ಪೆಟ್ರೋಲ್, ಡಿಸೇಲ್ , ಎಲ್ ಪಿಜಿ ಬಳಿಕ ದುಬಾರಿಯಾಗಲಿದೆ ಟೆಲಿಕಾಂ ಸೇವೆ

 Telecom Services Tariff: ಈ ದುಬಾರಿ ದುನಿಯಾದಲ್ಲಿ ಪೆಟ್ರೋಲ್,  ಡೀಸೆಲ್,  ಎಲ್‌ಪಿಜಿ, ಆಹಾರ ಪದಾರ್ಥಗಳು ದುಬಾರಿಯಾಗಿದೆ. ಈ ಸಾಲಿಗೆ ಟೆಲಿಕಾಂ ಸೇವೆ ಕೂಡಾ ಸೇರಲಿದೆ.

Written by - Ranjitha R K | Last Updated : Jul 2, 2021, 08:50 AM IST
  • ದುಬಾರಿಯಾಗಲಿದೆ ಟೆಲಿಕಾಂ ಸೇವೆ
  • 'ತೀವ್ರ ಒತ್ತಡದಲ್ಲಿ ಟೆಲಿಕಾಂ ಕ್ಷೇತ್ರ
  • ಸುಂಕವನ್ನು ಹೆಚ್ಚಿಸಲು ಹಿಂಜರಿಯುವುದಿಲ್ಲ ಎಂದ ಮಿತ್ತಲ್
ಪೆಟ್ರೋಲ್, ಡಿಸೇಲ್ , ಎಲ್ ಪಿಜಿ ಬಳಿಕ ದುಬಾರಿಯಾಗಲಿದೆ  ಟೆಲಿಕಾಂ ಸೇವೆ title=
ದುಬಾರಿಯಾಗಲಿದೆ ಟೆಲಿಕಾಂ ಸೇವೆ (photo zee news)

ನವದೆಹಲಿ : Telecom Services Tariff: ಈ ದುಬಾರಿ ದುನಿಯಾದಲ್ಲಿ ಪೆಟ್ರೋಲ್,  ಡೀಸೆಲ್,  ಎಲ್‌ಪಿಜಿ, ಆಹಾರ ಪದಾರ್ಥಗಳು ದುಬಾರಿಯಾಗಿದೆ. ಈ ಸಾಲಿಗೆ ಟೆಲಿಕಾಂ ಸೇವೆ ಕೂಡಾ ಸೇರಲಿದೆ. ಭಾರತಿ ಏರ್‌ಟೆಲ್‌ನ ಅಧ್ಯಕ್ಷ ಸುನಿಲ್ ಮಿತ್ತಲ್ (Sunil Mittal) ಹೇಳಿಕೆಯ ನಂತರ ಟೆಲಿಕಾಂ ಸೇವೆ ದುಬಾರಿಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. 

'ತೀವ್ರ ಒತ್ತಡದಲ್ಲಿ ಟೆಲಿಕಾಂ ಕ್ಷೇತ್ರ ' : 
ಈ ಸಮಯದಲ್ಲಿ ಟೆಲಿಕಾಂ ಕ್ಷೇತ್ರವು (Telecom industry) ಭಾರಿ ಒತ್ತಡದಲ್ಲಿದೆ ಎಂದು ಸುನಿಲ್ ಭಾರತಿ ಮಿತ್ತಲ್ (Sunil Mittal) ಹೇಳಿದ್ದಾರೆ. ಭಾರತದ ಡಿಜಿಟಲ್ ಕನಸು ಹಾಗೇ ಉಳಿಯಬೇಕು ಮತ್ತು ಕನಿಷ್ಠ ಮೂರು ಟೆಲಿಕಾಂ ಆಪರೇಟರ್‌ಗಳ ಅಸ್ತಿತ್ವ ಕೂಡಾ ಉಳಿಯುವಂತಾಗಬೇಕು ಎಂದು ಅವರು ಹೇಳಿದ್ದಾರೆ.  ಈ ಬಗ್ಗೆ ಕೇಂದ್ರ ಸರ್ಕಾರ (Central government) ಕ್ರಮ ಕೈಗೊಳ್ಳುವ ಭರವಸೆಯನ್ನು ಅವರು ವ್ಯಕ್ತ ಪಡಿಸಿದ್ದಾರೆ. 

ಇದನ್ನೂ ಓದಿ : Bank Holidays July 2021 : ಜುಲೈ ತಿಂಗಳಲ್ಲಿ 15 ದಿನ ಬ್ಯಾಂಕ್ ರಜೆ : ಇಲ್ಲಿದೆ ಪುಲ್ ಲಿಸ್ಟ್!

ಸುಂಕವನ್ನು ಹೆಚ್ಚಿಸಲು ಹಿಂಜರಿಯುವುದಿಲ್ಲ: ಮಿತ್ತಲ್
ಟೆಲಿಕಾಂ ಉದ್ಯಮವು ಈಗ ತನ್ನ ಟಾರಿಫ್   (Telecom Services Tariff) ಅನ್ನು ಹೆಚ್ಚಿಸಬೇಕು ಎಂದು  ಸುನಿಲ್ ಭಾರತಿ ಮಿತ್ತಲ್ ಒತ್ತಾಯಿಸಿದ್ದಾರೆ. ಅಗತ್ಯವಿದ್ದರೆ  ಟಾರಿಫ್ ಹೆಚ್ಚಿಸಲು ಏರ್ಟೆಲ್ ಹಿಂಜರಿಯುವುದಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ ಟಾರಿಫ್  ಅನ್ನು ಏಕಪಕ್ಷೀಯವಾಗಿ ಹೆಚ್ಚಿಸಲು ಸಾಧ್ಯವಿಲ್ಲ ಎಂದಿದ್ದಾರೆ.  

'ಕನಿಷ್ಠ 3 ಟೆಲಿಕಾಂ ಕಂಪನಿಗಳು ಇರಬೇಕು'
ಭಾರತದ ಡಿಜಿಟಲ್ ಕನಸು ಹಾಗೇ ಉಳಿಯುವಂತೆ ಸರ್ಕಾರ, ಅಧಿಕಾರಿಗಳು ಮತ್ತು ಟೆಲಿಕಾಂ ಇಲಾಖೆ ಕ್ರಮ ಕೈಗೊಳ್ಳುವ ಆಶಯವನ್ನು ಅವರು ವ್ಯಕ್ತ ಪಡಿಸಿದ್ದಾರೆ.  ದೇಶದಲ್ಲಿ ಕನಿಷ್ಠ ಮೂರು ಟೆಲಿಕಾಂ ಆಪರೇಟರ್‌ಗಳ ಅಸ್ತಿತ್ವ ಉಳಿಯಬೇಕು ಎಂದಿದ್ದಾರೆ.  

ಇದನ್ನೂ ಓದಿ Gold-Silver Rate : ಈಗ ಚಿನ್ನ ಖರೀದಿಸಲು ಒಳ್ಳೆ ಸಮಯ : 10 ಗ್ರಾಂ ಚಿನ್ನದ ಬೆಲೆಗೆ ₹2670 ಇಳಿಕೆ!

'ಹಳೆಯ ಟಾರಿಫ್  ಅನ್ನು ಮತ್ತೆ ಪರಿಚಯಿಸಬೇಕು ':
ಕಳೆದ 5-6 ವರ್ಷಗಳಿಂದ ಉದ್ಯಮ ಸಂಕಷ್ಟದಲ್ಲಿದೆ. ಪರಿನಾಮ 10 ಟೆಲಿಕಾಂ ಆಪರೇಟರ್‌ಗಳು (telecom operators) ತಮ್ಮ ವ್ಯವಹಾರವನ್ನು ಮುಚ್ಚಬೇಕಾಯಿತು. ಇಬ್ಬರು ಆಪರೇಟರ್‌ಗಳು ವಿಲೀನಗೊಂಡಿದ್ದಾರೆ.  ಸುಂಕವನ್ನು ಹೆಚ್ಚಿಸುವುದು ಯಾವಾಗಲೂ ಕೆಟ್ಟದು ಎಂದೇ ಹೇಳಲಾಗುವುದಿಲ್ಲ. ಈ ವ್ಯವಹಾರವನ್ನು ಮೊದಲು ಇದ್ದ ಸ್ಥಿತಿಗೆ ತಲುಪಿಸಬೇಕಾಗಿದೆ. ಬಳಕೆಯನ್ನು 15 ಪಟ್ಟು ಆನಂದಿಸುವಂತಾಗಬೇಕು ಆದರೆ ಕನಿಷ್ಠ ಹಳೆಯ ಸುಂಕಕ್ಕೆ ಹಿಂತಿರುಗುವಂತಾಗಬೇಕು ಎಂದು ಹೇಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News