ನವದೆಹಲಿ : ಎಸ್‌ಬಿಐನ ಗ್ರಾಹಕರಿಗೆ ಇದು ಪ್ರಮುಖ ಸುದ್ದಿಯಾಗಿದೆ. ನಾಳೆ ಅಂದರೆ ಡಿಸೆಂಬರ್ 1 ರಿಂದ, SBI ಕಾರ್ಡ್‌ನೊಂದಿಗೆ ಶಾಪಿಂಗ್ ಮಾಡುವುದು ದುಬಾರಿಯಾಗಬಹುದು. ಈಗ SBI ಕ್ರೆಡಿಟ್ ಕಾರ್ಡ್ ಮೂಲಕ ಮಾಡಿದ EMI ವಹಿವಾಟುಗಳಿಗೆ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ.


COMMERCIAL BREAK
SCROLL TO CONTINUE READING

ಇಎಂಐ (EMI)ವಹಿವಾಟುಗಳಿಗೆ, ಸಂಬಂಧಿಸಿದಂತೆ ಕಾರ್ಡ್‌ದಾರರು 99 ರೂ. ಪ್ರೊಸೆಸಿಂಗ್ ಚಾರ್ಜ್ ಮತ್ತು ಅದರ ಮೇಲೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ ಎಂದು ಎಸ್‌ಬಿಐ ಕಾರ್ಡ್‌ ಅಂಡ್ ಪೇಮೆಂಟ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ (SBICPSL) ಘೋಷಿಸಿದೆ. ಈ ಹೊಸ ನಿಯಮವು ನಾಳೆ ಅಂದರೆ ಡಿಸೆಂಬರ್  ಒಂದರಿಂದ ಜಾರಿಗೆ ಬರಲಿದೆ.


ಇದನ್ನೂ ಓದಿ : December 1, 2021 Changes: ನಾಳೆಯಿಂದ ಬದಲಾಗಲಿವೆ ಈ ಐದು ನಿಮಯಗಳು, ನೀವೂ ತಿಳಿದುಕೊಳ್ಳಿ


ಇತರ ಪ್ರೊಸೆಸಿಂಗ್ ಚಾರ್ಜ್ ಪಾವತಿಸಬೇಕಾಗುತ್ತದೆ :
SBICPSL ರಿಟೇಲ್ ಔಟ್‌ಲೆಟ್‌ಗಳು ಮತ್ತು Amazon ಮತ್ತು Flipkart ನಂತಹ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಮಾಡಿದ ಎಲ್ಲಾ EMI ವಹಿವಾಟುಗಳಿಗಾಗಿ SBI ತನ್ನ ಗ್ರಾಹಕರಿಂದ  ಪ್ರೊಸೆಸಿಂಗ್ ಶುಲ್ಕವನ್ನು ಸಂಗ್ರಹಿಸುತ್ತದೆ. ಈ ಖರೀದಿಯನ್ನು EMI ಆಗಿ ಪರಿವರ್ತಿಬೇಕಾದರೆ, ಹೆಚ್ಚುವರಿ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.  ಹೊಸ ಶುಲ್ಕದ ಬಗ್ಗೆ ಕಂಪನಿಯು ತನ್ನ ಗ್ರಾಹಕರಿಗೆ ಈಗಾಗಲೇ ಇಮೇಲ್ ಮೂಲಕ ಮಾಹಿತಿ ನೀಡಿದೆ.


EMI ಆಗಿ ಪರಿವರ್ತಿಸಲಾದ ವಹಿವಾಟಿನ ಮೇಲೆ ಸಂಸ್ಕರಣಾ ಶುಲ್ಕಗಳು ಅನ್ವಯಿಸುತ್ತವೆ. ಈಗ ಹೊಸ ನಿಯಮದ ಪ್ರಕಾರ, ಡಿಸೆಂಬರ್ 1 ರ ಮೊದಲು ಮಾಡಿದ ಯಾವುದೇ ವಹಿವಾಟಿಗೆ ಈ ಶುಲ್ಕದಿಂದ ವಿನಾಯಿತಿ ನೀಡಲಾಗುತ್ತದೆ.  ರಿಟೇಲ್ ಔಟ್‌ಲೆಟ್‌ಗಳಲ್ಲಿ ಖರೀದಿ ಮಾಡುವಾಗ ಕಂಪನಿಯು ಕಾರ್ಡ್‌ದಾರರಿಗೆ EMI ವಹಿವಾಟಿನ ಪ್ರಕ್ರಿಯೆ ಶುಲ್ಕಗಳ ಬಗ್ಗೆ ಚಾರ್ಜ್ ಸ್ಲಿಪ್‌ಗಳ ಮೂಲಕ ತಿಳಿಸುತ್ತದೆ.


ಇದನ್ನೂ ಓದಿ : ಪಿಂಚಣಿದಾರರು ಈಗ ನೀಡಬೇಕಾಗಿಲ್ಲ 'Life Certificate', ಏನು ಹೇಳುತ್ತದೆ ಹೊಸ ನಿಯಮ ?


ಈ ನಿಟ್ಟಿನಲ್ಲಿ, ಆನ್‌ಲೈನ್ EMI ವಹಿವಾಟುಗಳಿಗಾಗಿ, ಪೇಮೆಂಟ್ ಪೇಜ್  ನಲ್ಲಿ ಕಂಪನಿಯು ಸಂಸ್ಕರಣಾ ಶುಲ್ಕದ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ನಿಮ್ಮ EMI ವಹಿವಾಟು ರದ್ದುಗೊಂಡರೆ, ಪ್ರಕ್ರಿಯೆ ಶುಲ್ಕವನ್ನು ಮರುಪಾವತಿಸಲಾಗುತ್ತದೆ. ಆದರೆ ಪ್ರಿ ಕ್ಲೋಸಿಂಗ್ ಸಂದರ್ಭದಲ್ಲಿ ಅದನ್ನು ಮರುಪಾವತಿಸಲಾಗುವುದಿಲ್ಲ. ಅಷ್ಟೇ ಅಲ್ಲ, EMI ಆಗಿ ಪರಿವರ್ತಿಸಿದ ವಹಿವಾಟುಗಳಿಗೆ ರಿವಾರ್ಡ್ ಪಾಯಿಂಟ್‌ಗಳು ಅನ್ವಯಿಸುವುದಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ