ಬೆಂಗಳೂರು : ಕೋಟ್ಯಂತರ ರೈತರು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 12 ನೇ ಕಂತಿನ ನಿರೀಕ್ಷೆಯಲ್ಲಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ 12 ನೇ ಕಂತು ರೈತರ ಖಾತೆ ಸೇರಲಿದೆ. ಪಿಎಂ ಕಿಸಾನ್ ಯೋಜನೆಯ 12 ನೇ ಕಂತು ವರ್ಗಾವಣೆಗೂ ಮುನ್ನವೇ ಸರ್ಕಾರ ರೈತರಿಗೆ ಮತ್ತೊಂದು ಸೌಲಭ್ಯವನ್ನು ಒದಗಿಸುತ್ತಿದೆ. ಅದರ ಪ್ರಯೋಜನವನ್ನು ಪ್ರತಿಯೊಬ್ಬ ರೈತ ಕೂಡಾ ಪಡೆದುಕೊಳ್ಳಬಹುದಾಗಿದೆ. ಹಾಗಿದ್ದರೆ ಈ ಯೋಜನೆಯ ಲಾಭವನ್ನು ಹೇಗೆ ಪಡೆಯಬಹುದು  ನೋಡೋಣ. 


COMMERCIAL BREAK
SCROLL TO CONTINUE READING

ಅಗ್ಗದ ಸಾಲ ಪಡೆಯುವುದು ಸುಲಭ : 
ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿಯ ಎಲ್ಲಾ ಅರ್ಹ ಫಲಾನುಭವಿಗಳಿಗೆ ಸರ್ಕಾರವು 'ಕಿಸಾನ್ ಕ್ರೆಡಿಟ್ ಕಾರ್ಡ್' ಸೌಲಭ್ಯವನ್ನು ನೀಡುತ್ತಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸದಿದ್ದರೆ, ಆದಷ್ಟು ಬೇಗ ಅರ್ಜಿ ಸಲ್ಲಿಸಬಹುದು.   ಈ ಮೂಲಕ ರೈತರು ಯಾವುದೇ ಉದ್ಯೋಗವನ್ನು ಪ್ರಾರಂಭಿಸಬಹುದು. ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಈ ಸೌಲಭ್ಯ ಒದಗಿಸುತ್ತಿದೆ. 


ಇದನ್ನೂ ಓದಿ : Gold Price Today : ಎರಡನೇ ದಿನವೂ ದುಬಾರಿಯಾದ ಚಿನ್ನ, ಬೆಳ್ಳಿ ಖರೀದಿ ಯೋಚನೆ ಸಾಧ್ಯವೇ ಇಲ್ಲ .!


ಅರ್ಜಿ ಸಲ್ಲಿಸುವುದು ಹೇಗೆ ? : 
ಕಿಸಾನ್ ಕ್ರೆಡಿಟ್ ಕಾರ್ಡ್ ಮಾಡಬೇಕಾದರೆ, ಬ್ಯಾಂಕ್‌ನ ಹತ್ತಿರದ ಶಾಖೆಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಅಗತ್ಯ ದಾಖಲೆಗಳನ್ನು ಸಲ್ಲಿಸುವುದರೊಂದಿಗೆ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು. ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ, ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗೆ ಎಲ್ಲಾ ಅಗತ್ಯ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು, 2 ಪಾಸ್‌ಪೋರ್ಟ್  ಸೈಜ್ ಭಾವಚಿತ್ರಗಳು, ಆಧಾರ್ ಕಾರ್ಡ್ ಅಗತ್ಯವಿದೆ. ಇದಲ್ಲದೇ ಬಿತ್ತಿದ ಬೆಳೆಗಳ ಬಗ್ಗೆಯೂ ಮಾಹಿತಿ ನೀಡಬೇಕು.


ಕಿಸಾನ್ ಕ್ರೆಡಿಟ್ ಕಾರ್ಡ್‌ನ ಪ್ರಯೋಜನ :
ರೈತರಿಗೆ ಐದು ವರ್ಷಗಳ ಅವಧಿಗೆ  3 ಲಕ್ಷದವರೆಗೆ ಅಲ್ಪಾವಧಿ ಸಾಲವನ್ನು ನೀಡಲಾಗುತ್ತದೆ. ಕಿಸಾನ್ ಕ್ರೆಡಿಟ್ ಕಾರ್ಡ್‌ನಲ್ಲಿ ತೆಗೆದುಕೊಳ್ಳಲಾದ  ಸಾಲಕ್ಕೆ  ಸರ್ಕಾರ ಸಬ್ಸಿಡಿ ನೀಡುತ್ತದೆ. ಈ ಕಾರಣದಿಂದಾಗಿ ಕಿಸಾಸ್ ಕ್ರೆಡಿಟ್ ಕಾರ್ಡ್ ಮೇಲೆ ಪಡೆದುಕೊಂಡ  ಸಾಲದ ಮೇಲೆ ಕಡಿಮೆ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.


ಇದನ್ನೂ ಓದಿ : Gold Price: ಶೀಘ್ರದಲ್ಲಿಯೇ ಭಾರಿ ದುಬಾರಿಯಾಗಲಿದೆ ಚಿನ್ನ! ಹಬ್ಬ-ಮದುವೆ ಸೀಜನ್ ಗೆ ಇಂದೇ ಖರೀದಿಸಿಟ್ಟುಕೊಳ್ಳಿ


ಪಿಎಂ ಕಿಸಾನ್ ಖಾತೆಗೆ ಯಾವಾಗ ಹಣ ಬರುತ್ತದೆ?
ಪ್ರಧಾನಮಂತ್ರಿ ಕಿಸಾನ್ ಯೋಜನೆಯ 12ನೇ ಕಂತಿನ ಹಣ ರೈತರ ಖಾತೆಗೆ  ಇನ್ನೂ ವರ್ಗಾವಣೆಯಾಗಿಲ್ಲ. ಈ ಮೊದಲು ಅಕ್ಟೋಬರ್ 2ರೊಳಗೆ ಈ ಹಣ ರೈತರ ಖಾತೆಗೆ ಸೇರುವ ನಿರೀಕ್ಷೆ ಇತ್ತು. ಭೌತಿಕ ಪರಿಶೀಲನೆಯಿಂದಾಗಿ ಈ ಬಾರಿ 12ನೇ ಕಂತು ವಿಳಂಬವಾಗುತ್ತಿದೆ. ಆದರೆ ದೀಪಾವಳಿಗೂ ಮೊದಲು ಈ ಕಂತು ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.