ನವದೆಹಲಿ: Airtel Big Announcement - ದೇಶದ ಅತಿ ದೊಡ್ಡ ಟೆಲಿಕಾಂ ಕಂಪನಿ ಏರ್‌ಟೆಲ್ (Airtel) ಶುಕ್ರವಾರ ಗ್ರಾಹಕರಿಗೆ ಹಲವು ದೊಡ್ಡ ಯೋಜನೆಗಳನ್ನು ಪ್ರಕಟಿಸಿದೆ. ಫೈಬರ್ ನೆಟ್‌ವರ್ಕ್ (Fiber), ಡಿಟಿಎಚ್ (DTH) ಮತ್ತು ಪೋಸ್ಟ್‌ಪೇಯ್ಡ್‌ಗಾಗಿ (Postpaid Services) ಏರ್‌ಟೆಲ್ ಆಲ್ ಇನ್ ಒನ್ ಪ್ಲಾನ್ (All-In-One) ಅನ್ನು ಪರಿಚಯಿಸಿದೆ. ಇದಕ್ಕೆ ಏರ್‌ಟೆಲ್ ಬ್ಲ್ಯಾಕ್ (Airtel Black) ಎಂದು ಹೆಸರಿಸಲಾಗಿದೆ. ಇದರ ಅಡಿ ಒಟ್ಟು ನಾಲ್ಕು ಯೋಜನೆಗಳನ್ನು ಪ್ರಕಟಿಸಲಾಗಿದೆ. ಏರ್ಟೆಲ್ ಬ್ಲ್ಯಾಕ್ ಒನ್ ಬಿಲ್, ಒನ್ ಕಾಲ್ ಸೆಂಟರ್ (One Bill One Call Centre) ಅನ್ನು ಹೊಂದಿರುತ್ತದೆ ಎಂದು ಕಂಪನಿ ಹೇಳಿದೆ.


COMMERCIAL BREAK
SCROLL TO CONTINUE READING

ಭಾರ್ತಿ ಏರ್ಟೆಲ್  (Bharti Airtel) ಪ್ರಸ್ತುತ  ಕೃತಕ ಬುದ್ಧಿಮತ್ತೆಗೆ (Artificial Intellegence) ಒತ್ತು ನೀಡುತ್ತಿದೆ. ಹೊಸ ಏರ್‌ಟೆಲ್ ಬ್ಲ್ಯಾಕ್‌ನೊಂದಿಗೆ ಡೆಡಿಕೇಟೆಡ್ ತಂಡ ಕೆಲಸ ಮಾಡಲಿದೆ ಎಂದು ಕಂಪನಿ ಹೇಳಿದೆ. ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡಲು ಎಲ್ಲಾ ರೀತಿಯ ಸಮಸ್ಯೆಗಳನ್ನು ಕ್ಷಣಾರ್ಧದಲ್ಲಿ ಪರಿಹರಿಸಲಾಗುವುದು. ತಂಡದ ಪ್ರತಿಕ್ರಿಯೆ ಸಮಯ 60 ಸೆಕೆಂಡುಗಳಾಗಿರಲಿದೆ. ಇದಲ್ಲದೆ, ಬಳಕೆದಾರರ ಸಮಸ್ಯೆಗಳನ್ನು ಸಹ ತಕ್ಷಣವೇ ಪರಿಹರಿಸಲಾಗುವುದು ಎಂದು ಕಂಪನಿ ಹೇಳಿದೆ.


AI ಮೇಲೆ Airtel ನಿಂದ ಭಾರಿ ಹೂಡಿಕೆ
ಈ ಕುರಿತು ಹೇಳಿಕೆ ನೀಡಿರುವ ಏರ್ಟೆಲ್ ಡಿಜಿಟಲ್ CEO ಆದರ್ಶ್ ನಾಯರ್, Airtel Black ಸಂಪೂರ್ಣ ಕೃತಕ ಬುದ್ಧಿಮತ್ತೆಯ ಮೇಲೆ ಕಾರ್ಯನಿರ್ವಹಿಸಲಿದೆ ಎಂದು ಹೇಳಿದ್ದಾರೆ. AI ಮೂಲಕ ಗ್ರಾಹಕರ ಇನ್ಸ್ಟಾಲೇಷನ್ ಕೆಲಸ ತುಂಬಾ ವೇಗವಾಗಿ ನಡೆಯಲಿದೆ. ಹೀಗಾಗಿ ಕಂಪನಿ ಕೃತಕ ಬುದ್ಧಿಮತ್ತೆಯ ಮೇಲೆ ಹೆಚ್ಚಿನ ಪ್ರಮಾಣದ ಹೂಡಿಕೆ ಮಾಡಲಿದೆ ಎಂದು ನಾಯರ್ ಹೇಳಿದ್ದಾರೆ.


All-In-One ಪ್ಲಾನ್ ಬಿಡುಗಡೆ
ಹೋಮ್ಸ್ ನಿರ್ದೇಶಕ ಸುನೀಲ್ ತಾಲದರ್ ಹೇಳುವ ಪ್ರಕಾರ ಗ್ರಾಹಕರು ತಮ್ಮ ನೆಚ್ಚಿನ ಪ್ಲಾನ್ ಗಳನ್ನು ಆಯ್ಕೆ ಮಾಡಬಹುದಾಗಿದೆ. ಮೊದಲ 30 ದಿನಗಳವರೆಗೆ DTH ಸೇವೆ ಸಂಪೂರ್ಣ ಉಚಿತವಾಗಿ ಸಿಗಲಿದೆ. Airtel Black ನಲ್ಲಿ ಒಟ್ಟು ನಾಲ್ಕು ಪ್ಲಾನ್ ಗಳಿವೆ. ರೂ.998 ಬೆಲೆಯ ಪ್ಲಾನ್ ಅತ್ಯಂತ ಅಗ್ಗದ ಪ್ಲಾನ್ ಆಗಿದೆ. ಈ ಕುರಿತು ಹೇಳಿಕೆ ನೀಡಿರುವ Bharti Airtel ಕಂಪನಿಯ CMO ಶಾಶ್ವತ್ ಶರ್ಮಾ, ಏರ್ಟೆಲ್ ತನ್ನ ಗ್ರಾಹಕರಿಗೆ ಫಸ್ಟ್ ಇಂಡಸ್ಟ್ರಿ ಸೊಲ್ಯೂಶನ್ 'ಏರ್ಟೆಲ್ ಬ್ಲಾಕ್' ಪ್ರಸ್ತುತಪಡಿಸುತ್ತಿದೆ. ಇದಕ್ಕೆ 'ONE PLAN FOR ALL PLANS' ಹೆಸರಿಡಲಾಗಿದೆ. ಇದರಿಂದ ಬಳಕೆದಾರರಿಗೆ ಏಕಕಾಲಕ್ಕೆ ಎಲ್ಲಾ ಅನುಭವಗಳು ಸಿಗಲಿವೆ ಎಂದು ಅವರು ಹೇಳಿದ್ದಾರೆ. 


ಇದನ್ನೂ ಓದಿ- Modi Government Big Decision: MSME ಅಡಿ ಚಿಲ್ಲರೆ ಮತ್ತು ಸಗಟು ವ್ಯಾಪಾರ, ಮೋದಿ ಸರ್ಕಾರದ ಮಹತ್ವದ ನಿರ್ಧಾರ


ನಾಲ್ಕು ಯೋಜನೆಗಳು ಕೆಳಗಿನಂತಿವೆ
ಏರ್ಟೆಲ್ ಬ್ಲಾಕ್ ಅಡಿ ಕಂಪನಿ ಒಟ್ಟು ನಾಲ್ಕು ಯೋಜನೆಗಳನ್ನು ಲೈವ್ ಮಾಡಿದೆ. ಈ ಪ್ಲಾನ್ಗಳ ಬೆಲೆ ರೂ.998 ರಿಂದ ರೂ.2099 ಇರಲಿದೆ. ಈ ಬಂಡಲ್ ನಲ್ಲಿ ಬಳಕೆದಾರರಿಗೆ DTH+Mobile, Fiber+Mobile ಹಾಗೂ All-In-One ಪ್ಲಾನ್ ಗಳು ಶಾಮೀಲಾಗಿವೆ. ಏರ್ಟೆಲ್ ಅಧಿಕೃತ ವೆಬ್ ಸೈಟ್ ಆಗಿರುವ https://www.airtel.in/airtel-black  ಅಥವಾ ಆಪ್ ನಲ್ಲಿ ವಿಕ್ಷೀಸಬಹುದಾಗಿದೆ.


ಇದನ್ನೂ ಓದಿ- ಪ್ರತಿ ತಿಂಗಳು ಸರ್ಕಾರಿ ನೌಕರರ ವೇತನದಲ್ಲಿ ರೂ.7750 ವೃದ್ಧಿ, ಏನಿದು ಲೆಕ್ಕಾಚಾರ?


>> Airtel Thank ಆಪ್ ಡೌನ್ಲೋಡ್ ಮಾಡಿ ಅಥವಾ Airtel Black ಪ್ಲಾನ್ ಖರೀದಿಸಿ ಅಥವಾ ಸದ್ಯ ಇರುವ ನಿಮ್ಮ ಪ್ಲಾನ್ ಅನ್ನು ಬಂಡಲ್ ಮಾಡಿ.
>> ನಿಮ್ಮ ಹತ್ತಿರದಲ್ಲಿರುವ Airtel Storeಗೆ ಭೇಟಿ ನೀಡಿ, ಅಲ್ಲಿ ನಿಮಗೆ Airtel Black ತಂಡ ಸಹಾಯ ಮಾಡಲಿದೆ. 
>> 8826655555 ನಂಬರ್ ಮೇಲೆ ಮಿಸ್ಡ್ ಕಾಲ್ ಮಾಡಿ ಹಾಗೂ ಏರ್ಟೆಲ್ ಬ್ಲಾಕ್ ಗೆ ಅಪ್ಗ್ರೇಡ್ ಮಾಡಲು ಏರ್ಟೆಲ್ ಸಿಬ್ಬಂಧಿ ನಿಮ್ಮ ಮನೆಗೆ ತಲುಪಲಿದ್ದಾರೆ.


ಇದನ್ನೂ ಓದಿ- ಕೇಂದ್ರ ಸರ್ಕಾರಿ ನೌಕರ ಗಮನಕ್ಕೆ : ಹೊಸ ಕುಟುಂಬ ಪಿಂಚಣಿ ನಿಯಮಗಳು ಜಾರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.