December 1, 2021 Changes: ನಾಳೆಯಿಂದ ಬದಲಾಗಲಿವೆ ಈ ಐದು ನಿಮಯಗಳು, ನೀವೂ ತಿಳಿದುಕೊಳ್ಳಿ

December 1, 2021 Changes - ಪ್ರತಿ ತಿಂಗಳಿನ ಮೊದಲ ದಿನದಿಂದ ಕೆಲ ಹೊಸ ನಿಯಮಗಳು ಅಥವಾ ಬದಲಾವಣೆಗಳೊಂದಿಗೆ ಕೆಲ ಹಳೆ ನಿಯಮಗಳು ಅನ್ವಯಿಸುತ್ತವೆ ಮತ್ತು ಅವು ಜನಸಾಮಾನ್ಯರ ಜೇಬಿನ ಮೇಲೆ ನೇರ ಪ್ರಭಾವ ಬೀರುತ್ತವೆ.  ಈ ಬಾರಿಯೂ ಸಹ, ಹಲವು ನಿಯಮಗಳಲ್ಲಿ ಡಿಸೆಂಬರ್ 1 ರಿಂದ ಅಂದರೆ ನಾಳೆಯಿಂದ ಬದಲಾವಣೆಯಾಗಲಿದೆ. ಎಲ್‌ಪಿಜಿ ಬೆಲೆ, ಹೋಮ್ ಲೋನ್ ಆಫರ್, ಎಸ್‌ಬಿಐ ಕ್ರೆಡಿಟ್ ಕಾರ್ಡ್ ಆಫರ್, ಆಧಾರ್-ಯುಎಎನ್ ಲಿಂಕ್ ಮಾಡುವುದು ಇತ್ಯಾದಿಗಳು ಇದರಲ್ಲಿ ಶಾಮೀಲಾಗಿವೆ.

Written by - Nitin Tabib | Last Updated : Nov 30, 2021, 01:19 PM IST
  • ಡಿಸೆಂಬರ್ 1 ರಿಂದ ಜನಸಾಮಾನ್ಯರ ಜೀವನದಲ್ಲಿ ಹಲವು ಬದಲಾವಣೆಗಳಾಗಲಿವೆ.
  • ಗೃಹ ಸಾಲದಿಂದ ಹಿಡಿದು ಜೀವನ ಪ್ರಮಾಣ ಪತ್ರದವರೆಗೆ ಹಲವು ಸಂಗತಿಗಳು ಇದರಲ್ಲಿ ಶಾಮೀಲಾಗಿವೆ.
  • ಅಂತಹ ಪ್ರಮುಖ ಐದು ಬದಲಾವಣೆಗಳ ಕುರಿತು ತಿಳಿದುಕೊಳ್ಳೋಣ ಬನ್ನಿ.
December 1, 2021 Changes: ನಾಳೆಯಿಂದ ಬದಲಾಗಲಿವೆ ಈ ಐದು ನಿಮಯಗಳು, ನೀವೂ ತಿಳಿದುಕೊಳ್ಳಿ title=
December 1, 2021 Changes (File Photo)

December 1, 2021 Changes - ಡಿಸೆಂಬರ್ 1 ರಿಂದ ಅಂದರೆ ನಾಳೆಯಿಂದ (1ನೇ ಡಿಸೆಂಬರ್ 2021 ಬದಲಾವಣೆಗಳು) ಹಲವು ನಿಯಮಗಳು ಬದಲಾಗಲಿವೆ. ಈ ಬದಲಾವಣೆಗಳಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ (LPG Cylinder Price), ಹೋಮ್ ಲೋನ್ ಆಫರ್ (Home Loan Offers), ಎಸ್‌ಬಿಐ ಕ್ರೆಡಿಟ್ ಕಾರ್ಡ್ ಆಫರ್ (SBI Credit Card Offers), ಆಧಾರ್-ಯುಎಎನ್ ಲಿಂಕ್ (Aadhaar-UAN Link) ಮಾಡುವುದು ಇತ್ಯಾದಿ ಸೇರಿವೆ. ಕೆಲವು ಹೊಸ ನಿಯಮಗಳು ಮತ್ತು ಬದಲಾವಣೆಯ ಮೂಲಕ ಕೆಲ ಹಳೆ ನಿಯಮಗಳು ಪ್ರತಿ ಹೊಸ ತಿಂಗಳ ಮೊದಲ ದಿನಾಂಕದಿಂದ ಜನಸಾಮಾನ್ಯರಿಗೆ ಅನ್ವಯಿಸುತ್ತವೆ.

ಯುಎಎನ್-ಆಧಾರ್ ಲಿಂಕ್ ಮಾಡುವುದು
ನೀವು ಉದ್ಯೋಗದಲ್ಲಿದ್ದರೆ ಮತ್ತು ಯುನಿವರ್ಸಲ್ ಅಕೌಂಟ್ ನಂಬರ್ (ಯುಎಎನ್) ಹೊಂದಿದ್ದರೆ, ನವೆಂಬರ್ 30 ರೊಳಗೆ ಆಧಾರ್ ಸಂಖ್ಯೆಯೊಂದಿಗೆ ಲಿಂಕ್ - UAN ಸಂಖ್ಯೆ ಲಿಂಕ್ ಮಾಡುವುದು ಅನಿವಾರ್ಯವಾಗಿದೆ.  ಡಿಸೆಂಬರ್ 1, 2021 ರಿಂದ, ಯುಎಎನ್ ಮತ್ತು ಆಧಾರ್ ಲಿಂಕ್ ಮಾಡುವಿಕೆಯನ್ನು ಪರಿಶೀಲಿಸಲಾದ ನೌಕರರಿಗೆ ಮಾತ್ರ ಇಸಿಆರ್ (ಎಲೆಕ್ಟ್ರಾನಿಕ್ ಚಲನ್ ಕಮ್ ರಿಟರ್ನ್) ಸಲ್ಲಿಸಲು ಕಂಪನಿಗಳನ್ನು ಕೇಳಲಾಗಿದೆ. ನಾಳೆಯವರೆಗೆ ಈ ಲಿಂಕ್ ಅನ್ನು ಫೈಲ್ ಮಾಡಲು ಸಾಧ್ಯವಾಗದ ಉದ್ಯೋಗಿಗಳು ECR ಅನ್ನು ಸಹ ಫೈಲ್ ಮಾಡಲು ಸಾಧ್ಯವಾಗುವುದಿಲ್ಲ.

ಮನೆ ಸಾಲದ ಕೊಡುಗೆ
ಹಬ್ಬದ ಋತುವಿನಲ್ಲಿ, ಹೆಚ್ಚಿನ ಬ್ಯಾಂಕುಗಳು ಗೃಹ ಸಾಲಗಳ ಮೇಲೆ ಸಂಸ್ಕರಣಾ ಶುಲ್ಕ ವಿನಾಯ್ತಿ, ಕಡಿಮೆ ಬಡ್ಡಿ ದರಗಳಂತಹ ಕೊಡುಗೆಗಳನ್ನು ಘೋಷಿಸಿದ್ದವು. ಹೆಚ್ಚಿನ ಬ್ಯಾಂಕ್‌ಗಳ ಈ ಕೊಡುಗೆಗಳು ಡಿಸೆಂಬರ್ 31 ರಂದು ಮುಕ್ತಾಯಗೊಳ್ಳುತ್ತಿವೆ ಆದರೆ LIC ಹೌಸಿಂಗ್ ಫೈನಾನ್ಸ್ ಆಫರ್ ನವೆಂಬರ್ 30 ಕ್ಕೆ ಮುಕ್ತಾಯಗೊಳ್ಳುತ್ತಿದೆ. .

SBI ಕ್ರೆಡಿಟ್ ಕಾರ್ಡ್
ನೀವು ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದರೆ, ಡಿಸೆಂಬರ್ 1 ರಿಂದ, ಎಸ್‌ಬಿಐ ಕ್ರೆಡಿಟ್ ಕಾರ್ಡ್‌ ಮೂಲಕ ಇಎಂಐ ಶಾಪಿಂಗ್ ದುಬಾರಿಯಾಗಲಿದೆ.

ಇದನ್ನೂ ಓದಿ-ಪಿಂಚಣಿದಾರರು ಈಗ ನೀಡಬೇಕಾಗಿಲ್ಲ 'Life Certificate', ಏನು ಹೇಳುತ್ತದೆ ಹೊಸ ನಿಯಮ ?

ಗ್ಯಾಸ್ ಸಿಲಿಂಡರ್ ಬೆಲೆ
ಪ್ರತಿ ತಿಂಗಳ ಮೊದಲನೇ ತಾರೀಖಿನಂದು ಗ್ಯಾಸ್ ಸಿಲಿಂಡರ್‌ಗಳ ಬೆಲೆ ಪರಿಶೀಲಿಸಲಾಗುತ್ತದೆ. ವಾಣಿಜ್ಯ ಮತ್ತು ಗೃಹಬಳಕೆಯ ಸಿಲಿಂಡರ್‌ಗಳ ಹೊಸ ದರಗಳನ್ನು ತಿಂಗಳ ಮೊದಲನೆಯ ದಿನ ಘೋಷಿಸಲಾಗುತ್ತದೆ. ಡಿಸೆಂಬರ್ 1ರ ಬೆಳಗ್ಗೆ ಹೊಸ ದರಗಳು ಬಿಡುಗಡೆಯಾಗಲಿವೆ.

ಇದನ್ನೂ ಓದಿ-ರೈಲ್ವೆ ಪ್ರಯಾಣಿಕರ ಗಮನಕ್ಕೆ : IRCTC ಟಿಕೆಟ್ ಬುಕಿಂಗ್‌ಗೆ ಹೊಸ ನಿಯಮ ಜಾರಿ 

ಜೀವನ ಪ್ರಮಾಣಪತ್ರ (Life Certificate)
ನೀವು ಪಿಂಚಣಿದಾರರ ವರ್ಗಕ್ಕೆ ಸೇರಿದ್ದಾರೆ ನಿಮ್ಮ ಬಳಿ ಕೇವಲ 2 ದಿನಗಳು ಮಾತ್ರ ಉಳಿದಿವೆ.  ಪಿಂಚಣಿದಾರರು ತಮ್ಮ ಜೀವನ ಪ್ರಮಾಣಪತ್ರವನ್ನು ಇಂದು ಅಥವಾ ನಾಳೆ ಈ ಎರಡು ದಿನಗಳಲ್ಲಿ ಸಲ್ಲಿಸಬೇಕು, ಇಲ್ಲದಿದ್ದರೆ ನೀವು ಡಿಸೆಂಬರ್ 1 ರಿಂದ ನಿಮ್ಮ ಪಿಂಚಣಿ ನಿಂತುಹೊಗಲಿದೆ. 

ಇದನ್ನೂ ಓದಿ-Petrol-Diesel Price Drop: ಕೇಳಲು ವಿಚಿತ್ರ ಎನಿಸಬಹುದು ಆದರೆ... Omicronನಿಂದ Petrol-Diesel ಬೆಲೆ ಇಳಿಕೆ ಸಾಧ್ಯತೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

Trending News