯಂತ್ರಿಸಲು ರಿಸರ್ವ್ ಬ್ಯಾಂಕ್ ಬಡ್ಡಿದರಗಳನ್ನು ಹೆಚ್ಚಿಸುವ ಪ್ರಕ್ರಿಯೆಯನ್ನು ಆರಂಭಿಸಿತ್ತು.
ರೆಪೋ ದರ ಎಂದರೇನು? :
ಆರ್‌ಬಿಐ ಬ್ಯಾಂಕ್‌ಗಳಿಗೆ ನೀಡುವ ಸಾಲದ ದರವನ್ನು ರೆಪೊ ದರ ಎಂದು ಕರೆಯಲಾಗುತ್ತದೆ. ರೆಪೊ ದರದಲ್ಲಿ ಹೆಚ್ಚಳ ಎಂದರೆ ಬ್ಯಾಂಕ್‌ಗಳು ದುಬಾರಿ ದರದಲ್ಲಿ ಆರ್‌ಬಿಐನಿಂದ ಸಾಲ ಪಡೆಯುತ್ತವೆ. ಇದು ಗ್ರಾಹಕರು ಬ್ಯಾಂಕ್ ನಿಂದ ಪಡೆಯುವ ಗೃಹ ಸಾಲ, ಕಾರು ಸಾಲ ಮತ್ತು ವೈಯಕ್ತಿಕ ಸಾಲ ಇತ್ಯಾದಿಗಳ ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಸುತ್ತದೆ. ಹೀಗಾದಾಗ ನಿಮ್ಮ EMI ಮೇಲೆ ನೇರ ಪರಿಣಾಮ ಬೀರುತ್ತದೆ.
ಇದನ್ನೂ ಓದಿ : ಲಾಭಕ್ಕಾಗಿ ಅಗ್ಗದ ಚಿನ್ನ ಖರೀದಿಸಬೇಕೆ? ಚಿನ್ನಾಭರಣಗಳಿಗಿಂತ ಭಿನ್ನವಾಗಿವೆ ಈ ಆಯ್ಕೆಗಳು!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.