Indian Railways: ರೈಲು ಯಾತ್ರಿಗಳಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ Modi ಸರ್ಕಾರ

Indian Railways: ರಾಜಧಾನಿ, ಶತಾಬ್ದಿ ಮತ್ತು ದುರಾಂತೋಗಳಂತಹ ಪ್ರೀಮಿಯಂ ರೈಲುಗಳಲ್ಲಿ ಪ್ರಯಾಣಿಸುವುದು ಇನ್ಮುಂದೆ ಮತ್ತಷ್ಟು ಅಗ್ಗವಾಗಲಿದೆ. ವಾಸ್ತವದಲ್ಲಿ, ಕೇಂದ್ರ ಸರ್ಕಾರವು ತನ್ನ ಡೈನಾಮಿಕ್ ದರದ ವ್ಯವಸ್ಥೆಯನ್ನು ತೆಗೆದುಹಾಕಲು ಚಿಂತನೆ ನಡೆಸುತ್ತಿದೆ. ಈ ಬಗ್ಗೆ ರೈಲ್ವೆ ಸಚಿವ ಅಶ್ವನಿ ವೈಷ್ಣವ್ ಮಾಹಿತಿ ನೀಡಿದ್ದಾರೆ. ಈ ಕುರಿತಾದ ಹೆಚ್ಚಿನ ಅಪ್ಡೇಟ್ ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Oct 4, 2022, 09:00 PM IST
  • ರೈಲಿನಲ್ಲಿ ಪ್ರಯಾಣಿಸುವ ಯಾತ್ರಿಗಳಿಗೆ ಭಾರಿ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ.
  • ರೈಲು ಪ್ರಯಾಣಿಕರಿಗಾಗಿ ಕೇಂದ್ರದ ಪ್ದ್ರಧಾನಿ ಮೋದಿ ನೇತೃತ್ವದ ಸರ್ಕಾರ ಮಹತ್ವದ ಹೆಜ್ಜೆಯೊಂದನ್ನು ಇಡಲಿದೆ.
  • ಹಾಗೆ ನೋಡಿದರೆ, ಕೊರೊನಾ ನಂತರದ ಅವಧಿಯಲ್ಲಿ ಭಾರತೀಯ ರೇಲ್ವೆ ಸಾಕಷ್ಟು ಬದಲಾವಣೆಗಳನ್ನು ಮಾಡಿದೆ.
Indian Railways: ರೈಲು ಯಾತ್ರಿಗಳಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ Modi ಸರ್ಕಾರ title=
Indian Railways Update

Indian Railways: ರೈಲಿನಲ್ಲಿ ಪ್ರಯಾಣಿಸುವ ಯಾತ್ರಿಗಳಿಗೆ ಭಾರಿ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ರೈಲು ಪ್ರಯಾಣಿಕರಿಗಾಗಿ ಕೇಂದ್ರದ ಪ್ದ್ರಧಾನಿ ಮೋದಿ ನೇತೃತ್ವದ ಸರ್ಕಾರ ಮಹತ್ವದ ಹೆಜ್ಜೆಯೊಂದನ್ನು ಇಡಲಿದೆ. ಹಾಗೆ ನೋಡಿದರೆ, ಕೊರೊನಾ ನಂತರದ ಅವಧಿಯಲ್ಲಿ ಭಾರತೀಯ ರೇಲ್ವೆ ಸಾಕಷ್ಟು ಬದಲಾವಣೆಗಳನ್ನು ಮಾಡಿದೆ. ಇದುವರೆಗೆ ಕೊರೊನಾ ಆರಂಭವಾಗುವ ಮುನ್ನ ಇದ್ದ ಎಲ್ಲಾ ರಿಯಾಯಿತಿಗಳನ್ನು ಸಂಪೂರ್ಣವಾಗಿ ಮರುಸ್ಥಾಪಿಸಲಾಗಿಲ್ಲ. ಹೀಗಾಗಿ ರೈಲಿನಲ್ಲಿ ಪ್ರಯಾಣಿಸುವವರ ಸಂಖ್ಯೆಯೂ ಕೂಡ ಸಾಕಷ್ಟು ಕಡಿಮೆಯಾಗಿದೆ.

ಪ್ರಿಮಿಯಂ ರೈಲುಗಳ ದರ ಇಳಿಕೆ
ಪ್ರಸ್ತುತ ಭಾರತೀಯ ರೇಲ್ವೆ ತನ್ನ ಪ್ರಯಾಣಿಕರನ್ನು ಓಲೈಸಲು ರಾಜಧಾನಿ, ಶತಾಬ್ದಿ ಮತ್ತು ದುರಾಂತೋದಂತಹ ಪ್ರೀಮಿಯಂ ರೈಲುಗಳಲ್ಲಿ ಡೈನಾಮಿಕ್ ದರವನ್ನು ತೆಗೆದುಹಾಕಲು ಚಿಂತನೆ ನಡೆಸುತ್ತಿದೆ. ವಾಸ್ತವದಲ್ಲಿ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರ ನೀಡಿರುವ ರೈಲ್ವೆ ಸಚಿವರು ಈ ಮಾಹಿತಿ ನೀಡಿದ್ದಾರೆ. ಋಣಾತ್ಮಕ ಪ್ರತಿಕ್ರಿಯೆ ಮತ್ತು ಪ್ರಯಾಣಿಕರ ಸಂಖ್ಯೆಯಲ್ಲಿನ ಇಳಿಕೆಯನ್ನು ಗಮನದಲ್ಲಿಟ್ಟುಕೊಂಡು, ಡೈನಾಮಿಕ್ ದರ ವ್ಯವಸ್ಥೆಯನ್ನು ಹಿಂಪಡೆಯಲು ಕೇಂದ್ರ ಸರ್ಕಾರ ಯೋಚಿಸುತ್ತಿದೆಯೇ ಎಂದು ಲೋಕಸಭೆಯಲ್ಲಿ ಅವರನ್ನು ಪ್ರಶ್ನಿಸಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಸದ್ಯಕ್ಕೆ ಸರ್ಕಾರದ ಫ್ಲೆಕ್ಸಿ ಪ್ರೈಸ್ ನೀತಿಯನ್ನು ಹಿಂಪಡೆಯುವ ಯಾವುದೇ ಯೋಜನೆ ಇಲ್ಲ.

ಇದನ್ನೂ ಓದಿ-ಇಪಿಎಫ್‌ಒ ಚಂದಾದಾರರ ಖಾತೆಗೆ ಬರಲಿದೆ 81,000 ರೂ. .! ನಿಮ್ಮ ಪಿಎಫ್ ಬ್ಯಾಲೆನ್ಸ್ ಹೀಗೆ ತಿಳಿಯಿರಿ

ರೈಲ್ವೆ ಸಚಿವರು ಮಾಹಿತಿ ನೀಡಿದರು
ರೈಲ್ವೇ ಡೈನಾಮಿಕ್ ಫೇರ್ ಸಿಸ್ಟಂ ಎಂದರೆ ಬೇಡಿಕೆಗೆ ಅನುಗುಣವಾಗಿ ದರ ನಿಗದಿ ಮಾಡುವ ಒಂದು ವ್ಯವಸ್ಥೆ ಇದಾಗಿದೆ, ಶೇ.10ರಷ್ಟು ಸೀಟುಗಳನ್ನು ಕಾಯ್ದಿರಿಸುವುದರೊಂದಿಗೆ ಶೇ.10ರಷ್ಟು ದರ ಏರಿಕೆಯಾಗುತ್ತದೆ ಎಂದು ರೈಲ್ವೆ ಸಚಿವರು ಹೇಳಿದ್ದಾರೆ. ಆಸನಗಳ ಸಂಖ್ಯೆ ಕಡಿಮೆಯಾದಂತೆ ಪ್ರಯಾಣ ದರವೂ ಹೆಚ್ಚಾಗುತ್ತದೆ. ಆದಾಗ್ಯೂ, ಇದು ಎಲ್ಲಾ ರೀತಿಯ ರೈಲುಗಳಿಗೆ ಅನ್ವಯಿಸುವುದಿಲ್ಲ. ಈ ವ್ಯವಸ್ಥೆಯನ್ನು ರಾಜಧಾನಿ, ಶತಾಬ್ದಿ ಮತ್ತು ದುರಾಂತೋ ಮುಂತಾದ ರೈಲುಗಳಲ್ಲಿ 9 ಸೆಪ್ಟೆಂಬರ್ 2016 ರಂದು ಜಾರಿಗೆ ತರಲಾಗಿದೆ. ಆದರೆ ಇದೀಗ ಹಲವು ಮಾರ್ಗಗಳಲ್ಲಿ ರೈಲು ದರಗಳು ವಿಮಾನ ಪ್ರಯಾಣ ದರಗಳಿಗಿಂತ ದುಬಾರಿಯಾಗಿವೆ. ಇದರಿಂದಾಗಿ ಸಮಯ ಮತ್ತು ಹಣ ಎರಡರಲ್ಲೂ ಮಿತವ್ಯಯವಿರುವುದರಿಂದ ಜನರು ವಿಮಾನದಲ್ಲಿ ಪ್ರಯಾಣಿಸಲು ಪ್ರಾರಂಭಿಸಿದ್ದಾರೆ, ಇದರಿಂದಾಗಿ ರೈಲ್ವೆ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-Gold Price Today : ಹಬ್ಬದ ದಿನವೇ ದುಬಾರಿಯಾಯಿತು ಚಿನ್ನ, ಬೆಳ್ಳಿ

ರೈಲ್ವೆ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆ
ಕೊರೊನಾ ಪೂರ್ವದಲ್ಲಿ ಫ್ಲೆಕ್ಸಿ ಫೇರ್ ಸಿಸ್ಟಂನಲ್ಲಿ ಪ್ರಯಾಣಿಕರು ಮತ್ತು ರೈಲುಗಳ ಗಳಿಕೆಯು ಫ್ಲೆಕ್ಸಿಯಾಗಿರುವುದಕ್ಕಿಂತ ಹೆಚ್ಚಾಗಿತ್ತು ಎಂದು ರೈಲ್ವೆ ಸಚಿವರು ಮಾಹಿತಿ ನೀಡಿದ್ದಾರೆ, ಆದರೆ ಸರ್ಕಾರದ ಈ ನೀತಿಯನ್ನು ಹಿಂತೆಗೆದುಕೊಳ್ಳುವ ಬಗ್ಗೆ ಇನ್ನೂ ಯಾವುದೇ ಆಲೋಚನೆ ಇಲ್ಲ. 'ರೈಲ್ವೆ ಮತ್ತು ಏರ್‌ಲೈನ್‌ಗಳು ಎರಡು ವಿಭಿನ್ನ ಸಾರಿಗೆ ವಿಧಾನಗಳಾಗಿವೆ. ಪರಿಮಾಣ, ಸಂಪರ್ಕ ಮತ್ತು ಅನುಕೂಲತೆಯ ದೃಷ್ಟಿಯಿಂದ ಅವುಗಳನ್ನು ಹೋಲಿಸಲಾಗುವುದಿಲ್ಲ. ವಿಮಾನಯಾನ ಸಂಸ್ಥೆಗಳಲ್ಲಿ ಗರಿಷ್ಠ ದರದ ಮಿತಿ ಇಲ್ಲ ಆದರೆ ರೈಲ್ವೆಯು ಇಡೀ ವರ್ಷಕ್ಕೆ ಗರಿಷ್ಠ ದರವನ್ನು ನಿಗದಿಪಡಿಸುತ್ತದೆ. ವಿಮಾನಯಾನ ಸಂಸ್ಥೆಗಳ ದರವು ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ. ರೈಲ್ವೆ ದರವು ಏರ್‌ಲೈನ್‌ಗಿಂತ ಹೆಚ್ಚು ಅಥವಾ ಕಡಿಮೆ ಆಗಿರಬಹುದು. ಇದು ನೀವು ಯಾವ ತರಗತಿಯಲ್ಲಿ ಪ್ರಯಾಣಿಸುತ್ತಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿದೆ. ರೈಲ್ವೇ ಅಥವಾ ವಿಮಾನಯಾನದಲ್ಲಿ ಪ್ರಯಾಣಿಸಬೇಕೆ ಎಂಬುದನ್ನು ಪ್ರಯಾಣಿಕರು ನಿರ್ಧರಿಸುತ್ತಾರೆ.' ಎಂದು ಅವರು ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News