ನವದೆಹಲಿ: ಈ ಹಬ್ಬದ ಋತುವಿನಲ್ಲಿ ನೀವು ಚಿನ್ನ ಖರೀದಿಸುವ ಬಗ್ಗೆ ಚಿಂತಿಸುತ್ತಿದ್ದರೆ ಇಲ್ಲಿದೆ ಸುವರ್ಣಾವಕಾಶ. ಭಾರತದ ಅತಿ ದೊಡ್ಡ ಮರ್ಚೆಂಟ್ ಪೇಮೆಂಟ್ ಕಂಪನಿ BharatPe ತನ್ನ ಪ್ಲಾಟ್‌ಫಾರ್ಮ್ ನಲ್ಲಿ ಡಿಜಿಟಲ್ ಗೋಲ್ಡ್ (Gold) ಅನ್ನು ಬಿಡುಗಡೆ ಮಾಡಿದೆ. ಭಾರತ್‌ಪೆ ಸೇಫ್‌ಗೋಲ್ಡ್ ಸಹಯೋಗದೊಂದಿಗೆ ಈ ಹೊಸ ಸೇವೆಯನ್ನು ಪ್ರಾರಂಭಿಸಿದೆ. ಇದು ಗ್ರಾಹಕರಿಗೆ 24 ಕ್ಯಾರೆಟ್ ಭೌತಿಕ ಚಿನ್ನವನ್ನು ಮಾರಾಟ ಮಾಡಲು ಮತ್ತು ಖರೀದಿಸಲು ಅನುವು ಮಾಡಿಕೊಡುವ ಡಿಜಿಟಲ್ ಪ್ಲಾಟ್‌ಫಾರ್ಮ್ ಆಗಿದೆ.


COMMERCIAL BREAK
SCROLL TO CONTINUE READING

ಭಾರತ್‌ಪೇ ಪ್ರಕಾರ 24 ಕ್ಯಾರೆಟ್ ಚಿನ್ನವನ್ನು 99.5 ಶೇಕಡಾ ಶುದ್ಧತೆಯೊಂದಿಗೆ ವ್ಯಾಪಾರಿಗಳು ಭಾರತ್‌ಪೇ ಅಪ್ಲಿಕೇಶನ್‌ನಿಂದ ಯಾವುದೇ ಸಮಯದಲ್ಲಿ, ಎಲ್ಲಿ ಬೇಕಾದರೂ ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು. ಡಿಜಿಟಲ್ ಗೋಲ್ಡ್ ಅನ್ನು ರೂಪಾಯಿ ಮತ್ತು ಗ್ರಾಂ ಪ್ರಕಾರ ಖರೀದಿಸಬಹುದು ಅಥವಾ ಮಾರಾಟ ಮಾಡಬಹುದು. ವಿಶೇಷವೆಂದರೆ ಇಲ್ಲಿಂದ ಚಿನ್ನವನ್ನು ಕೇವಲ 1 ರೂಪಾಯಿಗೆ ಖರೀದಿಸಬಹುದು. ಭಾರತ್‌ಪೇ ಮೂಲಕ ಚಿನ್ನ ಖರೀದಿಸಲು ಭಾರತ್‌ಪೇ ಬ್ಯಾಲೆನ್ಸ್ ಅಥವಾ ಯುಪಿಐ (UPI) ಮೂಲಕ ಪಾವತಿ ಮಾಡಬಹುದು. ಮುಂದಿನ ದಿನಗಳಲ್ಲಿ BharatPe ಚಿನ್ನ ಖರೀದಿಗಾಗಿ ಕ್ರೆಡಿಟ್ / ಡೆಬಿಟ್ ಕಾರ್ಡ್ (Debit Card) ಅನ್ನು ಬಳಸಲು ಅವಕಾಶ ಕಲ್ಪಿಸುವ ನಿರೀಕ್ಷೆಯಿದೆ.


ದೀಪಾವಳಿಯಲ್ಲಿ ಚಿನ್ನ ಖರೀದಿಸುವ ಮೊದಲು ಈ 3 ವಿಷಯಗಳನ್ನು ಅರ್ಥಮಾಡಿಕೊಳ್ಳಿ


ದೀಪಾವಳಿಯವರೆಗೆ 6 ಕೆಜಿ ಚಿನ್ನ ಮಾರಾಟ ಮಾಡುವ ಗುರಿ:
ಭಾರತ್‌ಪೇ ದೀಪಾವಳಿಯವರೆಗೆ 6 ಕೆಜಿ ಚಿನ್ನವನ್ನು ಮಾರಾಟ ಮಾಡುವ ಗುರಿ ಹೊಂದಿದೆ. ಇದರಲ್ಲಿ ವ್ಯಾಪಾರಿಗಳಿಗೆ ಜಾಗತಿಕ ಮಾರುಕಟ್ಟೆಗಳೊಂದಿಗೆ ಸಂಪರ್ಕ ಹೊಂದಿದ ಚಿನ್ನದ ನೈಜ ಸಮಯದ ಬೆಲೆಗಳನ್ನು ನೋಡಲು ಸಾಧ್ಯವಾಗುತ್ತದೆ. ಚಿನ್ನ ಖರೀದಿಯ ಮೇಲೆ ಜಿಎಸ್‌ಟಿ (GST) ಇನ್‌ಪುಟ್ ಕ್ರೆಡಿಟ್‌ನ ಪ್ರಯೋಜನವೂ ಇರುತ್ತದೆ. ವ್ಯಾಪಾರಿಗಳು ಭೌತಿಕ ಚಿನ್ನದ ವಿತರಣೆಯನ್ನು ಸಹ ಆರಿಸಿಕೊಳ್ಳಬಹುದು. ವ್ಯಾಪಾರಿಗಳು ಡಿಜಿಟಲ್ ಚಿನ್ನವನ್ನು ನೇರವಾಗಿ ಮಾರಾಟ ಮಾಡಿದ ಮೊತ್ತವನ್ನು ಭಾರತ್‌ಪೇ ನೋಂದಾಯಿತ ಖಾತೆಯಲ್ಲಿ ಅಥವಾ ಅವರ ಬ್ಯಾಂಕ್ ಖಾತೆಯಲ್ಲಿ ಪಡೆಯಬಹುದು ಎಂದು ಕಂಪನಿ ಮಾಹಿತಿ ನೀಡಿದೆ.


Gold ಹಾಲ್‌ಮಾರ್ಕಿಂಗ್ ನಿಯಮ ಕಡ್ಡಾಯಕ್ಕೆ ಗಡುವು ವಿಸ್ತರಣೆ, ಇಲ್ಲಿದೆ ಕಾರಣ


ವಿಮೆ ಮಾಡಿದ ಲಾಕರ್‌ಗಳಲ್ಲಿ ಚಿನ್ನ:
ಚಿನ್ನ ಖರೀದಿಗೆ ಸಂಬಂಧಿಸಿದಂತೆ ವ್ಯಾಪಾರಿಗಳ ಹಿತಾಸಕ್ತಿಗಳನ್ನು ಕಾಪಾಡಲು ಸೇಫ್‌ಗೋಲ್ಡ್ ಐಡಿಬಿಐ ಟ್ರಸ್ಟೀಶಿಪ್ ಸೇವೆಗಳನ್ನು ನೇಮಿಸಿದೆ. ಖರೀದಿಸಿದ ಚಿನ್ನವನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 100% ವಿಮೆ ಮಾಡಿದ ಲಾಕರ್‌ಗಳಲ್ಲಿ ಸೇಫ್‌ಗೋಲ್ಡ್ನೊಂದಿಗೆ ಸುರಕ್ಷಿತವಾಗಿ ಸಂಗ್ರಹಿಸಲಾಗುತ್ತದೆ ಎಂದು ಕಂಪನಿ ತಿಳಿಸಿದೆ.


ಅಗ್ಗದ ದರದಲ್ಲಿ ಚಿನ್ನ ಖರೀದಿಸಲು ಸರ್ಕಾರದಿಂದ ಸುವರ್ಣಾವಕಾಶ


ಲಾಂಚ್ ಆದ ದಿನವೇ 200 ಗ್ರಾಂ ಚಿನ್ನ ಮಾರಾಟ!
BharatPe ಪ್ರಕಾರ ತನ್ನ ಪ್ಲಾಟ್‌ಫಾರ್ಮ್ ನಲ್ಲಿ ಡಿಜಿಟಲ್ ಗೋಲ್ಡ್ ಅನ್ನು ಬಿಡುಗಡೆ ಮಾಡುವುದರಿಂದ ವ್ಯಾಪಾರಿಗಳಿಗೆ ಪೂರ್ಣ ಪ್ರಮಾಣದ ಆರ್ಥಿಕ ಉತ್ಪನ್ನಗಳು ದೊರೆಯುತ್ತವೆ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ. ಈ ಬಗ್ಗೆ ಮಾತನಾಡಿರುವ ಭಾರತ್‌ಪೇ ಸಮೂಹದ ಅಧ್ಯಕ್ಷ ಸುಹೈಲ್ ಸಮೀರ್, ಭಾರತ್‌ಪೇ ಪ್ಲಾಟ್‌ಫಾರ್ಮ್ ನಲ್ಲಿ ಚಿನ್ನವನ್ನು ಬಿಡುಗಡೆ ಮಾಡುವ ಬಗ್ಗೆ ನಾವು ವ್ಯಾಪಾರಿಗಳಿಂದ ಸಾಕಷ್ಟು ವಿನಂತಿಗಳನ್ನು ಸ್ವೀಕರಿಸಿದ್ದೇವೆ. ನಾವು ಈಗ ಉತ್ತಮ ಪ್ರತಿಕ್ರಿಯೆಯನ್ನು ನೋಡುತ್ತಿದ್ದೇವೆ ಮತ್ತು ಲಾಂಚ್ ಆದ ದಿನದಂದು 200 ಗ್ರಾಂ ಚಿನ್ನವನ್ನು ಮಾರಾಟ ಮಾಡಿದ್ದೇವೆ. ಇದಕ್ಕೆ ಹೊಸ ವೈಶಿಷ್ಟ್ಯಗಳನ್ನು ಸೇರಿಸಲಾಗುವುದು. ಮುಂದಿನ ದಿನಗಳಲ್ಲಿ ಡಿಜಿಟಲ್ ಗೋಲ್ಡ್ ಅನ್ನು ಪ್ರಮುಖ ವರ್ಟಿಕಲ್ ಆಗಿ ಸ್ಥಾಪಿಸುವುದು ನಮ್ಮ ಗುರಿಯಾಗಿದೆ. ಕಂಪನಿಯು 2020-21ರ ಆರ್ಥಿಕ ವರ್ಷದಲ್ಲಿ 30 ಕೆಜಿ ಚಿನ್ನವನ್ನು ಮಾರಾಟ ಮಾಡುವ ಗುರಿ ಹೊಂದಿದೆ ಎಂದು ತಿಳಿಸಿದರು.