ನವದೆಹಲಿ: ಏಪ್ರಿಲ್ ತಿಂಗಳಲ್ಲಿ ಮಾರುತಿ ಸುಜುಕಿ ವ್ಯಾಗನ್ಆರ್ ಮತ್ತೊಮ್ಮೆ ದೇಶದಲ್ಲಿ ಹೆಚ್ಚು ಇಷ್ಟಪಟ್ಟ ಕಾರು ಎನಿಸಿಕೊಂಡಿದೆ. ಏಪ್ರಿಲ್‌ನಲ್ಲಿ ಮಾರುತಿ ಸುಜುಕಿ ವ್ಯಾಗನ್ಆರ್ ಅತಿಹೆಚ್ಚು ಮಾರಾಟ ಕಂಡಿದೆ. ಹೆಚ್ಚು ಮಾರಾಟವಾಗುವ ಕಾರುಗಳ ಪಟ್ಟಿಯಲ್ಲಿ ವ್ಯಾಗನ್ಆರ್ ಅಗ್ರಸ್ಥಾನದಲ್ಲಿದೆ. ಇದು 20 ಸಾವಿರಕ್ಕೂ ಹೆಚ್ಚು ಯೂನಿಟ್‍ಗಳನ್ನು ಮಾರಾಟ ಮಾಡಿದೆ. ಏಪ್ರಿಲ್ ತಿಂಗಳಲ್ಲಿ ದೇಶದಲ್ಲಿ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳ ಬಗ್ಗೆ ನಾವು ಇಲ್ಲಿ ಮಾಹಿತಿ ನೀಡುತ್ತಿದ್ದೇವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Farmers Scheme: ದೇಶದ ಪಶುಪಾಲಕರಿಗೆ ಕೇಂದ್ರ ಸರ್ಕಾರ ನೀಡುತ್ತಿದೆ 3 ಲಕ್ಷ ರೂ.ಧನಸಹಾಯ!


ಏಪ್ರಿಲ್‌ನ ಟಾಪ್ 10 ಕಾರುಗಳು


  1. ಮಾರುತಿ ಸುಜುಕಿ ವ್ಯಾಗನ್ಆರ್ ಏಪ್ರಿಲ್ 2023ರಲ್ಲಿ 20,879 ಯುನಿಟ್‌ಗಳನ್ನು ಮಾರಾಟ ಮಾಡಿದೆ. 2022ರ ಏಪ್ರಿಲ್‍ನಲ್ಲಿ 17,766 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಇದರ ಮಾರಾಟವು ವಾರ್ಷಿಕ ಆಧಾರದ ಮೇಲೆ ಶೇ.18ರಷ್ಟು ಹೆಚ್ಚಾಗಿದೆ.

  2. ಮಾರುತಿ ಸುಜುಕಿ ಸ್ವಿಫ್ಟ್ ಏಪ್ರಿಲ್ 2023ರಲ್ಲಿ 18,753 ಯುನಿಟ್‌ಗಳನ್ನು ಮಾರಾಟ ಮಾಡಿದೆ. 2022ರ ಏಪ್ರಿಲ್ 8,898 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ವಾರ್ಷಿಕ ಆಧಾರದ ಮೇಲೆ ಇದರ ಮಾರಾಟವು ಶೇ.111ರಷ್ಟು ಹೆಚ್ಚಾಗಿದೆ.

  3. ಮಾರುತಿ ಸುಜುಕಿ ಬಲೆನೊ ಏಪ್ರಿಲ್ 2023ರಲ್ಲಿ 16,180 ಯುನಿಟ್‌ಗಳನ್ನು ಮಾರಾಟ ಮಾಡಿದೆ. 2022ರ ಏಪ್ರಿಲ್‍ನಲ್ಲಿ 10,983 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ವಾರ್ಷಿಕ ಆಧಾರದ ಮೇಲೆ ಇದರ ಮಾರಾಟವು ಶೇ.48ರಷ್ಟು ಹೆಚ್ಚಾಗಿದೆ.

  4. ಟಾಟಾ ನೆಕ್ಸಾನ್ ಏಪ್ರಿಲ್ 2023ರಲ್ಲಿ 15,002 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಏಪ್ರಿಲ್ 2022ರಲ್ಲಿ 13,471 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ವಾರ್ಷಿಕ ಆಧಾರದ ಮೇಲೆ ಇದರ ಮಾರಾಟವು ಶೇ.11ರಷ್ಟು ಹೆಚ್ಚಾಗಿದೆ.

  5. ಹ್ಯುಂಡೈ ಕ್ರೆಟಾ ಏಪ್ರಿಲ್ 2023ರಲ್ಲಿ ಶೇ.14,186 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಏಪ್ರಿಲ್ 2022ರಲ್ಲಿ 12,651 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಇದರ ಮಾರಾಟವು ವಾರ್ಷಿಕ ಆಧಾರದ ಮೇಲೆ ಶೇ.12ರಷ್ಟು ಹೆಚ್ಚಾಗಿದೆ.

  6. ಮಾರುತಿ ಸುಜುಕಿ ಬ್ರೆಝಾ ಏಪ್ರಿಲ್ 2023ರಲ್ಲಿ 11,836 ಯುನಿಟ್‌ಗಳನ್ನು ಮಾರಾಟ ಮಾಡಿದ್ದರೆ, ಏಪ್ರಿಲ್ 2022ರಲ್ಲಿ 11,764 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಇದರ ಮಾರಾಟವು ವಾರ್ಷಿಕ ಆಧಾರದ ಮೇಲೆ ಶೇ.1ರಷ್ಟು ಹೆಚ್ಚಾಗಿದೆ.

  7. ಮಾರುತಿ ಸುಜುಕಿ ಆಲ್ಟೊ ಏಪ್ರಿಲ್ 2023ರಲ್ಲಿ 11,548 ಯುನಿಟ್‌ಗಳನ್ನು ಮಾರಾಟ ಮಾಡಿದ್ದರೆ, ಏಪ್ರಿಲ್ 2022ರಲ್ಲಿ 10,443 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ವಾರ್ಷಿಕ ಆಧಾರದ ಮೇಲೆ ಇದರ ಮಾರಾಟವು ಶೇ.11ರಷ್ಟು ಹೆಚ್ಚಾಗಿದೆ.

  8. ಟಾಟಾ ಪಂಚ್ ಏಪ್ರಿಲ್ 2023ರಲ್ಲಿ 10,934 ಯುನಿಟ್‌ಗಳನ್ನು ಮಾರಾಟ ಮಾಡಿದ್ದರೆ, ಏಪ್ರಿಲ್ 2022ರಲ್ಲಿ 10,132 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಇದರ ಮಾರಾಟವು ವಾರ್ಷಿಕ ಆಧಾರದ ಮೇಲೆ ಶೇ.8ರಷ್ಟು ಹೆಚ್ಚಾಗಿದೆ.

  9. ಮಾರುತಿ ಸುಜುಕಿ ಇಕೊ ಏಪ್ರಿಲ್ 2023ರಲ್ಲಿ 10,504 ಯುನಿಟ್‌ಗಳನ್ನು ಮಾರಾಟ ಮಾಡಿದೆ ಮತ್ತು ಏಪ್ರಿಲ್ 2022ರಲ್ಲಿ 11,154 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಇದರ ಮಾರಾಟವು ವಾರ್ಷಿಕ ಆಧಾರದ ಮೇಲೆ ಶೇ.6ರಷ್ಟು ಕಡಿಮೆಯಾಗಿದೆ.

  10. ಹುಂಡೈ ವೆನ್ಯೂ ಏಪ್ರಿಲ್ 2023ರಲ್ಲಿ 10,342 ಯುನಿಟ್‌ಗಳನ್ನು ಮಾರಾಟ ಮಾಡಿದ್ದರೆ, ಏಪ್ರಿಲ್ 2022ರಲ್ಲಿ 8,392 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ವಾರ್ಷಿಕ ಆಧಾರದ ಮೇಲೆ ಇದರ ಮಾರಾಟವು ಶೇ.23ರಷ್ಟು ಹೆಚ್ಚಾಗಿದೆ.


ಇದನ್ನೂ ಓದಿ: PF Rules : ಕಂಪನಿ ಬದಲಾಯಿಸಿದ ತಕ್ಷಣ ಈ ಕೆಲಸ ಮಾಡದಿದ್ದಲ್ಲಿ ಆಗುವುದು ಭಾರೀ ನಷ್ಟ !


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.