Gold Price: ಶೀಘ್ರದಲ್ಲಿಯೇ ಭಾರಿ ದುಬಾರಿಯಾಗಲಿದೆ ಚಿನ್ನ! ಹಬ್ಬ-ಮದುವೆ ಸೀಜನ್ ಗೆ ಇಂದೇ ಖರೀದಿಸಿಟ್ಟುಕೊಳ್ಳಿ

Gold Price Shoot Up: ಭಾರತೀಯರು ಪ್ರಸ್ತುತ ದಸರಾ, ದೀಪಾವಳಿ ಹಾಗೂ ಧನತ್ರಯೋದಶಿಯ ಕಾಲ. ಈ ಹಬ್ಬಗಳಲ್ಲಿ ಚಿನ್ನವನ್ನು ಖರೀದಿಸುವುದು ಭಾರಿ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಈ ಹಬ್ಬಗಳ ಬಳಿಕ ಚಾತುರ್ಮಾಸ ಮುಗಿಯಲಿದ್ದು, ಮದುವೆಯ ಸೀಜನ್ ಆರಂಭವಾಗಲಿದೆ. ಇದು ಭಾರತದಲ್ಲಿ ಚಿನ್ನದ ಖರೀದಿಯ ಸೀಸನ್ ಎಂದರೆ ತಪ್ಪಾಗಲಾರದು

Written by - Nitin Tabib | Last Updated : Oct 4, 2022, 10:46 PM IST
  • ಭಾರತಕ್ಕೆ ಚಿನ್ನದ ಪೂರೈಕೆಯಲ್ಲಿ ಕಡಿತವು ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಕೊರತೆಗೆ ಕಾರಣವಾಗಬಹುದು.
  • ಚೀನಾದ ನಂತರ ಭಾರತವು ವಿಶ್ವದ ಎರಡನೇ ಅತಿದೊಡ್ಡ ಚಿನ್ನದ ಮಾರುಕಟ್ಟೆಯಾಗಿದೆ.
  • ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಪೂರೈಕೆ ಸರಿಯಾಗಿ ಬರದಿದ್ದರೆ, ಈ ಹಬ್ಬದ ಋತುವಿನಲ್ಲಿ ಭಾರತೀಯ ಖರೀದಿದಾರರು ಚಿನ್ನದ ಖರೀದಿಗೆ ಭಾರಿ ಪ್ರೀಮಿಯಂ ಪಾವತಿಸಬೇಕಾಗುತ್ತದೆ.
Gold Price: ಶೀಘ್ರದಲ್ಲಿಯೇ ಭಾರಿ ದುಬಾರಿಯಾಗಲಿದೆ ಚಿನ್ನ! ಹಬ್ಬ-ಮದುವೆ ಸೀಜನ್ ಗೆ ಇಂದೇ ಖರೀದಿಸಿಟ್ಟುಕೊಳ್ಳಿ title=
Gold Price Update

Gold Price Update: ಹಬ್ಬದ ಋತುವಿನಲ್ಲಿ ಭಾರತದಲ್ಲಿ ಚಿನ್ನದ ಬೆಲೆ ಗಗನೆತ್ತರಕ್ಕೆ ಏರುವ ಸಾಧ್ಯತೆ ಇದೆ. ಇದಕ್ಕೆ ಅತಿ ದೊಡ್ಡ ಕಾರಣ ಎಂದರೆ ವಿದೇಶಿ ಬ್ಯಾಂಕ್ ಗಳು ಭಾರತಕ್ಕೆ ಚಿನ್ನದ ಸಪ್ಲೈ ನಿಲ್ಲಿಸಿವೆ ಎನ್ನಲಾಗುತ್ತಿದೆ. ಚಿನ್ನವನ್ನು ಪೂರೈಸುವ ಬ್ಯಾಂಕ್ ಗಳು ಚೀನಾ, ತುರ್ಕಿ ಹಾಗೂ ಇತರ ಮಾರುಕಟ್ಟೆಗಳ ಮೇಲೆ ತಮ್ಮ ಗಮನವನ್ನು ಕೆಂದ್ರೀಕರಿಸುತ್ತ, ಪ್ದ್ರಮುಖ ಹಬ್ಬಗಳ ಮುನ್ನವೇ ಭಾರತದ ಷಿಪ್ಮೆಂಟ್ ನಲ್ಲಿ ಕಡಿತಗೊಳಿಸಿವೆ. ಚೀನಾ ಹಾಗೂ ತುರ್ಕಿಯಂತಹ ದೇಶಗಳಿಗೆ ಚಿನ್ನವನ್ನು ಶಿಪ್ಮೆಂಟ್ ಮಾಡುವುದರಿಂದ ಉತ್ತಮ ಪ್ರಿಮಿಯಂ ಲಭಿಸುತ್ತದೆ ಎಂಬುದು ಈ ಬ್ಯಾಂಕುಗಳ ವಾದವಾಗಿದೆ. ಚೀನಾ ಬ್ಯಾಂಕ್ ಅಧಿಕಾರಿಗಳು ಹಾಗೂ ಎರಡು ವಾಲ್ಟ್ ಆಪರೇಟರ್ ಗಳು ರೈಟರ್ಸ್ ಮೂಲಕ ಈ ಮಾಹಿತಿಯನ್ನು ನೀಡಿದ್ದಾರೆ.

ಭಾರತಕ್ಕೆ ಚಿನ್ನದ ಪೂರೈಕೆಯಲ್ಲಿ ಕಡಿತವು ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಕೊರತೆಗೆ ಕಾರಣವಾಗಬಹುದು. ಚೀನಾದ ನಂತರ ಭಾರತವು ವಿಶ್ವದ ಎರಡನೇ ಅತಿದೊಡ್ಡ ಚಿನ್ನದ ಮಾರುಕಟ್ಟೆಯಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಪೂರೈಕೆ ಸರಿಯಾಗಿ ಬರದಿದ್ದರೆ, ಈ ಹಬ್ಬದ ಋತುವಿನಲ್ಲಿ ಭಾರತೀಯ ಖರೀದಿದಾರರು ಚಿನ್ನದ ಖರೀದಿಗೆ ಭಾರಿ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಸರಳವಾಗಿ ಹೇಳುವುದಾದರೆ, ಚಿನ್ನವು ಹೆಚ್ಚು ದುಬಾರಿಯಾಗುವ ಸಾಧ್ಯತೆ ಇದೆ.

ಐಸಿಬಿಸಿ ಸ್ಟ್ಯಾಂಡರ್ಡ್ ಬ್ಯಾಂಕ್, ಜೆಪಿ ಮೋರ್ಗಾನ್ ಮತ್ತು ಸ್ಟ್ಯಾಂಡರ್ಡ್ ಚಾರ್ಟರ್ಡ್ ಭಾರತದ ಪ್ರಮುಖ ಚಿನ್ನದ ಪೂರೈಕೆದಾರರಾಗಿವೆ ಎಂದು ಮೂಲಗಳು ಮಂಗಳವಾರ ಮಾಹಿತಿಯನ್ನು ನೀಡಿವೆ. ಈ ಪೂರೈಕೆದಾರರು ಸಾಮಾನ್ಯವಾಗಿ ಹಬ್ಬಗಳ ಮೊದಲು ಹೆಚ್ಚು ಚಿನ್ನವನ್ನು ಆಮದು ಮಾಡಿಕೊಳ್ಳುತ್ತಾರೆ ಮತ್ತು ತಮ್ಮ ತಿಜೋರಿಗಳನ್ನು ತುಂಬುತ್ತಾರೆ. ಆದರೆ ಇದೀಗ ಅವರ ತಿಜೋರಿಯಲ್ಲಿ ಶೇ.10ಕ್ಕಿಂತ ಕಡಿಮೆ ಚಿನ್ನ ಉಳಿದಿದೆ. ಒಂದು ವರ್ಷದ ಹಿಂದೆ ಅವರು ಆಮದು ಮಾಡಿಕೊಂಡ ಚಿನ್ನ ಇದಾಗಿದೆ. "ವರ್ಷದ ಈ ಸಮಯದಲ್ಲಿ ಸೇಫ್‌ಗಳಲ್ಲಿ ಕೆಲವು ಟನ್‌ಗಳಷ್ಟು ಚಿನ್ನವು ಆದರ್ಶಪ್ರಾಯವಾಗಿರಬೇಕು. ಆದರೆ ಆದರೆ, ನಮ್ಮಲ್ಲಿ ಕೆಲವೇ ಕಿಲೋಗಳಷ್ಟು ಚಿನ್ನ ಮಾತ್ರ ಉಳಿದಿವೆ" ಎಂದು ಮುಂಬೈ ಮೂಲದ ವಾಲ್ಟ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇನ್ನೊಂದೆಡೆ, JP ಮೋರ್ಗಾನ್, ICBC ಮತ್ತು ಸ್ಟ್ಯಾಂಡರ್ಡ್ ಚಾರ್ಟರ್ಡ್ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿವೆ.

ಇದನ್ನೂ ಓದಿ-Indian Railways: ರೈಲು ಯಾತ್ರಿಗಳಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ Modi ಸರ್ಕಾರ

ಭಾರತದಲ್ಲಿ ಚಿನ್ನದ ಬೆಲೆ ಕಳೆದ ವರ್ಷ ಈ ಸಮಯದಲ್ಲಿ ತನ್ನ ಅಂತರರಾಷ್ಟ್ರೀಯ ಮಾನದಂಡದ ಬೆಲೆಗಿಂತ ಸುಮಾರು $ 4 ರಷ್ಟು ಹೆಚ್ಚಾಗಿತ್ತು. ಅದು ಇದೀಗ $ 1 ರಿಂದ 2 ಪ್ರತಿ ಔನ್ಸ್‌ಗೆ ಇಳಿದಿದೆ. ಚೀನಾದಲ್ಲಿ, ಚಿನ್ನದ ಅತಿದೊಡ್ಡ ಮಾರುಕಟ್ಟೆಯಲ್ಲಿ, ಚಿನ್ನದ ಮೇಲಿನ ಪ್ರೀಮಿಯಂ $ 20-45 ಆಗಿದೆ. ಚೀನಾದಲ್ಲಿ ಕೋವಿಡ್ ಲಾಕ್‌ಡೌನ್ ನಂತರವೂ ಚಿನ್ನಕ್ಕೆ ಬೇಡಿಕೆ ಮುಂದುವರೆದಿದೆ. ಆದರೆ ಟರ್ಕಿಯಲ್ಲಿ, ಚಿನ್ನದ ಮೇಲಿನ ಪ್ರೀಮಿಯಂ ಪ್ರತಿ ಔನ್ಸ್‌ಗೆ $80 ಆಗಿದೆ. ಟರ್ಕಿಯಲ್ಲಿ ದೊಡ್ಡ ಪ್ರಮಾಣದ ಹಣದುಬ್ಬರವು ಚಿನ್ನದ ಆಮದುಗಳಲ್ಲಿ ತ್ವರಿತ ಹೆಚ್ಚಳಕ್ಕೆ ಕಾರಣವಾಗಿದೆ.

ಇದನ್ನೂ ಓದಿ-ಇಪಿಎಫ್‌ಒ ಚಂದಾದಾರರ ಖಾತೆಗೆ ಬರಲಿದೆ 81,000 ರೂ. .! ನಿಮ್ಮ ಪಿಎಫ್ ಬ್ಯಾಲೆನ್ಸ್ ಹೀಗೆ ತಿಳಿಯಿರಿ

"ಬ್ಯಾಂಕ್‌ಗಳು ಚಿನ್ನಕ್ಕೆ ಎಲ್ಲಿ ಹೆಚ್ಚಿನ ಬೆಲೆ ಸಿಗುತ್ತದೆಯೋ ಅಲ್ಲಿ ಮಾರಾಟ ಮಾಡುತ್ತವೆ" ಎಂದು ಮುಂಬೈ ಮೂಲದ ಪ್ರಮುಖ ಬುಲಿಯನ್ ಪೂರೈಕೆ ಬ್ಯಾಂಕ್‌ನ ಅಧಿಕಾರಿಯೊಬ್ಬರು ಹೇಳಿದ್ದಾರೆ. "ಚೀನಾ ಮತ್ತು ಟರ್ಕಿಯಲ್ಲಿನ ಖರೀದಿದಾರರು ಇದೀಗ ಅತಿ ಹೆಚ್ಚು ಪ್ರೀಮಿಯಂ ಪಾವತಿಸುತ್ತಿದ್ದಾರೆ. ನಾವು ಅದನ್ನು ಭಾರತೀಯ ಮಾರುಕಟ್ಟೆಯೊಂದಿಗೆ ಹೋಲಿಸಿದರೆ ಯಾವುದೇ ಹೋಲಿಕೆ ಇಲ್ಲ" ಎಂದು ಅಧಿಕಾರಿ ಹೇಳಿದ್ದಾರೆ. ಸೆಪ್ಟೆಂಬರ್‌ನಲ್ಲಿ ಭಾರತದ ಚಿನ್ನದ ಆಮದುಗಳು ಹಿಂದಿನ ವರ್ಷಕ್ಕಿಂತ ಶೇ.30 ರಷ್ಟು ಕುಸಿದು 68 ಟನ್‌ಗಳಿಗೆ ತಲುಪಿದ್ದರೆ, ಟರ್ಕಿಯ ಚಿನ್ನದ ಆಮದು ಶೇ.543 ರಷ್ಟು ಹೆಚ್ಚಾಗಿದೆ. ಹಾಂಗ್ ಕಾಂಗ್ ಮೂಲಕ ಚೀನಾದ ನಿವ್ವಳ ಚಿನ್ನದ ಆಮದುಗಳು ಆಗಸ್ಟ್‌ನಲ್ಲಿ ಸುಮಾರು ಶೇ. 40 ರಷ್ಟು ಜಿಗಿದು ನಾಲ್ಕು ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News